Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಫ್ರಿಡ್ಜ್ ಡೋರ್‌ನಲ್ಲಿ ಯಾವೆಲ್ಲಾ ವಸ್ತು ಇಡಬಾರದು ಗೊತ್ತಾ? ನೀವು ಕೂಡ ಈ ತಪ್ಪು ಮಾಡುತ್ತಿರಬಹುದು!
ಮನೆಯಲ್ಲಿ ಒಂದು ಫ್ರಿಡ್ಜ್ ಇದ್ದರೆ ಬಹಳಷ್ಟು ಉಪಯೋಗ ಆಗುತ್ತೆ ಅನ್ನೋದು ಎಲ್ಲಾ ಗೃಹಿಣಿಯರ ಬಯಕೆ ಹಾಗೆ ಆಸೆಯೂ ಆಗಿರುತ್ತೆ. ಯಾಕಂದ್ರೆ ಮನೆಯಲ್ಲಿ ಉಳಿದ ಅಡುಗೆ, ಖಾದ್ಯಗಳು, ತರಕಾರಿ, ಸೊಪ್ಪು ಹೀಗೆ ಒಂದಿಷ್ಟು ವಸ್ತುಗಳನ್ನು ಹಾಳಾಗದಂತೆ ಫ್ರಿಡ್ಜ್‌ನಲ್ಲಿಟ್ಟು ಸವಿಯಬಹುದು. ಹಾಗೆ ಹಾಲು, ಬೆಣ್ಣೆ, ತುಪ್ಪ ಇಂತಹ ಹತ್ತು ಹಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಹಲವು ದಿನ ಇಡಬಹುದು.
ನೀವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಪದೇ ಪದೇ ಖಾದ್ಯಗಳ ಬಿಸಿ ಮಾಡುವ ಬದಲಾಗಿ ಈ ಫ್ರಿಡ್ಜ್‌ನಲ್ಲಿಟ್ಟರೆ ಯಾವುದೇ ತಲೆನೋವು ಇರುವುದಿಲ್ಲ. ಆದ್ರೆ ಫ್ರಿಡ್ಜ್‌ನಿಂದ ಎಷ್ಟು ಪ್ರಯೋಜನಗಳಿವೆಯೋ ಅಷ್ಟೇ ಅನಾನುಕೂಲಗಳನ್ನು ಸಹ ನಾವು ಪಟ್ಟಿ ಮಾಡಬಹುದು. ಆದ್ರೆ ಫ್ರಿಡ್ಜ್‌ನಲ್ಲಿ ಎಲ್ಲಾ ವಸ್ತುಗಳನ್ನು ಇಡುವುದು ಹಾನಿಕಾರಕ. ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳ ಸೇವನೆ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದು ನಿಮಗೆ ತಿಳಿದಿದ್ಯಾ?

ಹೌದು ಕೆಲವೊಂದು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಹಾನಿಕಾರವಾಗುತ್ತದೆ. ಅದ್ರಲ್ಲೂ ಫ್ರಿಡ್ಜ್‌ನ ಡೋರ್‌ನಲ್ಲಿ ಕೆಲವೊಂದು ವಸ್ತುಗಳನ್ನು ಇಡಲೇಬಾರದು ಎಂದು ತಜ್ಞರು ಸಹ ಹೇಳುತ್ತಾರೆ. ಹಾಗಾದ್ರೆ ಫ್ರಿಡ್ಜ್ ಡೋರ್‌ನಲ್ಲಿ ಯಾವೆಲ್ಲಾ ವಸ್ತುಗಳ ಇಡಬಾರದು? ಇಷ್ಟು ದಿನ ನಾವು ತಪ್ಪಾಗಿ ಯಾವೆಲ್ಲಾ ವಸ್ತುಗಳ ಇಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳೋಣ.
ಹಾಲು
ಪ್ರತಿಯೊಬ್ಬರ ಮನೆಯಲ್ಲೂ ಹಾಲನ್ನು ತಂದು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ನೀವು ಹಾಲನ್ನು ಫ್ರಿಡ್ಜ್‌ನ ಡೋರ್‌ನಲ್ಲಿ ಇಡುತ್ತಿದ್ದರೆ ಖಂಡಿತ ಇದು ತಪ್ಪು ನಿರ್ಧಾರ. ಹಾಲನ್ನು ಯಾವಾಗಲು ಫ್ರಿಡ್ಜ್‌ನ ಡೀಪ್ ಕೂಲಿಂಗ್ ಸ್ಥಳ ಅಥವಾ ಬಹಳ ಹಿಂದೆ ಫ್ಯಾನ್ ಹತ್ತಿರದಲ್ಲಿ ಇಡಬೇಕು. ಫ್ರಿಡ್ಜ್ ಡೋರ್‌ನಲ್ಲಿ ಹಾಲು ಇಡುವುದು ಬ್ಯಾಕ್ಟೀರಿಯಾ ವೃದ್ಧಿಗೆ ಸಹಾಯ ಮಾಡಲಿದೆ. ಈ ಸ್ಥಳದಲ್ಲಿ ಹೆಚ್ಚು ತಂಪಿನ ವಾತಾವರಣ ಇರದ ಕಾರಣ ಬಹುಬೇಗ ಹಾಲು ಕೆಡುವ ಸಾಧ್ಯತೆ ಇರಲಿದೆ.
ಮೊಟ್ಟೆಗಳು
ಕೆಲವು ರೆಫ್ರಿಜರೇಟರ್‌ಗಳು ಡೋರ್‌ನಲ್ಲಿ ವಿಶೇಷವಾದ ಮೊಟ್ಟೆಯ ಆಕಾರದ ಶೆಲ್ಫ್ ಅನ್ನು ಹೊಂದಿದ್ದರೂ ಸರಿಯಾದ ಮೊಟ್ಟೆ ಶೇಖರಣಾ ತಾಪಮಾನವನ್ನು ನಿರ್ವಹಿಸಲು ಅದು ಸರಿಯಾದ ಸ್ಥಳವಲ್ಲ. ಮೊಟ್ಟೆಗಳನ್ನು ಬಾಕ್ಸ್‌ನಲ್ಲಿ ಹಾಕಿ ಡೋರ್‌ನಲ್ಲಿ ಇಟ್ಟರೆ ಅದರ ಬಾಳಿಕೆ ಬಹುಬೇಗ ಹಾಳಾಗುತ್ತದೆ. ಸಾಮಾನ್ಯವಾಗಿ ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಶೇಖರಿಸಿ ಇಡಬಾರದು. ಅದನ್ನು ಖರೀದಿ ಮಾಡಿ ತಂದು 4ರಿಂದ 5 ದಿನದೊಳಗೆ ಬಳಸುವುದು ಸೂಕ್ತ.
ಮಾಂಸ
ನೀವು ಹಸಿ ಮಾಂಸ ಅಥವಾ ಮೀನನ್ನು ಖರೀದಿಸಿ ತಂದು ಫ್ರಿಡ್ಜ್‌ನಲ್ಲಿ ಇರಿಸಿರುತ್ತೀರಿ. ಒಂದು ವೇಳೆ ಅಂಗಡಿಯಲ್ಲಿ ಪ್ಯಾಕ್ ಮಾಡಿ ನೀಡಿದಂತೆ ಹಾಗೆಯೇ ಫ್ರಿಡ್ಜ್‌ನಲ್ಲಿ ಇರಿಸಿದರೆ ಒಂದು ಹೊತ್ತು ಇಟ್ಟು ಅನಂತರ ಅಡುಗೆಗೆ ಬಳಸುವುದು ಸೂಕ್ತ. ಮಾಂಸದಲ್ಲಿ ರಕ್ತದ ಪ್ರಮಾಣ ಹಾಗೆ ಉಳಿಯುವ ಕಾರಣ ಬಹುಬೇಗ ಬ್ಯಾಕ್ಟೀರಿಯ ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ ಮಾಂಸವನ್ನು ಹೆಚ್ಚು ಸಮಯ ಫ್ರಿಡ್ಜ್‌ನಲ್ಲಿ ಇಡಬಾರದು.
ಚೀಸ್ ಮತ್ತು ಕಾಂಡಿಮೆಂಟ್‌ಗಳು
ಹಣ್ಣುಗಳು ಮತ್ತು ತರಕಾರಿಗಳಂತೆಯೇ ಫ್ರಿಜ್‌ನಲ್ಲಿ ಚೀಸ್‌ಗೆ ವಿಶೇಷ ಸ್ಥಳವಿದೆ. ಆದ್ರೆ ನಾವು ಫ್ರಿಡ್ಜ್‌ನ ಡೋರ್‌ನ ಬಳಿ ಹೆಚ್ಚಾಗಿ ಚೀಸ್ ಅನ್ನು ಇಡುತ್ತೇವೆ. ಆದ್ರೆ ಚೀಸ್ ಅನ್ನು ಫ್ರಿಡ್ಜ್‌ನ ಒಳಗೆ ಇಡಬೇಕಾಗುತ್ತದೆ. ಇಲ್ಲದಿದ್ದರೆ ಇದು ಬಹುಬೇಗ ಹಾಳಾಗುವ ಸಾಧ್ಯತೆ ಇರಲಿದೆ. ಹಾಗೆ ಕಾಂಡಿಮೆಂಟ್‌ಗಳನ್ನು ಸಹ ನಾವು ಡೋರ್‌ನಲ್ಲಿ ಸಂಗ್ರಹಿಸುತ್ತೇವೆ, ಆದ್ರೆ ಇದನ್ನು ಫ್ರಿಡ್ಜ್‌ನ ಒಳಗೆ ಅಥವಾ ಫ್ರೀಜರ್ ಭಾಗದಲ್ಲಿ ಇಡುವುದು ಉತ್ತಮ.
ಸಾಫ್ಟ್ ಡ್ರಿಂಕ್ಸ್
ನಾವು ಫ್ರಿಡ್ಜ್ ಡೋರ್‌ನಲ್ಲೇ ಇಡುತ್ತೇವೆ. ಅದ್ರೆ ಇದಕ್ಕಿಂತ ಫ್ರೀಜರ್ ಸೆಕ್ಷನ್‌ನಲ್ಲಿ ಇದನ್ನು ಇಡಬಹುದು. ಸಾಮಾನ್ಯವಾಗಿ ನೀವು ಸೋಡಾವನ್ನು ಈ ಜಾಗದಲ್ಲಿ ಇಡಬಹುದು.



Click it and Unblock the Notifications