Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಮಾರುಕಟ್ಟೆಯಲ್ಲಿ ಕಳೆಪೆ ಟೀ ಪುಡಿ ದಂಧೆ: ನಕಲಿ ಟೀ ಪುಡಿ ಪತ್ತೆ ಮಾಡೋದು ಹೇಗೆ?
ಮಾರ್ಕೆಟ್‌ನಲ್ಲಿ ಈಗ ಎಲ್ಲಾ ವಸ್ತುಗಳು ಕಳಪೆ ಎಲ್ಲಾ ವಸ್ತುಗಳು ಕೂಡ ನಕಲಿ ಎಂಬ ಅನುಮಾನ ಮೂಡೋದು ಸಹಜ. ಯಾಕಂದ್ರೆ ನಾವು ಖರೀದಿಸಿ ಮನೆಗೆ ತರುವಂತಹ ಬಹುತೇಕ ಪದಾರ್ಥಗಳು ನಕಲಿ ಅಥವಾ ಕಳಪೆ ಆಗಿರಬಹುದು. ಈಗ ಲಾಭ ಮಾಡುವ ಉದ್ದೇಶದಿಂದ ಬ್ಲಾಕ್ ಮಾರ್ಕೆಟ್ ಬಹುದೊಡ್ಡ ಜಾಲವಾಗಿ ಬೆಳೆದು ಬಿಟ್ಟಿದೆ.
ನೀವು ಯಾವುದೇ ದಿನಸಿ ಖರೀದಿಸುವಾಗಲು ಈಗ ಎಚ್ಚರದಿಂದ ಇರಬೇಕಾಗಿದೆ. ಬ್ರಾಂಡೆಡ್ ಕಂಪನಿಗಳ ಹೆಸರಿನಲ್ಲೂ ಕೂಡ ಈಗ ನಕಲಿ ಉತ್ಪನ್ನಗಳು ಮಾರುಕಟ್ಟೆಗೆ ಬಂದಿರುವುದು ನಾವು ನೋಡಿದ್ದೇವೆ. ಹೀಗಾಗಿ ಹಲವು ವಸ್ತುಗಳಿಂದು ನಕಲಿಯಾಗಿ ಜನರ ಜೀವವನ್ನೇ ಕಸಿಯುತ್ತಿರುವು ಉದಾಗಹರಣೆ ಕೂಡ ಇವೆ. ನಕಲಿ ಉತ್ಪನ್ನಗಳು ಜನರ ಆರೋಗ್ಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದು ಕೂಡ ದೊಡ್ಡ ವಿಚಾರವಾಗಿದೆ.

ಸದ್ಯ ಈಗ ಟಿ ಪುಡಿ ಹೆಸರಿನಲ್ಲಿ ಕಳಪೆ ವಸ್ತುಗಳು, ನಕಲಿ ಉತ್ಪನ್ನ ಮಾರುಕಟ್ಟೆಗೆ ಬಂದಿರುವ ಘಟನೆ ವರದಿಯಾಗಿದೆ, ಅದು ಕೂಡ ಗಂಗಾವತಿಯ ಕಾರಟಗಿ ನಗರದಲ್ಲಿ ಈ ರೀತಿಯ ಘಟನೆ ವರದಿಯಾಗಿದೆ. ಮಾರುಕಟ್ಟೆಯಲ್ಲಿ ಪರವಾನಗಿ ಇಲ್ಲದೇ, ನಕಲಿ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಳಪೆ ಹಾಗೂ ಕಲಬೆರಕೆ ಟೀ ಪುಡಿ ಮಾರಾಟ ಮಾಡುತ್ತಿರುವುದು ವರದಿಯಾಗಿ ಪೊಲೀಸರು ದಾಳಿ ನಡೆಸಿದ್ದರು.
ಈ ವೇಳೆ ಗೋಡೌನ್‌ನಲ್ಲಿ ಕಲರ್ ಪುಡಿ, ನಕಲಿ ಟೀ ಪುಡಿಯನ್ನು ಸಂಗ್ರಹಿಸಿಡಲಾಗಿತ್ತು. ಇದು ಕಳಪೆ ಗುಣಮಟ್ಟದ ಟೀ ಪುಡಿ ಖರೀದಿಸಿ ಅದಕ್ಕೆ ಕಲರ್ ಮಿಕ್ಸ್ ಮಾಡಿ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಅನೇಖ ದೂರುಗಳು ಸಹ ಬಂದಿದ್ದವು.
ಆದ್ರೆ ಈಗ ಮಾರುಕಟ್ಟೆಯಲ್ಲಿ ಸಿಗುವಂತಹ ಈ ಟೀ ಪುಡಿ ಸಕಲಿಯೋ ಅಸಲಿಯೋ ಎಂದು ಪತ್ತೆ ಮಾಡುವುದೇ ದೊಡ್ಡ ಸಾಹಸವಾಗಿದೆ. ಏಕೆಂದರೆ ಎಲ್ಲಾ ಪುಡಿಗಳು ಒಂದೇ ರೀತಿ ಕಾಣಿಸುತ್ತವೆ. ಹಾಗಾದ್ರೆ ನಾವು ಮನೆಯಲ್ಲಿ ಈ ಟೀ ಪುಡಿ ನಕಲಿಯೋ ಅಸಲಿಯೋ ಎಂಬುದನ್ನು ಪತ್ತೆ ಮಾಡುವುದು ಹೇಗೆ? ಇದಕ್ಕೆ ಮನೆಯಲ್ಲಿ ಯಾವ ಟ್ರಿಕ್ಸ್ ಉಪಯೋಗಿಸಬೇಕು ಗೊತ್ತಾ?
ನೀರಿನಲ್ಲಿ ಪುಡಿ ಹಾಕಿ ಪರೀಕ್ಷಿಸಿ
ಮೊದಲು ಒಂದು ಗ್ಲಾಸ್‌ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಳ್ಳಿ. ಅದಕ್ಕೆ ನೀವು ಖರೀದಿಸಿ ತಂದಿರುವ ಟೀ ಪುಡಿಯನ್ನು ಹಾಕಿ ಅದು ಬಣ್ಣ ಬಿಟ್ಟುಕೊಂಡರೆ ಅದು ನಕಲಿಯಾಗಿರಬಹುದು. ಇಲ್ಲವೆ ಕಲರ್ ಪುಡಿಯನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿರಬಹುದು. ಅಥವಾ ಉತ್ತಮ ಸುವಾಸನೆಗಾಗಿ ಒಂದು ರೀತಿಯ ರಾಸಾಯನಿಕವನ್ನೂ ಕೂಡ ಬಳಸಿರಬಹುದು, ಇದು ನಕಲಿಯಾಗಿರುವ ಸಾಧ್ಯತೆ ಹೆಚ್ಚು ಎಂದರ್ಥ.
ಟೀ ಕಣಗಳ ಪರಿಶೀಲಿಸಿ
ನೀವು ಬ್ರಾಂಡೆಡ್ ಟೀ ಪುಡಿ ಖರೀದಿಸಿದರೆ ಆ ಟೀ ಪುಡಿಯ ಕಣಗಳು ಹೆಚ್ಚಾಗಿ ಒಂದೇ ರೀತಿಯಲ್ಲಿ ಕಾಣಿಸುತ್ತದೆ. ಹಾಗೆ ಪುಡಿಯಲ್ಲಿ ಹಸಿರು ಹಸಿರಾದ ಟೀ ಪುಡಿಯ ಎಲೆಯ ಪುಡಿ ಸಹ ಕಾಣಿಸುತ್ತದೆ. ಆದ್ರೆ ಕಲಬೆರಕೆ ಆದರೆ ಟೀ ಪುಡಿಯ ಕಣಗಳು ಒಂದೊಂದು ಬಣ್ಣದಲ್ಲಿ ಕಾಣಿಸಬಹುದು. ಹಾಗೆ ಎಲೆಗಳು ಕಾಣಿಸದೆ ಕಪ್ಪು ಬಣ್ಣದಲ್ಲಿ ಕಾಣಿಸಬಹುದು. ಹಾಗೆ ಅದರ ಸುವಾಸನೆ ಕೂಡ ಬದಲಾಗಿರಬಹುದು.
ಟೀ ಪುಡಿಗೆ ಏನೆಲ್ಲಾ ಸೇರಿಸುತ್ತಾರೆ ಗೊತ್ತಾ?
ಟೀ ಪುಡಿ ಹೆಚ್ಚಾಗುವಂತೆ ಮಾಡಲು ಹಾಗೂ ನಕಲಿ ಟೀ ಪುಡಿಯಲ್ಲಿ ಹಲವು ರೀತಿ ವಸ್ತುಗಳನ್ನು ನಾವು ನೋಡಬಹುದು. ಮುಖ್ಯವಾಗಿ ತೆಂಗಿನಕಾಯಿಯ ಸಿಪ್ಪೆಯ ಪುಡಿ, ಮರದ ತೊಗಟೆಯ ಪುಡಿ, ಹುಣಸೆ ಬೀಜದ ಪುಡಿ ಸೇರಿ ಹಲವು ರಾಸಾಯನಿಕ ಬೆರೆಸಿ ಮಾಡಲಾದ ಪುಡಿಯೂ ಕೂಡ ಈಗ ಟೀ ಪುಡಿಯಂತೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.



Click it and Unblock the Notifications