Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ಯಾಕೆಟ್ ಹಾಲು ಹೆಚ್ಚು ಕುದಿಸಿ ಬಳಸುತ್ತೀರಾ? ತಜ್ಞರು ಹೇಳೋದೇನು ಗೊತ್ತಾ?
ಹಾಲು ನಮ್ಮ ದೈನಂದಿನ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ತಿಳಿದಿದ್ದೇವೆ. ಹಾಗೆ ಮಕ್ಕಳ ಆರೋಗ್ಯಕ್ಕೂ ಹಾಲು ಬಹಳ ಮುಖ್ಯವಾಗಿದೆ. ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯ. ಅಷ್ಟೇ ಅಲ್ಲ ದೇಹಕ್ಕೆ ಹಾಲಿನಿಂದ ಬಹಳಷ್ಟು ಪ್ರಯೋಜನವಿದೆ. ಈಗ ಮನೆಯಲ್ಲಿ ದನಗಳಿಂದ ನೇರವಾಗಿ ನಾವು ಹಾಲು ಪಡೆಯುವುದು ಬಹಳ ಕಡಿಮೆ. ಹಳ್ಳಿ ಹಳ್ಳಿಯಲ್ಲೂ ಈಗ ಪ್ಯಾಕೆಟ್ ಮಾಡಲಾದ ಹಾಲನ್ನೇ ಹೆಚ್ಚಾಗಿ ಬಳಸುತ್ತೇವೆ.
ಸಾಮಾನ್ಯವಾಗಿ ನಾವು ಈ ಟೆಟ್ರಾ ಪ್ಯಾಕ್ ಅಥವಾ ಸಮಾನ್ಯವಾಗಿ ಸಿಗುವ ಹಾಲನ್ನು ಖರೀದಿಸಿ ತಂದು ಅದನ್ನು ಚೆನ್ನಾಗಿ ಕುದಿಸಿ ಒಂದು ಇಟ್ಟು ಸಹ ಬಳಸುತ್ತೇವೆ. ಹಾಲು ಕುದಿಸದಿದ್ದರೆ ಬೇಗ ಕೆಟ್ಟು ಹೋಗುತ್ತದೆ ಎಂಬ ನಂಬಿಕೆಯಲ್ಲಿ ಹೀಗೆ ಮಾಡುತ್ತೇವೆ. ಹಾಲು ಚೆನ್ನಾಗಿ ಕುದಿಯದೇ ಇದ್ದರೆ ಮತ್ತೆ ಮತ್ತೆ ನೀರು ಹಾಕಿ ಕುದಿಸಿ ಇಟ್ಟು ದಿನಂಪ್ರತಿ ಬಳಸುತ್ತೇವೆ.

ಆದ್ರೆ ನಿಮಗೆ ಗೊತ್ತಿಲ್ಲದ ವಿಚಾರ ಏನೆಂದರೆ ಈ ರೀತಿಯಾಗಿ ಪ್ಯಾಕೆಟ್ ಹಾಲನ್ನು ಕುದಿಸುವುದು ಒಳ್ಳೆಯ ಅಭ್ಯಾಸವಲ್ಲವಂತೆ. ಪ್ಯಾಕ್ ಮಾಡಲಾದ ಹಾಲು ಪಾಶ್ಚರೀಕರಣಕ್ಕೆ ಒಳಗಾಗುತ್ತದೆ - ಇದು ಹೆಚ್ಚು ದಿನ ಬಾಳಿಕೆ ಬರುವಂತೆ ಮಾಡಲು ಪಾಶ್ಚರೀಕರಿಸಲಾಗಿರುತ್ತದೆ. ಈ ವೇಳೆ ಹಾಲಿನ ಎಲ್ಲಾ ಅಂಶಗಳು ಹಾಗೂ ಬ್ಯಾಕ್ಟೀರಿಯಾಗಳು ನಾಶವಾಗಿರುತ್ತದೆ. ನಾವು ಕುಡಿಯಲು ಬಳಸುವ ಹಾಲು ಒಂದು ರೀತಿಯಲ್ಲಿ ಪೋಷಕಾಂಶ ಇಲ್ಲದಿರುವ ಬಿಳಿ ನೀರು ಎನ್ನಬಹುದು.
ತಜ್ಞರ ಪ್ರಕಾರ, ಏವಿಯನ್ ಇನ್ಫ್ಲುಯೆನ್ಸ ವೈರಸ್, ಮೈಕೋಬ್ಯಾಕ್ಟೀರಿಯಂ, ಇ. ಕೋಲಿ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಅನ್ನು ಕೊಲ್ಲಲು ಹಾಲನ್ನು ಸಾಮಾನ್ಯವಾಗಿ 71 ಡಿಗ್ರಿ ಸೆಲ್ಸಿಯಸ್ನಲ್ಲಿ ಬಿಸಿಮಾಡಲಾಗುತ್ತದೆ - ಇವೆಲ್ಲವೂ ವಿವಿಧ ಕಾಯಿಲೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದಾದ ಬ್ಯಾಕ್ಟೀರಿಯಾಗಳಾಗಿವೆ.
ಪಾಶ್ಚರೀಕರಣವು ಲಿಸ್ಟೀರಿಯೊಸಿಸ್, ಟೈಫಾಯಿಡ್ ಜ್ವರ, ಕ್ಷಯ, ಡಿಫ್ತೀರಿಯಾ ಮತ್ತು ಬ್ರೂಸೆಲೋಸಿಸ್ ಹರಡುವಿಕೆ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಆ ಹಾಲಿನ ಯಾವುದೇ ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ ಹೀಗಾಗಿ ಹಾಲನ್ನು ಹೆಚ್ಚು ಕುದಿಸಿಡುವುದನ್ನು ತಡೆಯುವುದು ಉತ್ತಮವಂತೆ.
ಪಾಶ್ಚರೀಕರಿಸಿದ ಹಾಲನ್ನು ಮತ್ತೆ ಕುದಿಸುವುದು ಹಾಲಿನ ಪೌಷ್ಟಿಕಾಂಶದ ಮೌಲ್ಯವನ್ನು ಹಾನಿಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಂದರೆ ಈಗಾಗಲೇ ಈ ಪ್ಯಾಕೆಟ್ ಹಾಲು 71 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕುದಿಯಲ್ಪಟ್ಟು ವಿವಿಧ ರೀತಿಯ ಕ್ರಿಯೆಗೆ ಒಳಗಾಗಿ ಅಂತಿಮವಾಗಿ ನಿಮ್ಮ ಕೈ ಸೇರಿರುತ್ತದೆ. ಆದರೆ ನೀವು ಮತ್ತ ಅದನ್ನು 100 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನದಲ್ಲಿ ಇಟ್ಟು ಕುದಿಸುತ್ತೀರಿ. ಇದರಿಂದ ಹಾಲಿನ ಪೌಷ್ಟಿಕಾಂಶ ಹಾಗೂ ಮೂಲ ವಿಟಮಿನ್‌ಗಳು ಹಾನಿಗೊಳಗಾಗುತ್ತವೆ.
ನೀವು ಪಾಶ್ಚರೀಕರಿಸಿದ ಹಾಲನ್ನು 100 ° C ಗಿಂತ ಹೆಚ್ಚಿನ ತಾಪಮಾನದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ಕುದಿಸಿದಾಗ, ವಿಟಮಿನ್ ಡಿ ನಂತಹ ಅಗತ್ಯ ಪೋಷಕಾಂಶಗಳು ನಾಶವಾಗುತ್ತದೆ. ಅಂದರೆ ಸುಮಾರು ಪ್ರತಿ ಕುದಿಸುವಿಕೆಯಲ್ಲಿ ಶೇ.25ರಷ್ಟು ವಿಟಮಿನ್‌ಗಳನ್ನು ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.
ಪಾಶ್ಚರೀಕರಿಸಿದ ಹಾಲನ್ನು ಕುದಿಸುವುದರಿಂದ ಹಾಲಿನ ರುಚಿ ಮತ್ತು ವಿನ್ಯಾಸವನ್ನು ಬದಲಾಯಿಸಬಹುದು. ಹಾಗೆ ಈ ಹಾಲು ಹೆಚ್ಚು ಹೊತ್ತು ಗ್ಯಾಸ್‌ನಿಂದ ಹೊರಬರುವ ರಾಸಾಯನಿಕಗಳಿಗೆ ಒಡ್ಡಿಕೊಳ್ಳಬೇಕಾಗುತ್ತದೆ, ಇದರಿಂದ ಕುದಿಸಿದ ಹಾಲು ಮಕ್ಕಳಿಗೆ ಉತ್ತಮವಲ್ಲ ಎನ್ನಲಾಗುತ್ತದೆ.
ಆದ್ರೆ ಕುದಿಸಿದ ಹಾಲು ಜೀರ್ಣಕ್ರಿಯೆಗೆ ಉತ್ತಮವಂತೆ. ಇದು ಅತ್ಯಧಿಕ ಲ್ಯಾಕ್ಟೋಸ್ ಅನ್ನು ಕರಗಿಸಲು ಸಹಾಯ ಮಾಡಲಿದೆ. ತಜ್ಞರ ಪ್ರಕಾರ ಹಾಲನ್ನು ಗಂಟೆಗಳ ಕಾಲ ಕುದಿಸುವುದಕ್ಕಿಂತ 5 ನಿಮಿಷ ಬೆಚ್ಚಗೆ ಮಾಡಿ ಮಾಡುವುದು ಉತ್ತಮ ಹಾಗೆ ಅಂದಿನ ಹಾಲನ್ನು ಅಂದು ಮಾತ್ರವೇ ಬಳಸಬೇಕು ಎಂಬುದು ಅವರ ಶಿಫಾರಸ್ಸಾಗಿದೆ.



Click it and Unblock the Notifications
