Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಬಟ್ಟೆಗೆ ಯಾವ ಐರನ್ ಬಾಕ್ಸ್ ಸೂಕ್ತ..! ಖರೀದಿ ಮುನ್ನ ಯಾವೆಲ್ಲಾ ಅಂಶ ಗಮನಿಸಬೇಕು?
ಮನೆಯಲ್ಲಿ ನೀವು ಹಲವು ಸಮಯದಲ್ಲಿ ಐರನ್ ಮಾಡುವಾಗ ಐರನ್ ಬಾಕ್ಸ್ ಸಮಸ್ಯೆ ನೀಡುತ್ತಿದ್ಯಾ? ನಿಮ್ಮ ಬಟ್ಟೆಗೆ ಆ ಐರನ್ ಬಾಕ್ಸ್ ಸರಿಹೊಂದುತ್ತಿಲ್ವಾ? ಯಾಕಂದ್ರೆ ಒಂದೊಂದು ಬಟ್ಟೆಯ ಮಾದರಿಗೂ ಒಂದೊಂದು ರೀತಿ ಐರನ್ ಮಾಡಬೇಕಾಗುತ್ತದೆ. ಕೆಲವೊಂದು ಬಟ್ಟೆಯನ್ನು ನೀವು ಐರನ್ ಮಾಡಲು ಸಾಧ್ಯವಾಗೋದಿಲ್ಲ. ಅದನ್ನು ಲಾಂಡ್ರಿಯವರ ಬಳಿ ನೀಡಿ ಮಾಡಿಸಬೇಕಾಗುತ್ತದೆ.
ಹಾಗೆ ಕೆಲವೊಮ್ಮೆ ಐರನ್ ಮಾಡುವಾಗ ನಿಮ್ಮ ಬಟ್ಟೆ ಸುಡುವುದು, ಐರನ್ ಬಾಕ್ಸ್‌ಗೆ ಅಂಟಿಕೊಳ್ಳುವುದು, ಐರನ್ ಮಾಡಿದಂತೆಯೇ ಕಾಣಿಸದೆ ಇರಬಹುದು, ಸರಿಯಾಗಿ ಐರನ್ ಹಿಡಿಯದೆ ಇರುವುದು ಇಂತಹ ಕೆಲವೊಂದು ಸಮಸ್ಯೆಯನ್ನು ನೀವು ಕೂಡ ಅನುಭವಿಸಿರುತ್ತೀರಿ. ನೀವು ಏನೆ ಮಾಡಿದ್ರು ಐರನ್ ಬಾಕ್ಸ್‌ನ ಸಮಸ್ಯೆ ಸರಿ ಮಾಡಲು ಆಗುವುದೇ ಇಲ್ಲ.

ಮತ್ತೆ ಕೆಲವೊಂದು ಕಂಪನಿಯ ಐರನ್ ಬಾಕ್ಸ್‌ಗಳು ಹೀಟ್ ಕಂಟ್ರೋಲರ್ ಇರುವುದಿಲ್ಲ ಇದು ಕೂಡ ಸಮಸ್ಯೆ ತರಬಹುದು. ದುಬಾರಿ ಬೆಲೆಯ ಬಟ್ಟೆಗಳು ಐರನ್ ಮಾಡುವಾಗ ಹಾಳಾಗುವುದು ನೋಡಬಹುದು. ಹಾಗಾದ್ರೆ ಐರನ್ ಬಾಕ್ಸ್ ಖರೀದಿಸುವಾಗ ನಾವು ಯಾವೆಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಯಾವ ರೀತಿಯ ಐರನ್ ಬಾಕ್ಸ್‌ಗಳು ಯಾವ ರೀತಿಯ ಬಟ್ಟೆಗೆ ಐರನ್ ಹಾಕಲು ಬಳಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಐರನ್ ಬಾಕ್ಸ್‌ನಲ್ಲಿ ನೀಡಲಾದ ಕಬ್ಬಿಣದ ಗುಣಮಟ್ಟ
ಐರನ್ ಬಾಕ್ಸ್‌ನಲ್ಲಿ ನೀಡಲಾಗುವ ಕಬ್ಬಿಣದ ವಿಧ ಹಾಗೂ ಅದರ ಗುಣಮಟ್ಟದ ಕುರಿತು ನೀವು ಮೊದಲೇ ತಿಳಿದಿರುವುದು ಬಹಳ ಮುಖ್ಯ. ಸ್ಟೀಮ್ ಐರನ್ ಬಾಕ್ಸ್‌ಗಳು ಅಂತ್ಯಂತ ಜನಪ್ರಿಯ ಆಯ್ಕೆಗಳಾಗಿವೆ. ಇದನ್ನು ನಿತ್ಯ ಬಳಕೆಗೆ ಹೆಚ್ಚಾಗಿ ಬಳಸಬಹುದು. ಹೆಚ್ಚಾಗಿ ಕಾಟನ್, ಹತ್ತಿ, ಲೆನಿನ್ ಬಟ್ಟೆಗಳು, ರೇಷ್ಮೆ ಬಟ್ಟೆ ಸೂಕ್ಷ್ಮ ಬಟ್ಟೆಗಳ ಐರನ್ ಮಾಡಲು ಬಹಳ ಉತ್ತಮ. ಗಡಿ ಬಿಡಿಯಲ್ಲಿ ಐರನ್ ಮಾಡಿಕೊಳ್ಳುವವರಿಗೆ ಈ ಸ್ಟೀಮ್ ಐರನ್ ಸೂಕ್ತವಾದ ಆಯ್ಕೆಯಾಗಿರಲಿದೆ. ಇದರು ತಕ್ಷಣ ಬಟ್ಟೆಯ ಗುಣದೊಂದಿಗೆ ಹೊಂದಿಕೊಳ್ಳುತ್ತದೆ, ಹಾಗಾಗಿ ಬಟ್ಟೆಗಳು ಸುಡುವುದು, ಸುಕ್ಕುಗಟ್ಟುವ ಅಪಾಯ ಕಡಿಮೆಯಾಗಲಿದೆ.
ಐರನ್ ಬಾಕ್ಸ್ ತೂಕವೂ ನಿರ್ಧರಿತವಾಗಲಿದೆ
ಐರನ್ ಬಾಕ್ಸ್ ಕಡಿಮೆ ತೂಕ ಹೊಂದಿದ್ದರೆ ಯಾವುದೇ ಬಟ್ಟೆಯಾಗಲಿ ಅದಕ್ಕೆ ಐರನ್ ಸರಿಯಾಗಿ ಹಿಡಿಯುವುದಿಲ್ಲ. ಹೀಗಾಗಿ ಐರನ್ ಬಾಕ್ಸ್‌ನ ತಳ ಭಾಗವು ತೂಕವಾಗಿರಬೇಕು. ಹಗುರವಾದ ಐರನ್ ಬಾಕ್ಸ್ ಕಳಪೆ ಕಬ್ಭಿಣ ಹಾಗೂ ಲೋಹದಿಂದ ಮಾಡಲ್ಪಟ್ಟಿರಬಹುದು. ಇದರಿಂದ ನಿಮ್ಮ ಬಟ್ಟೆಗೂ ಕೂಡ ಹಾನಿಯಾಗಬಹುದು. ಹೀಗಾಗಿ ಐರನ್ ಬಾಕ್ಸ್ ತೂಕವಾಗಿರಬೇಕು. ತೂಕ ಇದ್ದಷ್ಟು ನೀವು ಕಡಿಮೆ ಶ್ರಮ ಹಾಕಿ ಐರನ್ ಮಾಡಬಹುದು.
ಸ್ಟೀಮ್ ಔಟ್‌ಪುಟ್ ಮತ್ತು ವಾಟರ್ ಟ್ಯಾಂಕ್ ಸಾಮರ್ಥ್ಯ
ಸ್ಟೀಮ್ ಐರನ್ ಬಾಕ್ಸ್‌ಗಳು ಸ್ಟೀಮ್ ಅನ್ನು ಎಷ್ಟು ಪ್ರಮಾಣದಲ್ಲಿ ಹೊರಹಾಕುತ್ತವೆ ಎಂಬುದು ಕೂಡ ಮುಖ್ಯವಾಗುತ್ತವೆ. ಕೆಲವೊಂದು ಬಾಕ್ಸ್‌ಗಳು ಕಡಿಮೆ ಪ್ರಮಣದಲ್ಲಿ ಸ್ಟೀಮ್ ಹೊರಹಾಕಬಹುದು, ಹಾಗೆ ಅದರಲ್ಲಿನ ನೀರು ಹಿಡಿಸುವ ಟ್ಯಾಂಕ್ ಎಷ್ಟು ದೊಡ್ಡದಾಗಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಟ್ಯಾಂಕ್ ದೊಡ್ಡದಾದರೆ ನೀವು ಪದೇ ಪದೇ ನೀರು ಹಾಕುವ ಕೆಲಸ ಇರುವುದಿಲ್ಲ. ಹಾಗೆ ಅದರಿಂದ ನೀರಿನ ಹನಿಗಳು ಹೊರಬಾರದಂತೆ ಡಿಸೈನ್ ಮಾಡಿರುವುದನ್ನು ಕೂಡ ನೀವು ಗಮನಿಸಬೇಕಾಗುತ್ತದೆ.
ಐರನ್ ಬಾಕ್ಸ್ ಸೋಲ್ ಕೂಡ ಮುಖ್ಯ
ಐರನ್ ಬಾಕ್ಸ್‌ನ ತಳಭಾಗವು ಯಾವ ರೀತಿಯಲ್ಲಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಐರನ್ ಬಾಕ್ಸ್‌ನ ಸೋಲ್ ಡಿಸೈನ್‌ಗಿಂತ ಪ್ಲೈನ್ ಆಗಿರುವುದು ಮುಖ್ಯ. ಹಾಗೆ ಸ್ಟೀಮ್‌ನಲ್ಲಿ ಯಾವ ಭಾಗದಲ್ಲಿ ಹೆಚ್ಚು ಸ್ಟೀಮಿಂಗ್ ಹೋಲ್ ಇದೆ ನೋಡಿ. ಮುಂಭಾಗದಿಂದ ಹಿಂದಿನವರೆಗೂ ಒಂದೇ ರೀತಿಯಲ್ಲಿ ಸ್ಟೀಮಿಂಗ್ ಹೋಲ್ ಇದ್ದರೆ ಉತ್ತಮ. ಹಾಗೆ ಅದರು ಬಹುಬೇಗ ಗೆರೆಗಳು ಮೂಡದಂತೆ ಇದ್ದರೆ ಸೂಕ್ತ ಆಯ್ಕೆಯಾಗಲಿದೆ.



Click it and Unblock the Notifications