Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮನೆಯ ನೆಗೆಟಿವ್ ಎನರ್ಜಿ ಹೊರಹಾಕಲು ಈ 4 ಟಿಪ್ಸ್ ಬಳಸಿ..!!
ಮನೆ ಕಟ್ಟಿಸುವುದಾಗ ಎಲ್ಲರೂ ವಾಸ್ತು ನೋಡಿರುತ್ತಾರೆ. ಯಾವ ದಿಕ್ಕಿಗೆ ಯಾವ ರೀತಿಯ ವಿನ್ಯಾಸ ಇರಬೇಕು. ಅಡುಗೆ ಮನೆ, ಪೂಜಾ ಕೊಠಡಿ ಹೀಗೆ ಎಲ್ಲಾ ಯಾವ ಯಾವ ದಿಕ್ಕಿಗೆ ಇರಬೇಕು ಎಂಬುದನ್ನು ಮೊದಲೇ ನಿರ್ಧರಿಸಿರುತ್ತಾರೆ. ಹೀಗೆ ವಾಸ್ತು ಶಾಸ್ತ್ರ ನೋಡಿ ಕಟ್ಟಿದ ಮನೆಯಲ್ಲೂ ವಾಸ್ತು ದೋಷದಂತಹ ಸಮಸ್ಯೆ ನಾವು ನೋಡಿರುತ್ತೇವೆ.
ಕೆಲವೊಮ್ಮೆ ಮನೆಯಲ್ಲಿ ಯಾವುದೇ ಕಾರ್ಯಗಳು ನಾವುಂದುಕೊಂಡಂತೆ ನಡೆಯುವುದಿಲ್ಲ. ಅನಾರೋಗ್ಯ, ಆರ್ಥಿಕ ಸಮಸ್ಯೆ, ಶಾಂತಿ ಇಲ್ಲದಿರುವುದು, ನಿದ್ರೆಯ ಸಮಸ್ಯೆ, ಕೆಟ್ಟ ಕನಸುಗಳು ಬೀಳುವುದು ಇಂತಹ ಹಲವು ಸಮಸ್ಯೆಗಳಿದ್ದರೆ ಅಲ್ಲಿ ವಾಸ್ತು ಸಮಸ್ಯೆ ಇರಬಹುದು. ಹಾಗೆ ಮನೆಯಲ್ಲಿನ ನೆಗೆಟಿವ್ ಎನರ್ಜಿ ಕೂಡ ಇಂತಹ ಹಲವು ಸಮಸ್ಯೆಗಳಿಗೆ ಕಾರಣವಾಗಿರಬಹುದು.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಇಡೀ ಮನೆಯಲ್ಲಿ ಅಶಾಂತಿ ನೆಲೆಸುವುದು, ಸಾಲ ಹೀಗೆ ನಿಮಗೂ ಈ ನೆಗೆಟಿವ್ ಎನರ್ಜಿಯ ಇರುವಿಕೆ ಅರಿವಿಗೆ ಬರುವಂಯತಹ ಸಮಸ್ಯೆ ಕಾಡುತ್ತಿರುತ್ತದೆ. ಹಾಗಾದ್ರೆ ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರಹಾಕುವುದು ಹೇಗೆ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಏನಾದರು ಪರಿಹಾರ ಹೇಳಲಾಗಿದೆಯೇ? ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಮನೆಯಲ್ಲಿನ ನೆಗೆಟಿವ್ ಎನರ್ಜಿ ಹೊರಹಾಕಬೇಕಾದರೆ ಕೆಲವೊಂದು ಉಪಾಯವನ್ನು ಹೇಳಲಾಗಿದೆ. ಆ ಉಪಾಯಗಳು ಯಾವುದು? ಮನೆಯಲ್ಲಿ ಯಾವ ರೀತಿಯ ಬದಲಾವಣೆಗಳು ನೆಗೆಟಿವ್ ಎನರ್ಜಿಯನ್ನು ಹೊರಹಾಕಿ ಪಾಸಿಟಿವ್ ಎನರ್ಜಿಯನ್ನು ತರಲಿದೆ ಎಂಬುದನ್ನು ನೋಡಿ.
ನೆಗೆಟಿವ್ ಎನರ್ಜಿಗೆ ನೀರಿನ ಪರಿಹಾರ
ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ದೂರ ಮಾಡಲು ನೀರು ಪರಿಹಾರದ ಮಾರ್ಗವನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಒಂದು ಬೌಲ್‌ನ ತುಂಬ ನೀರು ತೆಗೆದುಕೊಂಡು ಅದನ್ನು ಬಿಸಿಲಿನಲ್ಲಿ ಸುಮಾರು 5 ಗಂಟೆಗಳ ಕಾಲ ಇಡಬೇಕು. ಇದಾದ ಬಳಿಕ ಈ ನೀರನ್ನು ಮನೆಯ ಒಳಗೆ ತಂದು ಮಾವಿನ ಎಲೆಗಳು ಅಥವಾ ವೀಳ್ಯದ ಎಲೆಯನ್ನು ಬಳಸಿ ಮನೆಯಲ್ಲಿ ಪ್ರೋಕ್ಷಣೆ ಮಾಡಬೇಕು. ಹೀಗೆ ಈ ನೀರು ಸಿಂಪಡಣೆಗೂ ಮುನ್ನ ಮನೆಯನ್ನು ಶುದ್ಧ ಮಾಡಬೇಕು.
ನೆಗೆಟಿವ್ ಎನರ್ಜಿಗೆ ಶಂಖ ಪರಿಹಾರ
ನೀವು ಪೂಜೆ ಸಮಯದಲ್ಲಿ ಬಳಸುವಂತಹ ಶಂಖವು ಮನೆಯ ನೆಗೆಟಿವ್ ಎನರ್ಜಿಗೆ ಪರಿಹಾರ ನೀಡಲಿದೆ. ಶಂಖದ ಶಬ್ದವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬಲಿದೆ. ಇದರಿಂದ ಮನೆಯ ನೆಗೆಟಿವ್ ಎನರ್ಜಿ ಮರೆಯಾಗುವಂತೆ ಮಾಡಲಿದೆ. ಹೀಗಾಗಿ ನಿತ್ಯ ಬೆಳಗ್ಗೆ ಪೂಜೆಯ ಸಮಯದಲ್ಲಿ ಶಂಖವನ್ನು ಊದುವ ಅಭ್ಯಾಸ ಇಟ್ಟುಕೊಂಡರೆ ಒಳಿತು ಎನ್ನಲಾಗಿದೆ. ಹಾಗೆ ಈ ಶಂಖವನ್ನು ನೀರಿನಲ್ಲಿ ಹಾಕಿ ಇಟ್ಟು ಬಳಿಕ ಈ ನೀರನ್ನು ಮನೆಯಲ್ಲಿ ಪ್ರೋಕ್ಷಣೆ ಮಾಡಿದರೆ ಕೂಡ ನೆಗೆಟಿವ್ ಎನರ್ಜಿ ದೂರಾಗುತ್ತದೆ.
ನೆಗೆಟಿವ್ ಎನರ್ಜಿ ಹೊರಹಾಕಲು ಉಪ್ಪು
ಉಪ್ಪು ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರ ಮಾಡುವಂತಹ ವಸ್ತುವಾಗಿದೆ. ನೀವು ಮನೆಯನ್ನು ನೀರಿನಿಂದ ಒರೆಸುವ ವೇಳೆ ಒಂದು ಚಿಟಿಕೆ ಉಪ್ಪನ್ನು ಅದಕ್ಕೆ ಸೇರಿಸಿಕೊಳ್ಳಿ. ಹಾಗೆ ಉಪ್ಪು ನೀರನ್ನು ಮನೆಯ ಮೂಲೆ ಮೂಲೆಗೂ ಸಿಂಪಡಿಸಿ ಒರೆಸಬೇಕಂತೆ.
ಹೂವಿನಲ್ಲಿ ಅಡಗಿದೆ ನೆಗೆಟಿವ್ ಎನರ್ಜಿ ಓಡಿಸುವ ಮಂತ್ರ
ಬೆಳಿಗ್ಗೆ ಪೂಜೆ ಮಾಡುವಾಗ ನಿಮ್ಮ ಮನೆಯಲ್ಲಿರುವ ದೇವಾನು ದೇವತೆಗಳಿಗೆ ಆ ದೇವರ ಇಷ್ಟದ ಹೂವುಗಳನ್ನು ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಇರಲಿದೆ. ಹಾಗೆ ಪೂಜೆಯ ವೇಳೆ ಕರ್ಪೂರ ಹಾಗೂ ಗಂಧದ ಕಡ್ಡಿಯನ್ನು ಹಚ್ಚಬೇಕು. ಇನ್ನು ಮನೆಯಲ್ಲಿ ಸಾಂಬ್ರಾಣಿ ಪುಡಿಯನ್ನು ಹಾಕಿ ಎಲ್ಲೆಡೆ ಸುಗಂಧ ಭರಿತ ಹೊಗೆಯನ್ನು ಹರಡುವುದು ಧನಾತ್ಮಕ ಶಕ್ತಿಗೆ ಕಾರಣವಾಗಲಿದೆ.



Click it and Unblock the Notifications











