Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮನೆಯ ಅತ್ಯಂತ ಅಪಾಯಕಾರಿ ವಸ್ತುವೇ ಕುಕ್ಕರ್: ಈ ತಪ್ಪೆಂದು ಮಾಡಬೇಡಿ!
ಪ್ರತಿಯೊಂದು ಮನೆಯಲ್ಲು ಅದ್ರಲ್ಲೂ ಅಡುಗೆ ಮನೆಯಲ್ಲಿ ಹಲವು ವಸ್ತುಗಳನ್ನು ಕಾಲ ಕಾಲಕ್ಕೆ ಬದಲಾಯಿಸುವುದು ನೋಡಬಹುದು. ಅಪಾಯಕಾರಿ ಎನ್ನುವಂತಹ ಗ್ಯಾಸ್ ಪೈಪ್‌ಗಳು, ರೆಗ್ಯುಲೇಟರ್‌ಗಳು, ಹಾಗೆ ಆಗಾಗ ಹಾಳಾಗುವಂತಹ ಕೆಲ ವಸ್ತುಗಳನ್ನು ಬದಲಾಯಿಸುತ್ತಲೇ ಇರುತ್ತೀರಿ. ಆದ್ರೆ ಅಡುಗೆ ಮನೆಯಲ್ಲಿ ನೀವು ನಿತ್ಯ ಬಳಸುವಂತಹ ಪ್ರಶರ್ ಕುಕ್ಕರ್ ಯಾವಾಗ ಬದಲಾಯಿಸಬೇಕು ಅನ್ನೋದು ಗೊತ್ತಾ?
ಪ್ರಶರ್ ಕುಕ್ಕರ್ ಬಳಸಿಯೇ ಹಲವು ಖಾದ್ಯ ತಯಾರಾಗುತ್ತೆ. ಹಾಗೆ ಅನ್ನದಿಂದ ಹಿಡಿದು ಹಲವು ರೀತಿ ಸಾಂಬಾರ್ ಮಾಡಲು ಕುಕ್ಕರ್ ಬಳಸಿಯೇ ಬಳಸುತ್ತೇವೆ. ಆದ್ರೆ ಕುಕ್ಕರ್ ಯಾವಾಗ ಬದಲಾಯಿಸಬೇಕು ಅನ್ನೋದು ಯಾರಿಗೂ ತಿಳಿದಿರೋದಿಲ್ಲ. ಅದ್ರಲ್ಲೂ ಪ್ರಶರ್ ಕುಕ್ಕರ್ ಸಂಪೂರ್ಣವಾಗಿ ಹಾಳಾಗುವವರೆಗೂ ನಾವು ಬಳಸುತ್ತೇವೆ.

ಆದ್ರೆ ಪ್ರಶರ್ ಕುಕ್ಕರ್‌ಗೂ ಕೂಡ ಎಕ್ಸ್‌ಪೈರಿ ಡೇಟ್ ಇದ್ದೇ ಇರಲಿದೆ. ಹೌದು ನೀವು ಕೂಡ ಈ ಪ್ರಶರ್ ಕುಕ್ಕರ್ ಎಷ್ಟು ವರ್ಷ ಬಳಸಬೇಕು ಎಂಬುದನ್ನು ತಿಳಿದಿರಬೇಕು. ಹಲವರ ಮನೆಯಲ್ಲಿ 5 ವರ್ಷಕ್ಕೂ ಹೆಚ್ಚು ವರ್ಷದಿಂದ ಒಂದೇ ಕುಕ್ಕರ್ ಬಳಸಿರುತ್ತಾರೆ. ಆದ್ರೆ ಕುಕ್ಕರ್ ಕೂಡ ನಿಮಗೆ ಎಷ್ಟು ಹಾನಿ ತರಲಿದೆ ಎಂಬುದು ಗೊತ್ತಾ?
ನಾವು ಹಳೆಯ ಪ್ರಶರ್ ಕುಕ್ಕರ್ ಅನ್ನು ಹೆಚ್ಚು ಸಮಯ ಏಕೆ ಬಳಸಬಾರದು ಎಂಬುದನ್ನು ವಿವರಿಸುವ ಕ್ರೀಡೆ ಮತ್ತು ವ್ಯಾಯಾಮ ಔಷಧ ತಜ್ಞ ಡಾ. ಮನನ್ ವೋರಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಪ್ರೆಶರ್ ಕುಕ್ಕರ್ ತುಂಬಾ ಹಳೆಯದಾದಾಗ, ವಸ್ತುವಿನಿಂದ ಸಣ್ಣ ಪ್ರಮಾಣದ ಸೀಸವು ನಿಮ್ಮ ಆಹಾರಕ್ಕೆ ಸೋರಿಕೆಯಾಗಲು ಪ್ರಾರಂಭಿಸಬಹುದು. ಈ ಸೀಸದ ಅಂಶ ದೇಹ ಸೇರಿದರೆ ಅದರಿಂದ ಅನೇಕ ರೀತಿಯ ಹಾನಿ ಇದೆ. ಅದ್ರಲ್ಲೂ ನಿಧಾನವಾಗಿ ರಕ್ತ, ಮೂಳೆಗಳು ಮತ್ತು ಕಾಲಾನಂತರದಲ್ಲಿ ಮೆದುಳಿನಲ್ಲಿ ಸಂಗ್ರಹವಾಗಲು ಆರಂಭಿಸುತ್ತದೆ.
ಇದು ದೀರ್ಘಕಾಲದ ಸಮಸ್ಯೆಗಳನ್ನು ತರಲಿದೆ. ನರಮಂಡಲ ಪ್ರಕ್ರಿಯೆಗಳ ಮೇಲೆ ಇದರ ಹಾನಿ ಹೆಚ್ಚಾಗಿರಲಿದೆ. ಮೆದುಳಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಐಕ್ಯೂ ಮಟ್ಟವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಮಕ್ಕಳ ಮೇಲೆ ಇದು ವೇಗವಾಗಿ ಪರಿಣಾಮ ಬೀರಬಹುದು. ಅದ್ರಲ್ಲೂ ಮಕ್ಕಳ ನರಮಂಡಲ, ರಕ್ತನಾಳಗಳ ಹಾನಿ, ಆಯಾಸ ಆಗುವುದು, ಮೂಳೆಗಳ ನೋವು ಹೀಗೆ ಹಲವು ರೀತಿಯ ಅನಾರೋಗ್ಯಕ್ಕೆ ಇದು ಕಾರಣವಾಗಬಹುದು.
ಹಾಗಾದ್ರೆ ಕುಕ್ಕರ್ ಯಾವಾಗ ಬದಲಾಯಿಸಬೇಕು?
ನಿಮ್ಮ ಮನೆಯ ಕುಕ್ಕರ್ 10 ವರ್ಷವಾಗಿದ್ದರೆ ಈಗಾಗಲೇ ಅದರಿಂದ ನಿಮಗೆ ಸಮಸ್ಯೆ ಆಗುತ್ತಿರಬಹುದು. ಹಾಗೆ ಕುಕ್ಕರ್‌ನ ಒಳಗೆ ಗೆರೆಗಳು, ಕಪ್ಪು ಕಲೆಗಳು ಮೂಡಿದ್ದರೆ ಅಥವಾ ಕೆಂಪು ಬಣ್ಣದ ಕಲೆ ಇದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಇಂದು ವೇಳೆ ಕುಕ್ಕರ್ ಮುಚ್ಚಳ ಸರಿಯಾಗಿ ಕೂರದೆ ಇದ್ದರೆ ಅದರಿಂದ ಲೀಕೇಜ್ ಹೆಚ್ಚಾಗಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಹಾಗೆ ನಿಮ್ಮ ಕುಕ್ಕರ್‌ನಲ್ಲಿ ಮಾಡಿದ ಅಡುಗೆಯು ಲೋಹದ ವಾಸನೆಯಿಂದ ಕೂಡಿದ್ದರೆ, ಕಡಿಮೆ ಬೆಲೆಗೆ ಖರೀದಿಸಿ ತಂದಿದ್ದ ಕುಕ್ಕರ್ ಆಗಿದ್ದರೆ ಬಹಳ ಸಮಯ ಬಳಸುವುದು ಉತ್ತಮವಲ್ಲ.
ವೈದ್ಯರೊಬ್ಬರ ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಎಲ್ಲರು ಈ ಕುರಿತು ಮಾತನಾಡುತ್ತಿದ್ದಾರೆ, ಭಾರತದಲ್ಲಿ ಹಲವು ಮನೆಯಲ್ಲಿ ಕುಕ್ಕರ್ ಬದಲಿಸೇಕು ಎಂಬ ಆಲೋಚನೆಯೇ ಅವರಿಗೆ ಬಂದಿರುವುದಿಲ್ಲ. ಮುಖ್ಯವಾಗಿ ಅವರಲ್ಲಿ ಕುಕ್ಕರ್‌ನಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂಬ ಸಣ್ಣ ಪರಿಕಲ್ಪನೆ ಕೂಡ ಇರುವುದಿಲ್ಲ. ಹೀಗಿರುವಾಗ ಇಂತಹದೊಂದು ಮಾಹಿತಿ ಎಲ್ಲರಿಗೆ ತಲುಪಬೇಕಿದೆ. ಹಾಗಾದ್ರೆ ನಿಮ್ಮ ಮನೆಯಲ್ಲಿ ಬಳಸುತ್ತಿರುವ ಕುಕ್ಕರ್ ಎಷ್ಟು ವರ್ಷ ಹಳೆಯದಾಗಿದೆ? ಅದನ್ನು ಕೂಡ ಬದಲಾಯಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ.



Click it and Unblock the Notifications











