Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪುಟಾಣಿ ನಾಯಿ ಪಗ್ ಬಗ್ಗೆ ನಿಮಗೆ ಎಷ್ಟು ಗೊತ್ತು?

ಅವುಗಳು ಏನು ಗುಣ ವಿಶೇಷತೆಯನ್ನು ಹೊಂದಿದೆ ಎಂಬುದನ್ನು ತಿಳಿಯುವುದಕ್ಕಿಂತ ಮುಂಚೆ ಅವುಗಳು ಯಾವ ಗುಣವನ್ನು ಹೊಂದಿಲ್ಲ ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳಿ.
* ಕಾವಲು ನಾಯಿಯಲ್ಲ: ನೀವು ಮನೆಯಲ್ಲಿರದಿದ್ದರೆ ನಿಮ್ಮ ಪಗ್ ನಾಯಿ ಕೂಡ ಮನೆ ಕಾಯಲು ತಯಾರಿರುವುದಿಲ್ಲ. ಪಗ್ ಒಂಟಿಯಾಗಿ ಕಾಲ ಕಳೆಯಲು ಬಯಸದ ವಿಚಿತ್ರ ನಾಯಿ. ಅದರಲ್ಲೂ ಹೊಸ ಜಾಗದಲ್ಲಿ ಹೊಂದಿಕೊಳ್ಳಲು ಅದಕ್ಕೆ ತುಂಬಾ ಕಾಲ ಹಿಡಿಯುತ್ತದೆ.
* ರಕ್ಷಣೆಗೆ ಒಲ್ಲದು: ನಿಮ್ಮ ನಾಯಿಯಿಂದ ನೀವು ರಕ್ಷಣೆಯನ್ನು ನಿರೀಕ್ಷಿಸುತ್ತೀರಿ ಎಂದಾದರೆ ಪಗ್ ಆಯ್ಕೆ ಕುರಿತು ಚಿಂತಿಸಲೇಬಾರದು. ಏಕೆಂದರೆ ಇದು ಯಾರಿಗೂ ಹಾನಿ ಮಾಡದಂತಹ ಶ್ವಾನ ತಳಿ. ಅಷ್ಟು ಕ್ರೂರವಾಗಿ ವರ್ತಿಸಲೂ ಪಗ್ ಗೆ ಬರುವುದಿಲ್ಲ ಮತ್ತು ಹೊರಗಿನವರ ಮೇಲೂ ದಾಳಿ ಮಾಡಲು ಇವು ಸಮರ್ಥವಲ್ಲ. ಹೊರಗಿನವರು ಬಂದರೆ ತಾನೇ ಬಚ್ಚಿಕೊಳ್ಳುವ ವಿಚಿತ್ರ ರೀತಿಯ ಪುಟ್ಟ ನಾಯಿ ಇದು.
* ಬುದ್ಧಿವಂತ ನಾಯಿಯಲ್ಲ: ಪಗ್ ನಾಯಿಗಳು ಅಷ್ಟೇನೂ ಬುದ್ಧಿವಂತ ನಾಯಿಯಲ್ಲ. ಸಾಕು ನಾಯಿ ತುಂಬಾ ಬುದ್ಧಿವಂತಿಕೆ ಹೊಂದಿರಬೇಕು ಎಂದು ಬಯಸಿದರೆ ಪಗ್ ನಿಮ್ಮ ಆಯ್ಕೆಯಾಗದಿರಲಿ. ನಿರಾಕರಿಸುವಷ್ಟು ಪೆದ್ದುತನ ಪಗ್ ಗೆ ಇಲ್ಲದಿದ್ದರೂ ಅಷ್ಟೇನೂ ಬುದ್ಧಿವಂತಿಕೆಯೂ ಅದಕ್ಕೆ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
* ಪಳಗುವಿಕೆ: ಪಗ್ ನಾಯಿಗಳು ತುಂಬಾ ನಿಧಾನಗತಿಯಲ್ಲಿ ಅಭ್ಯಾಸಕ್ಕೆ ಹೊಂದುಕೊಳ್ಳುತ್ತವೆ. ತಕ್ಷಣವೇ ಪಳಗಲು ಅವುಗಳಿಗೆ ಸಾಧ್ಯವಿಲ್ಲ. ಇದು ಆಜ್ಞೆಗಿಂತ ಹೆಚ್ಚಾಗಿ ಭಾವನೆಗಳಿಗೆ ಬೇಗನೆ ಸ್ಪಂದಿಸುತ್ತದೆ.
* ನಡಿಗೆ: ನಾಯಿ ಸಾಮಾನ್ಯವಾಗಿ ಹೆಚ್ಚು ನಡೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದರೆ ಪಗ್ ಯಾವಾಗಲೂ ನಿಮ್ಮ ತೊಡೆಯ ಮೇಲೆ ಓಡಾಡಿಕೊಂಡು ಅಲ್ಲೇ ತಿರುಗುತ್ತಿರುತ್ತವೆ.
ಪಗ್ ನಾಯಿಗೆ ಯಾವ ಗುಣಗಳಿರುವುದಿಲ್ಲ ಎಂದು ನೋಡಿದಿರಿ, ಮುಂದಿನ ಪುಟದಲ್ಲಿ ಪಗ್ ಯಾವ ವಿಶೇಷತೆಯನ್ನು ಹೊಂದಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ..



Click it and Unblock the Notifications
