Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಸ್ತು: ಮನೆಯಲ್ಲಿ ಧನಾತ್ಮಕ ಶಕ್ತಿ ಇರಬೇಕಾದ್ರೆ ಈ 7 ವಸ್ತುಗಳಿರಲೇಬೇಕು!
ಪ್ರತಿಯೊಂದು ಮನೆಯು ವಾಸ್ತು ನಿಯಮಗಳ ಅನುಸಾರವಾಗಿ ನಿರ್ಮಿಸಲಾಗಿರುತ್ತೆ. ಹಾಗೆ ಕೆಲವು ವಾಸ್ತು ನಿಯಮಗಳ ಪಾಲಿಸುವುದು ಮನೆಯ ಪ್ರಗತಿಯ ದೃಷ್ಟಿಯಿಂದ ಬಹಳ ಉತ್ತಮವಾಗಿದೆ. ಅದರಲ್ಲೂ ಮನೆಯಲ್ಲಿ ಧನಾತ್ಮಕ ಶಕ್ತಿ ಇರಬೇಕಾದರೆ ಕೆಲವೊಂದು ವಸ್ತುಗಳು ಹಾಗೆ ಕೆಲವೊಂದು ವಾಸ್ತು ನಿಯಮಗಳ ಪಾಲಿಸಬೇಕಿದೆ. ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿ ಇಟ್ಟರೆ ಸಾಕು ಧನಾತ್ಮಕ ವಿಚಾರಗಳು ಯಾವಾಗಲು ತುಂಬಿರುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ.
ಹಾಗಾದ್ರೆ ಒಂದು ಮನೆಯಲ್ಲಿ ಯಾವ 07 ವಸ್ತುಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಇದರಿಂದ ಯಾವ ರೀತಿಯ ಲಾಭ ನೋಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬಿಳಿ ಬಣ್ಣದ ಬುದ್ಧ
ಯಾವ ಮನೆಯಲ್ಲಿ ಬುದ್ಧನಿರುತ್ತಾನೋ ಆ ಮನೆಯಲ್ಲಿ ಶಾಂತಿ ನೆಲೆಸಲಿದೆ ಎನ್ನಲಾಗುತ್ತದೆ. ಆದ್ರೆ ವಾಸ್ತುವಿನ ಪ್ರಕಾರ ಬಿಳಿ ಬಣ್ಣದಲ್ಲಿರುವ ಬುದ್ದನ ಮೂರ್ತಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅದರಲ್ಲೂ ಈ ಮೂರ್ತಿಯನ್ನು ಆಗ್ನೇಯ ಭಾಗದಲ್ಲಿ ಇಡುವುದು ಮನೆಗೆ ಬಹಳ ಯೋಗ್ಯವಂತೆ. ಇದರಿಂದ ನಿಮ್ಮ ಮನೆಯಲ್ಲಿ ಶಾಂತಿ ತುಂಬಲಿದೆ ಎಂದು ಹೇಳಲಾಗುತ್ತದೆ.
ಬಿದಿರು ಗಿಡ
ವಾಸ್ತುವಿನಲ್ಲಿ ಬಿದಿರು ಗಿಡಕ್ಕೆ ಬಹಳ ಮಹತ್ವವಿದೆ. ಒಂದು ಬೌಲ್‌ನಲ್ಲಿ ನೀರು ಹಾಕಿ ಅದರಲ್ಲಿ ಈ ಬಿದಿರು ಗಿಡವನ್ನು ಹಾಕಿ ಇಟ್ಟರೆ ಮನೆಯಲ್ಲಿ ಧನಾತ್ಮಕತೆ ಉಳಿಯಲಿದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಅದರಲ್ಲೂ ಈ ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಆರೋಗ್ಯಕರ ಬೆಳವಣಿಗೆ ನೋಡಬಹುದು. ಹಾಗೆ ಸಂಬಂಧಗಳಲ್ಲಿ ಮಧುರತೆ ನೋಡಲು ಸಾಧ್ಯವಾಗಲಿದೆ.
ಕೂರ್ಮ
ಮನೆಯಲ್ಲಿ ಕೂರ್ಮ ಅಥವಾ ಆಮೆಯನ್ನು ಇಡುವುದು ಕೂಡ ಲಾಭದಾಯಕ ಅಭ್ಯಾಸವಾಗಲಿದೆ. ಅದರಲ್ಲೂ ಉತ್ತರ ದಿಕ್ಕಿನಲ್ಲಿ ಮೆಟಲ್‌ನಿಂದ ಮಾಡಿರುವ ಆಮೆಯನ್ನು ಇರಿಸಬೇಕು. ಅದರಲ್ಲೂ ಗಾಜಿನ ಆಮೆಯನ್ನು ನೀರಿನಲ್ಲಿ ಹಾಕಿ ಉತ್ತರ ದಿಕ್ಕಿನಲ್ಲಿಟ್ಟು ಪೂಜೆ ಮಾಡಬಹುದು. ಇದರಿಂದ ಮನೆಯಲ್ಲಿ ಶಾಂತಿ, ಹಾಗೆ ಸಂಪತ್ತು, ಆಯಸ್ಸು ವೃದ್ಧಿಗೆ ಕಾರಣವಾಗುತ್ತದೆ.
ಡ್ರೀಮ್‌ಕ್ಯಾಚರ್
ಅಮೆರಿಕದ ಸಂಸ್ಕೃತಿಗಳಲ್ಲಿ ಒಂದಾಗಿರುವ ಈ ಡ್ರೀಮ್ ಕ್ಯಾಚರ್ ಅನ್ನು ನೀವು ಮಲಗುವ ಕೋಣೆಯಲ್ಲಿ ನೇತು ಹಾಕಬೇಕು. ಇದರಿಂದ ನಿದ್ರೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗಲಿದೆ. ನೀವು ಮಲಗಿದಾಗ ನಿಮ್ಮ ಮುಖಕ್ಕೆ ನೇರವಾಗಿ ಕಾಣಿಸಿಸುವಂತೆ ಇದನ್ನು ಕಟ್ಟಿರಬೇಕು. ಇದು ನಿಮ್ಮ ನಿದ್ರೆ ಹೆಚ್ಚಿಸಲಿದೆಯಂತೆ.
ವಾಟರ್ ಫೌಂಟೈನ್
ಮನೆಯಲ್ಲಿ ಚಿಕ್ಕದಾದ ನೀರಿನ ಕಾರಂಜಿ ಇರುವಂತಹ ವಸ್ತುವನ್ನು ಇಡಬೇಕು. ಹಲವರು ಇದು ಅಲಂಕಾರ ಸಂಬಂಧಿ ವಸ್ತು ಎಂದುಕೊಳ್ಳುತ್ತಾರೆ. ಆದರೆ ನೀರಿನ ಬಳಕೆ ಇರುವುದರಿಂದ ಇದು ವಾಸ್ತು ಸಂಬಂಧಿ ವಸ್ತುವಾಗಿದೆ. ಅದರಲ್ಲೂ ಉತ್ತರ ದಿಕ್ಕಿನತ್ತ ಈ ವಾಟರ್ ಫೌಂಟೈನ್ ಇಡಬೇಕು. ಇದರಿಂದ ಧನಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಉಳಿಯಲಿದೆ.
ಸಾಲ್ಟ್ ಲ್ಯಾಂಪ್
ಸಾಲ್ಟ್ ಲ್ಯಾಂಪ್ ಅಥವಾ ಉಪ್ಪಿನ ದೀಪ ಎನ್ನುವಂತಹ ಈ ಅದ್ಭುತ ವಸ್ತುವನ್ನು ಮನೆಯಲ್ಲಿ ಇಡುವುದು ಧನಾತ್ಮಕ ವಿಚಾರಗಳ ಹರಿವಿಗೆ ಕಾರಣವಾಗಲಿದೆಯಂತೆ. ಇದು ನೋಡಲು ದೀಪದಂತೆ ಕಂಡರು ಅದರ ಬೆಳಕು ಕೆಂಪು ಬಣ್ಣವಾಗಿ ಕಾಣಿಸುತ್ತದೆ. ಅದನ್ನು ಹಿಮಾಲಯನ್ ಕಲ್ಲಿನ ದೀಪ ಅಂತಲೂ ಕರೆಯುತ್ತಾರೆ. ಇದು ನಿದ್ರೆ, ನಿಮ್ಮ ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.
ಕುದುರೆ ಲಾಳ
ಕುದುರೆ ಲಾಳವನ್ನು ಮನೆಯ ದ್ವಾರದಲ್ಲಿ ಹಾಕಿಡುವುದು ಬಹಳ ಧನಾತ್ಮಕ ಪ್ರಯೋಜನ ಹೊಂದಿದೆ ಎನ್ನಲಾಗಿದೆ. ಇದು ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಎನ್ನಲಾಗಿದೆ. ಇದರ ಹಿಂದೆ ಐರಿಶ್ ಕಮ್ಮಾರನೊಬ್ಬನ ದೊಡ್ಡ ಕಥೆಯೇ ಇದೆ. ಹಾಗೆ ಇದು ವಾಸ್ತು ನಿಯಮದಲ್ಲಿ ಪ್ರಮುಖ ವಸ್ತು ಎಂದು ಗುರುತಿಸಲಾಗಿದೆ.



Click it and Unblock the Notifications
