Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪುಟ್ಟ ಪೊಮೆರೆನಿಯನನ್ನು ಹೇಗೆ ನೋಡಿಕೊಳ್ಳಬೇಕು?

ಪೊಮೆರೆನಿಯನ್ ನಾಯಿಗೆ ವ್ಯಾಯಾಮ, ತರಬೇತಿ ಹೇಗೆ?
1. ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ನಾಯಿಯನ್ನು ಹೊರಗೆ ಸುತ್ತಾಡಿಸಿದರೆ ಅದರ ಸೋಮಾರಿತನ ಕಡಿಮೆಯಾಗಿ ಚಟುವಟಿಕೆಯಿಂದಿರುತ್ತದೆ.
2. ಈ ತಳಿಯ ನಾಯಿಗಳಿಗೆ ಕಚ್ಚುವ ಅಭ್ಯಾಸ ಹೆಚ್ಚು. ಆದ್ದರಿಂದ ಮೊದಲಿಂದಲೇ ಅವಕ್ಕೆ ನಿಮ್ಮ ಆಜ್ಞೆ ಪಾಲಿಸುವಂತೆ ಅಭ್ಯಾಸ ನೀಡಬೇಕು. ಕೂರುವುದು, ನಿಲ್ಲುವುದು, ಏನಾದರೂ ವಸ್ತುವನ್ನು ತರುವಂತೆ ಹೇಳಿ ಅದನ್ನು ಅಭ್ಯಾಸ ಮಾಡಿದರೆ ಕ್ರಮೇಣ ಕಚ್ಚುವ ಅಭ್ಯಾಸವನ್ನು ಅದು ಕಡಿಮೆ ಮಾಡುತ್ತದೆ.
3. ಪೊಮೆರೆನಿಯನ್ ಗೆ ತುಂಬಾ ಹೆಚ್ಚು ಊಟ ಹಾಕಬಾರದು. ನಿಯಮಿತ ಊಟದ ನಂತರ ನಡಿಗೆಗೆ ಕರೆದುಕೊಂಡು ಹೋಗಬೇಕು.
4. ಈ ನಾಯಿಗಳಿಗೆ ಹೆಚ್ಚು ವ್ಯಾಯಾಮ ಮಾಡಿಸಬಾರದು. ವಯಸ್ಸಾಗುತ್ತಿದ್ದಂತೆ ಅವುಗಳ ಶಕ್ತಿ ಬೇಗನೆ ಕುಂದುವುದರಿಂದ ಸ್ವಲ್ಪ ನಡಿಗೆಯೇ ಸಾಕು.
5. ನಾಯಿಗೆ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಅಭ್ಯಾಸ ಮಾಡಿಸಬೇಕು. ಈ ಪುಟ್ಟ ನಾಯಿಗೆ ಅದೇ ಸಾಕಷ್ಟು ವ್ಯಾಯಾಮವಾದಂತಾಗುತ್ತದೆ.
6. ಬಣ್ಣ ಬಣ್ಣದ ಪ್ಲಾಸ್ಟಿಕ್ ಬಾಲ್ ಗಳನ್ನು ನಾಯಿಯ ಬಳಿ ಇಡಿ. ನಾಯಿ ಅವುಗಳೊಂದಿಗೆ ಆಟವಾಡಿಕೊಂಡು ಚಟುವಟಿಕೆಯಿಂದಿರುತ್ತದೆ. ತುಂಬಾ ಬುದ್ಧವಂತ ನಾಯಿಗಳಾದ ಪೊಮೆರೆನಿಯನ್ ನಿಮ್ಮ ಆಜ್ಞೆಯನ್ನೂ ಪಾಲಿಸಲು ಮುಂದಾಗುತ್ತದೆ.
7. ನಾಯಿಯ ಕೂದಲು ಹೆಚ್ಚು ಉದುರುವುದರಿಂದ ಅವುಗಳ ಕೂದಲಿನ ಪೋಷಣೆ ಮತ್ತು ಸ್ನಾನದ ಬಗ್ಗೆ ಗಮನವಹಿಸಬೇಕು
8. ಮೊದಲೇ ಹೇಳಿದಂತೆ ಈ ನಾಯಿಗೆ ಕಚ್ಚುವ ಅಭ್ಯಾಸ ಹೆಚ್ಚಿರುವುದರಿಂದ, ಅದಕ್ಕೆ ಸೂಕ್ತ ಲಸಿಕೆಯನ್ನು ಪಶುವೈದ್ಯರ ಬಳಿ ಹಾಕಿಸಿರಬೇಕು. ಅದರೊಂದಿಗೆ ಮನೆಯವರೂ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ನಾಯಿ ಕಚ್ಚಿದರೂ ಕೆಟ್ಟ ಪರಿಣಾಮ ಬೀರದಂತಹ ಚುಚ್ಚು ಮದ್ದನ್ನು ತೆಗೆದುಕೊಂಡಿರಬೇಕು.



Click it and Unblock the Notifications
