Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ರಪಂಚದ 5 ಕುರೂಪಿ ನಾಯಿಗಳನ್ನು ನೋಡಿದ್ದೀರಾ?

ಪ್ರಪಂಚದಲ್ಲಿ 5 ಅತಿ ಕುರೂಪಿ ನಾಯಿಗಳು ಯಾವುವೆಂದು ಇಲ್ಲಿ ತಿಳಿಯಿರಿ.
1. ಚೈನೀಸ್ ಕ್ರೆಸ್ಟೆಡ್: ರೋಮವಿಲ್ಲದ ಈ ಅತಿ ಚಿಕ್ಕ ನಾಯಿ ಚೈನಾ ಮೂಲದ್ದು. ಈ ಕೂದಲಿಲ್ಲದ ನಾಯಿ ಮನುಷ್ಯರ ಚರ್ಮದ ತರಹ ಇದ್ದು, ಈ ನಾಯಿಗಳನ್ನು ಜೋಪಾನ ಮಾಡುವುದು ಕಷ್ಟವೆನಿಸಿದರೂ ತನ್ನ ಯಜಮಾನನಿಗೆ ಸಂತೋಷ ನೀಡುವುದಕ್ಕೆ ಸದಾ ಸಿದ್ಧ. ನೋಡಲು ತುಂಬಾ ತೆಳ್ಳಗಿರುವ ನಾಯಿ ಪ್ರಪಂಚದ ಗಮನವನ್ನು ತನ್ನೆಡೆ ಸೆಳೆದಿದೆ.
* ಶಿಃ ತ್ಸು: ಅತಿ ಎನಿಸುವಷ್ಟು ಕೂದಲು ಹೊಂದಿರುವ ಈ ನಾಯಿ ಕೂದಲಿನಲ್ಲಿ ಧೂಳು ತುಂಬಿಕೊಂಡಿರುವಂತೆ ಭಾಸವಾಗುತ್ತದೆ. ಇದು ಮಹಿಳೆಯರಿಗೆ ತುಂಬಾ ಅಚ್ಚು ಮೆಚ್ಚಿನ ನಾಯಿ ಎಂದೇ ಪ್ರಸಿದ್ಧವಾಗಿದ್ದು, ಇದರ ಪೋಷಣೆ ಸ್ವಲ್ಪ ಕಷ್ಟಕರವೂ ಹೌದು.
* ಚೈನೀಸ್ ಶಾರ್ ಪೀ: ಈ ಪ್ರಸಿದ್ಧ ನಾಯಿ ಮೈತುಂಬಾ ನೆರಿಗೆಗಳನ್ನು ಹೊಂದಿರುತ್ತದೆ. ತುಂಬಾ ಗಡುಸು ಚರ್ಮ ಮತ್ತು ಕಪ್ಪು ನಾಲಿಗೆ ಹೊಂದಿರುವ ವಿಶೇಷ ನಾಯಿ ಇದು.. ತುಂಬಾ ಚಿಕ್ಕ ಕಿವಿ ಮತ್ತು ಸುತ್ತಿಕೊಂಡ ಬಾಲ ಪಡೆದಿರುವ ಈ ನಾಯಿ ಉತ್ತಮ ಕಾವಲು ನಾಯಿಯೂ ಹೌದು.
* ವಿಪೆಟ್: ತುಂಬಾ ತೆಳುವಾಗಿರುವ, ದೇಹದಲ್ಲಿ ಎಲುಬುಗಳು ಎದ್ದುಕಾಣುವಂತಿರುವ ಈ ನಾಯಿ ನೋಡಲು ತುಂಬಾ ಕುರೂಪಿ ಎಂದರೂ ತಪ್ಪಿಲ್ಲ. ಆದರೆ ತುಂಬಾ ವೇಗವಾಗಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ತುಂಬಾ ನಿಯತ್ತಿನ ಪ್ರಾಣಿಯೂ ಹೌದು. ಅಪಾಯಕಾರಿ ಸಂದರ್ಭದಲ್ಲಿ ತನ್ನ ಯಜಮಾನನಿಗೆ ಸಹಕರಿಸಲು ಮುಂದಾಗುತ್ತೆ.
* ಸ್ಟಾಂಡರ್ಡ್ ಸ್ಕ್ನೌಝರ್: ಜರ್ಮನ್ ತಳಿಯ ಈ ನಾಯಿ ತುಂಬಾ ಕುರೂಪಿ. ಮೀಸೆಯನ್ನು ಹೊಂದಿರುವ ಸ್ಟಾಂಡರ್ಡ್ ಸ್ಕ್ನೌಝರ್ ನಿಮಗೆ ಒಳ್ಳೆ ಬಾಡಿ ಗಾರ್ಡ್ ಆಗಿರುತ್ತೆ. ಈ ನಾಯಿಯನ್ನು ಸಾಕುವುದು ಪ್ರತಿಷ್ಟೆಯ ವಿಷಯವಾಗಿದೆ.



Click it and Unblock the Notifications
