Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
6 ತಿಂಗಳ ಕಾಲ ಕರಿಬೇವು ಹಾಳಾಗದೆ ಇಡಬಹುದು..! ಇಲ್ಲಿದೆ ವಿಡಿಯೋ ಟಿಪ್ಸ್!
ಮನೆಯಲ್ಲಿ ಊಟಕ್ಕೆ ತಿಂಡಿಗೆ ಯಾವುದೇ ಖಾದ್ಯ ಮಾಡಬೇಕು ಅಂದ್ರು ಅಲ್ಲಿ ಕರಿಬೇವು ಇರಲೇಬೇಕು. ಕರಿಬೇವು ಇಲ್ಲದೆ ಮಾಡುವ ಅಡುಗೆ ರುಚಿಯೇ ಇರುವುದಿಲ್ಲ. ಹೀಗಾಗಿ ಯಾವುದಾದರು ಖಾದ್ಯ ರುಚಿಯಲ್ಲಿ ಘಮ ಘಮ ಅನ್ನಬೇಕು ಎಂದಾದರೆ ಕರಿಬೇವು ಹಾಕಲೇಬೇಕು.
ಸಾರಿಗೆ ಒಗ್ಗರಣೆ ಹಾಕುವಾಗ ಒಂದು 5-6 ಎಲೆ ಕರಿಬೇವು ಹಾಕಿದರೆ ಅದರ ರುಚಿ ಹೇಳಲಾಗದು. ಆದರೆ ಈ ಕರಿಬೇವು ಬರೀ ಅಡುಗೆ ರುಚಿ ಹೆಚ್ಚಿಸುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಕಾರಣದಿಂದಾಗಿ ಕರಿಬೇವು ಬಳಸುತ್ತೇವೆ. ಅದರಲ್ಲೂ ಈ ಕೆಳಗಿನ ಆರೋಗ್ಯ ಸಮಸ್ಯೆ ಇರುವವರು ಸ್ವಲ್ಪ ಕರಿಬೇವು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತಿಂದು ನೋಡಿ ಒಳ್ಳೆಯ ರಿಸಲ್ಟ್ ಕಾಣಬಹುದು.

ಆದ್ರೆ ಈಗಂತು ಮಾರುಕಟ್ಟೆಯಲ್ಲಿ ಸಿಗುವ ಕರಿಬೇವು ದುಬಾರಿಯಾಗುತ್ತಿದೆ. ಹಳ್ಳಿಗಳಲ್ಲಿ ಕೆಲವು ಕಡೆ ಮನೆಯಲ್ಲೇ ಈ ಗಿಡ ಬೆಳೆದಿರುತ್ತಾರೆ. ಆದರೆ ಬಹುತೇಕರು ಅಂಗಡಿಗಳಿಂದಲೇ ಖರೀದಿಸಿ ತರುತ್ತಾರೆ. ಆದ್ರೆ ಈ ಬೇಸಿಗೆಯ ದಿನದಲ್ಲಿ 2 ಅಥವಾ 3 ದಿನಗಳಲ್ಲೇ ಈ ಕರಿಬೇವು ಒಣಗಿ ಬಿಡುತ್ತವೆ. ಆದ್ರೆ ಫ್ರಿಡ್ಜ್‌ನಲ್ಲಿ ಇಟ್ಟರೆ ಕೆಲವು ದಿನ ಖಾದ್ಯ ಮಾಡುವಾಗ ಬಳಸಬಹುದು.
ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಈ ಕರಿಬೇವನ್ನು ಬರೋಬ್ಬರಿ 6 ತಿಂಗಳ ಕಾಲ ಇಡಬಹುದು ಎಂಬುದನ್ನು ವಿವರಿಸಲಾಗಿದೆ. ಹೌದು 6 ತಿಂಗಳ ಕಾಲ ಕರಿಬೇವು ಹಾಳಾಗದಂತೆ ಇಡಬಹುದು ಎಂಬುದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಹಾಗಾದ್ರೆ 6 ತಿಂಗಳ ಕರಿಬೇವು ಹಾಳಾಗದಂತೆ ಶೇಖರಿಸಿಡುವುದು ಹೇಗೆ?
ಮದುವೆ ಮನೆ ರುಚಿಯ ಎಲೆ ಕೋಸಿನ ಪಲ್ಯ ಮಾಡಿ ನೋಡಿ..!
ಇನ್ಸ್‌ಸ್ಟಾಗ್ರಾಮ್‌ನಲ್ಲಿ @twinsbymyside ಎಂಬ ಖಾತೆಯಲ್ಲಿ ಈ ಕುರಿತ ವಿಡಿಯೋ ಹಂಚಿಕೊಳ್ಳಲಾಗಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕರಿಬೇವಿನ ಎಲೆಗಳನ್ನು ಹೇಗೆ ಶೇಖರಿಸಿಡಬೇಕು ಎಂಬುದನ್ನ ವಿವರಿಸಲಾಗಿದೆ. ಹೌದು ವಿಡಿಯೋದಲ್ಲಿ ಕರಿಬೇವಿನ ಎಲೆಗಳನ್ನು ಮೊದಲು ಬಿಡಿಸಿಕೊಂಡು ಫ್ರಿಡ್ಜ್‌ನಲ್ಲಿಡಲು ಸಿದ್ಧಪಡಿಸುವುದನ್ನು ನೋಡಬಹುದು.
ಫ್ರಿಡ್ಜ್‌ನಲ್ಲಿ ಐಸ್ ಕ್ಯೂಬ್ ಮಾಡು ಟ್ರೇಯನ್ನು ಸ್ವಚ್ಛಗೊಳಿಸಿ ಅದರೊಳಗೆ ಕರಿಬೇವಿನ ಎಲೆಗಳ ಇಡಬೇಕು. ಬಳಿಕ ಅದಕ್ಕೆ ನೀರು ಹಾಕಿ ಡೀಪ್ ಫ್ರಿಡ್ಜ್‌ನಲ್ಲಿ ಇಟ್ಟು ಗಟ್ಟಿಯಾಗಲು ಬಿಡಬೇಕು. ಈ ರೀತಿ ಎಲೆಗಳು ಐಸ್ ಕ್ಯೂಬ್ ರಚನೆಯೊಳಗೆ ಸೇರಬೇಕಾದರೆ 4 ರಿಂದ 5 ಗಂಟೆ ಬಿಡಬೇಕು.
ಬಳಿಕ ಐಸ್ ಕರಿಬೇವಿನ ಎಲೆಗಳಿರುವ ಐಸ್ ಕ್ಯೂಬ್ ಅನ್ನು ಟ್ರೇನಿಂದ ತೆಗೆದು ಒಂದು ಪ್ಲಾಸ್ಟಿಕ್ ಕವರ್‌ನೊಳಗೆ ಹಾಕಿ ಅದನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿಡಬಹುದು. ಹೀಗೆ ಇಡುವುದರಿಂದ ಕರಿಬೇವು ಹಾಳಾಗದ 6 ತಿಂಗಳು ಇಡಬಹುದು. ನಿಮಗೆ ಕರಿಬೇವು ಬೇಕಾದರೆ ಈ ಜಿಪ್‌ಲಾಕ್ ಕವರ್‌ನಿಂದ ಐಸ್ ಕ್ಯೂಬ್ ತೆಗೆದು ನೀರಿನಲ್ಲಿ ಹಾಕಿ ಕರಗಲು ಬಿಟ್ಟರೆ ನಿಮ್ಮ ಕರಿಬೇವಿನ ಎಲೆಗಳು ಸಿಗುತ್ತವೆ. ಇದನ್ನು ಅಗತ್ಯವಿರುವ ಖಾದ್ಯಕ್ಕೆ ಹಾಕಿದರೆ ಆಯಿತು. ಈ ಐಡಿಯಾ ನೋಡಿ ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಅದರಲ್ಲೂ ಈ ಬಿಸಿ ತಾಪಮಾನದಲ್ಲಿ ಕರಿಬೇವಿನ ಎಲೆಗಳು ಬೇಗ ಹಳಾಗುವುದನ್ನು ಈ ಐಡಿಯಾ ಮೂಲಕ ಪರಿಹಾರ ಮಾಡಬಹುದು. ಇಷ್ಟೊಂದು ಸುಲಭವಾಗಿ ಕರಿಬೇವು ಹಾಳಾಗದಂತೆ ಇಡಬಹುದು ಎಂಬ ಐಡಿಯಾ ನೋಡಿ ಜನರೇ ಶಾಕ್ ಆಗಿದ್ದಾರೆ. ಇಷ್ಟ ದಿನವಾದರೂ ನಮಗೆ ಏಕೆ ಈ ಐಡಿಯಾ ಹೊಳೆಯಲಿಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ.
ಅನೇಕ ಬಳಕೆದಾರರು ಕಿಚನ್ ಹ್ಯಾಕ್ ಅನ್ನು ಹೊಗಳಿದ್ದಾರೆ. ನಾಳೆಯಿಂದ ನಾವು ಸಹ ಈ ಐಡಿಯಾ ಮಾಡಿ ಕರಿಬೇವು ಹಾಳಾಗಿ ಕಸದ ಬುಟ್ಟಿ ಸೇರುವುದನ್ನು ತಡೆಯುತ್ತೇವೆ ಎಂದಿದ್ದಾರೆ.



Click it and Unblock the Notifications
