Latest Updates
-
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ -
ಹಣದುಬ್ಬರದ ಬಿಸಿ: ₹120ರ ಬಜೆಟ್ನಲ್ಲಿ ಪೌಷ್ಟಿಕ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? -
ನವರಾತ್ರಿ 3ನೇ ದಿನ: ಕೆಂಪು ಬಣ್ಣದ ಲುಕ್ನಲ್ಲಿ ಆಫೀಸ್ನಿಂದ ನೇರ ಗರ್ಬಾಗೆ ಮಿಂಚುವ ಸ್ಮಾರ್ಟ್ ಟಿಪ್ಸ್! -
ಮುಂಬೈನಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ, ಇಲ್ಲದಿದ್ದರೆ ಅಪಾಯ! -
ಬಿಗ್ ಬಾಸ್ 20 ನೋಡುವಾಗ ಮನೆಯಲ್ಲಿ ಜಗಳವಾ? ಶಾಂತಿಯುತವಾಗಿ ವೀಕ್ಷಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್! -
ದೆಹಲಿಯಲ್ಲಿ ಭಾರಿ ಮಳೆ: ನಿಮ್ಮ ಮನೆಯಲ್ಲಿ ನೀರು ಸೋರುವುದನ್ನು ತಡೆಯಲು 30 ನಿಮಿಷದ ತಕ್ಷಣದ ಸುರಕ್ಷತಾ ಕ್ರಮಗಳು -
ವಾರಾಣಸಿಯಲ್ಲಿ ನವರಾತ್ರಿ ವೇಳೆ ಮಾಂಸ ಮಾರಾಟ ಬಂದ್: ಪ್ರೋಟೀನ್ ಪರ್ಯಾಯಗಳು ಮತ್ತು ಸುರಕ್ಷಿತ ಆಹಾರದ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ದೆಹಲಿ ಮಳೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಮಾಡಿ ಈ 12 ನಿಮಿಷದ ಫಿಟ್ನೆಸ್ ವರ್ಕೌಟ್!
ಪಗ್ ಗೆ ಆಜ್ಞೆ ಮಾಡಬೇಡಿ, ಪ್ರೀತಿ ತೋರಿಸಿ

ಈ ಹಿಂದೆ ಪಗ್ ನಲ್ಲಿ ಯಾವ ಗುಣಗಳು ಇಲ್ಲ ಎಂಬುದರ ಬಗ್ಗೆ ತಿಳಿದೆವು. ಈಗ ಪಗ್ ನಲ್ಲಿರುವ ವಿಶೇಷ ಗುಣಗಳ ಬಗ್ಗೆ ನೋಡೋಣ:
* ಮಕ್ಕಳಿಗೆ ಒಳ್ಳೆ ಸ್ನೇಹಿತ: ಪಗ್ ನಾಯಿ ಮಕ್ಕಳಿಗೆ ತುಂಬಾ ಒಳ್ಳೆ ಸ್ನೇಹಿತ. ನೀವು ಮಕ್ಕಳಿಗೆ ಏನಾದರೂ ಉತ್ತಮ ಉಡುಗೊರೆ ಕೊಟ್ಟು ಖುಷಿ ಪಡಿಸಬೇಕು ಎಂದಿದ್ದರೆ ಪಗ್ ನಾಯನ್ನು ಕೊಟ್ಟು ನೋಡಿ, ನಿಜಕ್ಕೂ ಮಕ್ಕಳಿಗೆ ಅದರಿಂದ ಹೆಚ್ಚು ಸಂತೋಷ ದೊರಕುತ್ತದೆ. ಮಕ್ಕಳ ಗಮನ ಸೆಳೆಯಲು ಈ ನಾಯಿ ಏನನ್ನು ಬೇಕಾದರೂ ಮಾಡಲು ಸಿದ್ಧ. ಒಂದೊಂದು ಬಾರಿ ಮಕ್ಕಳು ಹೊಟ್ಟೆ ಹಿಡಿದು ನಗುವಂತೆಯೂ ಮಾಡುವ ಚಾಕಚಕ್ಯತೆ ಈ ನಾಯಿಗಿದೆ.
*ಎಲ್ಲೆಲ್ಲೂ ಹಾಜರು: ನೀವು ಎಲ್ಲಿ ಹೋದರೂ ಅಲ್ಲಿಗೆ ಈ ಮುದ್ದು ನಾಯಿ ಓಟ ಕಿತ್ತಿರುತ್ತದೆ. ಒಂದು ಕಡೆ ಕೂರದೆ ಸದಾ ನಿಮ್ಮ ಬಳಿ ಸುಳಿದಾಡುತ್ತಲೇ ಇರುತ್ತದೆ. ಅದಕ್ಕೆ ವಯಸ್ಸಾದರೂ ಸಹ ನಿಮ್ಮ ಬಳಿ ಸುಳಿದಾಡುವುದು ಮಾತ್ರ ಕಡಿಮೆಯಾಗುವುದಿಲ್ಲ. ಒಂದು ಬಾರಿ ಪ್ರೀತಿ ತೋರಿದರೆ ನಿಮ್ಮೊಂದಿಗೆ ಪಗ್ ಸದಾ ಇದ್ದೇ ಇರುತ್ತದೆ.
* ತುಂಬಾ ಸೂಕ್ಷ್ಮ: ಪಗ್ ನಾಯಿ ತುಂಬಾ ಸೂಕ್ಷ್ಮ. ವಾತಾವರಣಕ್ಕೆ ಬೇಗ ಹೊಂದಿಕೊಳ್ಳುವುದಿಲ್ಲ. ತುಂಬಾ ಬಿಸಿಯಿರಲಿ ಅಥವಾ ತುಂಬಾ ಥಂಡಿ ಇರಲಿ ಇದು ಸಹಿಸುವುದಿಲ್ಲ. ಭಾರತದ ಬಿರು ಬೇಸಿಗೆಯಲ್ಲಿ ಅದಕ್ಕೆಂದೇ ಎ.ಸಿ ಇರಬೇಕಷ್ಟೆ.
*ಆಹಾರ ಪ್ರಿಯ: ಪಗ್ ನಾಯಿ ಆಹಾರ ಪ್ರಿಯ. ಎಷ್ಟು ಕೊಟ್ಟರೂ ತಿನ್ನುತ್ತಲೇ ಇರುತ್ತದೆ. ಆದ್ದರಿಂದ ಪ್ರೀತಿಯೊಂದಿಗೆ ಹಿತ ಮಿತವಾದ ಆಹಾರ ಕೊಟ್ಟರೆ ನಿಮ್ಮ ಪ್ರೀತಿಗೆ ಸದಾ ಸಿದ್ಧ.
ಇಷ್ಟಲ್ಲಾ ಗುಣಾವಗುಣಗಳನ್ನು ನೋಡಿದಾಗ ಪಗ್ ಮುಗ್ಧತನ ನಿಜಕ್ಕೂ ನಿಮ್ಮ ಮನಸ್ಸು ಗೆದ್ದಿರುತ್ತದೆ. ನೀವು ಪಗ್ ಕೊಂಡುಕೊಂಡು ನಿಮ್ಮ ಮಕ್ಕಳಿಗೆ ಉಡುಗೊರೆ ನೀಡುವ ಕುರಿತು ಯೋಚಿಸುತ್ತಿರಬಹುದು.



Click it and Unblock the Notifications
