Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗಂಗಾ ಸ್ನಾನ ಮಾಡಿದರೆ ಈ 10 ಪಾಪಗಳಿಂದ ಮೋಕ್ಷ ಸಿಗುವುದು
ಗಂಗೆಯು ಭಾರತದ ಅತೀ ಉದ್ದವಾದ ಹಾಗೂ ಪವಿತ್ರವಾದ ನದಿ. ಗಂಗೆಯಲ್ಲಿ ಮಿಂದರೆ ಪಾಪ ಕರ್ಮಗಳೆಲ್ಲಾ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಇದಾಕ್ಕಾಗಿ ದಿನನಿತ್ಯ ಲಕ್ಷಾಂತರ ಭಕ್ತರು ಗಂಗೆ ವಿಶೇಷ ಪೂಜೆಯನ್ನು ಸಮರ್ಪಿಸಿ, ಗಂಗೆಯಲ್ಲಿ ಮುಳುಗೆಳುತ್ತಾರೆ.
ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಗಂಗಾ ಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಲಗುತ್ತದೆ ಎಂಬ ನಂಬಿಕೆ ಇದೆ. ಅದ್ರಲ್ಲೂ ಗಂಗಸ್ನಾನ ಮಾಡಿದರೆ ಆ ಹತ್ತು ಪಾಪಗಳಿಂದ ನೀವು ಮುಕ್ತಿ ಹೊಂದಬಹುದಂತೆ. ಅದ್ಯಾವುದು ಅನ್ನೋದನ್ನ ಹೇಳ್ತೀವಿ.

ಹತ್ತು ವಿಧದ ಪಾಪಗಳ ಪಟ್ಟಿ
ಶಾಸ್ತ್ರ ಹಾಗೂ ಪುರಾಣಗಳ ಪ್ರಕಾರ ಒಟ್ಟು ಹತ್ತು ವಿಧದ ಪಾಪಗಳಿದೆ. ಮನುಷ್ಯರು ಮಾಡಿದ ಎಲ್ಲಾ ತರಹದ ಪಾಪಗಳು ಕೂಡ ಈ ಹತ್ತು ವಿಧದ ಪಾಪಗಳ ಪಟ್ಟಿಯಲ್ಲಿ ಉಲ್ಲೇಖವಾಗುತ್ತಂತೆ.
ಮೂರು ವಿಭಾಗಗಳಲ್ಲಿ ಪಾಪಗಳನ್ನು ವಿಂಗಡನೆ ಮಾಡಲಾಗಿದೆ
ಹತ್ತು ವಿಧದ ಪಾಪಗಳನ್ನು ಮೂರು ವಿಭಾಗಗಳಲ್ಲಿ ವಿಂಗಡನೆ ಮಾಡಲಾಗಿದೆ. ಮೊದಲನೇಯದ್ದು ದೈಹಿಕ, ಎರಡನೇಯದ್ದು ಮೌಖಿಕ ಹಾಗೂ ಮೂರನೇಯದ್ದು ಮಾನಸಿಕ. ಅಂದ್ರೆ ಮನುಷ್ಯನು ದೇಹದ ಮೂಲಕ ಮಾತಿನ ಮೂಲಕ ಹಾಗೂ ಮನಸ್ಸಿನ ಮೂಲಕ ಮಾಡಿದ ಪಾಪಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂತರ್ಥ. ದೈಹಿಕ ಪಾಪವನ್ನೂ ಮೂರು ವಿಧಗಳಲ್ಲಿ ವಿಂಗಡನೆ ಮಾಡಲಾಗಿದೆ. ಮಾತಿನ ಮೂಲಕ ಮಾಡುವ ಪಾಪವನ್ನು ನಾಲ್ಕು ವಿಧದಲ್ಲಿ ವಿಂಗಡನೆ ಮಾಡಲಾಗಿದೆ. ಹಾಗೂ ಮನಸ್ಸಿನ ಮೂಲಕ ಮಾಡುವ ಪಾಪವನ್ನು ಮೂರು ವಿಧದಲ್ಲಿ ವಿಂಗಡನೆ ಮಾಡಲಾಗುತ್ತದೆ. ಹೀಗಾಗಿ 4+3+3 = 10 ಒಟ್ಟು ಹತ್ತು ವಿಧದ ಪಾಪಗಳಿದೆ.
ಗಂಗೆಯಲ್ಲಿ ಮಿಂದರೆ ಮುಕ್ತಿ ದೊರೆಯುತ್ತದೆ
ಗಂಗೆಯಲ್ಲಿ ಮಿಂದರೆ ಹತ್ತು ವಿಧದ ಪಾಪಗಳಿಗೆ ಮುಕ್ತಿ ದೊರೆಯುವುದು ಖಂಡಿತ. ಗಂಗೆಯು ಮನುಷ್ಯರನ್ನು ಪಾಪ ಕರ್ಮಗಳಿಂದ ಮುಕ್ತಿಗೊಳಿಸಿ ಮೋಕ್ಷ ದೊರಯುವಂತೆ ಮಾಡುತ್ತಾಳೆ.
10 ವಿಧದ ಪಾಪ-ಕರ್ಮಗಳು ಯಾವುದು?
ಇಂದಿಗೂ ಕೂಡ ಲಕ್ಷಾಂತರ ಭಕ್ತರು ನಿತ್ಯವು ಗಂಗಾ ಸ್ನಾನ ಮಾಡುತ್ತಾರೆ. ಮೊದಲಿಗೆ ಹತ್ತು ವಿಧದ ಪಾಪಗಳು ಯಾವುದು ಅನ್ನೋದನ್ನ ನೋಡೋಣ. ಒರ್ವ ವ್ಯಕ್ತಿಯ ಆಸ್ತಿಯನ್ನು ಅನ್ಯಾಯವಾಗಿ ಕಬಳಿಸೋದು, ಮಹಿಳೆಗೆ ಅವಮಾನಿಸುವುದು, ಹಿಂಸೆ, ಕೆಟ್ಟ ಮಾತುಗಳನ್ನು ಆಡುವುದು, ಸುಳ್ಳು ಹೇಳುವುದು, ಬೇರೆಯವರ ಬಗ್ಗೆ ಚಾಡಿ ಹೇಳುವುದು, ದುರಾಸೆ ಮುಂತಾದವುಗಳು.
ಯಾವ ದಿನ ಗಂಗಾಸ್ನಾನ ಮಾಡಿದರೆ ಉತ್ತಮ
ಗಂಗಾ ದಸರಾವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಗಂಗಾ ಸ್ನಾನ ಮಾಡಿದರೆ ಉತ್ತಮ. ಆ ದಿನಗಳು ಯಾವುದು ಅಂತ ನೋಡೋದಾದರೆ ಜೇಷ್ಠ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಬುಧ ದಿನ, ಹಸ್ತ ನಕ್ಷತ್ರ, ಆನಂದ ಯೋಗ, ಚಂದ್ರನು ಕನ್ಯಾರಾಶಿಯಲ್ಲಿ ಇರುವಾಗ, ಸೂರ್ಯನು ವೃಷಭ ರಾಶಿಯಲ್ಲಿ ಇರುವಾಗ ಈ ದಿನಗಳಲ್ಲಿ ದಸರಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಪುರಾಣಗಳ ಪ್ರಕಾರ ಯಾವ ವ್ಯಕ್ತಿ ಗಂಗಾ ಸ್ನಾನ ಮಾಡುತ್ತಾನೋ ಅಂತವರಿಗೆ ವೈಕುಂಟ ಲೋಕ ಪ್ರಾಪ್ತಿಯಾಗುತ್ತಂತೆ.
ಗಂಗಾ ದಸರಾದ ಮಹತ್ವವೇನು?
ಹಿಂದೂ ಗ್ರಂಥಗಳ ಪ್ರಕಾರ ಭಕ್ತರು ಈ ದಿನದಂದು ಪ್ರಾರ್ಥನೆ ಸಲ್ಲಿಸಿದರೆ ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಅಮೂಲ್ಯವಾದ ವಸ್ತುಗಳನ್ನು ಖರೀದಿಸಲು ಹೊಸ ವಾಹನಗಳನ್ನು ಖರೀದಿಸಲು, ಹೊಸ ಮನೆಯನ್ನು ಖರೀದಿಸಲು ಅಥವಾ ಹೊಸ ಮನೆ ಪ್ರವೇಶಿಸಲು ಮಂಗಳಕರ ದಿನವೆಂದು ನಂಬಲಾಗಿದೆ. ಈ ದಿನ ಗಂಗಾಜಲದಲ್ಲಿ ನಿಂತು ಗಂಗಾ ಸ್ತೋತ್ರವನ್ನು ಪಠಿಸುವ ಭಕ್ತರು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಎಂಬ ನಂಬಿಕೆಯಿದೆ.
ಗಂಗೆ ಸರಿಸಾಟಿಯಾದ ಮತ್ತೊಂದು ನದಿ ಈ ಜಗತ್ತಿನಲ್ಲಿ ಬೇರೊಂದಿಲ್ಲ. ಇದು ಮನುಷ್ಯರ ಪಾಪ ಕಳೆಯುವುದು ಮಾತ್ರವಲ್ಲ ಇದರ ಜೊತೆಗೆ ಲಕ್ಷಾಂತರ ಜನರಿಗೆ ಜೀವನದಿಯಾಗಿದೆ.



Click it and Unblock the Notifications



