Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮನೆಯ ತುಳಸಿ ಗಿಡ ಸಾಯಬಾರದು ಅಂದ್ರೆ ಏನು ಮಾಡಬೇಕು..? ಇಲ್ಲಿದೆ ಟಿಪ್ಸ್
ಎಲ್ಲರ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತೆ. ಹಿಂದೂ ಸಂಸ್ಕ್ರತಿಯಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ಅಲ್ಲದೆ ಎಲ್ಲರ ಮನೆಯಲ್ಲೂ ತುಳಿಸಿಗೆ ಪೂಜೆ ಮಾಡುವ ಪದ್ದತಿ ಇಂದಿಗೂ ನಡೆದು ಬಂದಿದೆ. ಮನೆಯ ಹೆಣ್ಣು ಮಗಳು ನಿತ್ಯ ಬೆಳಗ್ಗೆ ತುಳಸಿ ಪೂಜೆ ಮಾಡಬೇಕು ಎಂಬುದು ನಡೆದು ಬಂದ ಸಂಪ್ರದಾಯ. ಹಾಗೆ ತುಳಸಿ ಮನೆಯ ದ್ವಾರ ಬಾಗಿಲಿನ ನೇರವಾಗಿ ಇರಬೇಕು ಎಂಬ ನಿಯಮವೂ ಇದೆ.
ಆದ್ರೆ ಹಳ್ಳಿಗಳಿಂದ ಹಿಡಿದು ನಗರಗಳಲ್ಲೂ ಸ್ಥಳದ ಸಮಸ್ಯೆಯಿಂದ ತುಳಸಿ ಗಿಡವನ್ನು ಎಲ್ಲೆಂದರಲ್ಲಿ ಇಡುತ್ತಾರೆ. ಹಾಗೆ ಕೆಲವರು ಪೂಜೆ ಸಹ ಮಾಡದೆ ಹಾಗೆಯೇ ಬಿಡುತ್ತಾರೆ. ಆದ್ರೆ ಇನ್ನು ಕೆಲವರ ಮನೆಯಲ್ಲಿ ಈ ತುಳಸಿ ಗಿಡ ನೆಟ್ಟಾಗಲೆಲ್ಲ ಸಾಯುತ್ತಿರುತ್ತದೆ ಇಲ್ಲವೆ ಸಣಕಲಾಗಿ ಬೆಳೆಯುತ್ತಿರುತ್ತದೆ. ಕೆಲವೊಮ್ಮೆ ತುಳಸಿ ಗಿಡ ಸಾಯುವುದು ಒಳ್ಳೇಯದಲ್ಲ ಎನ್ನಲಾಗುತ್ತದೆ.

ಇನ್ನು ತುಳಸಿ ಗಿಡ ದೊಡ್ಡದಾಗಿ ಬೆಳೆದರೆ ನೋಡಲು ಚೆನ್ನಾಗಿರುತ್ತದೆ ಹಾಗೆ ಕೆಲವೊಮ್ಮೆ ಈ ಗಿಡಗಳು ಸಾಯುವುದು ನೋಡಿದಾಗಲು ಬೇಸರವಾಗುತ್ತದೆ. ಹಾಗಾದ್ರೆ ತುಳಸಿಗಿಡ ದೊಡ್ಡದಾಗಿ, ಸಾಯದಂತೆ, ಚೆನ್ನಾಗಿ ಬೆಳೆಯುವಂತೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ತುಳಿಸಿ ಗಿಡ ಹೆಚ್ಚಾಗಿ ಬೇಸಿಗೆಯಲ್ಲಿ ಒಣಗಿ ಸಾಯುತ್ತವೆ. ಹಾಗಾದ್ರೆ ಗಿಡ ಸಾಯಬಾರದು ಎಂಬುದನ್ನು ನೋಡೋಣ.
ಹೂವು ಬರಲು ಬಿಡಬಾರದು
ನಿಮ್ಮ ಮನೆಯಲ್ಲಿ ತುಳಸಿ ಗಿಡ ನೆಟ್ಟಿದ್ದರೆ ಅದು ಬಹುಬೇಗ ಸಾಯಬಾರದು ಎನ್ನುವ ಬಯಕೆ ಇದ್ದರೆ ತುಳಸಿ ಗಿಡ ಹೂವು ಬಿಡದಂತೆ ನೋಡಿಕೊಳ್ಳಿ. ತುಳಸಿ ಗಿಡವು ಹೂವನ್ನು ಬಿಡಲು ಆರಂಭಿಸಿದಾಗ ಅದನ್ನು ಮುರಿಯುತ್ತಾ ಇರಿ. ಏಕೆಂದರೆ ತುಳಸಿ ಹೂವು ಬಿಡಲು ಆರಂಭಿಸಿದಾಗ ಅದು ಸಣ್ಣಗಾಗಲು ಆರಂಭಿಸುತ್ತದೆ. ಮುಂದೆ ಅದರ ಬೆಳವಣಿಗೆ ಕುಗ್ಗುತ್ತದೆ. ಹೀಗಾಗಿ ಹೂವುಗಳನ್ನು ತೆಗೆಯುತ್ತಿರಬೇಕು.
ಕಾಫಿ ಪುಡಿ
ಎರಡು ಚಮಚ ಕಾಫಿ ಪುಡಿಯನ್ನು ಒಂದು ಗ್ಲಾಸ್‌ಗೆ ಹಾಕಿ ಅದಕ್ಕೆ ಸ್ವಲ್ಲ ನೀರು ಹಾಕಿ ಮುಚ್ಚಿಡಿ. ಬಳಿಕ ಬೆಳಗ್ಗೆ ಎದ್ದು ಅದಕ್ಕೆ ಮತ್ತೆ ಎರಡು ಲೋಟ ನೀರು ಸೇರಿಸಿ. ಬಳಿಕ ಚೆನ್ನಾಡಿ ಕರಡಿಕೊಂಡು ಈ ನೀರನ್ನು ಗಿಡದ ಬುಕ್ಕೆ ಹಾಕಿಕೊಳ್ಳಿ.
ಗೊಬ್ಬರ
ತುಳಸಿ ಗಿಡಕ್ಕೆ ಕಾಂಪೋಸ್ಟ್ ಗೊಬ್ಬರ ಹಾಕಬಹುದು. ಅಲ್ಲದೆ ಸಾವಯವ ಗೊಬ್ಬರನ್ನು ಸಹ ಹಾಕಬಹುದು. ಬುಡದಲ್ಲಿರುವ ಸ್ವಲ್ಪ ಮಣ್ಣು ತೆಗೆದು ಗೊಬ್ಬರ ಹಾಕಿ ಅದರ ಮೇಲೆ ಹೊಸ ಮಣ್ಣು ಹಾಕಬೇಕು.
ಬಿಸಿಲು
ನೀವು ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಬಿಸಿಲು ಬೀಳದೆ ಇರುವ ಜಾಗದಲ್ಲಿ ಇಟ್ಟಿದ್ದರೆ ಅದನ್ನು ತಪ್ಪಿಸಿ. ತುಳಸಿ ಗಿಡಕ್ಕೆ ಹೆಚ್ಚು ಬಿಸಿಲಿನ ಅಗತ್ಯವಿದೆ. ಹೀಗಾಗಿ ಬಿಸಿಲಿನಲ್ಲಿ ಇಟ್ಟಾಗ ಚೆನ್ನಾಗಿ ಬೆಳಯುತ್ತದೆ. ಒಂದು ವೇಳೆ ನೀವು ಗಿಡವನ್ನು ನೆರಳಿನಲ್ಲಿ ಇಟ್ಟರೆ ಸಣ್ಣದಾಗಿ ಬೆಳೆಯುವುದು ಅಲ್ಲದೆ ಬೇಗ ಸಾಯುವ ಸಾಧ್ಯತೆ ಹೆಚ್ಚಿದೆ.
ಹೆಚ್ಚು ನೀರು ಹಾಕಬಾರದು
ನೀವು ತುಳಸಿ ಗಿಡವನ್ನು ನೆರಳಿನಲ್ಲಿ ಇಟ್ಟು ಅದಕ್ಕೆ ಹೆಚ್ಚು ನೀರು ಹಾಕಿದಾಗ ಅದು ಸಾಯುವ ಸಾಧ್ಯತೆ ಹೆಚ್ಚು. ನಿಮ್ಮ ಮನೆಯ ತುಳಸಿ ಗಿಡದಿಂದ ಹೆಚ್ಚು ಎಲೆಗಳು ಉದುರುತ್ತಿದ್ದರೆ ನೀರು ಹೆಚ್ಚು ಹಾಕುತ್ತಿದ್ದೀರಿ ಎಂದರ್ಥ. ಇನ್ನೊಂದು ಕಡೆ ನೀವು ಬಿಸಿಲಿನಲ್ಲಿ ತುಳಸಿ ಗಿಡ ಇಟ್ಟಾಗ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ನೀರು ಕಡಿಮೆ ಹಾಕುತ್ತಿದ್ದೀರಿ ಎಂದರ್ಥ.



Click it and Unblock the Notifications
