Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಹಲ್ಲು ನೋವು, ಹುಳುಕು, ವಸಡು ನೋವಿಗೆ ಇಲ್ಲಿದೆ ಪರಿಹಾರ..! ಇಷ್ಟು ಮಾಡಿದ್ರೆ ಸಾಕು!!
ನಾವು ನಮ್ಮ ದೇಹದ ಆರೋಗ್ಯ ಎಷ್ಟು ಪ್ರಾಮುಖ್ಯತೆ ನೀಡುತ್ತೇವೋ ಹಲ್ಲಿನ ಆರೋಗ್ಯ ಕೂಡ ಅಷ್ಟೇ ಮುಖ್ಯ, ಮುಖದ ಅಂದ ಹೆಚ್ಚಿಸುವ ಅಂಶದಲ್ಲಿ ಈ ಹಲ್ಲುಗಳ ಪಾತ್ರವೂ ಇದೆ. ಆದರೆ ಹಲ್ಲಿನ ಆರೋಗ್ಯ ಕಾಪಾಡುವುದು ಬಹಳ ಕಷ್ಟ. ಏಕೆಂದರೆ ಆಗಾಗ ಹಲ್ಲು ನೋವು ಕಾಡುವುದು ಒಸಡಿನಲ್ಲಿ ರಕ್ತ ಬರುವುದು, ಹಲ್ಲು ಹಳದಿಯಾಗುವುದು ಇಂತಹ ಕೆಲವು ಸಮಸ್ಯೆ ನೋಡಬಹುದು.
ಹಲ್ಲಿನ ಈ ಸಮಸ್ಯೆಗಳಿಗೆ ನಾವು ಎಷ್ಟೊಂದು ಪರಿಹಾರ ಮಾಡುತ್ತೇವೆ. ಟೂತ್ ಪೇಸ್ಟ್ ಇಂದ ಹಿಡಿದು ಹಲ್ಲುಗಳ ರಕ್ಷಣೆಗೆ ನಾವು ಏನೆಲ್ಲಾ ಮಾಡುತ್ತೇವೆ. ಹಲ್ಲುಗಳು ಬಿಳಿಯಾಗಿ ಕಾಣಿಸಬೇಕು ಎಂಬ ಕಾರಣಕ್ಕೆ ರೂಟ್ ಕೆನಾಲ್ ಸೇರಿ ಹಲವು ಚಿಕಿತ್ಸೆಗೂ ಮುಂದಾಗುತ್ತೇವೆ. ಹಲ್ಲಿನ ಒಸಡಿನಲ್ಲಿ ರಕ್ತ ಬಂದರೆ ಅದನ್ನು ತಡೆಯುವ ಉದ್ದೇಶದಿಂದ ನಾವು ಹಲವು ರೀತಿಯ ಚಿಕಿತ್ಸೆಗೆ ಒಳಗಾಗುತ್ತೇವೆ.

ಆದ್ರೆ ನಾವಿಂದು ಹಲ್ಲಿನ ಯಾವುದೇ ಸಮಸ್ಯೆ ಇದ್ದರೂ ಕೂಡ ಮನೆಯಲ್ಲೇ ಪರಿಹಾರ ಕಂಡುಕೊಳ್ಳುವ ಕುರಿತು ತಿಳಿದುಕೊಳ್ಳೋಣ. ಹೌದು ಮನೆಯಲ್ಲಿ ನಿಮ್ಮ ಹಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಅದರಲ್ಲೂ ನಾವು ಒಂದು ಗಿಡಮೂಲಿಕೆಯಿಂದ ಎಲ್ಲಾ ಸಮಸ್ಯೆಗಳ ದೂರ ಮಾಡಬಹುದು. ಪುರಾತನ ಕಾಲದಿಂದಲೂ ಈ ಗಿಡಮೂಲಿಕೆಯೊಂದಿಗೆ ನಮ್ಮ ಆರೋಗ್ಯಕ್ಕೆ ನಂಟಿದೆ. ಹೀಗಾಗಿ ಯಾವುದೇ ಅಡ್ಡಪರಿಣಾಮವಿಲ್ಲದೆ ಈ ಗಿಡಮೂಲಿಕೆ ಔಷಧಿ ಟ್ರೈ ಮಾಡಬಹುದು.
ಕೆಲವೊಮ್ಮೆ ನಮ್ಮ ಹಲ್ಲು ನೋವು ವಿಪರೀತ ಹಿಂಸೆ ನೀಡುತ್ತದೆ. ಹಲ್ಲು ನೋವಿನಿಂದ ಬಳಲುತ್ತಿದ್ದರೆ ಇಡೀ ದಿನ ಹಾಳಾಗುತ್ತದೆ. ಹಾಗೆ ಹಲ್ಲು ನೋವು ವಿಪರೀತ ಆದರೆ ತಲೆ ನೋವಿಗೂ ಕಾರಣವಾಗುತ್ತದೆ. ಹಾಗಾದ್ರೆ ಮನೆಯಲ್ಲಿಯೇ ಯಾವ ಗಿಡಮೂಲಿಕೆ ನಮ್ಮ ಹಲ್ಲು ನೋವಿಗೆ ಪರಿಹಾರ ನೀಡಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಮೊದಲು ಮನೆಯಲ್ಲಿರುವ ಅರಶಿಣ ಕೊಂಬು ತೆಗೆದುಕೊಳ್ಳಿ. ಅಂಗಡಿಯಲ್ಲೂ ಇದು ಸಿಗುತ್ತದೆ. ಒಂದು ಬೆರಳಿನ ಉದ್ದವಾದ ಅರಶಿಣ ಕೊಂಬು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಅಥವಾ ಗ್ಯಾಸ್ ಮೇಲೆ ಇಟ್ಟು ಸುಡಬೇಕು. ಅದು ಸಂಪೂರ್ಣ ಕಪ್ಪಾಗಿ ಕೆಂಡದಂತಾಗುತ್ತದೆ. ಆಗ ಇದನ್ನು ತಣ್ಣಗಾಗಲು ಬಿಟ್ಟು ಪುಡಿ ಪುಡಿ ಮಾಡಿಕೊಳ್ಳಬೇಕು.
ಹಾಗೆ ಪುಡಿ ಮಾಡುವಾಗ ಅದಕ್ಕೆ ಸ್ವಲ್ಪ ಉಪ್ಪು ಕೂಡ ಹಾಕಿಕೊಂಡು ಜಜ್ಜಿಕೊಳ್ಳಿ. ಇದರಿಂದ ದಿನ ಬೆಳಗ್ಗೆ ಹಲ್ಲು ಉಜ್ಜುವುದರಿಂದ ಹಲ್ಲು ಗಟ್ಟಿಯಾಗುತ್ತವೆ. ಹಾಗೆ ಒಸಡಿನ ಸಮಸ್ಯೆಗಳು ಬಗೆಹರಿಯುತ್ತದೆ.
ನಿಮ್ಮ ಹಲ್ಲು ಹಳದಿ ಬಣ್ಣಕ್ಕೆ ತಿರುಗಿದ್ದರೆ ಎರಡರಿಂದ ಮೂರು ಪಲಾವ್ ಎಲೆಯನ್ನ ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ನಿತ್ಯ ಬೆಳಗ್ಗೆ ಇದರಿಂದ ಹಲ್ಲು ಉಜ್ಜುವುದರಿಂದ ಹಲ್ಲು ಬಿಳಿಯಾಗುತ್ತದೆ. ಸುಮಾರು 1 ವಾರ ಈ ರೀತಿ ಹಲ್ಲುಜ್ಜಿದರೆ ಹಳದಿ ನಿವಾರಣೆಯಾಗುತ್ತದೆ. ಉಪ್ಪು ಮತ್ತು ಬೇಕಿಂಗ್ ಸೋಡಾವನ್ನು ಮಿಶ್ರಣ ಮಾಡಿ ಮತ್ತು ಈ ಮಿಶ್ರಣವನ್ನು ಟೂತ್ ಬ್ರಷ್ ಮೂಲಕ ಬಳಸಿ ಹಲ್ಲುಗಳನ್ನು ಸ್ಕ್ರಬ್ ಮಾಡಿ. ಹದವಾಗಿ ಬೆಚ್ಚಗಿರುವ ನೀರನ್ನು ಬಳಸಿ ಬಾಯಿಯನ್ನು ತೊಳೆಯಿರಿ. ಹೀಗೆ ಹಲವು ದಿನಗಳ ಕಾಲ ಮಾಡಿ ನೋಡಿ.
ಹಾಗೆ ನಿಮ್ಮ ಒಸಡಿನಲ್ಲಿ ವಿಪರೀತ ನೋವು, ಉಬ್ಬಿಕೊಳ್ಳುವುದು, ರಕ್ತ ಬರುವುದು ನಡೆಯುತ್ತಿದ್ದರೆ ನೀವು ನೇರಳೆ ಮರದ ಚಿಗುರು ಎಲೆಯನ್ನು ಜಗಿದು ಉಗಿಯಬೇಕು. ಇದರಿಂದ ನಿಮ್ಮ ಹಲ್ಲಿನ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಫ್ಲೋರೈಡ್ ಟೂತ್ ಪೇಸ್ಟ್ ಗಳು ಹಲ್ಲುಗಳಲ್ಲಿನ ಫ್ಲೋರೈಡ್ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅವುಗಳನ್ನು ಬಲಪಡಿಸುತ್ತದೆ ಮತ್ತು ಹಲ್ಲಿನ ಹುಳುಕನ್ನು ತಡೆಯುವುದಕ್ಕೆ ನೆರವು ನೀಡುತ್ತದೆ.



Click it and Unblock the Notifications
