Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮನೆಯಲ್ಲಿ ಈ 5 ಗಿಡ ಇದ್ದರೆ ಹುಳು-ಕೀಟ ಒಳಗೆ ಬರಲ್ಲ..! ಯಾವುದೆಲ್ಲಾ ಗೊತ್ತಾ?
ಮನೆಯಲ್ಲಿ ಹುಳುಗಳು, ಕೀಟಗಳು ಕಾಣಿಸಿಕೊಂಡರೆ ನಾವು ಏನು ಮಾಡುತ್ತೇವೆ. ಸಾಮಾನ್ಯವಾಗಿ ಈ ಹುಳುಗಳ ನಿವಾರಣೆಗೆ ಔಷಧಿಗಳ ಸಿಂಪಡಿಸುತ್ತೇವೆ. ಹಲವು ರೀತಿಯ ಸ್ಪ್ರೇಗಳು, ಔಷಧಿಗಳೀಗ ಮಾರುಕಟ್ಟೆಯಲ್ಲಿವೆ. ಆದ್ರೆ ಈ ಔಷಧಿಗಳೇ ಹಾನಿಕಾರಕವಾಗಿ ಬದಲಾಗುತ್ತವೆ. ಏಕೆಂದರೆ ಈ ಔಷಧಿಗಳಲ್ಲೆ ಹತ್ತಾರು ಬಗೆಯ ರಾಸಾಯನಿಕಗಳಿರುತ್ತವೆ. ಹೀಗಾಗಿ ನಾವು ಇದನ್ನು ಬಳಸಿದಷ್ಟು ಅನಾರೋಗ್ಯಕ್ಕೆ ಒಳಗಾಗುವುದೇ ಹೆಚ್ಚು.
ಹೀಗಾಗಿ ನೈಸರ್ಗಿಕ ರೀತಿಯಲ್ಲಿ ನಾವು ಈ ಕೀಟಗಳ ಹಾವಳಿ ತಡೆಯುವ ಕುರಿತು ಆಲೋಚಿಸಬೇಕಿದೆ. ಅದರಲ್ಲೂ ಮನೆಯೊಳಗೆ ಕೀಟಗಳಿದ್ದರೆ ಮಕ್ಕಳಿಂದ ಹಿಡಿದು ಎಲ್ಲರಿಗು ಸಮಸ್ಯೆಯಾಗಲಿದೆ. ಹಾಗಾದ್ರೆ ನೈಸರ್ಗಿಕವಾಗಿ ಹುಳುಗಳು, ಕೀಟಗಳು ಮನೆಯೊಳಗೆ ಬಾರದಂತೆ ತಡೆಯುವುದು ಹೇಗೆ?

ಈ ಪ್ರಶ್ನೆಗೆ ನಾವು ಸುಲಭವಾಗಿ ಕೆಲವು ಮನೆಮದ್ದುಗಳನ್ನು ಉದಾಹರಣೆಯಾಗಿ ಹೇಳಬಹುದು, ಆದ್ರೆ ನಾವಿಂದು ಗಿಡಗಳನ್ನು ನೆಟ್ಟು ಅದರ ಮೂಲಕ ಮನೆಯೊಳಗೆ ಕೀಟಗಳು, ಹುಳುಗಳು ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಪುದಿನ ಗಿಡ
ಪುದಿನ ಎಲೆಯನ್ನು ನಾವು ಹಲವು ಅಡುಗೆಯಲ್ಲಿ ಬಳಸುತ್ತೇವೆ. ಪುದಿನ ಎಲೆಗಳು ಸುವಾಸನೆ ಭರಿತ ಮಿಂಟ್ ರೀತಿಯಲ್ಲಿರುತ್ತವೆ. ಇದು ಆರೋಗ್ಯದ ದೃಷ್ಟಿಯಿಂದಲೂ ಬಳಸಲಾಗುತ್ತದೆ, ಇದರ ಚಟ್ನಿಯ ರುಚಿ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯುತ್ತಾರೆ. ಇದರ ವಾಸನೆಗೆ ಕೀಟಗಳು ಸಹ ದೂರ ಸರಿಯುತ್ತದೆ. ಚಿಕ್ಕ ಪಾಟ್‌ನಲ್ಲಿ ಇದನ್ನು ನೆಟ್ಟು ಮನೆಯ ಒಂದು ಮೂಲೆಯಲ್ಲಿ ಇಟ್ಟು ನೀರು ಹಾಕಿದರೆ ಈ ಗಿಡ ಬೆಳೆಯುತ್ತದೆ ಹಾಗೆ ಕೀಟ ಬಾದೆಯಿಂದ ಮುಕ್ತಿ ಪಡೆಯಬಹುದು.
ಲೆಮನ್ ಗ್ರಾನ್
ಇದೊಂದು ಹುಲ್ಲಿನ ಜಾತಿಗೆ ಸೇರಿದ ಸಸ್ಯವಾಗಿದೆ. ಮನೆಯ ಮುಂದೆ ಇಲ್ಲವೆ ಪಾಟ್‌ಗೆ ಇದರ ಬುಡ ನೆಟ್ಟರೆ ಇದು ಮೂರರಿಂದ ನಾಲ್ಕು ಅಡಿ ಎತ್ತರದಲ್ಲಿ ಬೆಳೆಯುತ್ತದೆ. ಹೀಗಾಗಿ ಇದಕ್ಕೆ ಹೆಚ್ಚು ಜಾಗ ಬೇಕಾಗಿಲ್ಲ. ಆದ್ರೆ ಈ ಹುಲ್ಲು ಕೀಟಗಳು ಬರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ಹುಲ್ಲಿನಿಂದ ಚಹಾ ಸಹ ಮಾಡುತ್ತಾರೆ. ಇದು ಅತ್ಯುತ್ತಮ ಸೊಳ್ಳೆ ನಿವಾರಕವಾಗಿದೆ.
ಚೆಂಡು ಹೂವಿನ ಗಿಡ
ನೀವು ಚೆಂಡು ಹೂವು ನೋಡಿರಬಹುದು. ಅದರ ಎಲೆಗಳು ಎಷ್ಟು ಗಾಢ ಸುವಾಸನೆ ಹೊಂದಿರುತ್ತವೆ ಎಂಬುದನ್ನು ಗಮನಿಸಿ. ಈ ಗಿಡವನ್ನ ಮನೆಯೊಳಗೆ ಪಾಟ್‌ನಲ್ಲಿ ಬೆಳೆಸಿದರೆ ಹುಳುಗಳು, ಕೀಟಗಳು ದೂರಾಗುತ್ತವೆ. ಅಲ್ಲದೆ ಇದು ನೋಡಲು ಸುಂದರವಾಗಿಯೂ ಕಾಣಿಸುಲಿದೆ.
ದಾಲ್ಚಿನ್ನಿ ಅಥವಾ ಪಲಾವ್ ಎಲೆ ಸಸ್ಯ
ನೀವು ಅಡುಗೆಗೆ ಬಳಸುವ ದಾಲ್ಚಿನ್ನಿ ಅಥವಾ ಪಲಾವ್ ಎಲೆಗಳ ಗಿಡ ದೊಡ್ಡದಾಗಿಯೂ ಬೆಳೆಯುತ್ತದೆ. ಆದರೆ ಬೋನ್ಸಾಯಿ ಎಂದು ಕರೆಯಲ್ಪಡು ಮಾದರಿಯಲ್ಲಿ ಈ ಸಸ್ಯಗಳು ಅತ್ಯಂತ ಚಿಕ್ಕದಾಗಿ ಬೆಳೆಯುತ್ತವೆ. ನರ್ಸರಿಯಲ್ಲಿ ಈ ದಾಲ್ಚಿನ್ನಿ ಗಿಡಗಳು ಸಿಗುತ್ತವೆ, ಇದನ್ನು ಮನೆಯೊಳಗೆ ತಂದಿಟ್ಟರೆ ಯಾವುದೇ ಕೀಟ ಹುಳುಗಳ ದಾಳಿ ಇರುವುದಿಲ್ಲ.
ಪೆಟುನಿಯಾಸ್ ಅಥವಾ ಗೊರಟೆ ಹೂವು
ನಿಮ್ಮ ಮನೆಯಲ್ಲಿ ನೀಲಿ ಬಣ್ಣದ ಹೂವು ಬಿಡುವ ಚಿಕ್ಕದಾದ ಸಸ್ಯ ಇದ್ದರೆ ಅದು ಪೆಟುನಿಯಾಸ್. ಕನ್ನಡದಲ್ಲಿ ಗೊರಟೆ ಹೂವು ಎಂದು ಕರೆಯಲಾಗುತ್ತದೆ. ತುಂಬೆ ಹೂವಿನ ಜಾತಿಗೆ ಸಸೇರಿದ ಗಿಡ ಇದಾಗಿದ್ದು ಆ ಹೂವಿಗಿಂತ ದೊಡ್ಡದಾಗಿರುತ್ತದೆ.



Click it and Unblock the Notifications

