Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ವಾನ ಪ್ರೀಯರು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿವು..!
ಶ್ವಾನವನ್ನು ಇಷ್ಟಪಡದೇ ಇರೋರು ಯಾರಿದ್ದಾರೆ ಹೇಳಿ. ನಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಶ್ವಾನವನ್ನು ಪ್ರೀತಿಯಿಂದ ನೋಡಿಕೊಳ್ಳುವವರು ಇದ್ದಾರೆ. ಎಲ್ಲಿ ಹೋದರೂ ನಾಯಿ ಜೊತೆಯಲ್ಲೇ ಇರಲೇಬೇಕು. ಕೈ ತುತ್ತು ಕೊಟ್ಟು ಪ್ರೀತಿಯಿಂದ ನಾಯಿಯನ್ನು ಬೆಳೆಸುತ್ತಾರೆ.

ಅದ್ರಲ್ಲೂ ಮನೆಗೆ ಮುದ್ದಾದ ನಾಯಿಯನ್ನು ಸ್ವಾಗತಿಸಿದರೆ ಸಂತೋಷಕ್ಕೆ ಪಾರವೇ ಇಲ್ಲ. ಇಡೀ ದಿನ ಅದನ್ನು ಮುದ್ದಾಡುವುದರಲ್ಲೇ ಕಾಲ ಕಳೆಯುತ್ತಾರೆ. ನಾಯಿಯನ್ನು ಪ್ರೀತಿಸಿ, ಮುದ್ದಾಡುವುದಕ್ಕಿಂತ ಮುಖ್ಯವಾಗಿ ಈಗಷ್ಟೇ ಮನೆಗೆ ತಂದ ಶ್ವಾನಕ್ಕೆ ಕೆಲವೊಂದು ಹವ್ಯಾಸಗಳನ್ನು ನಾವು ರೂಢಿಸಬೇಕಾಗುತ್ತದೆ. ಅಷ್ಟಕ್ಕು ಮನೆಗೆ ಬಂದ ಹೊಸ ಅತಿಥಿಗೆ ತರಬೇತಿ ಹೇಗಿರಬೇಕು? ಯಾವ ರೀತಿಯ ಹವ್ಯಾಸಗಳನ್ನು ಶ್ವಾನಗಳಿಗೆ ಕಲಿಸಿಕೊಟ್ಟರೆ ಉತ್ತಮ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.

1. ಚಿಕ್ಕವಯಸ್ಸಿನಲ್ಲೇ ಜಿಗಿಯುವುದನ್ನು ತಡೆಯಿರಿ
ನೀವು ಹೊಸ ಶ್ವಾನವನ್ನು ಮನೆಗೆ ಸ್ವಾಗತಿಸಿದ್ದರೆ ಅದಕ್ಕೆ ಈಗಿನಿಂದಾನೇ ತರಬೇತಿ ನೀಡುವುದು ಉತ್ತಮ. ನಾವೇನಾದರೂ ತಿನ್ನಲು ಕೊಡಲು ಹೋದಾಗ ಅದು ಮೇಲಕ್ಕೆ ಹಾರಲು ಆರಂಭಿಸುತ್ತದೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಇಂತಹ ನಡವಳಿಕೆಯನ್ನು ಯಾರು ಇಷ್ಟಪಡುವುದಿಲ್ಲ. ಹೀಗಾಗಿ ನಾಯಿಯು ಹಾರುವುದನ್ನು ನಿಲ್ಲಿಸಿ ನಾಲ್ಕು ಕಾಲುಗಳನ್ನು ನೆಲಕ್ಕೆ ಊರಿ ನಿಮ್ಮತ್ತ ನೋಡುವವರೆಗೂ ಅದಕ್ಕೆ ಏನನ್ನು ನೀಡಬೇಡಿ. ನಿಮ್ಮಲ್ಲಿ ಗಮನವನ್ನು ಕೇಂದ್ರೀಕರಿಸಿದೆ ಎಂದು ಖಾತರಿ ಪಡಿಸಿಕೊಂಡು ನಂತರ ನಾಯಿಗೆ ತಿನ್ನಲು ಕೊಡಿ.

2. ಎಲ್ಲರೊಂದಿಗೆ ಬೆರೆಯುವುದನ್ನು ಕಲಿಸಿ
ಶ್ವಾನ ಚಿಕ್ಕದಿರುವಾಗಲೇ ಅಕ್ಕೆ ಎಲ್ಲಾ ರೀತಿಯ ಹವ್ಯಾಸಗಳನ್ನು ರೂಢಿಸಿದರೆ ಉತ್ತಮ. ಬೇರೆ ಬೇರೆ ಜಾಗಕ್ಕೆ ಕರೆದುಕೊಂಡು ಹೋಗಿ, ಇತರರೊಂದಿಗೆ ಸ್ನೇಹ ಜೀವಿಯಾಗಿ ಬೆರೆಯಲು ಬಿಡಿ, ಇತರ ನಾಯಿಗಳೊಂದಿಗೆ ಆಟವಾಡಲು ಅಭ್ಯಾಸ ಮಾಡಿಸಿ. ಹೀಗಾದಾಗ ಅವುಗಳು ಕೂಡ ಎಲ್ಲಾ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಇಲ್ಲವಾದರೆ ನೀವು ಹೊರಗಡೆ ಕರೆದುಕೊಂಡು ಹೋದಾಗ ಶ್ವಾನಕ್ಕೆ ಎಲ್ಲವೂ ಹೊಸತು ಅನ್ನಿಸುತ್ತದೆ. ಬೊಗಳೋದು, ಚೀರಾಡೋದನ್ನ ಮಾಡುತ್ತದೆ. ಹೀಗಾದಾಗ ನಮಗೆ ಒಂದು ರೀತಿ ಮುಜುಗೊರ ಉಂಟಾಗುತ್ತದೆ.

3. ತರಬೇತಿ ವೇಳಾಪಟ್ಟಿ ತೀರ್ಮಾನಿಸಿ
ಶ್ವಾನಗಳಿಗೆ ಮನೆ ತರಬೇತಿ ತುಂಬಾನೇ ಮುಖ್ಯ. ಪ್ರತಿದಿನ ಒಂದೇ ಸಮಯದಲ್ಲಿ ನೀವು ತರಬೇತಿ ನೀಡಿದಾಗ ಆ ಸಮಯಕ್ಕೆ ನಿಮ್ಮ ನಾಯಿ ಹೊಂದಿಕೊಳ್ಳುತ್ತದೆ. ಅದರ ಊಟದ ಸಮಯ, ಆಟದ ಸಮಯ ಹಾಗೂ ಸ್ನಾನದ ಸಮಯವನ್ನು ಸರಿಯಾಗಿ ಪಾಲನೆ ಮಾಡಿ. ಆಗ ನಿಮ್ಮ ಶ್ವಾನವು ಆರಾಮದಾಯಕವಾಗಿರುತ್ತದೆ.

4. ಮನೆ ತರಬೇತಿ ತುಂಬಾನೇ ಮುಖ್ಯ
ನೀವೇನಾದರೂ ಮನೆಯ ಒಳಗಡೆ ನಾಯಿಯನ್ನು ಸಾಕುತ್ತಿದ್ದರೆ ಪದೇ ಪದೇ ಮನೆಯಿಂದ ಹೊರ ಹೋಗದಂತೆ ತಡೆಯಿರಿ. ಇನ್ನೂ ಹೊರಗಡೆ ನಾಯಿಯನ್ನು ಸಾಕುವುದಾದರೆ ಮನೆಯ ಒಳಬಾರದಂತೆ ತಡೆಯಿರಿ. ಈ ರೀತಿ ಅಭ್ಯಾಸವನ್ನು ಮೈಗೂಡಿಸಿಕೊಳ್ಳಿ. ಅದು ತಪ್ಪು ಮಾಡಿದಾಗ ಹೊಡೆದು, ಗದರಿಸಿ ಹೇಳಬೇಡಿ. ಬದಲಾಗಿ ಅದಕ್ಕೆ ಅರ್ಥವಾಗುವ ರೀತಿಯಲ್ಲಿ ಪ್ರೀತಿಯಿಂದ ತಿಳಿ ಹೇಳಿ.

5. ತರಬೇತಿ ಸ್ಥಿರವಾಗಿರಲಿ
ಪ್ರತಿದಿನ ಒಂದೇ ರೀತಿಯ ತರಬೇತಿಯನ್ನು ಶ್ವಾನಕ್ಕೆ ಕಲಿಸಿಕೊಡಿ. ಅದನ್ನು ಬಿಟ್ಟು ನೀವು ಪ್ರತಿ ದಿನ ನಿಮ್ಮ ತರಬೇತಿ ಶೈಲಿಯನ್ನು ಬದಲಾಯಿಸಿದರೆ ಶ್ವಾನಕ್ಕೂ ಕನ್‌ಫ್ಯೂಸ್ ಆಗಬಹುದು. ಇನ್ನೂ ನೀವು ಬಳಸುವ ಭಾಷೆಯು ಕೂಡ ತುಂಬಾನೇ ಮುಖ್ಯ. ಯಾವುದಾದರೂ ಒಂದು ಭಾಷೆಯನ್ನು ಮಾತ್ರ ನಿತ್ಯ ಬಳಸಿ. ಅದನ್ನು ಬಿಟ್ಟು ನಿಮಗೆ ಬೇಕಾಗುವ ಭಾಷೆಯಲ್ಲಿ ಮಾತನಾಡಿದರೆ ನಾಯಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ.

6. ತಾಳ್ಮೆ ಇರಲಿ
ಶ್ವಾನಗಳಿಗೆ ತರಬೇತಿ ನೀಡುವಾಗ ತಾಳ್ಮೆ ತುಂಬಾನೇ ಮುಖ್ಯ. ಕೆಲವು ನಾಯಿಗಳು ತುಂಬಾ ನಿಧಾನವಾಗಿ ಕಲಿತುಕೊಳ್ಳುತ್ತವೆ. ಇನ್ನೂ ಕೆಲವು ಜಾತಿಯ ನಾಯಿಗಳು ಬೇಗ ಕಲಿತುಕೊಳ್ಳುತ್ತದೆ. ಕೆಲವೊಂದು ಸಲ ನಾವು ಎಷ್ಟೇ ಕಲಿಸಿದರು ಶ್ವಾನ ಮತ್ತೆ ಮತ್ತೆ ಮರೆತು ಹೋಗುತ್ತದೆ. ಆಗ ನೀವು ಕೋಪಗೊಳ್ಳಬಾರದು. ಬದಲಿಗೆ ತಾಳ್ಮೆಯಿಂದ ಅದಕ್ಕೆ ಕಲಿಸುವ ಪ್ರಯತ್ನ ಮಾಡಬೇಕು. ತಾಳ್ಮೆಯಿಂದ ನೀವು ನಿರಂತರ ಪ್ರಯತ್ನ ಮಾಡಿದ್ದೇ ಆದರೆ ಖಂಡಿತ ಒಂದಲ್ಲ ಒಂದು ದಿನ ಫಲ ಸಿಗುತ್ತದೆ.

7. ತರಬೇತಿಯ ಸಮಯದಲ್ಲಿ ಮುಖ್ಯವಾಗಿ ಕಮಾಂಡ್ ಬಗ್ಗೆ ತಿಳಿಸಿ
ತರಬೇತಿಯ ಸಮಯದಲ್ಲಿ ಮೊದಲಿಗೆ ಅವುಗಳಿಗೆ ಕಮಾಂಡ್ ಬಗ್ಗೆ ಚೆನ್ನಾಗಿ ತಿಳಿಸಿ ಕೊಡಿ. ಕಮಾಂಡ್ ಜೊತೆಗೆ ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ಕಲಿಸಿಕೊಡಿ. ಪ್ರತಿನಿತ್ಯ ಹೀಗೆ ಮಾಡುತ್ತಾ ಇದ್ದರೆ ಅವುಗಳಿಗೆ ರೂಢಿ ಆಗುತ್ತದೆ.
ಪುಟ್ಟ ಶ್ವಾನಕ್ಕೆ ತರಬೇತಿ ನೀಡುವಾಗ ಈ ಎಲ್ಲಾ ಅಂಶಗಳನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಣ್ಣ ವಯಸ್ಸಿನಲ್ಲಿ ಅವುಗಳಿಗೆ ಸರಿಯಾದ ತರಬೇತಿ ಸಿಕ್ಕರೆ ತುಂಬಾನೇ ಒಳ್ಳೆಯದು.



Click it and Unblock the Notifications


