ಜಗತ್ತನ್ನೇ ನಿಬ್ಬೆರಗಾಗಿಸಿದ BTSಗೆ 10 ವರ್ಷ: ಇವರ ಕುರಿತ 10 ಸ್ವಾರಸ್ಯಕರ ಸಂಗತಿಗಳು

BTS ಈ ಹೆಸರು ಕೇಳದ ಯುವ ಜನತೆಯ ಇರಲ್ಲ... ಹದಿ ಹರೆಯದವರಿಂದ ಹಿಡಿದು ವಯಸ್ಸಾದವರು ಕೂಡ ಬಾಯ್‌ ಬ್ಯಾಂಡ್‌ ಬಿಟಿಎಸ್ ತಂಡದ ಕಟ್ಟ ಅಭಿಮಾನಿಗಳು. ಇದೀಗ ಬಿಟಿಎಸ್‌ 10 ವರ್ಷ ಪೂರ್ಣಗೊಳಿಸಿದ ಸಂಭ್ರಮ, ಇದನ್ನು ಬಿಟಿಎಸ್‌ ಬ್ಯಾಂಡ್‌ನವರು ಮಾತ್ರವಲ್ಲ ಇಡೀ ಜಗತ್ತೇ ಆಚರಿಸುತ್ತಿದೆ ಎಂದ ಮೇಲೆ ಈ ಹುಡುಗರು ಹುಟ್ಟಿಸಿರುವ ಕ್ರೇಝ್‌ ಎಂಥದ್ದು ಎಂದು ಊಹಿಸಬಹುದು ಅಲ್ವಾ?

ಅತ್ಯಾಧ್ಬುತ ಹಾಡು ಹಾಗೂ ನೃತ್ಯದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡುವ 7 ಹುಡುಗರ ತಂಡ ಇದುವರೆಗೆ ತಮ್ಮ ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿಲ್ಲ, ಅವರು ಹೊರ ತರುವ ಒಂದೊಂದು ಆಲ್ಬಂ ಕೂಡ ತುಂಬಾನೇ ಮೋಡಿ ಮಾಡುವುದರಿಂದ ಇವರ ಫ್ಯಾನ್ಸ್‌ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.

ಈ BTS ಬ್ಯಾಂಡ್‌ 10 ವರ್ಷವನ್ನು ಯಶಸ್ವಿಯಾಗಿದ್ದು ಪೂರೈಸಿದ್ದು ಅದರ ಕುರಿತ 10 ಆಸಕ್ತಿಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

10 Years For BTS

1. ವಿಶ್ವದಲ್ಲಿ ಅತ್ಯಂತ ಜನಪ್ರಿಯವಾದ ಬ್ಯಾಂಡ್ ಇದಾಗಿದ್ದು ಕೊರೊನಾ ಸಮಯದಲ್ಲಿ ಇದರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಈ ಬ್ಯಾಂಡ್‌ ₹ 5,000,000,000 ಹಣ ಗಳಿಸಿತು.

2. ಈ ಬ್ಯಾಂಡ್‌ ದಕ್ಷಿಣ ಭಾರತದ ಆರ್ಥಿಕತೆಗೆ ₹ 3.86 ಲಕ್ಷ ಕೋಟಿ ಕೊಡುಗೆ ನೀಡಿದೆ. ಈ ಬ್ಯಾಂಡ್ 2013ರಲ್ಲಿ ಹುಟ್ಟಿಕೊಂಡಿತ್ತು, ಅಲ್ಲಿಂದ ₹ 241,182 Cr ಕೊಡುಗೆ ನೀಡಿದೆ.

3. ಕೊರಿಯನ್‌ ಸಂಸ್ಕೃತಿಯನ್ನು ಜಗತ್ತಿಗೇ ಪರಿಚಯಿಸಿದರು
ಇವರ ಕೊರಿಯನ್ ನೃತ್ಯ ಮತ್ತು ಹಾಡು ದಕ್ಷಿಣ ಕೊರಿಯಾದಲ್ಲಿ ಮಾತ್ರವಲ್ಲಿ ಇಡೀ ವಿಶ್ವದಲ್ಲಿಯೇ ಜನಪ್ರಿಯತೆ ಗಳಿಸಿದೆ. ಕಲೆಗೆ ಭಾಷೆಗೆ ಹಂಗಿಲ್ಲ ಎಂಬುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

4. 7 ಜನ ಸಂಗೀತಾರರು ಕಟ್ಟಿರುವ ತಂಡ: ಕಿಮ್ ಮನ್ಜೂನ್ (RM). ಕಿಮ್ ಸಿಯೋಜ್ಜಿನ್, ಮಿನ್‌ ಯೂಣಗಿನ್(ಸುಗಾ), ಜಂಗ್‌ ಹೌಸಿಯೋಕ್, ಪಾರ್ಕ್ ಜಿಮಿನ್, ಕಿಮ್ ಥಿಯ್ಯಾಂಗ್, ಜಿಯಾನ್ ಕಿಂಗ್‌ಕುಕ್‌ ಈ ತಂಡದಲ್ಲಿರುವ ಹುಡುಗರು.

5. BTS 2010ರಲ್ಲಿಯೇ ಪ್ರಾರಂಭವಾಗಿತ್ತು: ಈ ತಂಡ 2010ರಲ್ಲಿ ಬುಲೆಟ್‌ಫ್ರೂಫ್‌ ಬಾಯ್ಸ್‌ ಸ್ಕೌಟ್ಸ್‌ ಎಂಬ ತಂಡ ಕಟ್ಟಿತು, ಆದರೆ ನಂತರ ಅದನ್ನು 2013ರಲ್ಲಿ ಬಿಟಿಎಸ್‌(Beyond The Scene)ಎಂದು ಮರುನಾಮಕರಣ ಮಾಡಿದರು. ನೋಡು ನೋಡುತ್ತಿದ್ದಂತೆ ಈ ಮ್ಯೂಸಿಕ್‌ ಬ್ಯಾಂಡ್ ಇಡೀ ಜಗತ್ತಿನ ಗಮನ ಸೆಳೆಯಿತು.

6. ಬಿಟಿಎಸ್ ಹಾಡುಗಾರರು ವಿಶ್ವ ಸಂಸ್ಥೆ ಸಹಯೋಗದಲ್ಲಿ ಹಿಂಸೆಯ ವಿರುದ್ಧ ಜಾಗತಿಕ ಅಭಿಯಾನ ಕೂಡ ಮಾಡುತ್ತಿದೆ.

7. ಇದರ ಜನಪ್ರಿಯತೆ ಹಾಗೂ ದೇಆದ ಆರ್ಥುಕತೆಗೆ ಈ ಬ್ಯಾಂಡ್‌ನ ಕೊಡುಗೆ ನೋಡಿ ಬಂಗ್ತನ್‌ ಎಕಾನಮಿ ಎಂದೂ ಇವರಿಗೆ ಬಿರುದಿದೆ.

8. ದಕ್ಷಿಣ ಭಾರತದ ಸರಕಾರ ಈ ಹುಡುಗರ ಫೋಟೋಗಳನ್ನು ಹಾಕುವ ಮೂಲಕ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ಬಳಸಿಕೊಳ್ಳುತ್ತಿದೆ, ದಕ್ಷಿಣ ಭಾರತಕ್ಕೆ ಪ್ರವಾಸಿಗರನ್ನು ಕೂಡ ಇವರ ಹಾಡು ಹಾಗೂ ನೃತ್ಯ ಸೆಳೆಯುತ್ತಿದೆ, ಆದ್ದರಿಂದ ಆ ದೇಶದ ಆರ್ಥಿಕತೆಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.

9.ಬಿಟಿಎಸ್‌ನ ಒಬ್ಬ ಸದಸ್ಯ ಮಾತ್ರ ಇಂಗ್ಲಿಷ್‌ ಮಾತನಾಡುತ್ತಾರೆ: ಬಿಟಿಎಸ್‌ 7 ಜನ ಸದಸ್ಯರಲ್ಲಿ ಆರ್ ಎಮ್ ಮಾತ್ರ ನಿರ್ಗಳವಾಗಿ ಮಾತನಾಡುತ್ತಾರೆ. ನಮ್ಮಲ್ಲಿಇಂಗ್ಲಿಷ್‌ ಬರದಿದ್ದರೆ ಒಂದು ಕೀಳೆರಿಮೆ ಇರುತ್ತದೆ, ಆದರೆ ನಮ್ಮ ಭಾಷೆ ಗೊತ್ತಿದ್ದರೆ ಸಾಕು, ನಮ್ಮಲ್ಲಿ ಕೌಶಲ್ಯವಿದ್ದರೆ ಜಗತ್ತಿನ ಯಾವ ಮೂಲೆಗೆ ಬೇಕಾದರೂ ತಲುಪಬಹುದು ಎಂಬುವುದಕ್ಕೆ ಈ ತಂಡ ಉದಾಹರಣೆ.

10. ಬಡತನದಿಂದ ಮೇಲೆ ಬಂದವರು
ಕೊರಿಯಾದಲ್ಲಿ 10 ಮಿಲಿಯನ್‌ಗೂ ಅಧಿಕ ಹಿಂಬಾಲಕರನ್ನು ಹೊಂದಿರುವವರು ಬಿಟಿಎಸ್ ಮಾತ್ರ. ಇಂದು ಕೋಟ್ಯಾಂತರ ರುಪಾಯಿ ಇವರ ಬಳಿ ಇದೆ, ಆದರೆ ಒಂದು ಕಾಲದಲ್ಲಿ ಒಂದೇ ಕೋಣೆಯಲ್ಲಿ ವಾಸವಾಗಿದ್ದರು, ಬಡತನದಿಂದ ಮೇಲೆ ಬಂದ ಪ್ರತಿಭೆಗಳು ಇವರು.

English summary

10 Years For BTS: 10 Interesting Facts About BTS In Kannada

10 Years For BTS: Here are interesting facts about BTs, read on.
X
Desktop Bottom Promotion