Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮನೆ ಮುಂದೆ ನಿಂಬೆಗಿಡವನ್ನು ಏಕೆ ಇಟ್ಟಿರುತ್ತಾರೆ? ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ಕೆಲವೊಂದು ಮನೆಗಳ ಮುಂದೆ ಚಿಕ್ಕ ನಿಂಬೆಗಿಡವನ್ನು ಗಮನಿಸಿರಬಹುದು. ನಿಂಬೆಗಿಡ ಮನೆಮುಂದೆ ಏಕೆ ನೆಡುತ್ತಾರೆ, ಮನೆಯಲ್ಲಿ ನಿಂಬೆಹಣ್ಣಿನ ಗಿಡವಿದ್ದರೆ ವಾಸ್ತು ಪ್ರಕಾರ ಏನಾದರೂ ಲಾಭವಿದೆಯೇ? ಮನೆ ಮುಂದೆ ನಿಂಬೆ ಗಿಡವನ್ನು ಇಡುವುದರ ಹಿಂದಿರುವ ಉದ್ದೇಶವೇನು ಎಂಬೆಲ್ಲಾ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ವಾಸ್ತು ಶಾಸ್ತ್ರ ಏನು ಹೇಳುತ್ತದೆ
ವಾಸ್ತು ಶಾಸ್ತ್ರವು ಗಿಡವನ್ನು ಮನೆ ಮುಂದೆ ನೆಟ್ಟರೆ ಮಾತ್ರ ಸಾಲದು ಅದನ್ನು ಚೆನ್ನಾಗಿ ಆರೈಕೆ ಮಾಡಬೇಕು. ಆರೈಕೆಯಿಂದ ಚೆನ್ನಾಗಿ ಬೆಳೆದ ಗಿಡ ಮನೆಗೆ ಪಾಸಿಟಿವ್ ಎನರ್ಜಿ ತರುತ್ತದೆ ಎಂದು ಹೇಳುತ್ತದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ನಾಲ್ಕು ಪ್ರಮುಖ ದಿಕ್ಕುಗಳಿವೆ. ಈಶಾನ್ಯ, ನೈರುತ್ಯ, ಆಗ್ನೇಯ ಹಾಗೂ ವಾಯುವ್ಯ ಸೇರಿ ಒಟ್ಟು ಅಷ್ಟ ದಿಕ್ಕುಗಳಿವೆ. ನೀವು ನಿಂಬೆ ಗಿಡವನ್ನು ಮನೆಯ ಪೂರ್ವದ ಕಡೆ ನೆಟ್ಟರೆ ಒಳ್ಳೆಯದು ಎಂದು ಹೇಳುತ್ತದೆ.
ನೆಗೆಟಿವ್ ಎನರ್ಜಿ ಹೀರಿಕೊಳ್ಳುತ್ತದೆ
ಮನೆಯ ಪೂರ್ವ ಭಾಗದಲ್ಲಿ ನಿಂಬೆಗಿಡವಿದ್ದರೆ ನೆಗೆಟಿವ್ ಎನರ್ಜಿ ಹೀರಿಕೊಂಡು ಮನೆಗೆ ಪಾಸಿಟಿವ್ ಎನರ್ಜಿ ಬಿಡುತ್ತದೆ. ಯಾವುದೇ ಕೆಟ್ಟ ದೃಷ್ಟಿ ಮನೆಗೆ ತಾಗುವುದಿಲ್ಲ. ಈ ಕಾರಣಕ್ಕೆ ಮನೆ ಮುಂದೆ ನಿಂಬೆ ಗಿಡವನ್ನು ನೆಟ್ಟಿರುತ್ತಾರೆ. ಕೆಲವರು ಮನೆ ಮುಂದೆ ನಿಂಬೆಹಣ್ಣನ್ನು ನಿಟ್ಟಿರುತ್ತಾರೆ. ಇನ್ನು ಕೆಲವರು ನಿಂಬೆಹಣ್ಣನ್ನು ದಾರದಲ್ಲಿ ಕಟ್ಟಿ ನೇತು ಹಾಕಿರುತ್ತಾರೆ. ಯಾವುದೇ ಹೊಸ ಗಾಡಿ ತೆಗೆದಾಗ ಪೂಜೆ ಮಾಡಿ, ನಿಂಬೆಹಣ್ಣು ಇಟ್ಟು ಅದರ ಮೇಲೆ ಗಾಡಿ ಹರಿಸಲಾಗುವುದು. ಎಲ್ಲಾ ಕೆಟ್ಟ ದೃಷ್ಟಿಯನ್ನು ಹೋಗಲಾಡಿಸುವ ಶಕ್ತಿ ನಿಂಬೆಹಣ್ಣಿಗಿದೆ ಎಂದು ನಂಬಲಾಗಿದೆ.
ಪರಿಸರಕ್ಕೂ ಒಳ್ಳೆಯದು
ನಿಂಬೆಹಣ್ಣು ಜೊತೆ ಇತರ ಗಿಡಗಳನ್ನು ಸುಲಭವಾಗಿ ಬೆಳೆಯಬಹುದು. ಅಲ್ಲದೆ ಮನೆ ಮುಂದೆ ನಿಂಬೆಗಿಡವಿದ್ದರೆ ನೀವು ಅದರಲ್ಲಿ ಚಿಟ್ಟೆ, ಜೇನು ನೊಣ, ದುಂಬಿ ಎಲ್ಲಾ ಬಂದು ಕೂರುವುದನ್ನು ಗಮನಿಸಬಹುದು. ಇವೆಲ್ಲಾ ಆ ಗಿಡದ ಸುತ್ತ ಹಾರಾಡುತ್ತಿದ್ದರೆ ಅದನ್ನು ನೋಡಿದಾಗ ನಮ್ಮ ಮನಸ್ಸಿಗೆ ಮುದ ನೀಡುವುದು, ನಮ್ಮ ಮಾನಸಿಕ ಒತ್ತಡ ಕಡಿಮೆಯಾಗುವುದು.
ಮನೆಯ ಸಮೃದ್ಧಿ ಹೆಚ್ಚಿಸುತ್ತದೆ
ನಿಂಬೆ ಗಿಡವನ್ನು ಮನೆಯ ಪೂರ್ವ ಭಾಗದಲ್ಲಿ ಬೆಳೆಸುವುದರಿಂದ ಸಮೃದ್ಧಿ ಹೆಚ್ಚುವುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುವುದು. ಇದು ಮನೆಗೆ ಆರ್ಥಿಕ ಸ್ಥಿರತೆ ತರುತ್ತದೆ, ಮನೆಯ ಸಂಪತ್ತು ವೃದ್ದಿಸುತ್ತದೆ ಎಂದು ಹೇಳಲಾಗುವುದು.
ಈ ಗಿಡಗಳನ್ನು ಪೂರ್ವಭಾಗಲ್ಲಿ ನೆಡಬೇಡಿ
ಬಾಳೆಗಿಡ, ಮಾವಿನಗಿಡ, ಪಪ್ಪಾಯಿ, ಪೈನಾಪಲ್ ಈ ಬಗೆಯ ಹಣ್ಣಿನ ಗಿಡಗಳನ್ನು ಮನೆಯ ಪೂರ್ವಭಾಗದಲ್ಲಿ ನೆಡಬಾರದು ಎಂದು ಹೇಳಲಾಗುವುದು.
ಮನೆ ಮುಂದೆ ಹೇಗಿದ್ದರೆ ಐಶ್ವರ್ಯ?
* ವಾಸ್ತು ಪ್ರಕಾರ ಮನೆಯ ಗಾರ್ಡನ್ ಪೂರ್ವ ದಿಕ್ಕಿನಲ್ಲಿರಡಬೇಕು.
* ಮನೆಯ ಮುಂದೆ ಯಾವುದೇ ಗಿಡವನ್ನು ನೆಡಬಾರದು, ಗಿಡದಿಂದ ಮನೆಯ ಮುಂಬಾಗಿಲು ಕಾಣದಂತೆ ಇರಬಾರದು. ಮನೆಯ ಮುಂಭಾಗ ಖಾಲಿ ಇರಬೇಕು, ಮನೆಯ ಒಂದು ಬದಿಯಲ್ಲಿ ಗಿಡಗಳನ್ನು ನೆಡಬೇಕು.
* ಮನೆಯ ಎದುರುಗಡೆ ಒಣಗಿದ ಮರ ಇರಬಾರದು: ಎಲೆಗಳು ಉದುರಿದ ಅಥವಾ ಸಂಪೂರ್ಣ ಒಣಗಿದ ಮರ ಮನೆ ಮುಂದುಗಡೆ ಇದ್ದರೆ ಅದು ಶುಭವಲ್ಲ ಎಂಬುವುದಾಗಿ ವಾಸ್ತುಶಾಸ್ತ್ರ ಹೇಳುತ್ತದೆ.
* ಮನೆಯ ಮುಂದುಗಡೆ ಈಶಾನ್ಯ ದಿಕ್ಕಿನಲ್ಲಿ ಕೊಳವಿದ್ದರೆ ಒಳ್ಳೆಯದು.
* ಕೊಳದಲ್ಲಿ ತಾವರೆ ಇದ್ದರೆ ಮತ್ತಷ್ಟು ಶುಭವೆಂದು ಹೇಳಲಾಗುವುದು.
* ಕೆಲಸ ಮಾಡುವ ಜಾಗದಲ್ಲಿ ಒಂದು ಲೋಟದಲ್ಲಿ ನಿಂಬೆಹಣ್ಣು ಹಾಕಿಟ್ಟರೆ ನೆಗೆಟಿವ್ ಎನರ್ಜಿ ಹೀರಿಕೊಳ್ಳುತ್ತದೆ ಎಂದು ಹೇಳಲಾಗುವುದು.
* ಲೋಟದಲ್ಲಿ ನಿಂಬೆಹಣ್ಣು ಹಾಕಿದಾಗ ಅದು ಮುಳುಗಿದರೆ ಅಥವಾ ಅದರ ಸುತ್ತ ಬಿಳಿ-ಬಿಳಿ ಬಂದರೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದರ್ಥ.
* ಒಂದು ವೇಳೆ ನಿಂಬೆಹಣ್ಣು ಹಾಳಾಗಿದ್ದರೆ ತಕ್ಷಣವೇ ಬದಲಾಯಿಸಿ.
* ಪ್ರತಿಶನಿವಾರ ಒಂದು ಲೋಟ ಶುದ್ಧ ನೀರಿಗೆ ನಿಂಬೆಹಣ್ಣು ಹಾಕಿಡಿ.



Click it and Unblock the Notifications
