Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೀಪಾವಳಿಯಲ್ಲಿ ಯಾವ ವಸ್ತು ಖರೀದಿಸಬೇಕು..? ಯಾವುದು ಶುಭ ಸೂಚಕ ಗೊತ್ತಾ?
ದೀಪಾವಳಿ ಹತ್ತಿರವಾಗುತ್ತಿದೆ, ಹೀಗಾಗಿ ದೀಪಾವಳಿ ಅಂದ್ರೆ ಬೆಳಕಿನ ಹಬ್ಬ, ಎಲ್ಲೆಲ್ಲೂ ಸಡಗರ ಸಂಭ್ರಮ ಇರುತ್ತೆ. ಹಾಗೆ ಮನೆಯಲ್ಲಿ ಒಂದು ಸತೋಷದ ವಾತಾವರಣ, ಬೆಳಕು, ಡೆಕೋರೇಷನ್‌ಗಳಿಂದ ತುಂಬಿರುತ್ತದೆ. ಧಾರ್ಮಿಕ ಆಚರಣೆಗಳ ಸಾಲಿನಲ್ಲಿ ಈ ದೀಪಾವಳಿ ಪ್ರಮುಖ ಹಬ್ಬವಾಗಿದೆ. ಇನ್ನು ಈ ಹಬ್ಬದಲ್ಲಿ ಮನೆಗೆ ಹೊಸ ವಸ್ತುಗಳ ಖರೀದಿಸುವುದು, ಕೆಲವೊಂದು ಶುಭ ಕೆಲಸಗಳಿಗೆ ಮುನ್ನುಡಿ ಬರೆಯುವುದು ಮಾಡುತ್ತಾರೆ.
ಆದ್ರೆ ಈ ದೀಪಾವಳಿಯಲ್ಲಿ ನೀವು ಯಾವ ವಸ್ತು ಖರೀದಿಸಬೇಕು ಎಂಬ ಗೊಂದಲದಲ್ಲಿದ್ದರೆ ನಾವಿಂದು ಈ ಗೊಂದಲ ಬಗೆಹರಿಸುತ್ತೇವೆ. ದೀಪಾವಳಿ ಯಾವ ವಸ್ತು ಖರೀದಿಸಿದರೆ ನಿಮಗೆ ಒಳಿತಾಗಲಿದೆ, ಯಾವ ವಸ್ತು ಮನೆಗೆ ಬಂದರೆ ಲಕ್ಷ್ಮಿ ಬಂದಂತಾಗುತ್ತದೆ. ಯಾವ ಸಂಪತ್ತು ನಿಮ್ಮ ಆರ್ಥಿಕ ಲಾಭಕ್ಕೆ ಕಾರಣವಾಗಲಿದೆ, ಬೆಳಕಿನ ಹಬ್ಬದಲ್ಲಿ ನಾವು ಯಾವ ವಸ್ತು ಖರೀದಿಸಿದರೆ ಒಳಿತಾಗಲಿದೆ? ಎಂಬ ಕುರಿತು ನಾವು ತಿಳಿದುಕೊಳ್ಳೋಣ.

ಇದೇ ಅಕ್ಟೋಬರ್ 31ರಿಂದ ಬೆಳಕಿನ ಹಬ್ಬ ದೀಪಾವಳಿ ಆರಂಭಗೊಳ್ಳುತ್ತದೆ. ಹಾಗೆ ಕೆಲವೊಂದು ರಾಜ್ಯದಲ್ಲಿ ಸುಮಾರು ಒಂದು ವಾರಕ್ಕೂ ಅಧಿಕ ಕಾಲ ಆಚರಣೆಗಳು ಮುಂದುವರೆಯಲಿದೆ, ಈ ವಾರದಲ್ಲಿ ನೀವು ಯಾವುದಾದರು ವಸ್ತುಗಳ ಖರೀದಿಸುವ ಇಚ್ಛೆ ಹೊಂದಿದ್ದರೆ ಈ ವಸ್ತುಗಳನ್ನು ಖರೀದಿಸುವುದು ಉತ್ತಮ.
ಚಿನ್ನ ಮತ್ತು ಬೆಳ್ಳಿ ಅಥವಾ ವಜ್ರ
ದೀಪಾವಳಿ ಸಮಯದಲ್ಲಿ ಲಕ್ಷ್ಮಿಯ ಆಭರಣಗಳಲ್ಲಿ ಚಿನ್ನ, ಬೆಳ್ಳಿ ಅಥವಾ ವಜ್ರದ ಆಭರಣ ಖರೀದಿಸುವುದು ಉತ್ತಮವಂತೆ. ದೀಪಾವಳಿಯು ಸಂಪತ್ತಿನ ಹಬ್ಬವಾಗಿರಲಿದೆ. ಹೀಗಾಗಿ ಈ ದಿನ ಇಂತಹ ಬೆಲೆ ಬಾಳುವ ವಸ್ತು ಖರೀದಿಸಿದರೆ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರಲಿದೆ ಎಂದು ನಂಬಲಾಗಿದೆ.
ಪಾತ್ರೆಗಳು
ದೀಪಾವಳಿಯಲ್ಲಿ ಮನೆಗೆ ಹೊಸ ಪಾತ್ರೆಗಳ ಖರೀದಿಸಬೇಕಂತೆ. ಕಬ್ಬಿಣದ ವಸ್ತುವಿನಿಂದ ಮಾಡಿದ ಪಾತ್ರೆ ಖರೀದಿಸಬಾರದಂತೆ, ಉಳಿದಂತೆ ಸ್ಟೀಲ್, ತಾಮ್ರ, ಹಿತ್ತಾಳೆಯ ಪಾತ್ರೆ ಖರೀದಿಸಿದರೆ ಶುಭವಾಗಲಿದೆ. ಹಾಗೆ ಈ ಪಾತ್ರೆಯನ್ನು ಮನೆಯೊಳಗೆ ತೆಗೆದುಕೊಂಡು ಹೋಗುವ ಮುನ್ನ ಅದರ ಒಳಗೆ ನೀರು ತುಂಬಿಸಿಕೊಂಡು ಹೋಗಬೇಕಂತೆ ಈ ರೀತಿಯ ನಂಬಿಕೆ ಹಿಂದೂ ಧರ್ಮದಲ್ಲಿದೆ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು
ದೀಪಾವಳಿಯ ಹಬ್ಬದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ ಖರೀದಿಸುವುದು ಶುಭ ಸೂಚಕವಂತೆ. ಅದರಲ್ಲಿ ಟಿವಿ, ಮೊಬೈಲ್, ಗೃಹಪಯೋಗಿ ವಸ್ತುಗಳ ಖರೀದಿಸಿದರೆ ನಿಮಗೆ ಶುಭವಾಗಲಿದೆ.
ವಾಹನಗಳು
ದೀಪವಳಿಯಲ್ಲಿ ವಾಹನ ಖರೀದಿಯೇ ಹೆಚ್ಚು. ಏಕೆಂದರೆ ದೀಪಾವಳಿಯಲ್ಲಿ ವಾಹನ ಖರೀದಿಸಿದರೆ ಮನೆ ಬೆಳಗುತ್ತದೆ ಎಂದು ನಂಬಲಾಗಿದೆ. ಈ ವಾಹನವು ಮನೆಯ ಐಶ್ವರ್ಯವಾಗಿ ಬದಲಾಗಲಿದೆ. ಮನೆಗೆ ಶುಭವಾಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ದೀಪಾವಳಿಯಲ್ಲಿ ದ್ವಿಚಕ್ರ ವಾಹಹ, ನಾಲ್ಕು ಚಕ್ರದ ವಾಹನಗಳ ಮಾರಾಟ ಕೂಡ ಏರಿಕೆಯಾಗುತ್ತದೆ. ಅಲ್ಲದೆ ಮನೆಗೆ ಹೊಸ ಸದಸ್ಯನಂತೆ ಈ ವಾಹನವನ್ನು ಬರ ಮಾಡಿಕೊಳ್ಳುತ್ತಾರೆ. ಹಬ್ಬದ ವಾತಾವರಣಕ್ಕೆ ಈ ಹೊಸ ವಾಹನಗಳು ಮತ್ತಷ್ಟು ಮೆರುಗು ತರಲಿವೆ.
ಪೊರಕೆ
ಹಣವಂತರು ದೀಪಾವಳಿಯಲ್ಲಿ ದೊಡ್ಡ ದೊಡ್ಡ ಐಷಾರಾಮಿ ವಸ್ತು ಖರೀದಿಸುತ್ತಾರೆ, ಬಡವರು ಏನು ಮಾಡುವುದು ಎಂಬ ಚಿಂತೆ ಇದ್ದರೆ ಅದನ್ನೂ ಕೂಡ ಬಿಡಿ. ಏಕೆಂದರೆ ಮನೆಗೆ ಆ ದಿನ ಪೊರಕೆ ತರುವುದು ಕೂಡ ಶುಭ ಸಂಕೇತವಂತೆ. ದೀಪಾವಳಿಯಲ್ಲಿ ಪೊರಕೆ ಖರೀದಿಯು ಮನೆಯಲ್ಲಿರುವ ಹಣಕಾಸಿನ ಸಮಸ್ಯೆಯನ್ನು ದೂರ ಮಾಡಲಿದೆ ಎಂಬ ನಂಬಿಕೆ ಇದೆ.
ಈ ದಿನ ಏನು ಮಾಡಬಾರದು?
ದೀಪಾವಳಿಯಲ್ಲಿ ಕೆಲವು ವಸ್ತು ತಂದರೆ ಹೇಗೆ ಶುಭವಾಗಲಿದ್ಯೋ ಅದೇ ರೀತಿ ಕೆಲವೊಂದು ವಿಚಾರಗಳು ಅಶುಭ ಸಂಕೇತವಾಗಿದೆ. ಅದರಲ್ಲಿ ದೀಪಾವಳಿಯಲ್ಲಿ ಮಾಂಸಹಾರ, ಹಸುವನ್ನು ಮಾರಾಟ ಮಾಡುವುದು, ತಡವಾಗಿ ಏಳುವುದು, ಅನ್ನವನ್ನು ಎಸೆಯುವುದು, ಕೆಟ್ಟ ಕೆಲಸದಲ್ಲಿ ಭಾಗಿಯಾಗುವ ಕೃತ್ಯ ಮಾಡಬಾರದಂತೆ.



Click it and Unblock the Notifications
