Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಇಡೀ ಮನೆಗೆ ಬೇಕಾದ ಚಪಾತಿ 1 ನಿಮಿಷದಲ್ಲಿ ರೆಡಿ..! ಈ ಟ್ರಿಕ್ಸ್ ನಿಮಗೆ ಗೊತ್ತಾ?
ನೀವು ಅಡುಗೆ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ? ಈ ರೀತಿ ಕೇಳಿದ್ರೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡುತ್ತಾರೆ. ಕೆಲವರು ಕಡಿಮೆ ಸಮಯದಲ್ಲಿ ಅಡುಗೆ ಕೆಲಸಗಳ ಮುಗಿಸಿದ್ರೆ ಮತ್ತೆ ಕೆಲವರು ಇಡೀ ದಿನ ಅಡುಗೆ ಮನೆಯಲ್ಲಿರುತ್ತಾರೆ. ಅಡುಗೆಗೂ ಕೂಡ ಒಂದಿಷ್ಟು ಸಮಯ ಹಿಡಿಯೋದು ಕಾಮನ್ ಆದ್ರೆ ಸುಲಭವಾಗಿ ಅದೇ ಕೆಲಸವನ್ನು ಮಾಡಿ ಮುಗಿಸಬಹುದಾಗಿದೆ.
ಕೆಲವರು ಬೆಳಗ್ಗೆ ತಿಂಡಿಗೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಸಮಯ ಕಳೆಯುತ್ತಾರೆ, ಬಳಿಕ ಗಡಿಬಿಡಿಯಲ್ಲಿ ತೋಚಿದನ್ನು ಮಾಡುತ್ತಾರೆ. ಮತ್ತೆ ಕೆಲವರು ಹಿಂದಿನ ದಿನವೇ ಬೆಳಗ್ಗೆ ತಿಂಡಿಗೆ ಏನು ಮಾಡಬೇಕು ಎಂಬುದನ್ನು ಮೊದಲೇ ತಯಾರಿ ನಡೆಸಿ ಸುಲಭವಾಗಿ ಬೆಳಗ್ಗೆ ತಿಂಡಿಯ ಕೆಲಸ ಮಾಡಿ ಬಿಡುತ್ತಾರೆ. ಕೆಲವೊಂದು ತಿಂಡಿ ಮಾಡುವುದು ಕೂಡ ಸುಲಭ.

ಅದರಲ್ಲೂ ಚಪಾತಿಯನ್ನು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿ ಮಾಡಬಹುದು. ಹೀಗಾಗಿ ಗಡಿಬಿಡಿಯಲ್ಲಿದ್ದಾಗ ಥಟ್ ಎಂದು ಚಪಾತಿ ನೆನಪಾಗುತ್ತೆ. ಹಾಗೆ ಅದನ್ನು ಮಾಡಿ ಮುಗಿಸಲು ಕೆಲವೆ ನಿಮಿಷಗಳು ಸಾಕಾಗುತ್ತವೆ. ಆದ್ರೆ ಈ ಚಪಾತಿಯನ್ನು ಮಾಡುವ ಹೊಸ ಹೊಸ ವಿಧಾನ ನಿಮಗೆ ತಿಳಿದರೆ ನಿಮಿಷದಲ್ಲಿ ಇಡೀ ಮನೆಗೆ ಬೇಕಾದ ಚಪಾತಿ ಮಾಡಿ ಮುಗಿಸುತ್ತೀರಿ.
ಈಗ ಗೃಹಿಣಿಯರ ಪ್ರತಿಯೊಂದು ಕೆಲಸಕ್ಕೂ ಒಂದೊಂದು ಯಂತ್ರ ಬಂದಿರುವಂತೆ ಈ ಚಪಾತಿಗೂ ಮಾಡಲು ಕೂಡ ಒಂದಿಷ್ಟು ಯಂತ್ರಗಳಿವೆ. ನೀವು ಹಿಟ್ಟು ರೆಡಿ ಮಾಡಿಕೊಂಡರೆ ಸುಲಭವಾಗಿ ಅಚ್ಚು ಒತ್ತಿ ಚಪಾತಿ ರೆಡಿ ಮಾಡಬಹುದು. ಆದ್ರೆ ಯಂತ್ರಗಳೇ ಇಲ್ಲ ಎಂದರೂ ಕೂಡ ಚಪಾತಿಯನ್ನು ಕೆಲವೇ ನಿಮಿಷದಲ್ಲಿ ಮಾಡಿ ಮುಗಿಸಬಹುದು.
ಇಲ್ಲೊಂದು ವಿಡಿಯೋದಲ್ಲಿ ಮಹಿಯೊಬ್ಬರು ಸುಲಭವಾಗಿ ಅತಿ ಕಡಿಮೆ ಸಮಯದಲ್ಲಿ ಚಪಾತಿ ಮಾಡುವುದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಐಡಿಯಾ ಇಷ್ಟು ಗೊತ್ತಿಲ್ಲದೆ ಅದೆಷ್ಟೋ ಮಂದಿ ಅಚ್ಚರಿ ಹೊರಹಾಕಿದ್ದಾರೆ. ವಿಡಿಯೋದಲ್ಲಿ ಮಹಿಳೆ ಸುಲಭವಾಗಿ ಇಡೀ ಮನೆಗೆ ಒಂದೇ ಬಾರಿಗೆ ಚಪಾತಿ ಮಾಡುವ ಟ್ರಿಕ್ಸ್ ತಿಳಿಸಿದ್ದಾಳೆ.
ವಿಡಿಯೋದಲ್ಲಿ ಏನಿದೆ?
ಮಹಿಳೆ ಮನೆಯಲ್ಲಿ ಚಪಾತಿ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಆದ್ರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಮಾಡುವಂತೆ ಆ ಮಹಿಳೆ ಚಪಾತಿಯನ್ನು ಒಂದೊಂದಾಗಿ ಮಾಡುತ್ತಿಲ್ಲ ಬದಲಾಗಿ ಒಂದೇ ಬಾರಿಗೆ ಹಲವು ಚಪಾತಿಗಳ ಮಾಡುವುದು ವಿಡಿಯೋದಲ್ಲಿ ನೋಡಬಹುದು, ಈ ಟ್ರಿಕ್ಸ್ ನೋಡಿದ್ರೆ ನಿಮಗೂ ಅಚ್ಚರಿಯಾಗಬಹುದು. ಇಷ್ಟ ದಿನದಿಂದ ಚಪಾತಿ ಮಾಡಲು ಗಂಟೆಗಳ ಕಾಲ ನೀವು ಅಡುಗೆ ಮನೆಯಲ್ಲಿರುತ್ತಿದ್ರಿ, ಆದ್ರೆ ಈ ಮಹಿಳೆ ನಿಮಿಷದಲ್ಲಿ 5ರಿಂದ 6 ಚಪಾತಿ ಮಾಡುತ್ತಿದ್ದಾಳೆ.
ಆಕೆ ಹದ ಮಾಡಿಕೊಂಡ ಎಲ್ಲಾ ಹಿಟ್ಟನ್ನು ಒಂದೇ ಬಾರಿಗೆ ದೊಡ್ಡ ಕೋಲಿನ ಸಹಾಯದಿಂದ ಒತ್ತಿಕೊಳ್ಳುತ್ತಿದ್ದಾಳೆ. ಹಾಗೆ ಒಂದು ಟಿಫಿನ್ ಬಾಕ್ಸ್‌ನ ಸಹಾಯದಿಂದ ಒಂದೇ ಗಾತ್ರದ 5ರಿಂದ 6 ಚಪಾತಿಗಳನ್ನು ಒತ್ತಿ ಅದರಿಂದ ತೆಗೆಯುತ್ತಾಳೆ. ಹಾಗೆ ಉಳಿದ ಹಿಟ್ಟನ್ನು ಮತ್ತೆ ಒಂದು ಬೌಲ್‌ಗೆ ಹಾಕಿ ಮುಂದೆ ಅದರಿಂದಲೂ ಚಪಾತಿ ಮಾಡಲು ಬಳಸುತ್ತಾಳೆ. ಇಲ್ಲಿ ನಿಮಿಷದಲ್ಲಿ ಚಪಾತಿ ರೆಡಿ ಆಗುವುದು ನೋಡಬಹುದು. ಈ ರೀತಿ ಪ್ಲಾನ್ ಮಾಡಿದ್ರೆ ಮನೆ ಮಂದಿಗೆಲ್ಲಾ ಸುಲಭವಾಗಿ ಕಡಿಮೆ ಸಮಯದಲ್ಲಿ ಚಪಾತಿ ಸವಿಯಲು ನೀಡಬಹುದು.
ನೀವು ಕೂಡ ಇಂತಹ ಟ್ರಿಕ್ಸ್‌ನ ಸಹಾಯದಿಂದ ಚಪಾತಿ ಮಾಡುವುದನ್ನು ಕಲಿಯಿರಿ ಹಾಗೆ ಒಂದಿಷ್ಟು ಸಮಯ, ಶ್ರಮ ಉಳಿಸಬಹುದು. ಇದರಿಂದ ಹಲವರಿಗೆ ಸಹಾಯವಾಗುವುದಂತು ಖಚಿತ. ಸದ್ಯ ಈ ಮಹಿಳೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications
