Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿನ ಪ್ಲಾಸ್ಟಿಕ್ ಡಬ್ಬಿಗಳನ್ನು ಯಾವಾಗ ಬದಲಾಯಿಸಬೇಕು..? ಅದು ಯಾವಾಗ ಹಾನಿ ಮಾಡಬಹುದು?
ನೀವು ಮನೆಯಲ್ಲಿ ಅದರಲ್ಲೂ ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಡಬ್ಬಿಗಳನ್ನು ಹೆಚ್ಚಾಗಿ ಬಳಸುತ್ತೇವೆ. ದಿನಸಿಗಳನ್ನು ಇಟ್ಟುಕೊಳ್ಳಲು, ಆಹಾರ ಪದಾರ್ಥಗಳ ಹಾಕಿ ಇಡಲು ಹಾಗೆ ನೀವು ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗಲು ಕೂಡ ಇದನ್ನು ಬಳಸುತ್ತಿರುವುದು ನೋಡಬಹುದು. ಬಹುತೇಕರ ಮನೆಯಲ್ಲಿ ಪ್ಲಾಸ್ಟಿಕ್ ಡಬ್ಬಿಗಳನ್ನು ಬಳಸಿಯೇ ಬಳಸುತ್ತಾರೆ.
ಆದ್ರೆ ಈ ಪ್ಲಾಸ್ಟಿಕ್ ಡಬ್ಬವನ್ನು ಆಹಾರದ ವಸ್ತುಗಳ ಇಡಲು ಬಳಸುವುದು ಎಷ್ಟು ಅಪಾಯಕಾರಿ ಅನ್ನೋದು ಕೂಡ ನೀವು ತಿಳಿದಿರಬಹುದು. ಕೆಲವೊಂದು ಪ್ಲಾಸ್ಟಿಕ್‌ಗಳು ಬಹಳ ಹಾನಿಕಾರಕ ಅಂಶಗಳಿಂದಲೂ ಕೂಡಿರಲಿವೆ ಎಂಬುದು ನಮಗೆ ತಿಳಿದಿದೆ. ಆದ್ರೆ ಪ್ಲಾಸ್ಟಿಕ್ ಯಾವಾಗ ಹಾನಿ ಮಾಡಲು ಆರಂಭಿಸಲಿದೆ ಹಾಗೆ ಯಾವಾಗ ಆ ಪ್ಲಾಸ್ಟಿಕ್ ಡಬ್ಬಿಗಳನ್ನು ಬದಲಿಸಬೇಕು ಅನ್ನೋದು ಯಾರಿಗೂ ತಿಳಿದಿರುವುದಿಲ್ಲ.

ನೀವು ಬಿಸಿಯಾದ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿಡುವುದು ಅಥವಾ ಕೆಲವು ಮಸಾಲೆಗಳು, ಪ್ಲಾಸ್ಟಿಕ್‌ನೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದು ಸಹ ನಾವು ನೋಡಲಿದ್ದೇವೆ. ಸದ್ಯ ನಾವಿಂದು ಈ ಪ್ಲಾಸ್ಟಿಕ್ ಡಬ್ಬಿಗಳನ್ನು ಯಾವಾಗ ಬದಲಿಸಬೇಕು. ಅವುಗಳು ಯಾವಾಗ ಬಳಕೆಗೆ ಅನರ್ಹವಾಗಲಿವೆ? ಯಾವಾಗ ಎಸೆಯುವುದು ಸೂಕ್ತ ಎಂಬ ಕುರಿತು ತಿಳಿದುಕೊಳ್ಳೋಣ. ಹಾಗೆ ಈ ಪ್ಲಾಸ್ಟಿಕ್ ಬಳಸುವ ಮುನ್ನ ಯಾವೆಲ್ಲಾ ವಿಚಾರಗಳನ್ನು ನಾವು ಗಮನದಲ್ಲಿ ಇಟ್ಟಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಪ್ಲಾಸ್ಟಿಕ್ ಡಬ್ಬಿಗಳ ಮುಚ್ಚಳ ಹಾಳಾದಾಗ
ಬಹುತೇಕ ಪ್ಲಾಸ್ಟಿಕ್ ಎಬ್ಬಿಗಳು ಮೊದಲು ಹಾಳಾಗಲು ಆರಂಭಿಸುವುದೇ ಅವುಗಳ ಮುಚ್ಚಳದಿಂದ ಸರಿಯಾಗಿ ಮುಚ್ಚಳಗಳನ್ನು ಹಾಕದೇ ಆಗದಿರುವುದು ಪ್ಲಾಸ್ಟಿಕ್ ಡಬ್ಬಿಯನ್ನು ಎಸೆಯುವ ಸಮಯ ಎಂಬುದನ್ನು ತೋರಿಸಲಿದೆ. ಅವು ಸರಿಯಾಗಿ ಡಬ್ಬಿಯಲ್ಲಿ ಕೂರದೆ ಇದ್ದರೆ ಒಳಗೆ ಇರುವ ಆಹಾರ ಪದಾರ್ಥಗಳು ಬಹುಬೇಗ ಕೆಡಬಹುದು, ಹಾಗೆ ಗಾಳಿ ಹೋಗುವುದನ್ನು ಇದು ತಡೆಯುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್ ಡಬ್ಬಿಯ ಮುಚ್ಚಳಗಳು ಸರಿಯಾಗಿ ಹೊಂದಿಕೆಯಾಗದಿದ್ದರೆ ಅಂತಹ ಡಬ್ಬಿಗಳನ್ನು ಎಸೆಯುವುದು ಬಹಳ ಮುಖ್ಯ.
ಈ ಡಬ್ಬಿಗಳು ಬಿರುಕು ಬಿಟ್ಟಿದ್ದರೆ
ಪ್ಲಾಸ್ಟಿಕ್ ಡಬ್ಬಿಗಳು ಬಿಸಿ ಪದಾರ್ಥಗಳಿಂದ ಬಿರುಕು ಬಿಡುತ್ತವೆ. ಹೀಗಾಗಿ ಈ ಡಬ್ಬಿಗಳಿಗೆ ಬಿಸಿಯಾದ ಪದಾರ್ಥ ಹಾಕಬಾರದು. ಈ ರೀತಿ ಬಿರುಕು ಬಿಟ್ಟಿರುವ ಡಬ್ಬಿಯನ್ನು ಎಂದಿಗೂ ಶೇಖರಿಸುವ ಉದ್ದೇಶದಿಂದ ಬಳಸಬೇಡಿ. ಕೆಲವೊಮ್ಮೆ ಬಿರುಕು ಬಂದಿರುವುದು ನಿಮ್ಮ ಕಣ್ಣಿಗೆ ಗೋಚರವೇ ಆಗುವುದಿಲ್ಲ ಆದ್ರೆ ಅದರಿಂದ ಉಂಟಾಗುವ ಪ್ರಭಾವ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಈ ಡಬ್ಬಿಗಳು ಬಿರುಕು ಬಿಡುತ್ತಿವೆ ಅಂದರೆ ಅದು ತನ್ನ ಗಟ್ಟಿತನ ಕಳೆದುಕೊಂಡಿದೆ ಎಂದರ್ಥವಾಗುತ್ತದೆ, ಹೀಗಾಗಿ ಇಂತಹ ಡಬ್ಬಿಗಳನ್ನು ಆಹಾರಗಳ ಶೇಖರಿಸಲು ಹಾಗೆ ದಿನಸಿ ವಸ್ತುಗಳ ಇಡಲು ಬಳಸಬೇಡಿ.
ಡಬ್ಬಿಯಲ್ಲಿ ಕಾಣಿಸುವ ಕಲೆಗಳು
ನೀವು ಬಳಸುತ್ತಿರುವ ಪ್ಲಾಸ್ಟಿಕ್ ಡಬ್ಬಿಗಳು ಹಲವು ಸಮಯದ ಬಳಿಕ ಕಲೆಗಳು ಕಾಣಿಸಿಕೊಳ್ಳುತ್ತವೆ, ಇದಕ್ಕೆ ರಾಸಾಯನಿಕಗಳು ಕಾರಣವಾಗಿರಬಹುದು. ಹೀಗಾಗಿ ಇಂತಹ ಕಲೆಗಳಾದ ಡಬ್ಬಿಗಳನ್ನು ಮುಂದೆಯೂ ಬಳಸುವುದಕ್ಕಿಂತ ಅದರಿಂದ ಮುಕ್ತಿ ಪಡೆಯುವುದು ಒಳ್ಳೆಯದು. ಇವು ನಿಮ್ಮ ಆಹಾರದ ಮೇಲೆ ಪ್ರಭಾವ ಬೀರಬಹುದು. ಅದರಲ್ಲೂ ಡಬ್ಬಿಗಳಲ್ಲಿ ಕಪ್ಪು ಕಲೆಗಳು, ಹಸಿ ಬಣ್ಣದ ಕಲೆಗಳು ಎಷ್ಟು ತೊಳೆದರೂ ಕೂಡ ಹಾಗೆ ಉಳಿದರೆ ಅಂತಹ ಡಬ್ಬಿಗಳ ಬದಲಾಯಿಸುವುದು ಬಹಳ ಉತ್ತಮ.
5 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ
ಯಾವುದೇ ಪ್ಲಾಸ್ಟಿಕ್ ಡಬ್ಬಿಯನ್ನು ನೀವು 5 ವರ್ಷಕ್ಕಿಂತ ಹೆಚ್ಚು ಸಮಯ ಬಳಸದೇಡಿ. ಇವು ಕಾಳ ಕಳೆದಂತೆ ತನ್ನ ರಾಸಾಯನಿಕ ಅಂಶಗಳನ್ನು ಹೊರಹಾಕಲು ಆರಂಭಿಸಲಿವೆ. ಹಾಗೆ ಇದು ಕೊಳೆಯುವ ಪ್ಲಾಸ್ಟಿಕ್ ಆಗಿದ್ದರೆ ದೇಹದ ಮೇಲೆ ಪರಿಣಾಮ ಬೀರಲಿದೆ. ಇದು ಹೆಚ್ಚು ಸವೆಯುವ ಕಾರಣಕ್ಕೆ ಬಹುಬೇಗ ಆಹಾರದೊಂದಿಗೆ ಬೆರೆಯುವ ಆತಂಕ ಇರಲಿದೆ.



Click it and Unblock the Notifications


