Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಹೀಗೆ ಮಾಡಿದ್ರೆ ಸೊಳ್ಳೆ, ಜಿರಳೆ ನಿಮ್ಮ ಮನೆ ಹತ್ತಿರವೂ ಸುಳಿಯಲ್ಲ..! ಈ ಟಿಪ್ಸ್ ನಿಮಗೆ ಗೊತ್ತಾ?
ಹವಾಮಾನ ಬದಲಾವಣೆ ಆಗುತ್ತಿದ್ದಂತೆ ಕೀಟಗಳು ಹೆಚ್ಚಾಗುವುದು ಸಾಮಾನ್ಯ, ಆದ್ರಲ್ಲೂ ಮಳೆಗಾಲ ಮುಗಿದು ಚಳಿಗಾಲದ ಆರಂಭದ ದಿನಗಳಲ್ಲಿ ಹೆಚ್ಚು ಕೀಟಗಳು ಕಾಡುವುದು ನೋಡಬಹುದು. ಮನೆಯಲ್ಲಿ ಸೊಳ್ಳೆ, ಜಿರಳೆ, ಸೇರಿದಂತೆ ಕೀಟಗಳು ಹೆಚ್ಚಾಗುವುದು ನೋಡಬಹುದು. ಅದ್ರಲ್ಲೂ ಸೊಳ್ಳೆಗಳು ಈ ಸಮಯದಲ್ಲಿಯೇ ಹೆಚ್ಚಾಗಿ ಸಂತಾನೋತ್ಪತ್ತಿಗೆ ಮುಂದಾಗಲಿವೆ.
ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ರಕ್ತ ಅಗತ್ಯವಾಗಿರುತ್ತದೆ. ಹೀಗಾಗಿ ಈ ಸಮಯದಲ್ಲಿ ಸೊಳ್ಳೆಗಳು ಕಚ್ಚುವಿಕೆಯೂ ಹೆಚ್ಚಾಗಿರಲಿದೆ. ಇನ್ನು ಸೊಳ್ಳೆ ಕಚ್ಚುವಿಕೆಯಿಂದ ಎಷ್ಟು ಅಪಾಯಕಾರಿ ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಂಬುದು ಕೂಡ ನೀವು ತಿಳಿದಿರಬಹುದು. ಅನೇಕ ರೀತಿಯ ಸಮಸ್ಯೆಗಳು ನಿಮಗೆ ಕಾಡಬಹುದು. ಹೀಗಾಗಿ ಸೊಳ್ಳೆಗಳು ಹಾಗೂ ಜಿರಳೆಗಳಿಂದ ಯಾವಾಗಲು ಜಾಗೃತರಾಗಿರಬೇಕು.

ಮನೆಯಲ್ಲಿ ಸೊಳ್ಳೆಗಳ ಕಾಟ ತಪ್ಪಿಸಲು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ವಸ್ತುಗಳನ್ನು ನೀವು ಮನೆಗೆ ತರಬಹುದು. ಸೊಳ್ಳೆ ಬತ್ತಿಗಳು, ಕಾಯಿಲ್ ಸೇರಿ ಈಗ ಹತ್ತು ಹಲವು ಬಗೆಯ ಪರಿಹಾರ ಕ್ರಮಗಳ ನೋಡಬಹುದು. ಹಾಗೆ ಜಿರಳೆಗಳ ತಡೆಯಲು ಕೂಡ ರಾಸಾಯನಿಕಯುಕ್ತ ಪರಿಹಾರಗಳ ಮಾರುಕಟ್ಟೆಯಿಂದ ತರಬಹುದು.
ಆದ್ರೆ ಇದೆಲ್ಲವನ್ನು ಮಾಡಿದ ಬಳಿಕವು ಮನೆಯಲ್ಲಿ ಸೊಳ್ಳೆ, ಜಿರಳೆ, ಕೀಟಗಳು ಕಾಣಿಸುವುದು ನೀವು ಸಹ ನೋಡಬಹುದು. ಆದ್ರೆ ನಾವಿಂದು ಮನೆಯಲ್ಲೇ ಈ ರೀತಿಯ ಮದ್ದು ಮಾಡಿದ್ರೆ ಮನೆಯೊಳಗೆ ಯಾವುದೇ ಕೀಟಗಳು ಕೂಡ ಸುಳಿಯೋದಿಲ್ಲ. ಹಾಗಾದ್ರೆ ಮನೆಯಲ್ಲಿ ಕೀಟಗಳಿಂದ ಪಾರಾಗಲು ಯಾವ ರೀತಿಯ ಉಪಾಯಗಳ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಟೀ ಪುಡಿ, ಪಲಾಲ್ ಎಲೆಯ ಪರಿಹಾರ
ಮನೆಯಲ್ಲಿ ಸಿಗುವಂತಹ ವಸ್ತುಗಳ ಬಳಸಿಕೊಂಡು ನಾವಿಂದು ಈ ಕೀಟಗಳಿಗೆ ಪರಿಹಾರ ಮಾಡುವ ಕುರಿತು ಹೇಳಲಿದ್ದೇವೆ. ಅದ್ರಲ್ಲೂ ಮುಖ್ಯವಾಗಿ ಟೀ ಪುಡಿ, ಪಲಾವ್ ಎಲೆ ಹಾಗೆ ಬೇಕಿಂಗ್ ಸೋಡಾ ಇದ್ದರೆ ಸಾಕಾಗುತ್ತದೆ. ಮೊದಲು ಒಂದು ಟಿಷ್ಯೂ ಪೇಪರ್ ಅಥವಾ ಬಿಳಿಯಾದ ತೆಳು ಪೇಪರ್ ಶೀಟ್ ಅನ್ನು ಕೂಡ ಬಳಸಿ. ಮೊದಲು 1 ಸ್ಪೂನ್ ಟೀ ಪುಡಿಯನ್ನು ಉದ್ದವಾಗಿ ಹರಡಿ ಹಾಗೆ ಅದರ ಮೇಲೆ 1 ಸ್ಪೂನ್ ಬೇಕಿಂಗ್ ಸೋಡಾ ಹಾಗೆ 1 ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಮೇಲೆ ಹಾಕಿ. ನಂತರ ಪೇಪರ್ ಅನ್ನು ಸುರುಳಿ ಆಕಾರವಾಗಿ ಸುತ್ತಿ. ಇದು ಕ್ಯಾಂಡಲ್ ರೀತಿ ಕಾಣಿಸಬೇಕು. ನಂತರ ಒಂದು ಗ್ಲಾಸ್‌ನಲ್ಲಿ ಇಟ್ಟು ಅದರ ಒಂದು ತುದಿಗೆ ಬೆಂಕಿ ಹಚ್ಚಿ ಆರಿಸಿ ಅದರ ಹೊಗೆ ಮನೆಯ ಮೂಲೆ ಮೂಲೆಯು ತಲುಪುವಂತೆ ಮಾಡಬೇಕು.
ಹೀಗೆ ಮನೆಯಲ್ಲಿ ಈ ಹೊಗೆಯಿಂದಾಗಿ ಸೊಳ್ಳೆ, ಜಿರಳೆ, ಕೀಟಗಳು ದೂರಾಗುತ್ತವೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಇದರಿಂದ ನಿಮ್ಮ ಆರೋಗ್ಯಕ್ಕೂ ಯಾವುದೇ ಹಾನಿ ಆಗುವುದಿಲ್ಲ. ಇದು ರಾಸಾಯನಿಕ ಮುಕ್ತ ಪರಿಹಾರ ಉಪಾಯವಾಗಿದೆ.
ನಿಂಬು ಮತ್ತು ಲವಂಗ
ನೀವು ಅಡುಗೆಗೆ ಬಳಸುವ ಲವಂಗ ಹಾಗೂ ನಿಂಬುವಿನಿಂದ ಕೀಟಗಳ ಮನೆಯಿಂದ ಹೊರಹಾಕಬಹುದು. ಮೊದಲು ನಿಂಬೆ ಹಣ್ಣನ್ನು ಕತ್ತರಿಸಿಕೊಳ್ಳಿ. ನಂತರ ಅದರ ಒಳಗೆ 5ರಿಂದ 6 ಲವಂಗವನ್ನು ಚುಚ್ಚಿಕೊಳ್ಳಿ. ನಂತರ ಈ ಎರಡು ನಿಂಬೆಯನ್ನು ನೀವು ಮಲಗುವ ಕೋಣೆ, ಅಡುಗೆ ಮನೆಯ ಮೂಲೆ, ಹಾಲ್‌ನಲ್ಲಿ ಇಡಬಹುದು. ಇದರಿಂದ ಹೊರಬರುವ ಗಾಢವಾದ ಸುವಾಸನೆಯು ಕೀಟಗಳನ್ನು ದೂರ ಇಡುವಂತೆ ಮಾಡಲಿದೆ. ಇದು ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಪರಿಹಾರವಾಗಿದೆ. ನೀವು ಕೂಡ ಮನೆಯಲ್ಲಿ ಸೊಳ್ಳೆ, ಜಿರಳೆ ಕಾಟವಿದ್ದರೆ ಈ ಎರಡು ಪ್ರಯತ್ನವನ್ನು ಮಾಡಿ ನೋಡಿ.
ಹಕ್ಕು ನಿರಾಕರಣೆ: ಈ ಮೇಲಿನ ಸಲಹೆಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ಕೀಟ ನಿಯಂತ್ರಣ ಸಲಹೆಗೆ ಪರ್ಯಾಯವಲ್ಲ. ಕೀಟ ಸಮಸ್ಯೆಗಳಿಗೆ ಪರಿಣಾಮಕಾರಿ ಮತ್ತು ಸುರಕ್ಷಿತ ಪರಿಹಾರಗಳಿಗಾಗಿ ಯಾವಾಗಲೂ ಅರ್ಹ ವೃತ್ತಿಪರರೊಂದಿಗೆ ಸಮಾಲೋಚಿಸಿ.



Click it and Unblock the Notifications
