Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕುಕ್ಕರ್ ಒಳಗೆ ಸ್ಪೂನ್ ಹಾಕುವುದೇಕೆ? ಉಪಯೋಗವೇನು? ಈ ಸತ್ಯ ನಿಮಗೆ ಗೊತ್ತಾ?
ನೀವು ಅಡುಗೆ ಮಾಡುವ ಸಂದರ್ಭದಲ್ಲಿ ಹಲವು ರೀತಿಯ ಟ್ರಿಕ್ಸ್‌ಗಳ ಮಾಡಿರುತ್ತೀರಿ. ಅದರಲ್ಲೂ ವಿಶೇಷವಾಗಿ ಕುಕ್ಕರ್‌ಗೆ ಸಂಬಂಧಿಸಿದಂತೆ ಹಲವು ರೀತಿಯ ಟ್ರಿಕ್ಸ್ ನೀವು ಕೂಡ ಮಾಡಿರುತ್ತೀರಿ. ಕುಕ್ಕರ್‌ನಲ್ಲಿ ಏನಾದರು ಬೇಯಿಸುವಾಗ ನೀರು ಹೊರಬರಬಾರದು ಎಂದು ಒಂದಿಷ್ಟು ಟಿಪ್ಸ್ ಫಾಲೋ ಮಾಡಿರುತ್ತಿರಿ. ಹಾಗೆ ಕುಕ್ಕರ್ ಮುಚ್ಚಳ ಸಡಿಲವಾದರೆ, ಕುಕ್ಕರ್ ವಾಷ್ ಮಾಡಲು, ಕುಕ್ಕರ್‌ನಿಂದ ನೀರು ಲೀಕ್ ಆಗುತ್ತಿದ್ದರೆ ಇದಕ್ಕೆಲ್ಲಾ ಒಂದಲ್ಲಾ ಒಂದು ಟ್ರಿಕ್ಸ್ ಬಳಸಿರುತ್ತೀರಿ. ಹಾಗೆ ಸೀಟಿ ಸರಿಯಾಗಿ ಆಗದಿದ್ದರೆ, ಕುಕ್ಕರ್ ತಳ ಹಿಡಿದು ಕಪ್ಪಾಗಿದ್ದರೆ ಇದೆಲ್ಲವನ್ನು ಸರಿ ಮಾಡಲು ನೀವು ಹಲವು ರೀತಿಯ ಪ್ರಯತ್ನವನ್ನಂತು ಮಾಡಿರುತ್ತೀರಿ.
ಇದರಲ್ಲಿ ಕೆಲವೊಂದು ಟ್ರಿಕ್ಸ್‌ಗಳು ನಿಮ್ಮ ಸಹಾಯಕ್ಕೂ ಬಂದಿರುತ್ತವೆ. ಏಕೆಂದರೆ ಹಲವು ಬಾರಿ ಇವುಗಳನ್ನು ಪ್ರಯತ್ನಿಸಿದ ಬಳಿಕ ಸಮಸ್ಯೆ ಬಗೆಹರಿದಿರುತ್ತದೆ. ಹಾಗೆ ನಿಮ್ಮ ಈ ಟ್ರಿಕ್ಸ್‌ಗಳನ್ನು ಬೇರೆಯವರಿಗೂ ಕೂಡ ನೀವು ಹೇಳಿರುತ್ತೀರಿ. ಅದು ಪರಿಣಾಮಕಾರಿ ಎಂದು ತಿಳಿದರೆ ಯಾವಾಗಲು ನೀವು ಅದನ್ನು ಅನುಸರಿಸುತ್ತೀರಿ.

ಹಾಗೆ ಇತ್ತಿಚಿನ ದಿನಗಳಲ್ಲಿ ಕುಕ್ಕರ್‌ನಲ್ಲಿ ಅನ್ನ ಮಾಡವಾಗ ಬೇಳೆ ಬೇಯಿಸುವಾಗ ಅಥವಾ ಬೇರೆ ಯಾವುದೇ ವಸ್ತುವನ್ನು ಬೇಯಿಸುವಾಗ ಅದರಲ್ಲಿ ಒಂದು ಸ್ಟೀಲ್‌ನ ಚಮಚ ಹಾಕಬೇಕು ಎಂಬ ವಿಡಿಯೋಗಳು, ಹ್ಯಾಕಿಂಗ್ ವಿಡಿಯೋಗಳು ಬಹಳಷ್ಟು ವೈರಲ್ ಆಗುತ್ತಿವೆ. ಹೀಗೆ ಮಾಡುವುದರಿಂದ ಕುಕ್ಕರ್ ಬಾಳಿಕೆ ಬರಲಿದೆ, ಹಾಗೆ ಕುಕ್ಕರ್‌ನಿಂದ ನೀರು ಹೊರಗೆ ಸಿಡಿಯುವುದಿಲ್ಲ, ಕುಕ್ಕರ್ ಬ್ಲಾಸ್ಟ್ ಆಗುವುದಿಲ್ಲ ಎಂಬುದಾಗಿಯೂ ಹೇಳಲಾಗುತ್ತಿದೆ.
ಹೀಗಾಗಿ ಹಲವರು ಈ ಚಮಚದ ಐಡಿಯಾವನ್ನು ಫಾಲೋ ಮಾಡುತ್ತಿದ್ದಾರೆ. ಕುಕ್ಕರ್‌ನಲ್ಲಿ ಯಾವುದಾದರು ವಸ್ತು ಬೇಯುತ್ತಿದ್ದರೆ ಅದರೊಳಗೆ ಚಮಚ ಹಾಕಿ ಬೇಯಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾದ್ರೆ ಅಸಲಿಗೆ ಈ ಕುಕ್ಕರ್‌ನಲ್ಲಿ ಸ್ಟೀಲ್ ಚಮಚ ಹಾಕಿದರೆ ಅದರಿಂದಾಗುವ ಲಾಭವೇನು? ನಿಜಕ್ಕೂ ಇದರಿಂದ ಉಪಯೋಗ ಇದೆಯೇ? ಈ ಕುರಿತು ನಾವಿಂದು ತಿಳಿದುಕೊಳ್ಳೋಣ.
ಕುಕ್ಕರ್ ಒಳಗೆ ಸ್ಪೂನ್ ಹಾಕಿದ್ರೆ ಏನಾಗುತ್ತೆ?
ಇತ್ತೀಚಿನ ದಿನಗಳಲ್ಲಿ ಇಂತಹದೊಂದು ಟ್ರೆಂಡ್ ಹೆಚ್ಚಾಗಿ ನೋಡಲು ಸಿಗುತ್ತಿದೆ. ಅಡುಗೆ ಮಾಡುವಾಗ ಬೇಳೆ ಅಥವಾ ಅಕ್ಕಿ ಹಾಕಿ ಅದರೊಳಗೆ ಸ್ಪೂನ್ ಕೂಡ ಹಾಕಿ ಕುಕ್ಕರ್ ಸೀಟಿ ಹೊಡೆಸುತ್ತಾರೆ. ಕೆಲವರು ಈ ರೀತಿ ಮಾಡಿದ್ರೆ ಯಾವ ಉಪಯೋಗವು ಇಲ್ಲ ಎಂದು ವಾದಿಸುವುದು ಕೂಡ ನಾವು ನೋಡಬಹುದು. ಹಾಗಾದ್ರೆ ಈ ರೀತಿ ಕುಕ್ಕರ್‌ನಲ್ಲಿ ಸ್ಪೂನ್ ಹಾಕಿದ್ರೆ ಏನಾಗುತ್ತೆ ಅನ್ನೋದನ್ನು ತಿಳಿದುಕೊಳ್ಳಿ. ಕುಕ್ಕರ್ ಒಳಗೆ ಒತ್ತಡದ ಕಾರಣದಿಂದಾಗಿ ನೊರೆ ಹಾಗೂ ಗುಳ್ಳೆಗಳು ರೂಪುಗೊಳ್ಳುತ್ತವೆ. ಇದು ಕುಕ್ಕರ್‌ನಿಂದ ನೀರು ಸುರಿಯಲು ಹಾಗೂ ಕೆಲವೊಮ್ಮೆ ಬ್ಲಾಸ್ಟ್ ಆಗಲು ಕೂಡ ಕಾರಣವಾಗುತ್ತೆ. ಹೀಗಾಗಿ ಕುಕ್ಕರ್ ಒಳಗೆ ಸ್ಪೂನ್ ಹಾಕಿದರೆ ನೀರು ಕುದಿಯುವಾಗ ಅದು ಮೇಲೆ ಬಾರದಂತೆ ತಡೆಯುತ್ತದೆ, ಇದು ಕುಕ್ಕರ್‌ನಲ್ಲಿ ಒತ್ತಡ ಕಡಿಮೆ ಮಾಡುತ್ತದೆ.
ಕುಕ್ಕರ್‌ಗೆ ಎಣ್ಣೆ ಸೇರಿಸುವುದೇಕೆ?
ಕುಕ್ಕರ್ ಒಳಗೆ ಸ್ಪೂನ್ ಹಾಕುವುದು ಒಂದು ವಿಧಾನವಾದರೆ ಕೆಲವರು ಕುಕ್ಕರ್‌ಗೆ ಒಂದು ಸ್ಪೂನ್ ಎಣ್ಣೆ ಹಾಕಿ ಪದಾರ್ಥಗಳ ಬೇಯಲು ಬಿಡುತ್ತಾರೆ. ಹೀಗ್ಯಾಕೆ ಮಾಡುತ್ತಾರೆ, ಇದರಿಂದಾಗುವಪ್ರಯೋಜನದ ಕುರಿತು ನಿಮಗೆ ಗೊತ್ತಾ? ಕುಕ್ಕರ್ ಗೆ 1 ಸ್ಪೂನ್ ಎಣ್ಣೆ ಸೇರಿಸುವುದರಿಂದ ಪದಾರ್ಥಗಳು ತೇವಾಂಶವನ್ನು ಹಾಗೆಯೇ ಹಿಡಿದಿಟ್ಟುಕೊಳ್ಳುತ್ತವೆ. ಅದರಲ್ಲೂ ಮಾಂಸಗಳು, ತರಕಾರಿ, ಧಾನ್ಯ ಬೇಯಿಸುವಾಗ ಎಣ್ಣೆ ಬಳಸಿದರೆ ಆ ತರಕಾರಿ, ಮಾಂಸದ ರುಚಿ ದುಪ್ಪಟ್ಟಾಗುತ್ತದೆ, ಅಥವಾ ಅವು ತಮ್ಮ ಮೂಲ ರುಚಿಯನ್ನು ಕಳೆದುಕೊಳ್ಳುವುದಿಲ್ಲ. ಹಾಗೆ ಇದರಿಂದ ಕುಕ್ಕರ್‌ನಲ್ಲಿ ಒತ್ತಡ ಕಡಿಮೆ ಆಗುವ ಕಾರಣ ನೀರು ಹೊರಗೆ ಲೀಕ್ ಕೂಡ ಆಗುವುದಿಲ್ಲ.
ತೆರೆದ ಪಾತ್ರೆಯ ಮೇಲೂ ಸ್ಪೂನ್ ಇಡಬಹುದು
ಕುಕ್ಕರ್ ಮಾತ್ರವಲ್ಲ ನೀವು ತೆರೆದ ಪಾತ್ರೆಯಲ್ಲಿ ಅಡುಗೆ ಮಾಡುವಾಗಲು ಅದರ ಮೇಲೆ ಅಡ್ಡಲಾಗಿ ಒಂದು ಸ್ಪೂನ್ ಇಡಬಹುದು. ಅದರಲ್ಲೂ ಮುಖ್ಯವಾಗಿ ಹಾಲು ಅಥವಾ ನೀರು ಕಾಯಿಸುವಾಗ ಪಾತ್ರೆಯಿಂದ ಉಕ್ಕಿ ಬರುವ ಭೀತಿ ಇರುವುದು ಸಹಜ ಈ ಸಮಯದಲ್ಲಿ ಪಾತ್ರೆಯ ಮೇಲೆ ಒಂದು ಮರದ ಅಥವಾ ಸ್ಟೀಲ್‌ನ ಸ್ಪೂನ್ ಅಡ್ಡಲಾಗಿ ಇಡಬೇಕು. ಈ ರೀತಿ ಮಾಡುವುದರಿಂದ ಪಾತ್ರೆಯಲ್ಲಿನ ವಸ್ತು ಕುದಿಯಲು ಆರಂಭಿಸಿದಾಗ ಅದರಿಂದ ಉಕ್ಕಿ ಆಚೆಗೆ ಬರುವುದಿಲ್ಲ. ಅದಕ್ಕೆ ಈ ಸ್ಪೂನ್‌ಗಳು ಅನುವು ಮಾಡಿ ಕೊಡುವುದಿಲ್ಲ. ಈ ಟ್ರಿಕ್ಸ್‌ಗಳನ್ನು ನೀವು ಕೂಡ ಫಾಲೋ ಮಾಡಬಹುದು.



Click it and Unblock the Notifications
