Latest Updates
-
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಪ್ರಶರ್ ಕುಕ್ಕರ್‌ನಿಂದ ನೀರು ಲೀಕ್ ಆಗೋ ಸಮಸ್ಯೆಯೇ! ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
ನೀವು ಮನೆಯಲ್ಲಿ ಅಡುಗೆಗಾಗಿ ಕುಕ್ಕರ್ ಬಳಸುತ್ತೀರಿ. ನಿತ್ಯದ ಕೆಲಸದಲ್ಲಿ ಒಮ್ಮೆಯಾದರು ಪ್ರಶರ್ ಕುಕ್ಕರ್ ಅನ್ನು ಬಳಸಿಯೇ ಬಳಸುತ್ತೇವೆ. ಹಾಗೆ ಈ ಕುಕ್ಕರ್ ಬಳಸಿಯೇ ನೀವು ಅನ್ನ ಸೇರಿ ಹಲವು ಖಾದ್ಯ ತಯಾರು ಮಾಡುವಿರಿ. ಬೇಳೆ ಬೇಯಿಸುವುದು, ತರಕಾರಿ ಬೇಯಿಸುವುದು ಹೀಗೆ ಹಲವು ಕಾರ್ಯಕ್ಕಾಗಿ ನಿಮಗೆ ಕುಕ್ಕರ್ ಇರಲೇಬೇಕು.
ಪ್ರಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಗ್ಯಾಸ್ ಕೂಡ ಉಳಿತಾಯ ಆಗೋದು ನೋಡಬಹುದು. ಇದರಿಂದ ಪ್ರಶರ್ ಕುಕ್ಕರ್ ಅನ್ನೆ ಹೆಚ್ಚಾಗಿ ಅಡುಗೆಗೆ ಬಳಸುವುದು ಕಾಮನ್. ಹಾಗೆ ಪ್ರಶರ್ ಕುಕ್ಕರ್ ಅನ್ನು ಬಳಸುವ ಕುರಿತು ಕೂಡ ನೀವು ಎಚ್ಚರಿಕೆಯ ಜೊತೆಗೆ ಗಮನ ನೀಡಬೇಕಾಗುತ್ತೆ. ಇತ್ತೀಚಿಗೆ ಕುಕ್ಕರ್ ಬ್ಲಾಸ್ಟ್ ಆಗೋದು, ಕುಕ್ಕರ್ ಹಾಳಾಗುವುದು ಹೀಗೆ ಹಲವು ರೀತಿಯ ಸಮಸ್ಯೆ ನೋಡಿರಬಹುದು.
ಆದ್ರೆ ಗೃಹಿಣಿಯರ ಬಹುದೊಡ್ಡ ಸಮಸ್ಯೆ ಅಂದ್ರೆ ಕುಕ್ಕರ್‌ನಿಂದ ಲೀಕೇಜ್ ಆಗುವುದು. ರೈಸ್ ಮಾಡುವಾಗ ನೀರು ಹೊರಬರುವುದು, ಬೇಳೆ ಬೇಯಲು ಇಟ್ಟಾಗಲಂತು ಸ್ಟೌವ್ ಮೇಲೆ ನೀರು ಹರಿದು ಹೋಗುವಷ್ಟು ಲೀಕ್ ಆಗುವುದು, ಹಾಗೆ ತರಕಾರಿ ಬೇಯಲು ಹಾಕಿದಾಗಲೂ ಕೂಡ ನೀರು ಲೀಕ್ ಆಗುವುದು ಬಹುದೊಡ್ಡ ಸಮಸ್ಯೆಯಾಗಿದೆ.

ಇದರಿಂದ ಕೆಲಸ ಮತ್ತಷ್ಟು ಹೆಚ್ಚಾಗುತ್ತೆ. ನೀವು ಇಡೀ ಸ್ಟೌವ್ ಅನ್ನು ಮತ್ತೊಮ್ಮೆ ಕ್ಲೀನ್ ಮಾಡಬೇಕಾಗುತ್ತದೆ. ಹೀಗಾಗಿ ಪ್ರಶರ್ ಕುಕ್ಕರ್ ಲೀಕ್ ಆಗದಂತೆ ಒಲೆಯ ಹತ್ತಿರ ಕಾಯುತ್ತಾ ನಿಲ್ಲಬೇಕಾಗುತ್ತದೆ. ಆದ್ರೆ ನೀರು ಲೀಕ್ ಆದಾಗ ಅದನ್ನು ತೊಳೆದು ಕ್ಲೀನ್ ಮಾಡುವುದೇ ಗಂಟೆಗಳ ಕಾಲ ಹಿಡಿಯುವ ಕೆಲಸವಾಗುತ್ತದೆ. ಹೀಗಾಗಿ ಇದು ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ಎನ್ನಬಹುದು.
ಆದ್ರೆ ನಾವಿಂದು ಕೆಲ ಸುಲಭದ ಉಪಾಯದ ಮೂಲಕ ಈ ರೀತಿ ಕುಕ್ಕರ್ ಲೀಕ್ ಆಗುವುದನ್ನು ತಡೆಯುವುದು ಹೇಗೆ ಅನ್ನೋದನ್ನು ಕಲಿಯೋಣ. ಇದರಿಂದ ಸ್ಚಚ್ಛ ಕಿಚನ್ ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ಕುಕ್ಕರ್ ರಬ್ಬರ್ ಬದಲಾಯಿಸಿ
ನಿಮ್ಮ ಪ್ರಶರ್ ಕುಕ್ಕರ್‌ನಿಂದ ಯಾವಾಗಲು ನೀರು ಹೊರಗೆ ಬರುತ್ತಲೇ ಇದ್ದರೆ ಅದರ ಅರ್ಥ ರಬ್ಬರ್ ಬದಲಾಯಿಸಬೇಕು ಎಂಬುದಾಗಿದೆ. ಬಹಳ ಸಮಯದಿಂದ ಒಂದೇ ರಬ್ಬರ್ ಬಳಸಿದ್ದರೆ ಅದು ಹಾಳಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ರಬ್ಬರ್ ಬದಲಾಯಿಸಿದರೆ ನೀರು ಲೀಕ್ ಆಗುವುದು ನಿಲ್ಲಲಿದೆ.
2 ಸ್ಪೂನ್ ಎಣ್ಣೆ
ಕೆಲವೊಮ್ಮೆ ರಬ್ಬರ್ ಹೊಸದಾಗಿ ಹಾಕಿ ಕೆಲವೇ ತಿಂಗಳಲ್ಲಿ ಕುಕ್ಕರ್‌ನಿಂದ ನೀರು ಲೀಕ್ ಆಗಬಹುದು. ಇದನ್ನು ಪಡೆಯಬೇಕಾದರೆ ರಬ್ಬರ್‌ಗೆ 2 ಸ್ಪೂನ್ ಎಣ್ಣೆಯನ್ನು ಹಚ್ಚಬೇಕು. ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ರಬ್ಬರ್‌ಗೆ ಸವರುವುದರಿಂದ ನೀರು ಲೀಕ್ ಆಗುವುದನ್ನು ತಡೆಯಬಹುದು.
ರಬ್ಬರ್ ನೀರಿನಲ್ಲಿ ಅಥವಾ ಫ್ರಿಡ್ಜ್‌ನಲ್ಲಿಡಿ
ಪ್ರಶರ್ ಕುಕ್ಕರ್ ಬಳಸಿ ಬಳಿಕ ರಬ್ಬರ್ ಅನ್ನು ನೀರಿನಲ್ಲಿ ಅಥವಾ ಡೀಪ್ ಫ್ರಿಡ್ಜ್‌ನಲ್ಲಿ ಇಡಬೇಕು. ಇದರಿಂದ ಗಡಸು ಹಾಗೆ ಉಳಿಯಲಿದೆ. ಮತ್ತೆಂದು ನೀರು ಲೀಕ್ ಆಗುವ ಸಮಸ್ಯೆಯೇ ಬರುವುದಿಲ್ಲ. ಸಡಿಲವಾದ ರಬ್ಬರ್‌ಗಳ ಕಾರಣದಿಂದಾಗಿಯೇ ಬಹುತೇಕ ನೀರಿನ ಲೀಕೇಜ್ ಇರಲಿದೆ. ಇಲ್ಲದಿದ್ದರೆ ಪ್ರಶರ್ ಕುಕ್ಕರ್ ರಚನೆಯಲ್ಲಿ ಬದಲಾವನೆಯಾದರೆ, ಅದರ ಮುಚ್ಚಳ ಸವೆದಿದ್ದರೆ ಅಥವಾ ಕೆಳಗೆ ಬಿದ್ದು, ಓರೆಯಾಗಿದ್ದರೆ ಕೂಡ ನೀರು ಲೀಕ್ ಆಗುವ ಸಾಧ್ಯತೆ ಇದೆ. ಕುಕ್ಕರ್‌ನಲ್ಲಿ ಹೆಚ್ಚು ನೀರು ಹಾಕಬೇಡಿ. ಅದರಲ್ಲಿರುವ ಪದಾರ್ಥಗಳನ್ನು ಅವಲಂಬಿಸಿ ನೀರು ಬಳಸಿ. ನೀರು ಜಾಸ್ತಿಯಾದರೆ ಸೀಟಿ ಬಂದಾಗ ನೀರು ಸೋರುತ್ತದೆ. ಹಾಗೆ ಕುಕ್ಕರ್‌ನಿಂದ ನಿರಂತರವಾಗಿ ನೀರು ಲೀಕ್ ಆಗುತ್ತಿದ್ದರೆ ಒಮ್ಮೆ ರಿಪೇರಿ ಮಾಡಿಸುವುದು ಕೂಡ ಉತ್ತಮ. ಏಕೆಂದರೆ ವಾಷರ್ ಸಮಸ್ಯೆಗಳಿದ್ದರೆ ಪರಿಹಾರವಾಗುತ್ತೆ.



Click it and Unblock the Notifications











