Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸ್ವಾತಂತ್ರೋತ್ಸವದ ಅಲಂಕಾರಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್!
ಸ್ವಾತಂತ್ರೋತ್ಸವ ಅಂದ್ರೆ ಪ್ರತಿಯೊಬ್ಬರಲ್ಲೂ ಒಂದು ರೀತಿಯ ಖುಷಿ ಸಂತೋಷ ಇದ್ದೇ ಇರುತ್ತೆ. ಆ ದಿನ ನಮ್ಮ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ವೀರರನ್ನು ನೆನೆಯುತ್ತೇವೆ. ಅದ್ರಲ್ಲೂ ಈ ದಿನ ಮಕ್ಕಳಿಗೆ ಒಂದು ರೀತಿಯ ಸಂಭ್ರಮ ಹೆಚ್ಚಾಗಿರುತ್ತದೆ. ಸಿಹಿ ತಿಂಡಿ ತಿಂದು ಸಂತಸವನ್ನು ಹಂಚಿಕೊಳ್ಳುತ್ತಾರೆ.

ಸ್ವತಂತ್ರೋತ್ಸದ ದಿನ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ಆ ದಿನದ ಹೈಲೆಟ್ ಆಗಿರುತ್ತೆ. ಆ ದಿನ ಈ ಮೂರು ಬಣ್ಣಗಳಿಂದ ಮನೆ, ಆಫೀಸ್ ಹಾಗೂ ಶಾಲೆಗಳಲ್ಲಿ ಅಲಂಕಾರ ಮಾಡಲಾಗುತ್ತದೆ. ಆದರೆ ಹೆಚ್ಚಿನವರಿಗೆ ಯಾವ ರೀತಿ ಅಲಂಕಾರ ಮಾಡ್ಬೇಕು ಅಂತ ಗೊತ್ತಿರೋದಿಲ್ಲ. ಹೀಗಾಗಿ ಸ್ವತಂತ್ರೋತ್ಸದ ದಿನ ಅಲಂಕಾರಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್..
1. ಕೃತಕ ಸಸ್ಯಗಳಿಂದ ಅಲಂಕರಿಸಿ
ಆನ್ ಲೈನ್ ನಲ್ಲಿ ಬಣ್ಣ ಬಣ್ಣದ ಕೃತಕ ಸಸ್ಯಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತದೆ. ಇವುಗಳು ನೋಡೋದಕ್ಕೂ ಕೂಡ ತುಂಬಾನೇ ಸುಂದರವಾಗಿರುತ್ತದೆ. ಇಂತಹ ಸಸ್ಯಗಳನ್ನು ತರಿಸಿಕೊಂಡು ಕೇಸರಿ, ಬಳಿ ಹಾಗೂ ಹಸಿರು ಬಣ್ಣದಲ್ಲಿ ಜೋಡಿಸಿರಿ. ನೋಡೋದಕ್ಕೂ ಕೂಡ ಇವುಗಳು ತುಂಬಾನೇ ಆಕರ್ಷಕವಾಗಿ ಇರುತ್ತದೆ.
2. ಪೇಪರ್ ನಿಂದ ಆಕರ್ಷಕ ತಿರಂಗ
ಪೇಪರ್ ನಿಂದ ನಾವು ಆಕರ್ಷಕ ತಿರಂಗಗಳನ್ನು ರಚಿಸಬಹುದು. ಇದು ನೋಡೋದಕ್ಕೆ ತುಂಬಾನೇ ಚೆನ್ನಾಗಿ ಇರುತ್ತದೆ. ಹಾಗೂ ಕಡಿಮೆ ಖರ್ಚಿನಲ್ಲಿ ಮಾಬಹುದು. ಒಂದು ಬಿಳಿಹಾಳೆಯಲ್ಲಿ ವಿವಿಧ ವಿನ್ಯಾಸವನ್ನು ರಚಿಸಿ ಅದಕ್ಕೆ ಕೇಸರಿ, ಬಿಳಿ, ಹಸಿರು ಹಾಗೂ ಮಧ್ಯ ನೀಲಿ ಬಣ್ಣವನ್ನು ಹಚ್ಚಿ. ಮಕ್ಕಳು ಈ ರೀತಿಯ ಕ್ರಾಫ್ಟ್ ಅನ್ನು ಇಷ್ಟ ಪಟ್ಟು ಮಾಡುತ್ತಾರೆ.
3. ತಿರಂಗದ ಡ್ರೀಮ್ ಕ್ಯಾಚರ್
ಡ್ರೀಮ್ ಕ್ಯಾಚರ್ ಗಳನ್ನು ನಾವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನೋಡಿರ್ತೀವಿ. ಅದೇ ರೀತಿ ಸ್ವಾತಂತ್ರೋತ್ಸದ ದಿನ ನಾವು ತಿರಂಗದ ಡ್ರೀಮ್ ಕ್ಯಾಚರ್ ಅನ್ನು ತಯಾರು ಮಾಡಬಹುದು. ಇದು ನೋಡೋದಕ್ಕೆ ಆಕರ್ಷಕವಾಗಿರುತ್ತದೆ. ಒಂದು ವೇಳೆ ಇದನ್ನು ತಯಾರಿಸುವುದು ನಿಮಗೆ ಕಷ್ಟವಾದರೆ ಆನ್ ಲೈನ್ ನಿಂದ ತರಿಸಿಕೊಳ್ಳಬಹುದು. ಗುಣಮಟ್ಟವೂ ಚೆನ್ನಾಗಿರುತ್ತದೆ. ಹಾಗೂ ಬೇಗ ಹಾಳಾಗುವುದು ಇಲ್ಲ.
4. ತಿರಂಗದ ಬ್ಯಾನರ್ ತಯಾರಿಸಿ
ಸಾಮಾನ್ಯವಾಗಿ ನಾವು ಬ್ಯಾನರ್ ಗಳನ್ನು ತಯಾರು ಮಾಡುವ ರೀತಿಯಲ್ಲಿಯೇ ತಿರಂಗದ ಬ್ಯಾನರ್ ಗಳನ್ನು ಸುಲಭವಾಗಿ ರಚಿಸಬಹುದು. ಈ ಬ್ಯಾನರ್ ನಲ್ಲಿ ಸ್ವಾತಂತ್ರೋತ್ಸದ ಶುಭಾಷಯವನ್ನು ಬರೆಯಬೇಕು. ಜೊತೆಗೆ ಸ್ವತಂತ್ರಕ್ಕಾಗಿ ಹೋರಾಡಿದವರ ಚಿತ್ರವನ್ನು ಅಲ್ಲಿ ಲಗತ್ತಿಸಬಹುದು. ಈ ರೀತಿ ಮಾಡಿದ್ರೆ ಕೂಡ ನೋಡೋದಕ್ಕೆ ಆಕರ್ಷಕವಾಗಿರುತ್ತದೆ.
ಈ ರೀತಿ ವಿಶೇಷ ಐಡಿಯಾಗಳ ಮೂಲಕ ನೀವು ಸ್ವಾತಂತ್ರೋತ್ಸವದ ದಿನ ತುಂಬಾನೇ ವಿಭಿನ್ನವಾಗಿ ಅಲಂಕಾರ ಮಾಡಬಹುದು.



Click it and Unblock the Notifications