Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಅಕ್ವೇರಿಯಂ ಬಗ್ಗೆ ಇರುವ ಕೆಲವು ಕಟ್ಟುಕತೆಗಳು
ಮೀನು ಯಾರಿಗೆ ತಾನೇ ಇಷ್ಟವಾಗಲ್ಲ. ಹರಿಯುವ ನೀರಿನಲ್ಲಿದ್ದರು ಸರಿ, ಮನೆಯಲ್ಲಿನ ಅಕ್ವೇರಿಯಂನಲ್ಲಿಯಾಗಲೀ ಈಜಾಡುವ ಮೀನುಗಳನ್ನು ನೋಡುತ್ತಿದ್ದರೆ ಮನಸ್ಸು ಪ್ರಸನ್ನವಾಗುತ್ತದೆ. ಹೀಗೆ ಅಕ್ವೇರಿಯಂನಲ್ಲಿ ಮೀನು ಸಾಕುವುದು ಕೆಲವರಿಗೆ ಹವ್ಯಾಸ, ಇನ್ನೂ ಕೆಲವರಿಗೆ ಅದೇ ಉದ್ಯೋಗ! ( ಮಾರಾಟ ಮಾಡುವುದು). ಕೆಲವರು ಅಕ್ವೇರಿಯಂನಲ್ಲಿ ಅಂದರೆ ಮನೆಯಲ್ಲಿ ಮೀನು ಸಾಕಲು ಹೆದರುತ್ತಾರೆ. ಅದಕ್ಕೆ ಕಾರಣ ಅದರ ಸುತ್ತಲೂ ಹಬ್ಬಿರುವ ಕಟ್ಟುಕತೆಗಳು ಎಂದು ಹೇಳಬೇಕಾಗಿಲ್ಲವಲ್ಲ.
ಈ ಕಟ್ಟು ಕತೆಗಳು ಜನರು ಮೀನು ಸಾಕಲು ಇರುವ ಕುತೂಹಲ ಮತ್ತು ಆಸಕ್ತಿಗಳನ್ನು ನಾಶಮಾಡಿ ಬಿಡುತ್ತವೆ. ಅಂತಹ ಕೆಲವು ಕಟ್ಟುಕತೆಗಳನ್ನು ಇಲ್ಲಿ ನಾವು ನಿಮಗಾಗಿ ನೀಡಿದ್ದೇವೆ. ಇಂತಹ ಕಟ್ಟುಕತೆಗಳಿಗೆ ಮರುಳಾಗುವುದನ್ನು ಬಿಡಿ, ಈಗ ಓದಿ:

1. ಅಕ್ವೇರಿಯಂನಲ್ಲಿ ಮೀನು ಸಾಕುವುದು ಅತ್ಯಂತ ದುಬಾರಿ ಹವ್ಯಾಸ
ಇದು ಅಕ್ಷರಶಃ ಸುಳ್ಳು. ಸತ್ಯವೇನೆಂದರೆ ದೊಡ್ಡ ಅಕ್ವೇರಿಯಂ ಇದ್ದಷ್ಟು, ಅದರ ನಿರ್ವಹಣೆ ಸುಲಭವೆಂಬುದು. ಅದರಲ್ಲೂ ಸಿಹಿನೀರಿನ ಮೀನುಗಳನ್ನು ಕೊಳ್ಳಲು ಅಗ್ಗ ಮತ್ತು ಸಾಕುವುದು ಸುಲಭ. ಈ ಸಿಹಿನೀರಿನ ಮೀನುಗಳು ತುಂಬಾ ಬೇಗ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳುತ್ತವೆ. ಇವುಗಳನ್ನು ಸಾಕಲು ಖರ್ಚಾಗುವುದು ಅವುಗಳ ಆಹಾರ, ಫಿಲ್ಟರೆಷನ್ ಮತ್ತು ಅಗತ್ಯ ಬೆಳಕಿಗೆ ಮಾತ್ರ. ಇವುಗಳನ್ನು ನಿರ್ವಹಣೆ ಮಾಡುವುದು ಸುಲಭ ಮತ್ತು ಕಡಿಮೆ ವೆಚ್ಚದಿಂದ ಕೂಡಿರುವ ಕೆಲಸವಾಗಿದೆ.

2. ಅಕ್ವೇರಿಯಂನಲ್ಲಿರುವ ನೀರನ್ನು ಪ್ರತಿದಿನ ಬದಲಾಯಿಸಬೇಕು
ಇದು ನಿಜಕ್ಕು ಅಪಾಯಕಾರಿಯಾದ ಕೆಲಸ. ಇದನ್ನು ಪಾಲಿಸುವುದರಿಂದ ನಿಮ್ಮ ಮೀನಿನ ಪ್ರಾಣಕ್ಕೆ ಕುತ್ತು ಉಂಟಾಗುವ ಸಂದರ್ಭವು ಬರಬಹುದು. ಇದಕ್ಕೆ ಇರುವ ಮಾರ್ಗೋಪಾಯವೆಂದರೆ ಅಕ್ವೇರಿಯಂನಲ್ಲಿರುವ ನೀರನ್ನು ಪೂರ್ತಿ ಬದಲಾಯಿಸಬೇಡಿ. ಇದರಲ್ಲಿರುವ ನೀರನ್ನು ವಾರಕ್ಕೊಮ್ಮೆ ಶೇ. 10-20 ಭಾಗದಷ್ಟು ಮಾತ್ರ ಬದಲಾಯಿಸಿರಿ. ಅದರಲ್ಲೂ ನಿಮ್ಮ ಬಳಿ ಫಿಲ್ಟರೇಷನ್ ವ್ಯವಸ್ಥೆ ಇದ್ದರೆ ತಿಂಗಳಿಗೆ ಒಮ್ಮೆ ನೀರನ್ನು ಬದಲಾಯಿಸಿದರು ಸಾಕು. ಆಗ ಶೇ. 30-50ರಷ್ಟು ಪ್ರಮಾಣದ ನೀರನ್ನು ಬದಲಾಯಿಸಿ ಸಾಕು. ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಮೀನು ಬದುಕಲು ನೆರವಾಗುತ್ತದೆ. ಹಾಗಾಗಿ ನೀರನ್ನು ಸಂಪೂರ್ಣವಾಗಿ ಬದಲಾಯಿಸುವುದು ಹಾನಿಕಾರಕ.

3. ಕ್ಯಾಟ್ ಫಿಶ್‍ಗಳು ಅಕ್ವೇರಿಯಂ ಅನ್ನು ಸ್ವಚ್ಛವಾಗಿಡುತ್ತವೆ
ಕ್ಯಾಟ್ ಫಿಶ್‍ಗಳು ಮಾಂಸಾಹಾರಿ ಮೀನುಗಳಾಗಿದ್ದು, ಅಕ್ವೇರಿಯಂ ಅನ್ನು ಸ್ವಚ್ಛವಾಗಿಡುತ್ತವೆ - ಕ್ಯಾಟ್‍ಫಿಶ್‍ಗಳು ಬೇಟೆಗಾರ ಮೀನುಗಳಲ್ಲ. ಇವುಗಳು ಮೀನಿನ ಮಲವನ್ನು ತಿನ್ನುವುದಿಲ್ಲ. ಇವಷ್ಟೇ ಅಲ್ಲ ಯಾವುದೇ ಮೀನುಗಳು ಸಹ ಇತರ ಮೀನುಗಳ ಮಲವನ್ನು ಸೇವಿಸುವುದಿಲ್ಲ. ಒಂದು ವೇಳೆ ಆಲ್ಗೇಗಳು ( ನೀರಿನ ಕಳೆ) ಬೆಳೆದರೂ, ಅವುಗಳನ್ನು ನಿರ್ಮೂಲ ಮಾಡಬೇಕು. ಯಾವ ಮೀನು ನಿಮ್ಮ ಅಕ್ವೇರಿಯಂ ಅನ್ನು ಸ್ವಚ್ಛವಾಗಿ, ಫಳ ಫಳ ಹೊಳೆಯುವಂತೆ ಇಡಲಾರವು.

4. ಹೊಸದಾಗಿ ಮೀನು ಸಾಕಲು ಆರಂಭಿಸುವವರಿಗೆ ಸಣ್ಣ ಅಕ್ವೇರಿಯಂಗಳು ಒಳ್ಳೆಯದು
ಇದು ತಪ್ಪು. ನೀವೇನಾದರು ಹವ್ಯಾಸಕ್ಕಾಗಿ ಮೀನನ್ನು ಸಾಕಲು ಆರಂಭಿಸಿದರೆ ಯಾವುದೇ ಕಾರಣಕ್ಕು ಚಿಕ್ಕ ಅಕ್ವೇರಿಯಂ ಅನ್ನು ಕೊಳ್ಳಬೇಡಿ. ಈ ಚಿಕ್ಕ ಅಕ್ವೇರಿಯಂಗಳನ್ನು ನಿರ್ವಹಿಸುವುದು ಕಷ್ಟ. ದೊಡ್ಡ ಅಕ್ವೇರಿಯಂಗಳನ್ನು ನಿರ್ವಹಿಸುವುದು ಸುಲಭ. ಆಗ ಮೀನುಗಳು ಮೃತಪಡುವ ಸಂಖ್ಯೆಯು ಕಡಿಮೆಯಾಗುತ್ತದೆ. ಅದರಲ್ಲೂ ಗೋಲ್ಡ್ ಫಿಶ್‍ಗಳನ್ನು ಫಿಶ್ ಬೌಲಿನಲ್ಲಿ ಇಡುವುದು ಒಳ್ಳೆಯದಲ್ಲ. ಏಕೆಂದರೆ ಮೀನುಗಳಿಗೆ ವಿಹರಿಸಲು ಇದರಲ್ಲಿ ಕಡಿಮೆ ಸ್ಥಳಾವಕಾಶ ದೊರೆಯುತ್ತದೆ.

5. ಅಧಿಕ ಮೀನುಗಳನ್ನು ಅಕ್ವೇರಿಯಂನಲ್ಲಿ ಇಡುವುದು ಅಪಾಯಕಾರಿ
ವಿಪರ್ಯಾಸವೆಂದರೆ ಇದು ಸಹ ಒಂದು ಕಟ್ಟು ಕತೆ. ಮೀನುಗಳಿಗೆ ಉಸಿರಾಡಲು ಅಗತ್ಯ ಪ್ರಮಾಣದ ಆಮ್ಲಜನಕದ ಅಗತ್ಯವಿದೆ. ಇಲ್ಲವಾದಲ್ಲಿ ಅವುಗಳು ಅದೇ ತೊಟ್ಟಿಯಲ್ಲಿ ಉಸಿರುಗಟ್ಟಿಕೊಂಡು ಸಾಯುತ್ತವೆ. ಇವುಗಳ ಮಲಗಳು ನೀರಿನಲ್ಲಿ ಕರಗಿ ಸಂಸ್ಕರಿಸಲ್ಪಟ್ಟರೆ ಒಳ್ಳೆಯದು, ಇಲ್ಲವಾದಲ್ಲಿ ಅದು ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ನೀರಿನಲ್ಲಿ ಇದನ್ನು ಸಂಸ್ಕರಿಸುವಂತಹ ಅಂಶಗಳು ಅಡಗಿವೆ. ಅದಕ್ಕಾಗಿ ಆ ನೀರನ್ನು ಆಗಾಗ ಬದಲಾಯಿಸುತ್ತ ಇರಬೇಕಾಗುತ್ತದೆ.

6. ಸ್ವಾಭಾವಿಕ ಪರಿಸರದ ನಾಶ
ಅಕ್ವೇರಿಯಂ ಅಂಗಡಿಗಳಲ್ಲಿರುವ ಮೀನುಗಳು ಸಾಕಲಾದ ಮೀನುಗಳ ಮರಿಗಳಾಗಿರುತ್ತವೆ. ಹಾಗಾಗಿ ಈ ಮೀನುಗಳು ತಮ್ಮ ಸ್ವಾಭಾವಿಕ ಪರಿಸರದಲ್ಲಿ ಬಾಳಲಾರವು. ಇವುಗಳನ್ನು ಕೆರೆ ಮತ್ತು ನದಿಯಂತಹ ಸ್ಥಳಗಳಲ್ಲಿ ಬಿಟ್ಟರೆ ಅವುಗಳ ಜೀವಜಾಲದ ಮೇಲೆ ಪ್ರಭಾವ ಬೀರುತ್ತವೆ. ಈ ಮೀನುಗಳನ್ನು ಅಗತ್ಯ ಪ್ರಮಾಣದ ಆಹಾರ ಸಿಗುವ ಮತ್ತು ಶತ್ರುಗಳಿಂದ ಮುಕ್ತವಾಗಿರುವ ಪರಿಸರದಲ್ಲಿಯೇ ಸಾಕಬೇಕಗುತ್ತದೆ.
ಆರೋಗ್ಯಕರವಾದ ಅಕ್ವೇರಿಯಂ ಅನ್ನು ಇಡುವುದು ಸುಲಭ. ಆದರೆ ಇದನ್ನು ಕಾಪಾಡಲು ನೀವು ತಿಂಗಳಿಗೆ ಒಮ್ಮೆಯೋ ಅಥವಾ ಎರಡು ಬಾರಿಯೋ ನೀರನ್ನು ಬದಲಾಯಿಸಬೇಕು. ಇದರಿಂದಾಗಿ ಮೀನುಗಳು ಆರೋಗ್ಯಕರವಾಗಿ ಮತ್ತು ಸದೃಢವಾಗಿ ಬೆಳೆಯುತ್ತವೆ. ನೀರು ಆರೋಗ್ಯಕರವಾಗಿದ್ದರೆ, ಮೀನುಗಳು ಸಹ ಆರೋಗ್ಯಕರವಾಗಿರುತ್ತವೆ. ಆಹಾರ ನೀರು ಉಳಿದು ಮೀನಿಗೆ ಮತ್ತೇನು ತಾನೇ ಬೇಕು.



Click it and Unblock the Notifications