Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಮಲಗಿದ 5 ನಿಮಿಷದೊಳಗೆ ನಿದ್ರೆ ಬರಬೇಕು ಅಂದ್ರೆ ಹೀಗೆ ಮಾಡಿ! ಸಿಂಪಲ್ ಸ್ಲೀಪಿಂಗ್ ಟಿಪ್ಸ್!
ನಿದ್ರೆ ಅನ್ನೋದು ಎಲ್ಲರಿಗೂ ಬಹಳ ಮುಖ್ಯವಾದ ಅಂಶ. ದಿನವಿಡಿ ಕೆಲಸ ಮಾಡಿ, ಓಡಾಟ ಮಾಡಿ ದಿನದ ಅಂತ್ಯದಲ್ಲಿ ಒಳ್ಳೆಯ ನಿದ್ರೆ ಮಾಡಬೇಕೆಂಬುದು ಎಲ್ಲರ ಬಯಕೆ ಆಗಿರುತ್ತೆ. ಆದ್ರೆ ಮಲಗಿದ ತಕ್ಷಣ ನಿದ್ದರೆ ಬರುವುದು ಅಂದ್ರೆ ಅದೊಂದು ಕನಸಿನ ಮಾತಾಗಿದೆ. ಏಕೆಂದರೆ ಇತ್ತೀಚಿಗೆ ಹಲವರನ್ನು ಕಾಡುತ್ತಿರುವ ಕಾಡುತ್ತಿರುವ ಸಮಸ್ಯೆಗಳಲ್ಲಿ ನಿದ್ರೆ ಬಾರೆದ ಇರುವುದು ಕೂಡ ಒಂದಾಗಿದೆ.
ಹಲವರು ಮಲಗಿ ಗಂಟೆಗಳು ಕಳೆದು ಎಚ್ಚರವಾಗಿರುತ್ತಾರೆ. ನಿತ್ಯವು ಕಷ್ಟಪಟ್ಟು ನಿದ್ರೆ ಮಾಡಿರುತ್ತಾರೆ. ಹಾಗೆ ಸರಿಯಾಗಿ ನಿದ್ರೆ ಮಾಡದ ಕಾರಣ ಬೆಳಗ್ಗೆ ಸಮಯದಲ್ಲಿ ಚೆನ್ನಾಗಿ ನಿದ್ರೆ ಬರುವುದು ಹಾಗೆ ಮಾಡುವ ಕೆಲಸಗಳಲ್ಲಿ ಅಡ್ಡಿಗಳು ಎದುರಾಗುವುದು, ಆಯಾಸ, ಸುಸ್ತು, ತಲೆ ನೋವು, ತೂಕ ಹೆಚ್ಚಳ, ಮುಖದ ಕಾಂತಿ ಇಲ್ಲದಿರುವುದು, ಡಾರ್ಕ್ ಸರ್ಕಲ್, ಮೊಡವೆಗಳಂತಹ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ.

ಅದ್ರಲ್ಲೂ ನಿದ್ರೆ ಸರಿಯಾಗಿ ಮಾಡದೆ ಇದ್ದಾಗ ಏಕಾಗೃತೆಯ ಕೊರತೆಯಂತಹ ಅಪಸಾಮಾನ್ಯ ಸಮಸ್ಯೆಗಳ ನೋಡಬಹುದು. ಇತ್ತ ಯುವತಿಯರಲ್ಲಿ ನಿದ್ರೆ ಸರಿಯಾಗಿ ಬಾರದೆ ಇದ್ದರೆ ಅವರ ಸೌಂದರ್ಯ ವಿಚಾರವಾಗಿಯೂ ಇದು ದೊಡ್ಡ ತಲೆನೋವಿನ ವಿಚಾರವಾಗಿರಲಿದೆ. ಆದ್ರೆ ನಾವಿಂದು ಮಲಗಿದ 5 ನಿಮಿಷದೊಳಗೆ ಚೆನ್ನಾಗಿ ನಿದ್ರೆ ಬರುವಂತಹ ಕೆಲವು ಟಿಪ್ಸ್‌ಗಳ ಹೇಳಲಿದ್ದೇವೆ. ನೀವಿದನ್ನ ಫಾಲೋ ಮಾಡಿದ್ರೆ ಖಂಡಿತ ನಿದ್ರೆಯ ಸಮಯದಲ್ಲಿ ಬದಲಾವಣೆ ಎದುರು ನೋಡಬಹುದು.
ಊಟ ಬೇಗ ಮಾಡುವುದು
ಇತ್ತೀಚಿನ ದಿನಗಳಲ್ಲಿ ಜನರು ಟಿವಿ ಮುಂದೆ ಕುರಿತು ಇಲ್ಲವೆ ಮೊಬೈಲ್ ಕೈನಲ್ಲಿ ಹಿಡಿದು ಊಟ ಮಾಡುವುದನ್ನೇ ಮರೆಯುತ್ತಾರೆ. ಹಾಗೆ ಮತ್ತೆ ಕೆಲವರು 10 ಗಂಟೆ 11 ಗಂಟೆಯ ನಂತರವೇ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಬೇಗ ಊಟ ಮಾಡುವುದು ಅಂದ್ರೆ ಅವರಿಗೆ ಇಷ್ಟವಾಗೋದಿಲ್ಲ. ಆದ್ರೆ ಬೇಗ ಊಟ ಮಾಡುವುದು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಅದ್ರಲ್ಲೂ ಬಹುಬೇಗ ನಿದ್ರೆ ಬರಬೇಕಾದರೆ ನೀವು 7 ಗಂಟೆಯ ಒಳಗೆ ಊಟ ಮಾಡಿ ಮುಗಿಸಿರಬೇಕು. ಊಟದ ನಂತರ ಯಾವುದೇ ಆಹಾರ ಸೇವಿಸಬಾರದು.
ಮೊಬೈಲ್, ಟಿವಿ ನೀಲಿ ಬೆಳಕಿನ ಸ್ಕ್ರೀನ್ ತ್ಯಜಿಸುವುದು
ಕೆಲವರು ಮಲಗುವವರೆಗೂ ಟಿವಿ ನೋಡುವುದು, ಹಾಸಿಗೆ ಮೇಲಿದ್ದಾಗ ಮೊಬೈಲ್ ಬಳಸುವುದು ನೋಡಬಹುದು. ಇದರಿಂದ ನಿಮ್ಮ ನಿದ್ರೆಯ ಪ್ರಮಾಣ ಕಡಿಮೆಯಾಗುತ್ತದೆ. ಕಣ್ಣುಗಳಿಗೆ ಙೀ ಸ್ಕ್ರೀನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯ ಹಾರ್ಮೋನ್ ಉತ್ಪತ್ತಿಯಾಗದಂತೆ ತಡೆಯಲಿವೆ. ಇದರಿಂದ ನಿಮ್ಮ ನಿದ್ರೆ ತಡವಾಗಲಿದೆ. ಹೀಗಾಗಿ ಮಲಗುವ ಮುನ್ನ ಮೊಬೈಲ್ ಬಳಸಬೇಡಿ.
ಟೀ ಕಾಫಿ ತ್ಯಜಿಸಿ
ಟೀ ಮತ್ತು ಕಾಫಿಯಲ್ಲಿ ಕೆಫಿನ್ ಅಂಶವಿದೆ. ಇದು ನೀವು ಎಚ್ಚರವಾಗಿರಲು ಸಹಾಯ ಮಾಡುವ ಹಾಗೆ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುವ ಅಂಶವಾಗಿದೆ. ಹೀಗಾಗಿ ಮಲಗುವ ಮುನ್ನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಅದ್ರಲ್ಲೂ ಸಂಜೆ 7 ಗಂಟೆಯ ಬಳಿಕ ಟೀ ಕಾಫಿಯಿಂದ ದೂರವೇ ಇರಿ. ಇದು ನಿಮ್ಮ ನಿದ್ರೆಗೆ ಹಾನಿ ಮಾಡುವ ಅಂಶ.
ತಲೆ ಸ್ನಾನ ಮತ್ತು ವ್ಯಾಯಾಮ
ಮಲಗುವ 2 ಅಥವಾ 3 ಗಂಟೆಯ ಮುನ್ನ ತಲೆಸ್ನಾನ ಮಾಡುವುದು ನಿಮಗೆ ಉತ್ತಮ ನಿದ್ರೆಗೆ ಸಹಕಾರಿಯಾಗಲಿದೆ. ಹಾಗೆ ಸ್ನಾನದ ಬಳಿಕ ಲಘು ವ್ಯಾಯಾಮ ಅಥವಾ ನಡುಗೆಯು ನಿಮ್ಮಲ್ಲಿ ನಿದ್ರೆಯ ಸೆಳೆಯುವಂತಹ ಅಂಶವಾಗಿದೆ. ಇದನ್ನು ನೀವು ನಿತ್ಯ ಅಭ್ಯಾಸ ಮಾಡಿದರೆ ನಿಮ್ಮಲ್ಲಿ ಬದಲಾವಣೆ ಗಮನಿಸಬಹುದು.
ಮಲಗುವ ಮುನ್ನ ನೀರು ಅಥವಾ ಹಾಲು ಸೇವನೆ
ಮಲಗುವ ಒಂದು ಗಂಟೆಯ ಮುನ್ನ ಯಾವ ಆಹಾರ ಸೇವಿಸಬೇಡಿ. ಆದ್ರೆ ಉಗುರು ಬೆಚ್ಚಗಿನ ನೀರು ಅಥವಾ ಸ್ವಲ್ಪವೇ ಸ್ವಲ್ಪ ಹಾಲು ಸೇವಿಸುವುದು ನಿಮ್ಮ ನಿದ್ರೆಗೆ ಸಹಕಾರಿಯಾಗಲಿದೆ. ನೀವು ಈ ರೀತಿ 1 ವಾರ ಅಭ್ಯಾಸ ಮಾಡಿದ್ರೆ ಮಲಗಿದ ನಿಮಿಷದ ಒಳಗೆ ನಿದ್ರೆ ಬರುವುದು ಸಾಮಾನ್ಯವಾಗಲಿದೆ.



Click it and Unblock the Notifications