Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ನಾಯಿ ಮಾತ್ರವಲ್ಲ ಈ ಪ್ರಾಣಿಗಳು ಕೂಡ ರೇಬಿಸ್ ಹರಡುತ್ವೆ ಹುಷಾರ್!
ರೇಬಿಸ್ ಒಂದು ರೀತಿಯ ಭಯಾನಕ ಸೋಂಕು. ಒಂದು ಸಾರಿ ರೇಬಿಸ್ ಪೀಡಿತವಾದ್ರೆ ಅದ್ರಿಂದ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಇರುತ್ತದೆ. ರೇಬೀಸ್ ಸೋಂಕಿನಿಂದ ಭಾರತದಲ್ಲಿ ಪ್ರತಿ ವರ್ಷ ಸುಮಾರು 18 ಸಾವಿರದಿಂದ 20 ಸಾವಿರ ಸಾವುಗಳು ಸಂಭವಿಸ್ತಿರೋದು ನಿಜವಾಗಿಯೂ ಬೆಚ್ಚಿ ಬೀಳುವಂತಿದೆ.

ಇದರಲ್ಲಿ 99 ಪ್ರತಿಶತ ಪ್ರಕರಣಗಳು ನಾಯಿ ಕಡಿತದಿಂದ ಮಾತ್ರ ಸಂಭವಿಸುತ್ತವೆ. ಆದರೆ ರೇಬಿಸ್ ಕೇವಲ ನಾಯಿಯಿಂದ ಮಾತ್ರ ಹರಡುವುದಿಲ್ಲ. ನಾಯಿಯ ಜೊತೆಗೆ ಇನ್ನೂ 5 ಪ್ರಾಣಿಗಳು ಕೂಡ ರೇಬಿಸ್ ಉಂಟಾಗಲು ಕಾರಣವಾಗುತ್ತದೆ. ಅಷ್ಟಕ್ಕೂ ನಾಯಿಯ ಹೊರತಾಗಿ ರೇಬಿಸ್ ಉಂಟು ಮಾಡುವ ಪ್ರಾಣಿಗಳು ಯಾವುದು ಅನ್ನೋದನ್ನು ತಿಳಿಯೋಣ.
ಬಾವಲಿ
ನಾಯಿಗಳನ್ನು ಹೊರತುಪಡಿಸಿ ಬಾವಲಿಗಳು ಕೂಡ ಸಾವಿರಾರು ಸಾವುಗಳಿಗೆ ಕಾರಣವಾಗುತ್ತದೆ ಎಂದು WHO ಅಧ್ಯಯನದಿಂದ ತಿಳಿದು ಬಂದಿದೆ. ಹೆಮಟೊಫಾಗಸ್ ಬಾವಲಿಗಳು US ನಲ್ಲಿ ರೇಬೀಸ್‌ಗೆ ಕಾರಣವಾಗಿದ್ದು. ಇವುಗಳು ನಾಯಿಗಳಿಗಿಂತಲೂ ಭಯಂಕರವಾಗಿರುತ್ತದೆ. ಯಾಕಂದ್ರೆ ಬಾವಲಿಗಳ ಕಚ್ಚುವಿಕೆ ಅಥವಾ ಗೀರುಗಳ ಗುರುತು ತುಂಬಾ ಚಿಕ್ಕದಾಗಿರುತ್ತದೆ. ಇದು ಜನರಿಗೆ ಗೋಚರಿಸುವುದಿಲ್ಲ.
ಈ 4 ಪ್ರಾಣಿಗಳು ರೇಬೀಸ್ ಅನ್ನು ಹರಡುತ್ತದೆ!
ಕೋತಿ
ಕುದುರೆ
ನರಿ
ರಕೂನ್ (Raccoon)
ಪ್ರಾಣಿ ಕಚ್ಚಿದ ತಕ್ಷಣ ಈ ರೀತಿ ಮಾಡಿ!
ನಾಯಿ, ಬಾವಲಿ ಅಥವಾ ಇನ್ನಾವುದೇ ಪ್ರಾಣಿಗಳು ನಿಮಗೆ ಕಚ್ಚಿದರೆ ತಕ್ಷಣ ಗಾಯವನ್ನು ಸೋಪ್ ಮತ್ತು ನೀರಿನಿಂದ ಕನಿಷ್ಠ 15 ನಿಮಿಷಗಳ ಕಾಲ ತೊಳೆಯಿರಿ. ಗಾಯವನ್ನು ಬ್ಯಾಂಡೇಜ್ ಮಾಡಿ. ಮತ್ತು ಆಂಟಿ ರೇಬೀಸ್ ಇಂಜೆಕ್ಷನ್ ಪಡೆಯಿರಿ. ಅಗತ್ಯವಿದ್ದರೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ ಮತ್ತು ಮೊನೊಕ್ಲೋನಲ್ ಪ್ರತಿಕಾಯಗಳ ಚಿಕಿತ್ಸೆಯನ್ನು ಪಡೆಯಿರಿ.
ರೇಬೀಸ್ ಸೋಂಕಿನ ಅಪಾಯಕಾರಿ ಲಕ್ಷಣಗಳು ಯಾವುದು?
ಜ್ವರ
ದೇಹದಲ್ಲಿ ನೋವು
ಗಾಯದ ಮೇಲೆ ಸುಡುವಿಕೆ ಅನುಭವ ಅಥವಾ ಸಂವೇದನೆ ಉಂಟಾಗುತ್ತದೆಸಸ
ರೋಗಿಯು ನಾಯಿಯಂತೆ ವರ್ತಿಸಲು ಪ್ರಾರಂಭಿಸುತ್ತಾನೆ!
ನಾಯಿಯು ಕಚ್ಚಿ ರೇಬಿಸ್ ರೋಗ ಉಂಟಾದರೆ ರೋಗಿಯು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ. ಇದರಲ್ಲಿ ನೀರಿನ ಭಯ, ತಾಜಾ ಗಾಳಿಯ ಭಯ, ಗೊಂದಲ, ತುಂಬಾ ಚಟುವಟಿಕೆಯಿಂದಿರುವುದು, ಕೈಕಾಲುಗಳನ್ನು ಚಲಿಸಲು ಸಾಧ್ಯವಾಗದಂತಹ ಸಮಸ್ಯೆಗಳು ಕಂಡುಬರುತ್ತದೆ. ಈ ರೋಗಲಕ್ಷಣಗಳು ಕ್ರಮೇಣ ತೀವ್ರವಾಗಬಹುದು. ವ್ಯಕ್ತಿಯು ಕೋಮಾಕ್ಕೆ ಹೋಗಬಹುದು. ಮತ್ತು ಇದರಿಂದ ಸಾವು ಸಂಭವಿಸಬಹುದು.
ರೇಬೀಸ್ ತಡೆಗಟ್ಟಲು ಈ ಕೆಲಸಗಳನ್ನು ಮಾಡಿ!
* ಸಾಕುಪ್ರಾಣಿಗಳಿಗೆ ಆಂಟಿ ರೇಬೀಸ್ ಚುಚ್ಚುಮದ್ದನ್ನು ಪಡೆಯಿರಿ.
* ನಿಮ್ಮ ಸಾಕುಪ್ರಾಣಿಗಳನ್ನು ಮನೆಯೊಳಗೆ ಇರಿಸಿಕೊಳ್ಳಿ ಅಥವಾ ಮನೆಯಲ್ಲಿ ಕಟ್ಟಿ
* ನಿಮ್ಮ ಸಾಕುಪ್ರಾಣಿಗಳನ್ನು ಇತರ ಪ್ರಾಣಿಗಳಿಂದ ದೂರವಿಡಿ



Click it and Unblock the Notifications
