Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಾಷಿಂಗ್ ಮಷಿನ್‌ನಲ್ಲಿ ಬಟ್ಟೆಯ ಕೊಳೆ ಸರಿಯಾಗಿ ಹೋಗುತಿಲ್ವಾ? ಇಲ್ಲಿದೆ ಯಾರು ಹೇಳಿರದ ಟಿಪ್ಸ್..!
ಮನೆಯಲ್ಲಿ ಗೃಹಿಣಿಯರ ಕೆಲಸ ಕಡಿಮೆ ಮಾಡಲು ಈಗ ಹತ್ತು ಹಲವು ಯಂತ್ರಗಳು ಬಂದಿವೆ. ಅಡುಗೆ ಮಾಡುವುದರಿಂದ ಮನೆಯ ಎಲ್ಲಾ ಕೆಲಸಗಳು ಕೂಡ ಈಗ ಯಂತ್ರಗಳ ಸಹಾಯದಿಂದ ಮಾಡಲ್ಪಡುತ್ತಿದೆ. ಆದ್ರೆ ದಶಕಗಳ ಹಿಂದೆ ಬಂದಿರುವ ಕೆಲವು ಯಂತ್ರಗಳು ಇಂದಿಗೂ ಗೃಹಿಣಿಯರ ಕೆಲಸ ಕಡಿಮೆ ಮಾಡಿವೆ. ಹಾಗೆ ಮನೆಯಲ್ಲಿ ಅವರಿಗೂ ಒಂದಿಷ್ಟು ಸಮಯ ವಿಶ್ರಾಂತಿ ತಂದು ಕೊಡುತ್ತವೆ.
ಇಂತಹದ್ರಲ್ಲಿ ವಾಷಿಂಗ್ ಮಷಿನ್ ಕೂಡ ಒಂದಾಗಿದೆ. ಕೊಳೆಯಾದ ಬಟ್ಟೆಯನ್ನು ಒಗೆಯಲು ಈಗ ಬಹುತೇಕರ ಮನೆಯಲ್ಲಿ ವಾಷಿಂಗ್ ಮಷಿನ್ ಎಂಟ್ರಿ ಕೊಟ್ಟಿದೆ. ಎಲ್ಲರು ಕೈಯಲ್ಲಿ ಬಟ್ಟೆ ಒಗೆಯುವ ಬದಲಾಗಿ ದುಬಾರಿಯಾದರು ಅದರ ಲಿಕ್ವಿಡ್ ಅಥವಾ ಪುಡಿಯನ್ನು ಬಳಸಿ ಮಷಿನ್‌ನಲ್ಲಿಯೇ ಒಗೆಯುವುದು ಮಾಡುತ್ತಾರೆ. ಮಷಿನ್‌ಗೆ ಕೊಳೆ ಬಟ್ಟೆ ಹಾಕಿ ಬೇರೆ ಕೆಲಸ ಮಾಡುತ್ತಾರೆ.

ಬಟ್ಟೆ ಒಗೆಯುವ ಸಮಯದಲ್ಲಿ ಅವರೀಗ ಬೇರೆ ಕೆಲಸಗಳ ಮಾಡಿಕೊಳ್ಳುತ್ತಾರೆ. ಹಾಗೆ ಬ್ಯಾಚುಲರ್‌ಗಳಂತು ಮಷಿನ್ ಬಳಸಿಯೇ ಬಳಸುತ್ತಾರೆ, ಇಲ್ಲವೆ ಲಾಂಡ್ರಿ ಹುಡುಕುತ್ತಾರೆ. ಇಷ್ಟೊಂದು ಉಪಯೋಗಕಾರಿಯಾದ ವಾಷಿಂಗ್ ಮಷಿನ್ ಮೂಲಕ ಬಟ್ಟೆ ಒಗೆದರೆ ಸರಿಯಾಗಿ ಕ್ಲೀನ್ ಆಗುವುದಿಲ್ಲ ಎಂಬ ದೂರು ಒಂದಿದೆ. ಕೆಲವರು ಮಷಿನ್‌ನಲ್ಲಿ ಕಲೆ ಬಟ್ಟೆಗಳನ್ನು ಒಗೆಯುವುದೇ ಇಲ್ಲ. ಬದಲಿಗೆ ಕೈನಲ್ಲಿ ಒಗೆದು ಬಳಿಕ ಮಷಿನ್‌ಗೆ ಹಾಕುವುದು ಕೂಡ ಇದೆ.
ವಾಷಿಂಗ್ ಮಷಿನ್‌ನಲ್ಲಿ ಗಾಢವಾದ ಕಲೆಗಳು, ಕಾಲರ್ ಮೇಲಿನ ಕಲೆಗಳು ಹೋಗುವುದಿಲ್ಲ ಎಂಬ ದೂರು ಇದೆ. ಹಾಗೆ ಕೆಲವೊಂದು ಕೆಲಗಳಿಗೆ ಎಷ್ಟೇ ದುಬಾರಿ ಲಿಕ್ವಿಡ್ ಬಳಸಿದರು ಮಷಿನ್‌ನಲ್ಲಿ ಹೋಗುವುದಿಲ್ಲ ಎಂಬ ಮಾತಿದೆ. ಆದ್ರೆ ನಾವಿಂದು ಹೇಳುವ ಈ ಟ್ರಿಕ್ಸ್ ಬಳಸಿದ್ರೆ ನೀವು ಮಷಿನ್ ಮೂಲಕವೇ ಅದ್ಭುತವಾಗಿ ಕಲೆ ಹೋಗಲಾಡಿಸಬಹುದು. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಷಿನ್ ಫುಲ್ ಆಗುವಷ್ಟು ಬಟ್ಟೆ ಹಾಕಬಾರದು
ಮಷಿನ್ ಫುಲ್ ಆಗುವಷ್ಟು ಬಟ್ಟೆಯನ್ನು ಮಷಿನ್‌ಗೆ ಹಾಕಿಕೊಂಡು ವಾಷ್ ಮಾಡಬಾರದು. ಇದರಿಂದ ಬಟ್ಟೆ ಸ್ವಚ್ಚ ಆಗುವುದಿಲ್ಲ. ಯಾವಾಗಲು ಸ್ವಲ್ಪ ಸ್ಥಳ ಬಿಟ್ಟು ಬಟ್ಟೆ ಹಾಕಬೇಕು. ಹೈಲೋಡ್ ಆಗಲು ಬಿಡಬಾರದು. 10 ಕೆಜಿ ಸಾಮರ್ಥ್ಯದ ಮಷಿನ್ ಆಗಿದ್ದರೂ 7ರಿಂದ 8 ಕೆಜಿ ಅಷ್ಟು ಬಳಸಬಹುದು. ಹಾಗೆ ಅರ್ಧ ತೊಳೆದ ಬಳಿಕ ಕೊನೆಯಲ್ಲಿ ಲಿಕ್ವಿಡ್ ಅಥವಾ ಪುಡಿಯನ್ನು ಮತ್ತೆ ಹಾಕಿ ಬಿಡಬೇಕು. ಇದರಿಂದ ಬಟ್ಟೆ ಸುಲಭವಾಗಿ ಕ್ಲೀನ್ ಮಾಡಬಹುದು.
ಶರ್ಟ್ ಕಾಲರ್ ಕ್ಲೀನ್ ಮಾಡೋದು ಹೇಗೆ?
ನೀವು ಮಷಿನ್‌ಗೆ ಶರ್ಟ್ ಹಾಕುವಾಗ ಶರ್ಟ್ ಬಟನ್ ಗಳನ್ನು ಹಾಕಿ ಒಳಮೈಯನ್ನು ಹೊರಗೆ ಮಾಡಿಕೊಳ್ಳಿ. ಅನಂತರ ಒಂದು ಬಕೆಟ್‌ನಲ್ಲಿ ಪುಡಿ ಹಾಕಿ ನೆನೆಸಿಟ್ಟು ಅರ್ಧ ಇಲ್ಲದೆ ಒಂದು ಗಂಟೆ ಬಳಿಕ ಮಷಿನ್‌ಗೆ ಹಾಕಿ ತೊಳೆಯಲು ಬಿಟ್ಟರೆ ಸಂಪೂರ್ಣ ಕ್ಲೀನ್ ಆಗುತ್ತದೆ. ನೋವು ಕೂಡ ಒಮ್ಮೆ ಈ ರೀತಿ ಟ್ರಿಕ್ಸ್ ಬಳಸಿ ಶರ್ಟ್ ತೊಳೆದು ನೋಡಿ.
ಗಾಢ ಕಲೆಯನ್ನು ಕೈಯಲ್ಲಿ ಉಜ್ಜಿ ಹಾಕಿ
ಗಾಢವಾದ ಕಲೆಗಳು ಬಟ್ಟೆ ಮೇಲೆ ಇದ್ದರೆ ಅಂತಹ ಬಟ್ಟೆಯನ್ನು ಮೊದಲು ಕೈಯಿಂದ ಸ್ವಲ್ಪ ಉಜ್ಜಿ. ಕಲೆಯ ಮೇಲೆ ಲಿಕ್ವಿಡ್ ಹಾಕಿ ಕೈಯಿಂದ ಉಜ್ಜಿಕೊಂಡು ಬಳಿಕ ಮಷಿನ್‌ಗೆ ಹಾಕಿದರೆ ಕಲೆ ಬಹುಬೇಗ ಬಿಟ್ಟುಕೊಳ್ಳುತ್ತದೆ.
ಮಷಿನ್ ಟಬ್ ಹಾಗೂ ಫಿಲ್ಟರ್ ಕ್ಲೀನ್ ಮಾಡುತ್ತಿರಿ
ವಾಷಿಂಗ್ ಮಷಿನ್‌ನಲ್ಲಿರುವ ಕೆಲಗಿನ ಟಬ್ ಅನ್ನು ಆಗಾಗ ಕ್ಲೀನ್ ಮಾಡಿ. ಮಷಿನ್ ಸಂಪೂರ್ಣ ಒಣಗಿದ ಬಳಿಕ ಒದ್ದೆ ಬಟ್ಟೆ ಮಾಡಿ ಅದನ್ನು ಒರೆಸಿಕೊಳ್ಳಿ. ಹಾಗೆ ಫಿಲ್ಟರ್ ಅನ್ನು 15 ದಿನಕ್ಕೊಮ್ಮೆ ಆದರು ತೆಗೆದು ಕ್ಳೀನ್ ಮಾಡುತ್ತಾ ಇರಿ. ಇದರಿಂದ ಕೂಡ ಬಟ್ಟೆ ಸುಲಭವಾಗಿ ಕ್ಲೀನ್ ಆಗುತ್ತದೆ.



Click it and Unblock the Notifications