Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ತುಳಸಿ ಗಿಡವನ್ನು ಮಣ್ಣಿನಲ್ಲಿ, ನೀರಿನಲ್ಲಿ ಬೆಳಸಬಹುದು, ತುಳಸಿಯ ಆರೈಕೆ ಹೀಗಿರಲಿ
Home Garden
oi-Reena TK
By Reena Tk
ಮನೆ ಮುಂದೆ ತುಳಸಿ ಗಿಡವಿರಬೇಕು, ತುಳಸಿ ದೇವಿ ಸ್ವರೂಪ, ಲಕ್ಷ್ಮಿಯೇ ತುಳಸಿಯಲ್ಲಿ ನೆಲೆಸಿರುತ್ತಾಳೆ ಎಂದು ಹೇಳಲಾಗುವುದು. ಮನೆ ಮುಂದೆ ತುಳಸಿ ಗಿಡವಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ ಎಂಬ ನಂಬಿಕೆ.
ದೇವರ ರೂಪವಾದ ತುಳಸಿ ಗಿಡವನ್ನು ಮನೆ ಮುಂದೆ ನೆಟ್ಟಾಗ ಅದು ಅಷ್ಟು ಸುಲಭವಾಗಿ ಬರಲ್ಲ. ಕೆಲವರು ಹೇಳುತ್ತಾರೆ, ನಾನು ನೆಟ್ಟ ಗಿಡವೆಲ್ಲಾ ಒಣಗಿ ಹೋಯ್ತು ಅಂತ, ಆದ್ದರಿಂದ ತುಳಸಿ ಗಿಡವನ್ನು ನೆಟ್ಟು ಅಷ್ಟೇ ಚೆನ್ನಾಗಿ ಆರೈಕೆ ಮಾಡಬೇಕು.

ತುಳಸಿ ಗಿಡವನ್ನು ಬೆಳೆಸಲು ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ ನೋಡಿ:
- ಮೊದಲು ಹೂ ಕುಂಡಕ್ಕೆ ಒಳ್ಳೆಯ ಗುಣಮಟ್ಟದ ಮಣ್ಣು ತುಂಬಿ, ಮಣ್ಣಿನಲ್ಲಿ ತೇವಾಂಶವಿರಬೇಕು, ಆದರೆ ತುಂಬಾ ನೀರು ಹಾಕಬಾರದು, ನೀರು ಹೆಚ್ಚು ಹಾಕಿದರೆ ಮಣ್ಣು ಅಂಟು ಅಂಟಾಗಿ ಇರುತ್ತದೆ, ಇದನ್ನು ನೆರಳಿನಲ್ಲಿ ಇಡಿ.
- ಈಗ ತುಳಸಿ ಬೀಜವನ್ನು ಮಣ್ಣಿನ ಸ್ವಲ್ಪ ಒಳಗೆ ಹಾಕಿ ಮಣ್ಣು ಮುಚ್ಚಿ, ಒಂದು ಅರ್ಧ ಇಂಚು ಕೆಳಗಡೆ ಹಾಕಬೇಕು.
- ಎರಡು ದಿನಕ್ಕೊಮ್ಮೆ ನೀರು ಹಾಕುತ್ತಲೇ ಇರಿ. ಬೀಜ ಮೊಳಕೆ ಒಡೆದು ಗಿಡ ಬರಲು 2 ವಾರ ಬೇಕಾಗುವುದು. ಈಗ ಮೊಳಕೆ ಬರುವಾಗ ಬಿಸಿಲಿನಲ್ಲಿ ಇಡಿ, ತುಳಸಿ ಕನಿಷ್ಠ 7 ಗಂಟೆಯಾದರೂ ಬಿಸಿಲು ಬೀಳಬೇಕು. ರಾತ್ರಿ ಹೊರಗಡೆ ಇಡಬೇಡಿ, ಉಷ್ಣಾಂಶ ತುಂಬಾ ಕಮ್ಮಿಯಾದರೆ ತುಳಸಿ ಗಿಡಕ್ಕೆ ಒಳ್ಳೆಯದಲ್ಲ. ಈ ರೀತಿ ಸ್ವಲ್ಪ ದೊಡ್ಡದಾಗುವವರೆಗೆ ನೋಡಿಕೊಳ್ಳಬೇಕು.
ತುಳಸಿಯನ್ನು ನೀರಿನಲ್ಲಿ ಬೆಳೆಯುವ ವಿಧಾನ
- ತುಳಸಿಯ ಕೆಳಗಡೆಯಿಂದ ಕತ್ತರಿಯಿಂದ ಕತ್ತರಿಸಿ ಒಂದು ಚಿಕ್ಕ ಕೊಂಬೆ ತೆಗೆಯಿರಿ. ಅದರ ಕೆಳಗಡೆ ಇರುವ ಎಲೆ ತೆಗೆಯಿರಿ, ಮೇಲ್ಭಾಗ ಮಾತ್ರ ಎಲೆಯಿದ್ದರೆ ಸಾಕು
- ನಂತರ ಕತ್ತರಿಸಿದ ಕೊಂಬೆಯ ಭಾಗವನ್ನು ರೂಟಿಂಗ್ ಹಾರ್ಮೋನ್‌ಗೆ ( ಇದು ಆಗ್ರೋ ಸೆಂಟರ್‌ಗಳಲ್ಲಿ ಅಥವಾ ನರ್ಸರಿ ವಸ್ತುಗಳು ದೊರೆಯುವ ಕಡೆ ದೊರೆಯುತ್ತೆ) ಮುಳುಗಿಸಿ.
- ನಂತರ ನೀರು ಇರುವ ಬಾಟಲಿ ಅಥವಾ ಗ್ಲಾಸ್‌ನಲ್ಲಿ ಹಾಕಿಡಿ, ಹೀಗೆ ಒಂದುಕ್ಕಿಂತ ಕೊಂಬೆಗಳನ್ನು ಹಾಕಬಹುದು.
- ಈ ನೀರನ್ನು ಪ್ರತಿದಿನ ಬದಲಾಯಿಸಿ, ಈ ತುಳಸಿ ಗಿಡವನ್ನು ಬಿಸಿಲು ಬೀಳುವ ಕಡೆ ಇಡಬೇಕು, ಹೀಗೆ ಮಾಡಿದರೆ ಬಿಸಿಲು ಚೆನ್ನಾಗಿ ಬೀಳುತ್ತದೆ.
- ಆ ಕೊಂಬೆಯಲ್ಲಿ ಬೇರು ಬರಲು 7-10 ದಿನಗಳು ಬೇಕಾಗುವುದು. ನಂತರ ಮೆಲ್ಲನೆ ತೆಗೆದು ಫಲವತ್ತದ ಮಣ್ಣು ತುಂಬಿದ ಹೂವಿನ ಕುಂಡದಲ್ಲಿ ನೆಡಿ.
- ನಂತರ ತುಳಸಿಯನ್ನು ಆರೈಕೆ ಮಾಡಿ.
ತುಳಸಿಯನ್ನು ಈ ರೀತಿ ಆರೈಕೆ ಮಾಡಿ
ತುಳಸಿ ಗಿಡವನ್ನು ಬಿಸಿಲು ತುಂಬಾ ಇರುವ ಕಡೆ ಇಡಬೇಕು.
ತುಳಸಿ ಗಿಡದ ಮಣ್ಣನ್ನು ಪರಿಶೀಲಿಸಿ, ಮೇಲ್ಭಾಗ ಒಣಗಿದ್ದರೆ ನೀರು ಹಾಕಿ
ಬಿಸಿಲು ಅಧಿಕವಿದ್ದರೆ ಬೆಳಗ್ಗೆ ಮತ್ತು ಸಂಜೆ ನೀರು ಹಾಕಿ
ಗಿಡ ನೆಡುವ ಒಂದು ವಾರ ಮೊದಲೇ ಹೂ ಕುಂಡಕ್ಕೆ ನೀರು ಹಾಕಿ ಆರೈಕೆ ಮಾಡುತ್ತಿರಬೇಕು.
Comments
English summary



Click it and Unblock the Notifications