Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎರಡು ಫ್ಲಶ್ ಬಟನ್ ಏಕಿದೆ? ನೀವು ಎಷ್ಟು ಲೀಟರ್ ನೀರು ಉಳಿಸಬಹುದು ಗೊತ್ತಾ?
ಪ್ರತಿದಿನ ನೀವು ನೋಡುವ ಕೆಲವೊಂದು ವಿಚಾರಗಳಲ್ಲಿ ಅಚ್ಚರಿಗಳು ಅಡಗಿದ್ದರೂ ಆ ಬಗ್ಗೆ ನೀವು ಎಂದಿಗೂ ಚಿಂತಿಸಿರುವುದಿಲ್ಲ. ಅದರಲ್ಲೂ ನಾವು ದಿನ ಬಳಸುವ ವಸ್ತುಗಳ ಸರಿಯಾದ ಬಳಕೆ ಹೇಗೆ ಅನ್ನೋದೆ ತಿಳಿದಿರುವುದಿಲ್ಲ. ಇಂತಹ ವಿಚಾರದಲ್ಲಿ ನಾವು ಹಲವು ವಸ್ತುಗಳ ಕುರಿತು ತಿಳಿದುಕೊಳ್ಳೋಣ ಅದರಲ್ಲೂ ನಾವಿಂದು ವಾಷ್‌ರೂಮ್ ಫ್ಲಶ್‌ನಲ್ಲಿ ಎರಡು ಬಟನ್ ಇರುವುದು ನೋಡಬಹುದು. ಹಾಗಾದ್ರೆ ಈ ಎರಡು ಬಟನ್ ಏಕೆ ನೀಡಿರುತ್ತಾರೆ ಎಂಬುದನ್ನು ನೀವು ಆಲೋಚಿಸಿದ್ದೀರಾ?
ಪ್ರತಿ ದಿನ ನೀವು ಫ್ಲಶ್ ಮಾಡಿದಾಗ ಈ ಎರಡು ಬಟನ್‌ಗಳಿರುವುದು ನೋಡಿರಬಹುದು, ಆದ್ರೆ ಈ ರೀತಿ ಎರಡು ಬಟನ್ ಏಕೆ ನೀಡಿರುತ್ತಾರೆ. ಅದರ ಬಳಕೆ ಯಾವಾಗ ಮಾಡಬೇಕು ಎಂಬುದನ್ನು ನೀವು ತಿಳಿದಿದ್ದೀರಾ? ನಿಮ್ಮ ಮನೆಯಲ್ಲೂ ಈ ಎರಡು ಬಟನ್ ಇರುವ ಫ್ಲಶ್ ಹಾಕಿಸಿದ್ದರೆ ಅದರ ಉಪಯೋಗ ತಿಳಿದುಕೊಂಡಿರುವುದು ಬಹಳ ಉತ್ತಮ.

ಈ ಫ್ಲಶ್‌ನಲ್ಲಿ ಎರಡು ಬಟನ್ ಇರುವುದು ನೋಡಬಹುದು. ಒಂದು ಚಿಕ್ಕ ಬಟನ್ ಹಾಗೆ ಮತ್ತೊಂದು ದೊಡ್ಡ ಬಟನ್ ಇರಲಿದೆ. ನೀವು ಯಾವಾಗಲು ಎರಡನ್ನು ಸೇರಿಸಿ ಒತ್ತುತ್ತಿರುತ್ತೀರಿ, ಅಥವಾ ದೊಡ್ಡ ಬಟನ್ ಅನ್ನು ಒತ್ತುವುದು ನೋಡಬಹುದು. ಆದ್ರೆ ಎರಡು ಬಟನ್ ಒತ್ತಿದಾಗಲು ನೀರು ಬಂದೇ ಬರುತ್ತದೆ. ಹೀಗಿರುವಾಗ ಎರಡು ಬಟನ್ ಏಕೆ ನೀಡಿರುತ್ತಾರೆ ಎಂಬುದು ನಿಮಗೆ ಗೊತ್ತಾ?
ನೀವು ಈ ರೀತಿ ಬಟನ್ ಇರುವ ಈ ಫ್ಲಶ್‌ನ ಉಪಯೋಗ ಏನು ಎಂಬುದನ್ನು ತಿಳಿದುಕೊಳ್ಳಿ. ಏಕೆಂದರೆ ಈ ರೀತಿ ಬಟನ್‌ಗಳಿದ್ದರೆ ನೀವು ಮನೆಯ ನೀರು ಉಳಿಸಬಹುದು. ಹೌದು ಈ ರೀತಿಯ ಫ್ಲಶ್ ಬಟನ್ ಅನ್ನು ಬಹಳ ಕಾಲದ ಹಿಂದೆ ಆವಿಷ್ಕಾರ ಮಾಡಲಾಗಿದೆ. ಏಕೆಂದರೆ ಇದರಲ್ಲಿ ದೊಡ್ಡ ಬಟನ್ ಒತ್ತಿದರೆ ಹೆಚ್ಚು ನೀರು ಹಾಗೆ ಸಣ್ಣ ಬಟನ್ ಒತ್ತಿದರೆ ಕಡಿಮೆ ನೀರು ಬರುತ್ತದೆ. ಆದ್ರೆ ಈ ವಿಚಾರ ಹಲವರಿಗೆ ತಿಳಿದಿರುವುದಿಲ್ಲ.
ಚಿಕ್ಕದಾಗಿರುವ ಬಟನ್ ಅನ್ನು ಮೂತ್ರ ವಿಸರ್ಜನೆಯ ಸಮಯದಲ್ಲಿ ಮಾತ್ರ ಬಳಸುವ ಉದ್ದೇಶದಿಂದ ಮಾಡಲಾಗಿದೆ. ಹೆಚ್ಚು ನೀರು ಬಳಸುವದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಆದ್ರೆ ಈ ರೀತಿ ಬಟನ್ ಇಲ್ಲದ ಫ್ಲಶ್‌ಗಳಲ್ಲಿ ನೀರು ಹೆಚ್ಚು ಪೋಲಾಗುತ್ತದೆ. ಫ್ಲಶ್ ಮಾಡುವುದು ವಾಸ್ತವವಾಗಿ ನಾವು ಮನೆಯಲ್ಲಿ ಹೆಚ್ಚು ನೀರನ್ನು ವ್ಯರ್ಥ ಮಾಡುವ ವಿಧಾನಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕ ಸಿಂಗಲ್-ಫ್ಲಶ್ ಶೌಚಾಲಯಗಳು ಪ್ರತಿ ಬಾರಿ ಫ್ಲಶ್ ಮಾಡಿದಾಗ 9 ರಿಂದ 12 ಲೀಟರ್ ನೀರು ಒಮ್ಮೆ ಖಾಲಿಯಾಗುತ್ತದೆ. ಆದ್ರೆ ಈ ಸಣ್ಣ ಬಟನ್ ಇರುವ ಫ್ಲಶ್‌ನಿಂದ ಅರ್ಧದಷ್ಟು ನೀರು ಬಳಕೆಯಾಗುತ್ತದೆ. ಹೀಗಾಗಿ ಪ್ರತಿ ಬಾರಿಯ ಫ್ಲಶ್ ಹಲವು ನೂರಾರು ಲೀಟರ್ ನೀರು ಬಳಕೆಯಾಗುವ ಬದಲಾಗಿ ಈ ಸಣ್ಣ ಬಟನ್‌ನಿಂದ ನೀರು ಉಳಿತಾಯ ಮಾಡಬಹುದು.
ಈ ಎರಡು ಬಟನ್ ಫ್ಲಶ್ ಆರಂಭಿಸಿದ್ದು ಯಾರು?
ಯಾವುದೇ ಆವಿಷ್ಕಾರದ ಹಿಂದೆ ದೊಡ್ಡ ಪರಿಶ್ರಮ, ಉದ್ದೇಶ ಇದ್ದೇ ಇರುತ್ತದೆ. ಇದು 1980ರಲ್ಲಿ ಆಸ್ಟ್ರೇಲಿಯಾದಲ್ಲಿ ನೀರಿನ ಅಭಾವ ಉಂಟಾದಾಗ ಈ ರೀತಿಯ ಬಟನ್‌ಗಳು ಕಂಡುಬಂದವು. ಅಮೇರಿಕನ್ ಕೈಗಾರಿಕಾ ವಿನ್ಯಾಸಕ ವಿಕ್ಟರ್ ಪಾಪನೆಕ್ 1976 ರಲ್ಲಿ ಬರೆದ 'ಡಿಸೈನ್ ಫಾರ್ ದಿ ರಿಯಲ್ ವರ್ಲ್ಡ್' ಪುಸ್ತಕದಲ್ಲಿ ಮೊದಲ ಬಾರಿಗೆ ಡ್ಯುಯಲ್-ಫ್ಲಶ್ ಟಾಯ್ಲೆಟ್ ಅನ್ನು ಉಲ್ಲೇಖಿಸಿದ್ದರು.
ಈ ಎರಡು ಬಟನ್ ಫ್ಲಶ್ ಬಳಕೆ ಮಾಡುವುದರಿಂದ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಬರೋಬ್ಬರಿ 20 ಸಾವಿರ ಲೀಟರ್ ನೀರು ಉಳಿಸಲಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ಇತ್ತೀಚಿಗೆ ಈ ಎರಡು ಬಟನ್ ಫ್ಲಶ್ ಹಾಗೆ ಸೆನ್ಸಾರ್ ಹೊಂದಿರುವ ಫ್ಲಶ್‌ಗಳ ಬಳಕೆ ಹೆಚ್ಚಾಗುತ್ತಿದೆ.



Click it and Unblock the Notifications


