Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೆಂಡೆಕಾಯಿ ನೀರು ಕುಡಿಯುವುದರ ಸೈಡ್ ಎಫೆಕ್ಟ್ ಏನು? ಇಲ್ಲಿದೆ ಮಾಹಿತಿ
ನಿಮ್ಮ ನಿತ್ಯದ ಆರೋಗ್ಯಕರ ಅಭ್ಯಾಸಗಳಲ್ಲಿ ನೈಸರ್ಗಿಕವಾಗಿ ದೇಹ ಸಮತೋಲನದಲ್ಲಿ ಇಡುವಂತಹ ವಸ್ತುಗಳ ಸೇವಿಸುವುದು ಸಾಮಾನ್ಯವಾಗಿರಬಹುದು. ಅದ್ರಲ್ಲೂ ಬೆಂಡೆಕಾಯಿಯಿಂದ ಮಾಡುವ ಹಲವು ಖಾದ್ಯಗಳು ನಿಮಗೆ ಅದ್ಭುತ ಪ್ರಯೋಜನಗಳ ತರುವುದು ನೋಡಬಹುದು. ಹಾಗೆ ಕೆಲವರು ಆರೋಗ್ಯ ಕಾಪಾಡಿಕೊಳ್ಳಲು ಹಲವು ರೀತಿಯ ಹರ್ಬಲ್ ಪಾನಿಯ ಕುಡಿಯುವುದು ನೋಡಬಹುದು.
ಕೆಲವರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ತಣ್ಣೀರು ಕುಡಿಯುತ್ತಾರೆ, ಮತ್ತೆ ಕೆಲವರು ಲವಂಗದ ನೀರು, ನಿಂಬೆ ಹುಳಿಯ ನೀರು ಜೀರಿಗೆ ನೀರು, ತುಳಸಿ ನೀರು ಹೀಗೆ ಹತ್ತಾರು ರೀತಿಯ ನೀರನ್ನು ಸೇವಿಸುವುದು ನೋಡಬಹುದು. ಹಾಗೆ ಬೆಂಡೆಕಾಯಿಯ ನೀರು ಸಹ ಸೇವಿಸುವುದು ಸಾಮಾನ್ಯವಾಗಿ ನೋಡಬಹುದು.

ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿಟ್ಟು ಬೆಳಗ್ಗೆ ಎದ್ದು ಜರಡಿ ಹಿಡಿದು ಆ ನೀರು ಕುಡಿಯುತ್ತಾರೆ. ಬಹಳ ದಪ್ಪ ಹಾಗೂ ಲೋಳೆಯಾಗಿರುವ ಈ ನೀರು ಸೇವನೆ ನಿಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಅನುಕೂಲರಕರವಾಗುತ್ತದೆ. ಬೆಂಡೆಕಾಯಿಯಲ್ಲಿನ ವಿಟಮಿನ್ ಎ, ಸಿ ಮತ್ತು ಕೆ, ಜೊತೆಗೆ ಉತ್ಕರ್ಷಣ ನಿರೋಧಕಗಳು, ನಾರು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
ಬೆಂಡೆಕಾಯಿ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಹೆಸರುವಾಸಿಯಾಗಿದೆ. ಇದರ ಹೆಚ್ಚಿನ ನಾರಿನ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಆದರೆ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುವುದು ಸೇರಿ ಹಲವು ರೀತಿ ಲಾಭಗಳಿಗೆ ಕಾರಣವಾಗಲಿದೆ.
ಆದ್ರೆ ಈ ಬೆಂಡೆಕಾಯಿ ನೀರು ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆಯೋ ಅದರಿಂದ ಕೆಲವೇ ಕೆಲವು ಅಡ್ಡಪರಿಣಾಮಗಳಿವೆ ಅನ್ನೋದು ನಿಮಗೆ ಗೊತ್ತಾ?
ಆರಂಭದಲ್ಲಿ ನೀವು ಬೆಂಡೆಕಾಯಿ ನೀರು ಸೇವಿಸಲು ಮುಂದಾದರೆ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿನ ಪೂರಣ ಅಂಶಗಳಿಗೆ ದೇಹ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಹಾಗೆ ಬಹಳ ತಂಪು ನೀಡುವ ಕಾರಣದಿಂದಾಗಿ ನಿಮ್ಮ ದೇಹ ತಂಪಾಗಬಹುದು, ಹೀಗಾಗಿ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂಬುದನ್ನು ಗಮನದಲ್ಲಿಡಬೇಕಿದೆ.
ಕೆಲವು ಉದರ ಸಂಬಂಧಿತ ಸಮಸ್ಯೆಗಳ ಹೊಂದಿದ್ದರೆ ಬೆಂಡೆಕಾಯಿ ನೀರು ಸೇವನೆ ತಪ್ಪಿಸುವುದು ಅಥವಾ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಅದ್ರಲ್ಲೂ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿರುವ ಮಂದಿಗೆ ಬೆಂಡೆಕಾಯಿ ನೀರು ಋಣಾತ್ಮಕವಾಗಿ ಪರಿಣಮಿಸಬಹುದು. ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಕೆಲವರಲ್ಲಿ ಇದು ಹಸಿವು ಕಡಿಮೆ ಮಾಡಬಹುದು.
ಕೆಲವರಿಗೆ ಈ ಬೆಂಡೆಕಾಯಿ ಅಂಶವು ಅಲರ್ಜಿ ತರಬಹುದು, ಹೀಗಾಗಿ ಬೆಂಡೆಕಾಯಿ ನೀರು ಸೇವಿಸಿದ ಬಳಿಕ ಚರ್ಮದಲ್ಲಿ ಅಲರ್ಜಿ, ಗಂಟಲು ಕೆರೆತ, ಅತಿಸಾರ, ವಾಂತಿ ಸೇರಿ ಯಾವುದಾದರು ಅಪಸಾಮಾನ್ಯ ಪರಿಣಾಮಗಳ ಎದುರಿಸಿದರೆ ಬೆಂಡೆಕಾಯಿ ನೀರು ಸೇವನೆ ನಿಲ್ಲಿಸುವುದು ಉತ್ತಮ.
ಮಧುಮೇಹ ಅಥವಾ ಜಠರಗರುಳಿನ ಸಮಸ್ಯೆಗಳಂತಹ ಆರೋಗ್ಯ ಪರಿಸ್ಥಿತಿಗಳು ನಿಮಗೆ ಇದ್ದರೆ, ನಿಮ್ಮ ಆಹಾರದಲ್ಲಿ ಬೆಂಡೆಕಾಯಿ ನೀರನ್ನು ಸೇರಿಸುವ ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ.
ಬೆಂಡೆಕಾಯಿ ನೀರು ಮಾಡುವುದು ಹೇಗೆ?
ಮೊದಲು ಐದಾರು ಬೆಂಡೆಕಾಯಿಯನ್ನು ತೊಳೆದು ನಂತರ ನೀಳವಾಗ ಸೀಳಿಕೊಳ್ಳಬೇಕು. ಹಾಗೆ ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಅದಕ್ಕೆ ಹಾಕಿ ರಾತ್ರಿ ಪೂರ್ತಿ ಇಡಿ. ಮಾರನೆ ದಿನ ಬೆಳಗ್ಗೆ ಈ ನಿರನ್ನು ಜರಡಿ ಹಿಡಿದು ಬೇರೆ ಮಾಡಿಕೊಂಡು ನೀರನ್ನು ಖಾಲಿ ಹೊಟ್ಟೆಗೆ ಸೇವಿಸುವುದು ಉತ್ತಮ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
