Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ನಿಮಗೆ ಸೂಕ್ತವಾದ ಐದು ಮುದ್ದು ನಾಯಿ ಯಾವುದು?

ಸ್ನೇಹಮಯಿಯಾಗಿರುವ 5 ಶ್ವಾನ ತಳಿಗಳು:
* ರಿಟ್ರೈವರ್: ಇದು ನಿಮ್ಮೊಂದಿಗೆ, ನಿಮ್ಮ ಕುಟುಂಬದೊಂದಿಗೆ ಹೊಂದಿಕೊಳ್ಳಬಹುದಾದ ಅತಿ ಮುದ್ದು ನಾಯಿ. ತನ್ನ ಯಜಮಾನನಿಗೆ ತುಂಬಾ ನಿಯತ್ತಾಗಿರುವ ಈ ನಾಯಿ ಮಕ್ಕಳಿಗೆ ಉತ್ತಮ ಸ್ನೇಹಿತ. ತುಂಬಾ ಅಪರೂಪಕ್ಕೆ ಹೆಚ್ಚು ಬೊಗಳುವ ನಾಯಿ, ತನ್ನನ್ನು ಇಷ್ಟ ಪಟ್ಟ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತವೆ. ಸೋಮಾರಿಯಲ್ಲದ ರಿಟ್ರೈವರ್ ಆಟದಲ್ಲಿ ಹೆಚ್ಚು ತೊಡಗಿಕೊಂಡಿರುತ್ತದೆ.
* ಬಾಕ್ಸರ್: ತುಂಬಾ ಚಟುವಟಿಕೆಯಿಂದಿರುವ ಬಾಕ್ಸರ್ ಒಂದೇ ನೋಟಕ್ಕೆ ಎಲ್ಲವನ್ನೂ ಗ್ರಹಿಸಿಬಿಡುತ್ತೆ. ಕುಟುಂಬದೊಂದಿಗೆ ಇರಲು ಹೆಚ್ಚು ಇಷ್ಟ ಪಡುವ ಈ ನಾಯಿ ತುಂಟಾಟದಲ್ಲಿ ಎತ್ತಿದ ಕೈ. ಮರಿಯಾಗಿದ್ದಾಗಿನಿಂದಲೇ ಮನೆಯಲ್ಲಿ ಅದಕ್ಕೆ ಚೆನ್ನಾಗಿ ಅಭ್ಯಾಸ ಕೊಟ್ಟರೆ ಕುಟುಂಬದೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುತ್ತದೆ.
* ಲ್ಯಾಬ್ರಡಾರ್: ಅತಿಯಾದ ಸ್ನೇಹಪರವಾದ ನಾಯಿ ಎಂದರೆ ಲ್ಯಾಬ್ರಡಾರ್. ಈ ತಳಿಯ ನಾಯಿ ಮಕ್ಕಳನ್ನು ತುಂಬಾ ಇಷ್ಟ ಪಡುತ್ತವೆ ಮತ್ತು ಮಕ್ಕಳ ರಕ್ಷಣೆಗೆ ನಿಲ್ಲುತ್ತವೆ. ನೀವು ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರೆ ಈ ನಾಯನ್ನು ಸಾಕಬಹುದು. ಅದಕ್ಕೆಂದು ಪ್ರತ್ಯೇಕ ವ್ಯವಸ್ಥೆಯನ್ನೂ ಈ ನಾಯಿ ಬಯಸುವುದಿಲ್ಲ. ಮನೆಗೆ ಬಂದ ನೆಂಟರೊಂದಿಗೂ ಸಹ ಬೇಗನೆ ಹೊಂದಿಕೊಳ್ಳುತ್ತದೆ.
* ಪಗ್: ತುಂಬಾ ಮುದ್ದಾಗಿರುವ ಪಗ್ ಎಂದರೆ ಯಾರಿಗಿಷ್ಟವಾಗೋದಿಲ್ಲ ಹೇಳಿ? ಪ್ರೀತಿಯಿಂದ ಟ್ರೈನಿಂಗ್ ಕೊಟ್ಟರೆ ಪಗ್ ನಿಮಗೆ ಉತ್ತಮ ಸಂಗಾತಿ. ಯಜಮಾನನ ಮೇಲೆ ಹೆಚ್ಚು ಅವಲಂಬಿತವಾಗುವ ಈ ಪಗ್ ಆದೇಶಗಳಿಗೆ ತಲೆಬಾಗಿ ನಡೆದುಕೊಳ್ಳುತ್ತದೆ. ಆದರೆ ಇದು ಕಚ್ಚುವುದರಿಂದ ಪೂರ್ಣ ಟ್ರೈನಿಂಗ್ ನಂತರ ಮಕ್ಕಳ ಬಳಿ ಬಿಡಬಹುದು.
* ಬೀಗಲ್: ಅತ್ಯಂತ ಮುದ್ದೆನಿಸುವ ಈ ನಾಯಿಗೆ ಹೆಚ್ಚು ಕೋಪವೂ ಬರುತ್ತದೆ. ವಾಸನೆ ಗ್ರಹಿಸುವ ಅಭ್ಯಾಸವನ್ನು ಹೆಚ್ಚು ಬೆಳೆಸಿಕೊಳ್ಳುವ ಈ ನಾಯಿಯನ್ನು ನಿಯಂತ್ರಿಸಲೂ ಕೆಲವೊಮ್ಮೆ ಕಷ್ಟವೆನಿಸಬಹುದು. ಆದರೆ ನಿಮ್ಮ ಮನೆಗೆ ಇದು ಸೂಕ್ತವಾದ ನಾಯಿಯಾಗುವುದರಲ್ಲಿ ಸಂಶಯವಿಲ್ಲ.



Click it and Unblock the Notifications
