Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಹಲ್ಲು ನೋವಿಗೆ ಮಾತ್ರೆ ತಿನ್ನೋದು ನಿಲ್ಲಿಸಿ; ಇಲ್ಲಿದೆ ಒಂದು ನಿಮಿಷದ ಪರಿಹಾರ
ಹಲ್ಲು ನೋವು ಹಲವು ಮಂದಿಗೆ ಕಾಡುವ ಅಸಹನೀಯ ನೋವಿನ ಸಮಸ್ಯೆ. ಒಸಡು ಸೋಂಕು, ಹಲ್ಲಿನ ಹುಣ್ಣು, ಹುಳುಕು ಹಲ್ಲು, ಹಲ್ಲು ಮುರಿತ, ಒಸಡು ನೋವಿನಂತಹ ಸಮಸ್ಯೆಗಳು ಯಾವಾಗಲು ಕಾಡುತ್ತಿರುತ್ತದೆ. ಇದಕ್ಕೆ ಹತ್ತು ಹಲವು ರೀತಿಯ ಕಾರಣಗಳನ್ನು ಪಟ್ಟಿ ಮಾಡಬಹುದು. ಇತ್ತೀಚಿಗೆ ಯುವ ಸಮುದಾಯ ಕೂಡ ಹಲ್ಲು ಮುರಿತ, ಕ್ಯಾವಿಟಿ, ಹುಳುಕು, ನೋವಿನಂತಹ ಸಮಸ್ಯೆಯಿಂದ ಬಳಲುತ್ತಾರೆ.
ಅದ್ರಲ್ಲೂ ಹುಳುಕು ಹಲ್ಲು ಕಾಣಿಸಿಕೊಳ್ಳುವುದು ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಹುಳುಕು ಹಲ್ಲುಗಳಿದ್ದರೆ ಅದನ್ನು ತೆಗೆಸಿ ಬೇರೆ ಹಲ್ಲುಗಳ ಹಾಕಿಸಬೇಕಾಗುತ್ತದೆ. ಹಾಗೆ ಹುಳುಕು ಹಲ್ಲುಗಳಿದ್ದರೆ ನೋವು ವಿಪರೀತವಾಗಿ ಕಾಡುತ್ತದೆ. ಸಿಹಿ ಸವಿದಾಗ, ಊಟ, ತಿಂಡಿ ಮಾಡಿದಾಗ, ಇಲ್ಲವೆ ರಾತ್ರಿಯ ಸಮಯದಲ್ಲಿ ಈ ನೋವು ಹೆಚ್ಚಾಗುವುದು ನೋಡಬಹುದು.

ಹುಳುಕು ಹಲ್ಲುಗಳಿದ್ದರೆ ಬಾಯಿ ದರ್ವಾಸನೆಯಿಂದ ಕೂಡಿರಲಿದೆ. ಹಾಗೆ ಎಲ್ಲಾ ಬಾಯಿಯ ಸಮಸ್ಯೆಯೂ ಇಲ್ಲಿಂದಲೇ ಆರಂಭವಾಗುತ್ತದೆ, ಹೀಗಾಗಿ ಹುಳುಕು ಹಲ್ಲುಗಳನ್ನು ನಿಯಂತ್ರಿಸುವುದು ಅಥವಾ ಅದನ್ನು ಗುಣಪಡಿಸಲು ದುಬಾರಿ ಚಿಕಿತ್ಸೆಗಳಿಗೆ ಒಳಗಾಗುವುದು ಸಹ ನಾವು ನೋಡಬಹುದು. ಹೆಚ್ಚು ಹುಳುಕಾದ ಹಲ್ಲುಗಳನ್ನು ತೆಗೆಸಿ ಹೊಸ ಹಲ್ಲುಗಳನ್ನು ಇಡುವುದು ಸಹ ಇದರ ಒಂದು ಭಾಗವಾಗಿದೆ.
ಈ ಹುಳುಕು ಹಲ್ಲುಗಳ ನಿವಾರಣೆಗೆ ಡೆಂಟಲ್ ಸಿಮೆಂಟ್ ಅಥವಾ ಪರ್ಯಾಯ ಡೆಂಟಲ್ ಇಂಪ್ಲಾಂಟ್ ಬಳಕೆ ಮಾಡಲಾಗುತ್ತದೆ. ಅದ್ರಲ್ಲೂ ಕೆಲವು ಬಾರಿ ಈ ನೋವು ತಡೆಯಲಾಗದೆ ಹಲವರು ನೋವು ನಿವಾರಕಗಳ ತೆಗೆದುಕೊಳ್ಳುವುದು ಹಾಗೆ ಹಲ್ಲು ಕೀಳಿಸುವುದು ಮಾಡುತ್ತಾರೆ. ಈ ರೀತಿಯ ಹಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹಲವು ರೀತಿಯ ಕ್ರಮಗಳ ನೀವು ಕೈಗೊಂಡಿರುತ್ತೀರಿ.
ಆದ್ರೆ ನಾವಿಂದು ಮನೆಯಲ್ಲಿ ಈ ಹಲ್ಲು ನೋವಿಗೆ ಸುಲಭದ ಮನೆ ಮದ್ದು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಇದರಿಂದ ಹಲ್ಲು ನೋವು ಕ್ಷಣ ಮಾತ್ರದಲ್ಲಿ ನಿವಾರಣೆಯಾಗಲಿದೆ. ಹಾಗಾದ್ರೆ ಮನೆಯಲ್ಲಿ ಹಲ್ಲು ನೋವಿಗೆ ಮದ್ದು ಮಾಡಿಕೊಳ್ಳುವುದು ಹೇಗೆ ನೋಡಿ.
ಹಲ್ಲು ನೋವಿಗೆ ಮಾಡಿ ಬೆಳ್ಳುಳ್ಳಿ ಅರಶಿಣ ಮನೆ ಮದ್ದು
ಮೊದಲಿಗೆ ಬೆಳ್ಳುಳ್ಳಿ ಸಿಪ್ಪೆಯನ್ನು ಚೆನ್ನಾಗಿ ಬಿಡಿಸಿಕೊಳ್ಳಿ. ನಂತರ ಇದನ್ನು ಕುಟಾಣಿಯಲ್ಲಿ ಅಥವಾ ಕಲ್ಲಿನ ಮೇಲೆ ಜಜ್ಜಿಕೊಳ್ಳಬೇಕು. ಇದನ್ನು ಮೆದು ಪೇಸ್ಟ್ ರೀತಿ ಮಾಡಿಕೊಂಡು ಬೌಲ್‌ಗೆ ಹಾಕಿಕೊಳ್ಳಿ. ಇದಕ್ಕೆ ಅರಶಿಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎರಡು ವಸ್ತುಗಳು ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿಕೊಳ್ಳಿ. ಈಗ ಸಣ್ಣ ಹತ್ತಿ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಈ ಬೆಳ್ಳುಳ್ಳಿ ಅರಶಿಣದ ಪೇಸ್ಟ್ ಅನ್ನು ಹಚ್ಚಿ ನಂತರ ನೋವಿರುವ ಅಥವಾ ಹುಳುಕು ಹಲ್ಲಿನ ಮೇಲೆ ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದ್ರೆ ತಕ್ಷಣ ನೋವಿನಿಂದ ಪಾರಾಗಬಹುದು.
ಈ ಎರಡು ವಸ್ತುಗಳಲ್ಲದೆ ಹಲವು ಮನೆ ಬಳಕೆಯ ವಸ್ತುಗಳಿಂದಲೂ ನಿಮ್ಮ ಹಲ್ಲು ನೋವು ನಿವಾರಿಸಬಹುದು. ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪನ್ನು ಬೆರೆಸಿ ನೋವಿರುವ ಹಲ್ಲಿನ ಮೇಲೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ. ಹಲ್ಲುಗಳ ಮಧ್ಯ ಹಸಿಶುಂಠಿಯ ತುಂಡನ್ನು ಇಟ್ಟುಕೊಂಡಿದ್ದರೆ ಹಲ್ಲು ನೋವು ನಿವಾರಣೆಯಾಗಲಿದೆ. ಹಾಗೆ ನೋವಿರುವ ಹಲ್ಲಿನ ಮೇಲೆ ಲವಂಗ ಇಟ್ಟುಕೊಳ್ಳುವುದು ಕೂಡ ನೋವಿನಿಂದ
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications
