Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀವೂ ಕೂಡ ನಿಂತುಕೊಂಡೇ ನೀರು ಕುಡಿಯುತ್ತೀರಾ..? ಈ ಅಭ್ಯಾಸ ನಿಲ್ಲಿಸೋದು ಉತ್ತಮ.!!
ನಮ್ಮ ದೈನಂದಿನ ಚಟುವಟಿಕೆಗೆ ಹಾಗೂ ನಮ್ಮ ಆರೋಗ್ಯಕ್ಕೆ ನಿತ್ಯ ನೀರು ಕುಡಿಯುವುದು ಎಷ್ಟೊಂದು ಮುಖ್ಯ ಎಂಬುದನ್ನು ನಾವು ತಿಳಿದಿದ್ದೇವೆ. ನಿತ್ಯ ನಾವು 2ರಿಂದ 3 ಲೀಟರ್ ನೀರು ಕುಡಿಯುವುದು ಅಗತ್ಯ. ಹಾಗೆ ಇದು ಲಿಂಗಕ್ಕೆ ಅನುಗುಣವಾಗಿ ಪ್ರದೇಶ, ಹವಾಮಾನ, ಕೆಲಸ ಇದಕ್ಕೆಲ್ಲ ಸಂಬಂಧಿಸಿದ್ದು, ಅತೀ ಹೆಚ್ಚು ನೀರು ಕುಡಿಯುವುದು ಕೂಡ ದೇಹಕ್ಕೆ ಹಾನಿಕಾರಕವೇ ಆಗಿದೆ.
ನೀರು ಸೇವನೆಯಿಂದ ನಿಮ್ಮ ಗಂಟಲು ಮತ್ತು ತುಟಿಯಲ್ಲಿ ತೇವಾಂಶವಿರುತ್ತದೆ. ಇದರಿಂದ ಬಾಯಿ ಒಣಗುವುದನ್ನು ತಡೆಯುತ್ತದೆ. ನಿಯಮಿತವಾಗಿ ನೀರು ಕುಡಿಯುವುದು ನಮ್ಮ ದೇಹಕ್ಕೆ ಸಮತೋಲನ ಹಾಗೂ ಶಕ್ತಿಯನ್ನು ನೀಡುತ್ತದೆ. ದೇಹಕ್ಕೆ ರಕ್ತ ಎಷ್ಟು ಮುಖ್ಯವೋ ಶುದ್ಧ ನೀರು ಕೂಡ ಅಷ್ಟೇ ಮುಖ್ಯವಾದ ಅಂಶವಾಗಿದೆ. ಇನ್ನು ನೀರು ಕುಡಿಯುವುದಕ್ಕೆ ಒಂದಿಷ್ಟು ನಿಮಯಗಳೂ ಕೂಡ ಇವೆ.

ಯಾವ ಸಮಯದಲ್ಲಿ ಕುಡಿಯಬಾರದು? ಯಾವ ಆಹಾರ ಸವಿಯುವ ಮುನ್ನ ಹಾಗೂ ಸವಿದ ಬಳಿಕ ನೀರನ್ನು ಸೇವಿಸಬೇಕು? ಹೇಗೆ ನೀರನ್ನು ಕುಡಿಯಬೇಕು, ಮಕ್ಕಳಿಗೆ ಎಷ್ಟು ಪ್ರಾಮಾಣದಲ್ಲಿ ನೀರು ನೀಡಬೇಕು ಹೀಗೆ ಹತ್ತಾರು ನಿಯಮಗಳನ್ನು ನಾವು ನೋಡಬಹುದು. ಅದರಲ್ಲಿ ಮುಖ್ಯವಾಗಿ ನಾವು ನೀರನ್ನು ಹೇಗೆ ಕುಡಿಯಬೇಕು ಎಂಬುದನ್ನು ತಿಳಿಯಬೇಕಿದೆ?
ಬಹುತೇಕರು ನೀರನ್ನು ನಿಂತುಕೊಂಡು ಕುಡಿಯುತ್ತಾರೆ, ಇದೇ ಸಾಮಾನ್ಯ ಪ್ರಕ್ರಿಯೆಯಾಗಿದೆ. ನಿಂತು ಕೊಂಡು ನೀರು ಕುಡಿಯುವುದಕ್ಕಿಂತಲು ಕುಳಿತು ನೀರು ಕುಡಿಯುವುದು ಅತ್ಯಂತ ಉತ್ತಮ ಹಾಗೂ ಆರೋಗ್ಯಕ್ಕೂ ಬಹಳ ಒಳ್ಳೆಯ ಅಭ್ಯಾಸ ಎಂದು ಹೇಳಲಾಗಿದೆ. ಹಾಗಾದ್ರೆ ನಿಂತುಕೊಂಡು ನೀರು ಕುಡಿದರೆ ಏನಾಗಲಿದೆ. ಇದರಿಂದ ಉಂಟಾಗುವ ಹಾನಿಯಾದರು ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಜೀರ್ಣ
ನಿಂತು ನೀರು ಕುಡಿಯುವುದರಿಂದ ಅಜೀರ್ಣ ಕಾಡಬಹುದಂತೆ. ಏಕೆಂದರೆ ನಿಂತು ನೀರು ಕುಡಿಯುವುದರಿಂದಾಗಿ ನೀರು ನೇರವಾಗಿ ಹಾಗೂ ವೇಗವಾಗಿ ಹೊಟ್ಟೆಗೆ ಹೋಗುತ್ತದೆ. ಇನ್ನು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಇದು ಅಡ್ಡಿಪಡಿಸುತ್ತದೆ. ಹೊಟ್ಟೆಯಲ್ಲಿರುವ ಫ್ಲೂಯಿಡ್‌ಗಳ ಅಸಮಾತೋಲನಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗೆ ಕಾರಣವಾಗಬಹುದಂತೆ.
ಸಂಧಿವಾತ ಸಮಸ್ಯೆ ಅಥವಾ ಪ್ರಚೋಧನೆಗೆ ಕಾರಣ
ನಿಂತು ನೀರು ಕುಡಿಯುವುದರಿಂದ ನಿಮ್ಮಲ್ಲಿ ಸಂಧಿವಾತದ ಸಮಸ್ಯೆ ಇದ್ದರೆ ಅದು ದ್ವಿಗುಣವಾಗಬಹುದು. ಇಲ್ಲದಿದ್ದರೆ ಹೊಸದಾಗಿ ಕಾಣಿಸಿಕೊಳ್ಳಬಹುದಂತೆ. ನೀರನ್ನು ವೇಗವಾಗಿ ಕುಡಿಯುವಾಗ ನರಗಳು ಒತ್ತಡದ ಸ್ಥಿತಿಯಲ್ಲಿರುತ್ತವೆ, ಇದು ದ್ರವಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ದೇಹದಲ್ಲಿರುವ ಪ್ರತಿಯೊಂದು ಕೀಲುಗಳು ಕೂಡ ದ್ರವದಿಂದ ಕೂಡಿರುತ್ತದೆ.
ಶ್ವಾಸಕೋಶಕ್ಕೂ ಅಪಾಯ
ನಿಂತು ನೀರು ಕುಡಿಯುವುದರಿಂದಾಗಿ ವೇಗವಾಗಿ ಚಲಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಶ್ವಾಸಕೋಶ ಹಾಗೂ ಹೃದಯದ ನಾಳಗಳಲ್ಲಿ ಈ ನೀರು ಚಲಿಸಬಹುದು. ಇದು ನಿಮಗೆ ಹಾನಿ ಉಂಟು ಮಾಡಲು ಸಾಕು. ಹಾಗೆ ಆಮ್ಲಜನಕ ಮಟ್ಟದಲ್ಲೂ ಇದು ಪರಿಣಾಮ ಬೀರಬಹುದು.
ಕಿಡ್ನಿ ಸಮಸ್ಯೆಗಳು
ನೀರಿನಿಂದ ಪ್ರಮುಖವಾಗಿ ಕಿಡ್ನಿಗಳು ಸ್ವಚ್ಛವಾಗಿರುಯತ್ತದೆ. ನೀರು ಮೂತ್ರಪಿಂಡದಲ್ಲಿ ಫಿಲ್ಟರ್ ಆಗುತ್ತದೆ. ನೀರು ನಿಂತು ನೀರು ಕುಡಿದಾಗ ಅದು ನೇರವಾಗಿ ಕೆಳಹೊಟ್ಟೆಗೆ ತಲುಪಿ ಶೋಧನೆ ಇಲ್ಲದೆ ಹೊರಹೋಗಬಹುದು. ಹಾಗೆ ನೀರಿನಲ್ಲಿರುವ ಕಲ್ಮಶಗಳು ದೇಹದಲ್ಲಿ ಉಳಿಯಬಹುದು. ಇದು ಮೂತ್ರಪಿಂಡದ ಕೆಲಸಕ್ಕೆ ಅಡ್ಡಿ ಉಂಟು ಮಾಡುತ್ತದೆ. ಹಾಗೆ ಹಾನಿಗೂ ಕಾರಣವಾಗಬಹುದು.
ನೀರು ಕುಡಿಯಲು ಸರಿಯಾದ ಮಾರ್ಗವೇನು?
ನೀರನ್ನು ಒಂದೇ ಬಾರಿಗೆ ಗಟ ಗಟನೆ ಕುಡಿಯಬಾರದು. ಕುಳಿತುಕೊಂಡು ನಿಧಾನವಾಗಿ ಒಂದೊಂದೇ ಗುಟುಕು ಕುಡಿಯಬೇಕು. ಹಾಗೆ ಸಣ್ಣ ಸಣ್ಣ ಗುಟುಕುಗಳಾಗಿರಬೇಕು. ಆದಷ್ಟು ಕಾಲುಗಳ ಮಡಚಿದ ಭಂಗಿಯಲ್ಲಿ ನೀರನ್ನು ಕುಡಿಯುವುದು ಸುರಕ್ಷಿತ ಎಂದು ಹೇಳಲಾಗಿದೆ. ನೀವು ಕೂಡ ಎಂದು ನಿಂತು ನೀರು ಕುಡಿಯುವವರಾಗಿದ್ದರೆ ಈ ಅಂಶಗಳ ಗಮನದಲ್ಲಿಡಿ.



Click it and Unblock the Notifications
