Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವಾಸ್ತು ಪ್ರಕಾರ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಲು ಓದುವ ಕೋಣೆ ಹೇಗಿರಬೇಕು?
ಮಕ್ಕಳು ಪರೀಕ್ಷೆಯನ್ನು ಅತ್ಯುತ್ತಮವಾಗಿ ಎದುರಿಸಲು ಮಕ್ಕಳು ಏಕಾಗ್ರತೆಯಿಂದ ಓದಬೇಕಾಗುತ್ತದೆ. ವಾಸ್ತು ಶಾಸ್ತ್ರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಲಹೆ ನೀಡಲಾಗುವುದು. ಮಕ್ಕಳು ಮನಸ್ಸಿಟ್ಟು ಓದಲು ಅವರು ಕೂರುವ ಸ್ಥಳ ಹೇಗಿರಬೇಕು, ಗೋಡೆಯ ಬಣ್ಣ ಹೇಗಿರಬೇಕು, ಗಾಳಿ ಬೆಳಕು ಹೀಗೆ ಅನೇಕ ವಾಸ್ತು ಸಲಹೆಗಳಿವೆ. ಅವುಗಳನ್ನು ಪಾಲಿಸಿದರೆ ಮಕ್ಕಳು ಮನಸ್ಸಿಟ್ಟು ಓದಲು ಅನುಕೂಲಕರವಾಗುವುದು ಎಂದು ವಾಸ್ತು ವಿಜ್ಞಾನ ಹೇಳುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದುವ ಕೋಣೆ ಹೇಗಿರಬೇಕು ಎಂದು ನೋಡೋಣ ಬನ್ನಿ:

ಅಧ್ಯಯನ ಕೊಠಡಿ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು
ಅಧ್ಯಯನ ಕೊಠಡಿಯು ಮನೆಯ ಈಶಾನ್ಯ/ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು.
ಯಾವ ದಿಕ್ಕಿಗೆ ಮುಖ ಮಾಡಿ ಕೂತರೆ ಒಳ್ಳೆಯದು?
ಅಧ್ಯಯನ ಮಾಡುವಾಗ, ವಿದ್ಯಾರ್ಥಿಗಳು ಪೂರ್ವ/ಉತ್ತರಕ್ಕೆ ಮುಖ ಮಾಡಬೇಕು.
ಅಧ್ಯಯನ ಮಾಡುವಾಗ, ಸೂರ್ಯನ ಕಿರಣವು ನಿಮ್ಮ ತಲೆಯ ಮೇಲೆ ಹಾದುಹೋಗಬಾರದು.
ಗಾಳಿ ಬೆಳಕು ಚೆನ್ನಾಗಿರಬೇಕು
ಓದುವ ಕೋಣೆಯಲ್ಲಿ ಗಾಳಿ- ಬೆಳಕು ಚೆನ್ನಾಗಿ ಬೀಳುವಂತಿರಬೇಕು. ಅಧ್ಯಯನ ಮಾಡುವಾಗ ಖಾಲಿ ಗೋಡೆ ಅಥವಾ ಕಿಟಕಿಗೆ ಮುಖ ಮಾಡಬಾರದು.
ಅಧ್ಯಯನ ಕೊಠಡಿಯಲ್ಲಿ ಶೌಚಾಲಯ ಇರಬಾರದು.
ಪುಸ್ತಕದ ಕಪಾಟು ದಕ್ಷಿಣ ಅಥವಾ ಪಶ್ಚಿಮ ಗೋಡೆಯ ಮೇಲೆ ಇದ್ದರೆ ಒಳ್ಳೆಯದು
ಸ್ಟಡಿ ಟೇಬಲ್‌ನ ಮೇಲೆ ಪುಸ್ತಕದ ಕಪಾಟನ್ನು ಎಂದಿಗೂ ಮಾಡಬೇಡಿ.
ಸ್ಟಡಿ ಟೇಬಲ್‌ನ ಆಕಾರವು ಚೌಕ ಅಥವಾ ಆಯತಾಕಾರವಾಗಿರಬೇಕು.
ಅಧ್ಯಯನ ಕೊಠಡಿ ತುಂಬಾ ದೊಡ್ಡದಾಗಿರಬಾರದು ಅಥವಾ ತುಂಬಾ ಚಿಕ್ಕದಾಗಿರಬಾರದು. ಉದ್ದ ಮತ್ತು ಅಗಲದ ಅನುಪಾತವು 1: 2 ಕ್ಕಿಂತ ಹೆಚ್ಚಿರಬಾರದು.
ಅಧ್ಯಯನ ಕೊಠಡಿಯಲ್ಲಿ ಗಣಪತಿ ಮತ್ತು ಸರಸ್ವತಿ ದೇವಿಯ ಮೂರ್ತಿಗಳಿರಬೇಕು.
ಸ್ಟಡಿ ಟೇಬಲ್ ಗೋಡೆಗೆ ಅಂಟಿಕೊಂಡಿರಬಾರದು, ಅದರಿಂದ ಕನಿಷ್ಠ 3-4 ಇಂಚು ದೂರವಿರಬೇಕು.
ಟೇಬಲ್ ಲ್ಯಾಂಪ್ ಬಳಸುವುದಾದರೆ
ವಿದ್ಯಾರ್ಥಿಯು ಮೇಜಿನ ದೀಪವನ್ನು ಬಳಸುತ್ತಿದ್ದರೆ ಆಗ ದೀಪವನ್ನು ಮೇಜಿನ ಆಗ್ನೇಯ ಮೂಲೆಯಲ್ಲಿ ಇಡಬೇಕು.
ಪಿರಮಿಡ್ ಅನ್ನು ಅಧ್ಯಯನದ ಮೇಜಿನ ಬಳಿ ಇಡಬಹುದು ಏಕೆಂದರೆ ಅದು ಶಕ್ತಿಯನ್ನು ಸಮತೋಲನಗೊಳಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಗೋಡೆಯ ಬಣ್ಣ
ಕೋಣೆಯ ಉತ್ತರ ಗೋಡೆಯ ಮೇಲೆ ಲೋಲಕದ ಗಡಿಯಾರವನ್ನು ಅಳವಡಿಸಬೇಕು.
ಕೋಣೆಯ ಪೂರ್ವ ಭಾಗದಲ್ಲಿರುವ ಕಿಟಕಿಗಳು ದೊಡ್ಡದಾಗಿರಬೇಕು ಮತ್ತು ಪಶ್ಚಿಮ ಭಾಗದಲ್ಲಿರುವ ಕಿಟಕಿಗಳು ಚಿಕ್ಕದಾಗಿರಬೇಕು.
ಅಧ್ಯಯನ ಕೊಠಡಿಯಲ್ಲಿ ತಿಳಿ ಬಣ್ಣಗಳನ್ನು ಬಳಸಿ.
ಮೊಬೈಲ್ ಸಮೀಪ ಇರಬಾರದು
ಇದನ್ನು ವಾಸ್ತುಶಾಸ್ತ್ರದಲ್ಲಿ ಹೇಳಿಲ್ಲ, ಆದರೆ ಈಗೀನ ಕಾಲಮಾನಕ್ಕೆ ಸೂಕ್ತವಾಗಿದೆ. ಹೌದು ಮಕ್ಕಳು ಓದುವಾಗ ಅವರ ಬಳಿ ಮೊಬೈಲ್ ಇದ್ದರೆ ಗಮನ ಬೇರೆ ಕಡೆ ಹೋಗುವುದು, ಆದ್ದರಿಂದ ಮೊಬೈಲ್ ನೋಡಲು ಇಷ್ಟು ಸಮಯ ಕೊಡಿ, ಆದರೆ ಅವರು ಓದುವಾಗ ಆ ಕೋನೆಯಲ್ಲಿ ಮೊಬೈಲ್ ಇಲ್ಲದಂತೆ ನೋಡಿಕೊಳ್ಳಿ.



Click it and Unblock the Notifications