Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪೊರಕೆ, ಮೋಪ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ? ವಾಸ್ತುವಿನಲ್ಲಿ ಏನು ಹೇಳಲಾಗಿದೆ?
ಹಿಂದೂ ಪುರಾಣದಲ್ಲಿ, ಜ್ಯೋತಿಷ್ಯ, ವಾಸ್ತು ಶಾಸ್ತ್ರಕ್ಕೆ ಬಹಳ ಮಹತ್ವವಿದೆ. ನಾವು ಮನೆ ನಿರ್ಮಾಣದಿಂದ ಹಿಡಿದು ಪ್ರತಿಯೊಂದು ಶುಭ ಕಾರ್ಯಗಳಿಗೂ ಶುಭ ಗಳಿಗೆ, ದಿನ, ಮುಹೂರ್ತ ನೋಡುವುದು ಸಾಮಾನ್ಯ. ಹಾಗೆ ಒಳ್ಳೆಯ ದಿನದಲ್ಲಿ ಹೊಸ ಕೆಲಸ ಆರಂಭಿಸಿದ್ದರೆ ಒಳ್ಳೆಯ ಕೆಲಸಗಳ ಮಾಡಿದರೆ ಉತ್ತಮ ಎಂಬುದು ಒಂದು ನಂಬಿಕೆಯಾಗಿದೆ. ಹಾಗೆ ಮನೆಯನ್ನು ವಾಸ್ತು ಪ್ರಕಾರವಾಗಿ ನಿರ್ಮಿಸುವುದು ಕೂಡ ಒಂದು ಮಹತ್ವದ ಕೆಲಸಗಳಲ್ಲಿ ಒಂದಾಗಿದೆ.
ಮನೆ ಕಟ್ಟು ಮುನ್ನವೇ ವಾಸ್ತು ಪ್ರಕಾರವಾಗಿ ದಿಕ್ಕು ನೋಡಿಯೇ ಕಟ್ಟಲಾಗುತ್ತೆ. ದ್ವಾರ ಬಾಗಿಲು ಯಾವ ಕಡೆ ಇರಬೇಕು?, ಯಾವ ಕಡೆ ಹಿಂಬದಿ ಬಾಗಿಲು ಇರಬೇಕು? ಎಷ್ಟು ಕಿಟಕಿಗಳಿರಬೇಕು? ದೇವರ ಮನೆ, ಅಡುಗೆ ಮನೆ, ಮಲಗುವ ಕೋಣೆ, ಮೆಟ್ಟಿಲು ಯಾವ ದಿಕ್ಕಿನತ್ತ ಇರಬೇಕು ಎಂಬುದನ್ನು ಮನೆ ನಿರ್ಮಾಣದ ಸಮಯದಲ್ಲಿ ನಿರ್ಧರಿಸಲಾಗುತ್ತದೆ.

ಈ ಪ್ರಕ್ರಿಯೆಯು ಜೀವನದ ಉದ್ದಕ್ಕೂ ನಮಗೆ ಸಂಪತ್ತು, ಸುಖ, ಸಂತೋಷಕ್ಕೆ ಕಾರಣವಾಗುತ್ತದೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ವಾಸ್ತುಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಮನೆಯಲ್ಲಿ ಇರುವ ಒಂದೊಂದು ವಸ್ತುಗಳು ಕೂಡ ವಾಸ್ತು ಪ್ರಕಾರವಾಗಿ ಇರಬೇಕು ಎಂಬ ವಾದವೂ ಇದೆ. ಹೀಗಾಗಿ ಮನೆಯ ಪ್ರತಿಯೊಂದು ವಸ್ತುಗಳಿಗೂ ವಾಸ್ತುವಿನಲ್ಲಿ ಗುರುತಿಸಲಾಗಿದೆ.
ಹಾಗೆ ನಾವು ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುಗಳಿಗೂ ವಾಸ್ತು ಅನ್ವಯವಾಗುವುದನ್ನು ನಾವು ನೊಡಬಹುದು. ಹಾಗಾದ್ರೆ ನಾವಿಂದು ಪೊರಕೆ ಹಾಗೂ ನೆಲ ಒರೆಸಲು ಬಳಸುವ ಮೋಪ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಕೂಡ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಪೊರಕೆಯನ್ನು ಇಡುವ ದಿಕ್ಕು ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬುದು ವಾಸ್ತು ಶಾಸ್ತ್ರದ ವಾದವಾಗಿದೆ.
ಹಾಗಾದ್ರೆ ನಾವಿಂದು ಈ ಪೊರಕೆ ಮತ್ತು ಮೋಪ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಎಲ್ಲಿ ಇಡಬಾರದು ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.
ನೈಋತ್ಯ ಅಥವಾ ಪಶ್ಚಿಮ ದಿಕ್ಕು
ಪೊರಕೆ ಅಥವಾ ಮೋಪ್ ಅನ್ನು ಮನೆಯ ನೈರುತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಹೊಸ ಪೊರಕೆಗಳು ಅಥವಾ ಮೋಪ್‌ಗಳನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಈಶಾನ್ಯ ಮೂಲೆಯಲ್ಲಿ ಈ ಪೊರಕೆ ಹಾಗೂ ಮೋಪ್ ಅನ್ನು ಇಡಬಾರದು. ಏಕೆಂದರೆ ಈ ದಿಕ್ಕನ್ನು ವಾಸ್ತುಶಾಸ್ತ್ರದಲ್ಲಿ ದೈವಿಕ ಶಕ್ತಿ ಮನೆಯೊಳಗೆ ನೆಲೆಸುವ ದಿಕ್ಕು ಎಂದು ಪರಿಗಣಿಸಲಾಗಿದೆ. ಹೀಗಾಗಿ ಈಶಾನ್ಯ ದಿಕ್ಕಿನಲ್ಲಿ ಪೊರೆಕೆಯನ್ನು ಇಡಲೇಬರದಂತೆ.
ನೈಋತ್ಯ ಅಥವಾ ಪಶ್ಚಿಮ ದಿಕ್ಕುಗಳಲ್ಲಿ ಪೊರಕೆ ಇಡಲು ಸ್ಥಳವಾಗದಿದ್ದರೆ ಆಗ್ನೇಯ ಮೂಲೆಯಲ್ಲಿ ಇಡಬಹುದು. ಆಗ್ನೆಯ ದಿಕ್ಕು ಅಗ್ನಿಗೆ ಸಂಬಂಧಿಸಿದ ದಿಕ್ಕಾಗಿದೆ. ಹಾಗೆ ಪೊರಕೆಯು ಸ್ವಚ್ಛತೆಗೆ ಸಂಬಂಧಿಸಿದೆ ಹೀಗಾಗಿ ಈ ದಿಕ್ಕಿನಲ್ಲಿ ಪೊರಕೆ ಇಡಬಹುದು. ಹಾಗೆ ಪೊರಕೆ ಅಥವಾ ಮೋಪ್ ಅನ್ನು ಕಾಣದಂತೆ ಒಡುವುದು ಉತ್ತಮವಂತೆ. ಕಮೋಡ್, ಅಥವಾ ಯಾರು ಓಡಾಡದ ಜಾಗದಲ್ಲಿ ಇರಿಸಬೇಕು ಎಂಬ ಸಲಹೆ ಕೂಡ ನೀಡಲಾಗುತ್ತದೆ.
ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಮನೆಯನ್ನು ಶುಚಿ ಮಾಡಲು ಬಳಸುವ ವಸ್ತು ಇಡಬಾರದು. ಮುಖ್ಯವಾಗಿ ಪೊರಕೆ ಹಾಗೂ ಮೋಪ್ ಅನ್ನು ಅಡುಗೆ ಮನೆ ಅಥವಾ ಮಲಗುವ ಕೋಣೆಯ ಯಾವುದೇ ಮೂಲೆಯಲ್ಲಿ ಇಡಬಾರದಂತೆ. ಹಾಗೆ ಮೆಟ್ಟಿಲುಗಳ ಕೆಳಗೆ, ಗೋಡೆಯ ಮೇಲೆ ಇಡಬಾರದಂತೆ.



Click it and Unblock the Notifications
