Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗ್ಯಾಸ್ ಸ್ಟೌ ಕ್ಲೀನ್ ಮಾಡುವಾಗ ನೀವು ಮಾಡುವ ಸಾಮಾನ್ಯ ತಪ್ಪುಗಳಿವು..! ಇನ್ಮುಂದೆ ಹೀಗೆ ಮಾಡಬೇಡಿ!
ಅಡುಗೆ ಮನೆ ಸ್ವಚ್ಛ ಮಾಡೋದು ಅಂದ್ರೆ ಗೃಹಿಣಿಯರಿಗೆ ಇಡೀ ದಿನದ ಕೆಲಸ ಇದ್ದಂತೆ. ಅಡುಗೆ ಮನೆಯ ಸ್ವಚ್ಛ ಮಾಡೋಕೆ ಒಂದಿಷ್ಟು ವಸ್ತುಗಳ ಅಗತ್ಯವಿರುತ್ತೆ. ಏಕೆಂದರೆ ಅಡುಗೆ ಮನೆಯಲ್ಲಿ ಜಿಡ್ಡು, ಮಸಾಲೆ ಪದಾರ್ಥಗಳಿಂದಾದ ಕಲೆಗಳು, ಎಣ್ಣೆಯ ಕಲೆಗಳು, ಪಾತ್ರೆಯ ಕಲಡ ಹೀಗೆ ಒಂದಿಷ್ಟು ಕಲೆಗಳನ್ನು ತೆಗೆಯುವುದು ಸಾಹಸದಾಯಕ ಕೆಲಸವಾಗುತ್ತೆ.
ಹಾಗೆ ಅಡುಗೆ ಮನೆಯಲ್ಲಿ ಸ್ಟೌ ಕ್ಲೀನ್ ಮಾಡುವುದು ಅಂದ್ರೆ ಕೂಡ ಬಹುದೊಡ್ಡ ಕೆಲಸಗಳಲ್ಲಿ ಒಂದು. ಬಹಳ ತಿಂಗಳ ಕಾಲ ಸ್ಟೌ ಅನ್ನು ಕ್ಲೀನ್ ಮಾಡದೆ ಇದ್ದರೆ ಗ್ಯಾಸ್ ಬಳಕೆ ಹೆಚ್ಚಾಗಬಹುದು, ಬೆಂಕಿ ಸರಿಯಾಗಿ ಉರಿಯದೆ ಬಹಳ ಸಮಯ ಅಡುಗೆ ಮನೆಯಲ್ಲಿ ಉಳಿಯಬೇಕಾಗಬಹುದು. ಹಾಗೆ ಬರ್ನಲ್‌ಗಳನ್ನು ಆಗಾಗ ಕ್ಲೀನ್ ಮಾಡುತ್ತಿದ್ದರೆ ಗ್ಯಾಸ್ ಸ್ಟೌ ಬಹಳ ಸಮಯ ಬಾಳಿಕೆ ಬರುತ್ತದೆ.

ಅಡುಗೆ ಮಾಡುವಾಗ ಗ್ಯಾಸ್ ಸ್ಟೌ ಯಾವಾಗಲು ಕಲೆಯಾಗುತ್ತೆ ಅಡುಗೆ ಮುಗಿದ ಬಳಿಕ ನೀವೊಮ್ಮೆ ಒರೆಸಿ ಸ್ವಚ್ಛ ಮಾಡಿದ್ರೂ ಕೂಡ ಅದರಲ್ಲಿನ ಕಲೆಗಳು ಹಾಗೆ ಉಳಿದಿರುತ್ತವೆ. ಇದಕ್ಕೆ ಒಮ್ಮೆ ಗ್ಯಾಸ್ ಕನೆಕ್ಷನ್ ತೆಗೆದು ಬರ್ನಲ್‌ಗಳ ತೆಗೆದು ನೀರಿನಿಂದ ವಾಷ್ ಮಾಡುವುದು ನೋಡಬಹುದು. ಆದ್ರೆ ಈ ರೀತಿ ಸ್ಟೌ ತೊಳೆಯುವಾಗ ನೀವು ಎಂದಿಗೂ ಈ 5 ತಪ್ಪುಗಳ ಮಾಡಬೇಡಿ.
ನೀವು ಸ್ಟೌ ಕ್ಲೀನ್ ಮಾಡುವಾಗ ಅಪ್ಪಿ ತಪ್ಪಿಯೂ ಈ ರೀತಿಯ ತಪ್ಪುಗಳ ಮಾಡಬೇಡಿ. ಏಕೆಂದರೆ ಇದರಿಂದ ಅಪಾಯ ಕೂಡ ಎದುರಾಗಬಹುದು, ಹಾಗಾದ್ರೆ ಯಾವೆಲ್ಲಾ ತಪ್ಪು ನೀವು ಮಾಡುತ್ತಿದ್ದೀರಿ ಎಂಬುದನ್ನು ನೋಡಿ.
ಬಿಸಿ ಇದ್ದಾಗಲೇ ಬರ್ನರ್ ಕ್ಲೀನ್ ಮಾಡಬೇಡಿ
ನೀವು ಗ್ಯಾಸ್ ಸ್ಟೌ ಕ್ಲೀನ್ ಮಾಡುವಾಗ ಸಾಮಾನ್ಯವಾಗಿ ಮಾಡುವ ತಪ್ಪು ಇದಾಗಿದೆ. ಕೆಲವರು ಬರ್ನರ್ ಬಿಸಿ ಇದ್ದಾಗಲೇ ಅದರ ಮೇಲೆ ತಣ್ಣೀರು ಹಾಕಿ ಕ್ಲೀನ್ ಮಾಡಲು ಮುಂದಾಗುತ್ತಾರೆ. ಆದ್ರೆ ಈ ರೀತಿ ಮಾಡುವುದು ಮಹಾ ತಪ್ಪು. ಬಿಸಿಯಾದ ಬರ್ನರ್ ಮೇಲೆ ತಣ್ಣೀರು ಹಾಕುವುದು ಅದು ಕ್ರ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಈ ತಪ್ಪು ಮಾಡಬೇಡಿ. ಯಾವಾಗಲು ಬರ್ನರ್ ತಣ್ಣಗಾದ ಮೇಲೆ ಸ್ವಚ್ಛ ಮಾಡುವುದು ಬಹಳ ಉತ್ತಮ ವಿಧಾನವಾಗಿದೆ.
ಹೆಚ್ಚಿನ ಕೆಮಿಕಲ್ ಬಳಸುವುದು
ಗ್ಯಾಸ್ ಸ್ಟೌ ಅಥವಾ ಬರ್ನರ್ ಸ್ವಚ್ಛ ಮಾಡಲು ಪರಿಣಾಮಕಾರಿ ಕೆಮಿಕಲ್ ಬಳಸುವುದು ಸೂಕ್ತವಲ್ಲವಂತೆ. ಬ್ಲೀಚ್ ಅಥವಾ ಅಮೋನಿಯದಂತಹ ಕಠಿಣ ರಾಸಾಯನಿಕಗಳು ಮೇಲ್ಮೈಗೆ ಹಾನಿ ಮಾಡಬಹುದು. ಸ್ಟೌ ಬಣ್ಣ ಮಸುಕಾಗಬಹುದು. ಹೀಗಾಗಿ ಸೋಪಿನ ಪುಡಿ, ಪಾತ್ರೆ ತೊಳೆಯಲು ಬಳಸುವಂತಹ ಸೌಮ್ಯಾವಾದ ಲಿಕ್ವಿಡ್ ಬಳಸುವುದು ಉತ್ತಮ.
ಬರ್ನರ್ ಒಣಗುವ ಮುನ್ನವೇ ಬಳಸುವುದು
ನೀವು ಗ್ಯಾಸ್ ಸ್ಟೌ ಅನ್ನು ತೊಳೆದು ಕ್ಲೀನ್ ಮಾಡಿದ ಬಳಿಕ ಅದರಲ್ಲಿನ ನೀರು ಸಂಪೂರ್ಣ ಒಣಗಲು ಬಿಡಬೇಕು. ನೀರು ಇರುವ ಮೊದಲೇ ಮತ್ತೆ ಜೋಡಿಸಿ ಒಲೆ ಹತ್ತಿಸಬಾರದು. ಇದರಿಂದ ಬರ್ನರ್‌ನ ಕ್ಷಮತೆ ಹಾಳಾಗುತ್ತದೆ. ಹಾಗೆ ನೀರಿನಿಂದಾಗಿ ಸರಿಯಾಗಿ ಉರಿಯದೆ ಇರಬಹುದು.
ಇಗ್ನಿಷನ್ ಪೋರ್ಟ್ ಪರಿಶೀಲಿಸಿದೆ ಬಿಡುವುದು
ಬರ್ನರ್‌ಗೆ ನೀರು ಹಾಕಿ ಸ್ವಚ್ಛ ಮಾಡುವ ನಾವು ಇಗ್ನಿಷನ್ ಕ್ಲೀನ್ ಮಾಡುವುದನ್ನು ಮರೆಯುತ್ತೇವೆ, ಇದರಿಂದ ನಿಮ್ಮ ಗ್ಯಾಸ್‌ನ ಜೀವಿತಾವಧಿ ಕಡಿಮೆಯಾಗುತ್ತದೆ. ಇಗ್ನಿಷನ್ ಪೋರ್ಟ್ ಅನ್ನು ಕೂಡ ಕ್ಲೀನ್ ಮಾಡಿ. ಬರ್ನರ್‌ನ ಕೆಳಭಾಗದಲ್ಲಿ ಈ ಇಗ್ನಿಷನ್ ಪೋರ್ಟ್ ಇರುತ್ತದೆ. ಹಾಗೆ ಬರ್ನರ್ ಜೋಡಿಸುವಾಗ ಅದನ್ನು ಕೂಡ ಪರಿಶೀಲಿಸಿ. ಅದಲ್ಲಿ ನೀರು ಇದೆಯೇ ಅಥವಾ ಚಿಕ್ಕದಾದ ಒಂದು ತೂತು ಮುಚ್ಚಿದೆಯೇ, ಅದರಲ್ಲಿ ಕಸ ಏನಾದರು ಇದೆಯೇ ಎಂಬುದನ್ನು ಪತ್ತೆ ಮಾಡಿ.



Click it and Unblock the Notifications
