Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡೀ ಮನೆಯಲ್ಲಿ ಒಂದೂ ಕೀಟ ಇರದಂತೆ ಮಾಡಲು ಇಲ್ಲದೆ 8 ಟಿಪ್ಸ್..!!
ಚಳಿಗಾಲದಲ್ಲಿ ಅಡುಗೆ ಮನೆಯಲ್ಲಿ ನೀವು ಹೆಚ್ಚಾಗಿ ಕೀಟಗಳು, ಹುಳುಗಳಿರುವುದು ನೋಡಬಹುದು. ಮನೆಯಲ್ಲಿರುವ ತರಕಾರಿಯಿಂದ ಹಿಡಿದು ಯಾವುದಾದರು ತಿನ್ನುವ ವಸ್ತುಗಳ ಮೇಲೂ ಕೀಟಗಳು ಕಾಣಿಸುತ್ತವೆ. ಚಳಿಗಾಲದಲ್ಲಿ ಬೆಚ್ಚನೆಯ ಜಾಗ ಹುಡುಕುವ ಹುಳುಗಳು ಮನೆಯೊಳಗೆ ಸೇರಿಬಿಡುತ್ತವೆ. ಇದು ಅನೇಕ ರೀತಿ ಸಮಸ್ಯೆಗಳ ತರಲು ಕಾರಣವಾಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇವುಗಳಿಂದ ಆರಂಭವಾಗಬಹುದು.
ಈ ಕೀಟಗಳ ನಿವಾರಣೆಗೆಂದೇ ಮಾರುಕಟ್ಟೆಯಲ್ಲಿ ಈಗ ಹತ್ತು ಹಲವು ಪ್ರಾಡಕ್ಟ್‌ಗಳು ಬಂದಿವೆ. ಈ ಉತ್ಪನ್ನಗಳು ಹೆಚ್ಚಾಗಿ ರಾಸಾಯನಿಕಗಳಿಂದ ಕೂಡಿರುತ್ತವೆ. ಇವು ಕೀಟಗಳ ನಿವಾರಣೆಯನ್ನ ಪ್ರಭಾವಶಾಲಿಯಾಗಿ ನಿರ್ಮೂಲನೆ ಮಾಡುತ್ತವೆ, ಆದ್ರೆ ಇದರಿಂದ ನಮ್ಮ ಆರೋಗ್ಯಕ್ಕೂ ಕೂಡ ಅಷ್ಟೇ ಹಾನಿ ಇದೆ.

ರೂಮ್ ಫ್ರೆಶ್ನರ್‌ಯಿಂದ ಹಿಡಿದು ಸೊಳ್ಳೆಗೆಂದು ನಾವು ಹಚ್ಚುವ ರಾಸಾಯನಿಕಯುಕ್ತ ಬತ್ತಿಗಳು ಕೂಡ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ. ಮನೆಯ ಒಳಗೆ ಕೀಟಗಳಿದ್ದರೆ ಮಾತ್ರ ನಾವು ಇದನ್ನೆಲ್ಲಾ ಬಳಸಬೇಕಾದ ಅನಿವಾರ್ಯತೆ ಬರಲಿದೆ. ಆದ್ರೆ ಮನೆಯೊಳಗೆ ಕೀಟಗಳೇ ಬಾರದಂತೆ ಮಾಡಿದರೆ ಇದಕ್ಕೆ ಹಣ ವ್ಯಯಿಸುವ ಪ್ರಮೇಯವೇ ಬರುವುದಿಲ್ಲ.
ಕೀಟಗಳು ಮನೆಯೊಳಗೆ ಸೇರದಂತೆ ಮಾಡಲು ಕೆಲವು ನೈಸರ್ಗಿಕ ವಸ್ತುಗಳನ್ನೇ ಬಳಸಿ ನಾವಿಂದು ಪರಿಹಾರ ಕಾರ್ಯ ಮಾಡುವುದನ್ನು ತಿಳಿದುಕೊಳ್ಳೋಣ. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯೂ ಇಲ್ಲ. ಹಾಗೆ ಕೀಟಗಳನ್ನು ಇನ್ನೆಂದು ನಿಮ್ಮ ಮನೆಯಲ್ಲಿ ಸುಳಿದಾಡುವುದಿಲ್ಲ. ಅಂತಹ ಕೆಲವು ಟಿಪ್ಸ್ ಇಲ್ಲಿ ನೀಡಲಾಗಿದೆ.
ಲವಂಗಗಳು
ಲವಂಗವು ನೈಸರ್ಗಿಕ ಕೀಟ ನಿವಾರಕ ಅಂಶವಾದ ಯುಜೆನಾಲ್‌ನಿಂದ ಕೂಡಿದೆ. ಹೀಗಾಗಿ ಲವಂಗವನ್ನು ಜಜ್ಜಿ ಕೀಟಗಳಿರುವ ಕಡೆ ಅಥವಾ ಕೀಟಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗದಲ್ಲಿ ಇಡಬೇಕು. ಇದರ ಆರೊಮ್ಯಾಟಿಕ್ ಪರಿಮಳವು ಕೀಟಗಳನ್ನು ದೂರ ಮಾಡುತ್ತದೆ. ಮನೆಯೊಳಗೆ ಕೀಟಗಳು ಸುಳಿಯದಂತೆ ಮಾಡಲು ಇದೊಂದು ಒಳ್ಳೆಯ ಉಪಾಯವಾಗಲಿದೆ. ಅದರಲ್ಲು ಜಿರಿಳೆ ಹಾಗೂ ಸೊಳ್ಳೆಗಳಿಗೆ ಇದರ ಸುವಾಸನೆಯು ತಡೆಯಲಾಗದೆ ಅವು ನಿಮ್ಮ ಮನೆ ಸುತ್ತವು ಸುಳಿಯುವುದಿಲ್ಲ.
ಬೆಳ್ಳುಳ್ಳಿ
ಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳ ಹೊಂದಿರುವ ಬೆಳ್ಳುಳ್ಳಿಯು ಅಸಾಧಾರಣ ಕೀಟ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ನೀರಿನೊಂದಿಗೆ ಬೆರೆಸಿ ಮತ್ತು ಮಿಶ್ರಣವನ್ನು ನೆನೆಸಿಟ್ಟು ಅದನ್ನು ಸ್ಪ್ರೇಯಾಗಿ ಬಳಸಿದರೆ ಸೊಳ್ಳೆಗಳಿಂದ ಹಿಡಿದು ಯಾವುದೇ ಕೀಟವು ನಿಮ್ಮ ಬಳಿ ಸುಳಿಯುವುದಿಲ್ಲ.
ನಿಂಬೆ
ನಿಂಬೆ ರಸದ ತೀಕ್ಷ್ಣವಾದ ಪರಿಮಳವು ಪ್ರಬಲ ಕೀಟ ನಾಶಕವಾಗಿದೆ. ಸೊಳ್ಳೆಗಳಿಂದ ರಕ್ಷಣೆಗಾಗಿ ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಹಾಗೆ ಕತ್ತರಿಸಿರುವ ನಿಂಬೆಯನ್ನು ಮನೆಯ ಮೂಲೆ ಮೂಲೆಯಲ್ಲಿ ಇಡುವುದು ಕೂಡ ಕೀಟಗಳ ನಿವಾರಣೆಗೆ ಸಹಕಾರಿಯಾಗಲಿದೆ. ಈ ನಿಂಬೆಯಲ್ಲಿ ಸಿಟ್ರಸ್ ಆಮ್ಲ ಇರುವುದರಿಂದ ಇದು ಕೀಟಗಳ ನಿವಾರಣೆಗೆ ಸಹಕಾರಿಯಾಗಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ತುಳಸಿ
ತುಳಸಿ ಅಸಾಧಾರಣ ಕೀಟ ನಿವಾರಕವಾಗಿದೆ. ನಿಮ್ಮ ಅಡುಗೆಮನೆ ಅಥವಾ ಕೀಟಗಳು ಬರುವ ಕಡೆಗಳಲ್ಲಿ ಒಣಗಿದ ತುಳಸಿ ಗಿಡದ ಎಲೆ ಅಥವಾ ಹಸಿ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು ಸಿಂಪಡಿಸುವುದು ಉತ್ತಮ. ಇದು ಜೇಡ, ಸೊಳ್ಳೆ, ಇರುವೆಗಳ ಮೇಲೆ ಪರಿಣಾಮ ಬೀರುತ್ತದೆ.
ಪುದೀನ
ಪುದೀನದ ಪ್ರಬಲ ಸುವಾಸನೆಯು ನೈಸರ್ಗಿಕ ಕೀಟ ನಿರೋಧಕವನ್ನಾಗಿಸಿದೆ. ತಾಜಾ ಪುದೀನ ಎಲೆಗಳನ್ನು ಪುಡಿಮಾಡಿ ಮತ್ತು ಸೊಳ್ಳೆ ನಿವಾರಕವಾಗಿ ಚರ್ಮದ ಮೇಲೆ ಹಚ್ಚಬಹುದು. ಹಾಗೆ ಎಲೆಗಳನ್ನು ಜಜ್ಜಿ ಮೂಲೆ ಮೂಲೆಯಲ್ಲಿ ಇಡಬಹುದು.
ವಿನೆಗರ್
ವಿನೆಗರ್ ವಿಶೇಷವಾಗಿ ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಕೀಟ ನಾಶಕವಾಗಿದೆ. ಇದರ ಗಾಢವಾದ ಸುವಾಸನೆಯು ಕೀಟಗಳಿಗೆ ಸಮಸ್ಯರ ತರಲಿದೆ. ನೀರಿನೊಂದಿಗೆ ವಿನೆಗರ್ ಅನ್ನು ಬೆರೆಸಿಕೊಂಡು ಕೀಟಗಳು ಬರುವ ಕಡೆ ಅಥವಾ ಕೀಟಗಳಿರುವ ಕಡೆ ಸಿಂಪಡಿಸಿ ನೋಡಿ. ಕೀಟಗಳು ಮತ್ತೆಂದು ಆ ಜಾಗದಲ್ಲಿ ಸುಳಿಯುವುದಿಲ್ಲ. ತರಕಾರಿ ಇಡುವ ಕಡೆ, ಹಣ್ಣುಗಳಿರುವ ಕಡೆ ಸಣ್ಣ ಪುಟ್ಟ ಕೀಟಗಳು ಹಾರಾಡುತ್ತಿರುತ್ತವೆ. ಆದ್ರೆ ಈ ರೀತಿ ವಿನೆಗರ್ ಬಳಸಿದರೆ ಕೀಟಗಳು ಹತ್ತಿರವೂ ಬರುವುದಿಲ್ಲ.
ಉಪ್ಪು
ಉಪ್ಪು ಅಡುಗೆಯ ರುಚಿ ಹೆಚ್ಚಿಸುವ ಜೊತೆಗೆ ಕೀಟ ನಿವಾರಕವಾಗಿಯೂ ಕೆಲಸ ಮಾಡುತ್ತೆ. ಉಪ್ಪಿಗೆ ಎಂದಿಗೂ ಹುಳು ಹಿಡಿಯುದಿಲ್ಲ ಎಂದು ಹೇಳಲಾಗುತ್ತದೆ. ಯಾವುದೇ ಕೀಟಗಳಿರಲಿ ಉಪ್ಪು ಅವುಗಳ ಮೇಲೆ ಪ್ರಭಾವ ಬೀರುತ್ತದೆ. ನೀರಿನೊಂದಿಗೆ ಉಪ್ಪು ಬೆರೆಸಿಕೊಂಡು ಅದನ್ನು ಸಿಂಪಡಿಸಿದರೆ ಕೀಟಗಳ ನಿವಾರಣೆ ಮಾಡಬಹುದು.



Click it and Unblock the Notifications