Latest Updates
-
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ
ಗುಲಾಬ್ ಜಾಮೂನು ಮೊದಲು ಎಲ್ಲಿ ತಯಾರಿಸಿದ್ದು ಗೊತ್ತೇ? ಭಾರತದಲ್ಲಂತೂ ಅಲ್ಲ!
ಭಾರತೀಯರಲ್ಲಿ ನಿಮ್ಮ ಫೇವರೇಟ್ ಸ್ವೀಟ್ ಯಾವುದು ಅಂತ ಹೇಳಿದ್ರೆ ಬಹುಶಃ ಹೆಚ್ಚಿನವರ ಉತ್ತರ ಗುಲಾಬ್ ಜಾಮೂನ್ ಆಗಿರುತ್ತೆ. ಭಾರತೀಯರ ಮನೆಗಳಲ್ಲಿ ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ಗುಲಾಬ್ ಜಾಮೂನ್ ಖಂಡಿತ ಮಾಡಲಾಗುತ್ತದೆ. ಗುಲಾಬ್ ಜಾಮೂನ್ ತಿನ್ನೋದಕ್ಕೆ ತುಂಬಾನೇ ರುಚಿಯಾಗಿರುತ್ತೆ. ಸಕ್ಕರೆ ಪಾಕದಲ್ಲಿ ಅದ್ದಿರೋದ್ರಿಂದ ಗುಲಾಬ್ ಜಾಮೂನ್ ಅನ್ನು ಬಾಯಲ್ಲಿ ಇಟ್ಟ ತಕ್ಷಣ ಕರಗುತ್ತದೆ.
ಭಾರತ ಮಾತ್ರವಲ್ಲದೇ ಭಾರತದ ಅಕ್ಕ-ಪಕ್ಕದಲ್ಲಿರೋ ರಾಜ್ಯಗಳಾದ ನೇಪಾಳ, ಮಯನ್ಮಾರ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಕೂಡ ಗುಲಾಬ್ ಜಾಮೂನ್ ತುಂಬಾನೇ ಫೇಮಸ್. ಅಷ್ಟಕ್ಕು ಇಷ್ಟೊಂದು ಫೇಮಸ್ ಆಗಿರೋ ಗುಲಾಬ್ ಜಾಮೂನ್ ಅನ್ನು ಮೊದಲಿಗೆ ತಯಾರು ಮಾಡಿದ್ದು ಯಾರು ಗೊತ್ತಾ? ಗುಲಾಬ್ ಜಾಮೂನ್ ಹುಟ್ಟಿಕೊಂಡಿದ್ದು, ಹೇಗೆ ಅನ್ನೋ ವಿಚಾರವನ್ನು ತಿಳಿದುಕೊಳ್ಳೋಣ.

ಗುಲಾಬ್ ಜಾಮೂನ್ ಮೊದಲಿಗೆ ತಯಾರಾಗಿದ್ದು ಎಲ್ಲಿ?
ಭಾರತದಲ್ಲೇ ಗುಲಾಬ್ ಜಾಮೂನ್ ಅನ್ನು ಜನ ಹೆಚ್ಚಾಗಿ ಸೇವಿಸ್ತಿರೋದ್ರಿಂದ ಎಲ್ಲರೂ ಗುಲಾಬ್ ಜಾಮೂನ್ ಭಾರತದಲ್ಲಿಯೇ ತಯಾರಾಗಿರ್ಬಹುದು ಅಂತ ಅಂದುಕೊಂಡಿದ್ರು. ಆದ್ರೆ ಶಾಕಿಂಗ್ ವಿಚಾರ ಏನಪ್ಪಾ ಅಂದ್ರೆ ಗುಲಾಬ್ ಜಾಮೂನ್ ಮೊದಲಿಗೆ ತಯಾರಾಗಿದ್ದು ಪರ್ಷಿಯಾದಲ್ಲಿ. ಭಾರತಕ್ಕೆ ಮೊಘಲರು ಆಕ್ರಮಣ ಮಾಡಿದ್ರಿಂದ ನಮಗೂ ಗುಲಾಬ್ ಜಾಮೂನ್ ಪರಿಚಯವಾಗುವಂತಾಯ್ತು. ಇದಾದ ಬಳಿಕ ಭಾರತದಲ್ಲಿ ಗುಲಾಬ್ ಜಾಮೂನ್ ತಯಾರಿಕೆ ಭಾರತದಲ್ಲಿ ವ್ಯಾಪಕವಾಯ್ತು ಅಂತ ಹೇಳಲಾಗುತ್ತದೆ.
ಗುಲಾಬ್ ಜಾಮೂನ್ ಮೊದಲಿಗೆ ತಯಾರಿಸಿದ್ಯಾರು?
ಗುಲಾಬ್ ಜಾಮೂನ್‌ನ ಮೂಲಕ್ಕೆ ಸಂಬಂಧಿಸಿದಂತೆ ಹಲವು ವಿಭಿನ್ನ ಆಕರ್ಷಕ ಕಥೆಗಳಿವೆ. ಒಂದು ಇತಿಹಾಸದ ಪ್ರಕಾರ ಇದನ್ನು ಆಕಸ್ಮಿಕವಾಗಿ ಷಹಜಹಾನ್‌ನ ರಾಜಮನೆತನದ ಬಾಣಸಿಗನಾದ ಖಾನ್ಸಾಮಾನು ಪರ್ಷಿಯನ್ ಸಂಪ್ರದಾಯದಿಂದ ಸ್ಫೂರ್ತಿ ಪಡೆದು ತಯಾರಿಸಿದ್ದನು ಅಂತ ಹೇಳಲಾಗುತ್ತದೆ.
ಪರ್ಷಿಯನ್ ಸಿಹಿತಿಂಡಿಯಾದ 'ಬಾಮಿಹ್' ಮತ್ತು ಟರ್ಕಿಶ್ ನ 'ತುಲುಂಬಾ' ಎರಡೂ ಕೂಡ ಸುವಾಸನೆ ವಿನ್ಯಾಸಗಳಲ್ಲಿ ಗುಲಾಬ್ ಜಾಮೂನ್ ಅನ್ನು ಹೋಲುತ್ತವೆ. ಇವೆರಡೂ ಎಣ್ಣೆಯಲ್ಲಿ ಹುರಿದು ಸಕ್ಕರೆ ಪಾಕದಲ್ಲಿ ಅದ್ದಿದ ಸ್ಪಂಜಿನ ಚೆಂಡಿನಂತಿದೆ. ಈ ಸಿಹಿತಿಂಡಿಗಳು ಮೊಘಲ್ ಅಡುಗೆಯವರಿಂದ ಸ್ಫೂರ್ತಿಯನ್ನು ಪಡೆದುಕೊಂಡಿದೆ. ಅರಬ್ ಸಿಹಿತಿಂಡಿ 'ಲುಕ್ಮತ್ ಅಲ್-ಖಾದಿ' ಕೂಡ ಗುಲಾಬ್ ಜಾಮೂನ್ ಅನ್ನು ಹೋಲುತ್ತದೆ, ಆದರೆ ಇಲ್ಲಿ ವಿಭಿನ್ನ ಹಿಟ್ಟನ್ನು ಬಳಸಲಾಗುತ್ತದೆ.
ಪ್ರಸಿದ್ಧ ಆಹಾರ ಇತಿಹಾಸಕಾರ ಮತ್ತು ಬರಹಗಾರ ಮೈಕೆಲ್ ಕ್ರೊಂಡ್ಲ್ ಅವರು ತಮ್ಮ ಪುಸ್ತಕ 'ದಿ ಡೋನಟ್: ಹಿಸ್ಟರಿ, ರೆಸಿಪಿಸ್ ಮತ್ತು ಲೋರ್ ಫ್ರಂ ಬೋಸ್ಟನ್ ಟು ಬರ್ಲಿನ್' ನಲ್ಲಿ ಗುಲಾಬ್ ಜಾಮೂನ್ ಯಾವ ರೀತಿ ಪರಿಚಯವಾಯ್ತು ಅನ್ನೋದು ಉಲ್ಲೇಖವಾಗಿದೆ. ಆದರೆ ಈಗ ಭಾರತದಲ್ಲಿ ತಯಾರಾಗೋ ಗುಲಾಬ್ ಜಾಮೂನ್ ತಯಾರಿಕಾ ವಿಧಾನ ಕೊಂಚ ಭಿನ್ನವಾಗಿದೆ.
'ಗುಲಾಬ್ ಜಾಮೂನ್' ಪದ ಹುಟ್ಟಿಕೊಂಡಿದ್ಹೇಗೆ?
ಈ ರುಚಿಕರವಾದ ಸಿಹಿ ಖಾದ್ಯಕ್ಕೆ ಈ ಸುಂದರವಾದ ಹೆಸರಾದ 'ಗುಲಾಬ್ ಜಾಮೂನ್' ಹೇಗೆ ಬಂದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರಬಹುದು. 'ಗುಲಾಬ್' ಎಂಬ ಪದವನ್ನು ಪರ್ಷಿಯನ್ ಪದ 'ಗೋಲ್' ಮತ್ತು 'ಅಬ್' ನಿಂದ ಪಡೆಯಲಾಗಿದೆ. ಹಾಗಾಂದ್ರೆ ಹೂವು ಮತ್ತು ನೀರು ಎಂದರ್ಥ.
ಇದು ರೋಸ್ ವಾಟರ್ ಪರಿಮಳಯುಕ್ತ ಸಿರಪ್ ಅನ್ನು ಉಲ್ಲೇಖಿಸುತ್ತದೆ. ಇನ್ನೊಂದು ಪದವಾದ 'ಜಾಮೂನ್' ಎಂಬುದು ಜನಪ್ರಿಯ ಭಾರತೀಯ ಹಣ್ಣು ಬ್ಲ್ಯಾಕ್ ಪ್ಲಮ್‌ನ ಹಿಂದಿ-ಉರ್ದು ಪದವಾಗಿದ್ದು, ಇದು ಬಹುತೇಕ ಒಂದೇ ಆಕಾರ ಮತ್ತು ಗಾತ್ರವನ್ನು ಹೊಂದಿದೆ. ಆದ್ದರಿಂದ ಈ ಸಿಹಿ ತಿಂಡಿಗೆ ಗುಲಾಬ್ ಜಾಮೂನ್ ಎಂಬ ಹೆಸರು ಬಂದಿದೆ.
ಗುಲಾಬ್ ಜಾಮೂನ್ ತಯಾರು ಮಾಡೋದು ಹೇಗೆ?
ಗುಲಾಬ್ ಜಾಮೂನ್ ತಯಾರು ಮಾಡೋದು ತುಂಬಾನೇ ಸುಲಭ. ಅಂಗಡಿಯಲ್ಲಿ ಗುಲಾಬ್ ಜಾಮೂನ್ ಪುಡಿ ಲಭ್ಯವಾಗುತ್ತದೆ. ಇದು ಹಾಲಿನ ಪುಡಿಯ ಮಿಶ್ರಣದಂತಿರುತ್ತದೆ. ಈ ಗುಲಾಬ್ ಜಾಮೂನ್ ನ ಪುಡಿಗೆ ಉಂಡೆ ಕಟ್ಟಲು ಬೇಕಾದಷ್ಟು ಹಾಲನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
ಆನಂತರ ಇದರ ಮೇಲೆ ಸ್ವಲ್ಪ ತುಪ್ಪಾ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಇಷ್ಟೊತ್ತಿಗಾಗಲೇ ತಯಾರಿಸಿದ ಮಿಶ್ರಣ ಒಂದು ಹದಾಕ್ಕೆ ಬರುತ್ತದೆ. ನಂತರ ಕೈಗೆ ತುಪ್ಪು ಸವರಿಕೊಂಡು ಚಿಕ್ಕ ಚಿಕ್ಕದಾಗಿ ಉಂಡೆ ಕಟ್ಟಿ ಒಂದು ಪ್ರಾತ್ರೆಗೆ ಹಾಕಿ. ಇದಾದ ಬಳಿಕ ಎಣ್ಣೆ ಕಾಯಲು ಇಟ್ಟು ಉರಿಯನ್ನು ಮಧ್ಯಮ ಗಾತ್ರದಲ್ಲಿ ಇಡಿ. ಈಗ ಬಿಸಿಯಾದ ಎಣ್ಣೆ ಉಂಡೆಗಳನ್ನು ಹಾಕಿ.
ಹದಾ ಉರಿಯಲ್ಲಿಟ್ಟು ಕಾಯಿಸಬೇಕು. ಆ ನಂತರ ಕಂದು ಬಣ್ಣಕ್ಕೆ ತಿರುಗುವಾಗ ಅದನ್ನು ತೆಗೆಯಿರಿ. ಮತ್ತೊಂದು ಕಡೆಯಲ್ಲಿ ಸಕ್ಕರೆ ಹಾಗೂ ನೀರು ಹಾಕಿ ಸಕ್ಕರೆಯ ಪಾಕ ತಯಾರಿಸಿ. ಇನ್ನೂ ಸಕ್ಕರೆ ಪಾಕ ತಣಿದ ಮೇಲೆ ಅದಕ್ಕೆ ಏಲಕ್ಕಿ ಹಾಗೂ ಕೇಸರಿಯನ್ನು ಹಾಕಿ. ಇನ್ನೂ ಈ ತಣಿದ ಸಕ್ಕರೆ ಪಾಕಕ್ಕೆ ಖರಿದ ಉಂಡೆಗಳನ್ನು ಹಾಕಿ. ಒಂದೆರಡು ಗಂಟೆ ಬಿಟ್ಟು ತಿನ್ನಿ.
ಗುಲಾಬ್ ಜಾಮೂನ್ ನ ವಿಧಗಳ್ಯಾವುದು?
ಸಾಮಾನ್ಯವಾಗಿ ನಾವು ಕಂದು ಹಾಗೂ ಕಪ್ಪು ಬಣ್ಣದ ಗುಲಾಬ್ ಜಾಮೂನ್ ಮಾತ್ರ ತಿಂದಿರ್ತೀವಿ. ಗುಲಾಬ್ ಜಾಮೂನ್ ಗೆ ಕಂದು ಬಣ್ಣ ಬರೋದಕ್ಕೆ ಕಾರಣ ಅದರಲ್ಲಿರುವ ಘನ ಹಾಲು ಮತ್ತು ಸಕ್ಕರೆಯ ಅಂಶ. ಕರ್ನಾಟಕದಲ್ಲಿ ನಮಗೆ ಕಪ್ಪು ಬಣ್ಣದ ಜಾಮೂನ್ ಹೆಚ್ಚಾಗಿ ಕಾಣ ಸಿಗೋದಿಲ್ಲ. ಉತ್ತರ ಭಾರತದಲ್ಲಿ ಹೆಚ್ಚಾಗಿ ಇದನ್ನು ತಯಾರಿಸುತ್ತಾರೆ.
ಗುಲಾಬ್ ಜಾಮೂನ್ ನ ಹೊರತಾಗಿ ಭಾರತೀಯರ ಯಾವುದೇ ಹಬ್ಬಗಳು ಸಂಪೂರ್ಣ ಆಗೋದಿಲ್ಲ. ಮದುವೆಯಿಂದ ಹಿಡಿದು ಯಾವುದೇ ಶುಭ ಸಮಾರಂಭಗಳಾದರೂ ಗುಲಾಬ್ ಜಾಮೂನ್ ಇದ್ದೇ ಇರುತ್ತದೆ.



Click it and Unblock the Notifications

