Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಮ್‌ಫರ್ಟ್ ಬಳಸಿ ಮನೆಯನ್ನ ಘಮ ಘಮಿಸುವಂತೆ ಮಾಡಿ..!ಇಲ್ಲಿದೆ 5 ಟಿಪ್ಸ್
ಮನೆಯನ್ನ ಸುಂದರವಾಗಿ ಇಟ್ಟುಕೊಳ್ಳಬೇಕು ಅನ್ನೋದು ಎಲ್ಲಾ ಗೃಹಿಣಿಯರ ಆಸೆಯಾಗಿರುತ್ತೆ. ಅದರಂತೆ ಗೃಹಿಣಿಯರು ಮನೆ ಸುಂದರವಾಗಿಸಲು ಏನೆಲ್ಲಾ ಮಾಡಬೇಕೋ ಅದನ್ನ ನಿತ್ಯವೂ ಮಾಡುತ್ತಾರೆ. ಅಡುಗೆ ಮನೆ, ಪೂಜಾ ಕೊಠಡಿ, ಹಾಲ್, ಮಲಗುವ ಕೊಠಡಿ ಹೀಗೆ ಎಲ್ಲಾ ಕಡೆ ಅವರು ಸ್ವಚ್ಛವಾಗಿ ಇಡೋದು ಮಾಡುತ್ತಾರೆ.
ಅದ್ರಲ್ಲೂ ಹಬ್ಬದ ಸಮಯದಲ್ಲಿ ಅಥವಾ ಮನೆಗೆ ಯಾರಾದರು ಬರುತ್ತಾರೆ ಎಂದರೆ ಮನೆಯನ್ನ ಸ್ವಚ್ಛ ಮಾಡಿಡುತ್ತಾರೆ. ಇನ್ನು ಮನೆಯಲ್ಲಿ ಹಲವು ರೀತಿಯ ವಾಸನೆ ಬರುವುದು ನಾವು ನೋಡಿದ್ದೇವೆ. ಮಳೆಗಾಲದಲ್ಲಂತು ಮನೆಯಲ್ಲಾ ದುರ್ಗಂಧ ಬರುತ್ತೆ. ಮಲಗುವ ಕೋಣೆಯಲ್ಲಿ ಒಂದು ರೀತಿ, ಹಾಲ್‌ನಲ್ಲಿ ಒಂದು ರೀತಿ ಹಾಗೆ ಅಡುಗೆ ಮನೆಯಲ್ಲಂತು ಚಿತ್ರ ವಿಚಿತ್ರ ರೀತಿಯ ದುರ್ಗಂಧ ಬರುವುದು ನಾವು ಸಹ ನೋಡಿರುತ್ತೇವೆ.

ಈ ವಾಸನೆಯನ್ನು ತೊಲಗಿಸಲು ನಾವು ಹಲವು ರೀತಿಯ ಉಪಾಯ ಮಾಡಿರುತ್ತೇವೆ. ರೂಮ್ ಫ್ರೆಶ್ನರ್, ಪರ್ಫ್ಯೂಮ್ ಸೇರಿ ಹಲವು ರೀತಿಯ ಉತ್ಪನ್ನಗಳು ಲಭ್ಯವಿದೆ. ಇವು ಮನೆಯಲ್ಲಿ ಇಟ್ಟರೆ ಸಾಕು ತಿಂಗಳ ಕಾಲ ಒಳ್ಳೆಯ ಸುಂಗಂಧ ಮನೆ ತುಂಬಲು ಹರಡಿರುತ್ತದೆ. ಆದ್ರೆ ಇದು ಬೇಗ ಮುಗಿದು ಹೋಗುತ್ತದೆ. ಆದ್ರೆ ನಾವಿಂದು ಮನೆಯಲ್ಲೇ ತಯಾರಿಸಿದ ದ್ರಾವಣ ಬಳಸಿ ಮನೆಯಲ್ಲಾ ಘಮಘಮಿಸುವಂತೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಕಮ್‌ಫರ್ಟ್-ನೀರು
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಒಲೆ ಮೇಲೆ ಇಟ್ಟು ಬಿಸಿ ಮಾಡಿ. ಈ ವೇಳೆ ಬಟ್ಟೆ ತೊಳೆದ ಬಳಿಕ ಸುವಾಸನೆ ಬರಲೆಂದು ಬಳಸುವ ಕಮ್‌ಫರ್ಟ್ ಅನ್ನು ಅದಕ್ಕೆ ಹಾಕಿ. ಬಳಿಕ ಕುದಿಯಲು ಬಿಡಿ. ನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಒಂದು ಬಾಟಲಿಗೆ ಈ ನೀರನ್ನು ಹಾಕಿಕೊಂಡು ಬಾತ್‌ರೂಮ್, ಬೆಡ್‌ರೂಮ್, ಹಾಲ್‌ನಲ್ಲಿ ಸಿಂಪಡಣೆ ಮಾಡಿ. ಇದರಿಂದ ಮನೆಯಲ್ಲಾ ಘಮ ಘಮ ಎನ್ನಲು ಆರಂಭಿಸುತ್ತೆ.
ಕಮ್‌ಫರ್ಟ್-ಹತ್ತಿ
ಒಂದು ಸಣ್ಣ ಉಂಡೆಯಷ್ಟು ಹತ್ತಿ ತೆಗೆದುಕೊಂಡು ಅದಕ್ಕೆ ನಾಲ್ಕೈದು ಡ್ರಾಪ್ ಕಮ್‌ಫರ್ಟ್ ಹಾಕಿ. ಬಳಿಕ ಅದನ್ನು ಒಂದು ಪೇಪರ್ ಕಪ್ ಅಥವಾ ನೀವು ಮನೆಯಲ್ಲಿ ಬಳಸದೆ ಇರುವ ಯಾವುದಾದರು ಗ್ಲಾಸ್‌ಗೆ ಹಾಕಿ ಅದನ್ನು ಬಾತ್‌ರೂಮ್, ಬೆಡ್‌ರೂಮ್ ಹಾಗು ಅಡುಗೆ ಕೋಣೆಯಲ್ಲಿ ಇಡಬಹುದು. ಇದು ತಿಂಗಳಕಾಲ ಕಮ್‌ಫರ್ಟ್ ಪರಿಮಳ ಹೊರಹಾಕುತ್ತಾ ಇರುತ್ತದೆ. ಇದಕ್ಕೆಂದು ದುಬಾರಿ ಹಣ ನೀಡಿ ರುಮ್ ಫ್ರೆಶ್‌ನರ್ ಖರೀದಿಸುವ ಅಗತ್ಯವಿಲ್ಲ.
ಕಮ್‌ಫರ್ಟ್- ಸೋಡಾ
ಒಂದು ಕಪ್‌ನಲ್ಲಿ 2 ಸ್ಪೂನ್ ಬೇಕಿಂಗ್ ಸೋಡಾ ಹಾಕಿಕೊಳ್ಳಿ, ಬಳಿಕ ಇದಕ್ಕೆ ಕಮ್‌ಫರ್ಟ್ ಹಾಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದರ ಮೇಲೆ ಒಂದು ಬಟ್ಟೆ ಹಾಕಿ ಅದನ್ನು ರಬ್ಬರ್ ಕಟ್ಟಿ ಮನೆಯ ಯಾವುದೇ ಮೂಲೆಯಲ್ಲಿ ಇಡನ್ನು ಇಡಬಹುದು. ತಿಂಗಳ ಕಾಲ ಈ ಕಪ್‌ನಿಂದ ಸುಂಗಧ ಬರುತ್ತದೆ.
ಲೋಬಾನಾ ಪುಡಿ
ಒಂದು ಸಣ್ಣ ಪಾತ್ರೆಗೆ ಲೋಬಾಣದ ಪುಡಿ, ಅರಶಿಣ, ಗಂಧದ ಪುಡಿ ಹಾಗೂ ಅರ್ಧ ಕರ್ಪೂರ ಹಾಕಿ ಅದಕ್ಕೆ ಬೆಂಕಿ ಹಚ್ಚಿ. ಇದರಿಂದ ಹೊರಬರುವ ಹೊಗೆ ಸುಗಂಧ ಭರಿತವಾಗಿರುತ್ತೆ. ಇಡೀ ದಿನ ಈ ಸುವಾಸನೆ ಮನೆಯಲ್ಲಿ ಹರಡುತ್ತದೆ. ಹಾಗೆ ಇದು ಕೀಟಗಳಿಂದಲೂ ಮುಕ್ತಿ ನೀಡುತ್ತದೆ. ಕೀಟಗಳ ರೋಧಕ ಲಕ್ಷ ಹೊಂದಿರುವುದರಿಂದ ಮನೆಯಲ್ಲಿ ಸೊಳ್ಳೆ, ಕೀಟಗಳು ನಿವಾರಣೆಯಾಗುತ್ತವೆ.
ಕರ್ಪೂರ ಹಾಗೂ ಕಮ್‌ಫರ್ಟ್
ಅರ್ಧ ಕರ್ಪೂರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಒಂದು ಚಿಕ್ಕ ಗ್ಲಾಸ್‌ಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಕಮ್‌ಫರ್ಟ್ ಹನಿಗಳ ಹಾಕಿ ಚೆನ್ನಾಗಿ ಕಲಸಿ. ಅದರ ವಾಸನೆ ಸರಿಯಾಗದಿದ್ದರೆ ಅಥವಾ ಗಡಸು ಎನಿಸಿದರೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಅದನ್ನು ಮನೆಯಲ್ಲಿ ಚಿಮುಕಿಸಿ ಹೀಗೆ ಮಾಡಿದರೆ ನಿಮ್ಮ ಮನೆ ಯಾವಾಗಲು ಘಮ ಘಮ ಎನ್ನುತ್ತಲೇ ಇರುತ್ತೆ.



Click it and Unblock the Notifications
