Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈರುಳ್ಳಿ ಕತ್ತರಿಸೋ ಈ ಟ್ರಿಕ್ಸ್ ನೋಡಿದ್ರೆ ಅಚ್ಚರಿಯಾಗುತ್ತೆ..! ನಿಮಿಷದಲ್ಲಿ ಕಟ್ ಮಾಡೋ ಟಿಪ್ಸ್!!
ನೀವು ಅಡುಗೆ ಮನೆಯಲ್ಲೇ ಅತೀ ಹೆಚ್ಚು ಸಮಯ ಕಳೆಯುತ್ತೀರಾ? ಆದ್ರೆ ಕೆಲವೊಂದು ಟಿಪ್ಸ್‌ಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ಅಡುಗೆ ಮನೆಯಲ್ಲಿ ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಕೆಲಸಗಳು ಇದ್ದೇ ಇರುತ್ತೆ. ಕೆಲವೊಮ್ಮೆ ಸಮಯ ಇಲ್ಲದಾಗ ಅಡುಗೆ ಮನೆ ದೊಡ್ಡ ಸವಾಲಿನಂತೆ ಕಾಣಿಸುತ್ತದೆ. ಹಾಗೆ ಕೆಲವೊಂದು ಕೆಲಸಗಳು ನಿತ್ಯ ಸಮಯ ಹಾಳು ಮಾಡುವುದಲ್ಲದೆ ದೊಡ್ಡ ಕಿರಿಕಿರಿಗೂ ಕಾರಣವಾಗುತ್ತೆ.
ಅದರಲ್ಲೂ ಅಡುಗೆ ಮನೆ ಕೆಲಸ ಅಂದರೆ ಊಟಕ್ಕೆ ಬಗೆ ಬಗೆಯ ಖಾದ್ಯಗಳ ರೆಡಿ ಮಾಡುವುದು, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಸಾಂಬಾರ್, ಚಟ್ನಿ, ಪಲ್ಯ ಹೀಗೆ ಒಂದಾದರು ಬಗೆ ಮಾಡಿಯೇ ಮಾಡುತ್ತೀರಿ, ಇದು ವರ್ಷದಲ್ಲಿ ಎಲ್ಲಾ ದಿನವೂ ಕಾಮನ್, ಆದರೆ ಖಾದ್ಯಗಳ ರೆಡಿ ಮಾಡುವುದಕ್ಕೂ ಮೊದಲು ಅವುಗಳ ಮಾಡಲು ಬೇಕಾಗುವ ತಯಾರಿಯೇ ದೊಡ್ಡ ಸವಲಾಗುತ್ತದೆ.

ಅಡುಗೆ ಮಾಡುವಾಗ ಪ್ರಮುಖವಾಗಿ ಕಾಡುವುದು ತರಕಾರಿ ಹೆಚ್ಚಿಕೊಳ್ಳುವುದು. ಯಾವುದೇ ಖಾದ್ಯ ಇರಲಿ ಅದಕ್ಕೆ ಟೊಮೆಟೋ ಮತ್ತು ಈರುಳ್ಳಿಯ ಬಳಸುತ್ತೇವೆ. ಹಾಗೆ ಹೆಚ್ಚಿಕೊಳ್ಳುತ್ತೇವೆ. ನಿಮಗೆ ಟೊಮೆಟೋ ಮತ್ತು ಈರುಳ್ಳಿ ಹೆಚ್ಚುವುದು ಅಂದರೆ ದೊಡ್ಡ ಸಂಕಷ್ಟದಂತೆ ಕೆಲವೊಮ್ಮೆ ಕಾಣಬಹುದು. ಏಕೆಂದರೆ ಈರುಳ್ಳಿ ಹೆಚ್ಚುವಾಗ ಕಣ್ಣು ಉರಿ ಬರುವುದು ಹಾಗೆ ಸಮಯವೂ ಹೆಚ್ಚು ತೆಗೆದುಕೊಳ್ಳಬಹದು. ಇನ್ನೊಂದು ಕಡೆ ಟೊಮೆಟೋ ಹೆಚ್ಚುವಾಗ ಅದು ಬಹಳ ಹಣ್ಣಾಗಿದ್ದರೆ ನೀವು ಕಷ್ಟಪಡಬೇಕಾಗುತ್ತದೆ.
ಆದರೆ ಕೆಲವೊಂದು ಟ್ರಿಕ್ಸ್ ನಿಮಗೆ ತಿಳಿದಿದ್ದರೆ ಬಹಳ ಸುಲಭವಾಗಿ ಈ ಎರಡೂ ಕೆಲಸ ಮಾಡಿ ಮುಗಿಸಬಹುದು. ಈಗಂತು ತರಕಾರಿಗಳ ಹೆಚ್ಚಲೆಂದೇ ಸಣ್ಣ ಪುಟ್ಟ ಯಂತ್ರಗಳಿಂದ ಹಿಡಿದು ಸಲಕರಣೆಗಳು ಕೂಡ ಬಂದಿದೆ. ಒಂದು ಕಡೆ ಈರುಳ್ಳಿ ಒಟ್ಟು ಒತ್ತಿದರೆ ಕಟ್ ಆಗಿ ಇನ್ನೊಂದು ಕಡೆ ಬರುತ್ತದೆ. ಆದ್ರೆ ಇದೆಲ್ಲದಕ್ಕಿಂತ ಸುಲಭವಾಗಿ ಈರುಳ್ಳಿ ಹಾಗೂ ಟೊಮೆಟೋ ನಿಮಿಷದಲ್ಲಿ ಕತ್ತರಿಸುವ ಈ ಟ್ರಿಕ್ಸ್ ನೀವು ನೋಡಿದ್ದೀರಾ?
ಆನ್‌ಲೈನ್‌ನಲ್ಲಿ ಕೆಲವೊಂದು ಟಿಪ್ಸ್ ವಿಡಿಯೋಗಳು ನಿಮ್ಮ ಕೆಲಸಗಳ ಕಡಿಮೆ ಮಾಡಲಿವೆ. ಇಂತಹ ಒಂದು ಟಿಪ್ಸ್ ನೀಡುವ ವಿಡಿಯೋ ಕುರಿತು ನಾವಿಂದು ತಿಳಿದಕೊಳ್ಳೋಣ. ಅದರಲ್ಲೂ ಟೊಮೆಟೋ, ಈರುಳ್ಳಿ ಕತ್ತರಿಸಲು ಈ ರೀತಿ ಮಾಡಿ. ನಿಮ್ಮ ಮನೆಯಲ್ಲಿ ಸೌತೆಕಾಯಿಯ ಸಿಪ್ಪೆ ಬಿಡಿಸುವ ಕಟರ್ ಇದ್ದೇ ಇರುತ್ತೆ. ಇದರಿಂದ ನೀವು ಸೌತೆಕಾಯಿ, ಆಲೂಗಡ್ಡೆ, ಬೀಟ್ರೂಟ್, ಕ್ಯಾರೆಟ್‌ನ ಸಿಪ್ಪೆಯನ್ನು ಸುಲಭವಾಗಿ ಸುಲಿದಿರುತ್ತೀರಿ. ಇದೇ ಕಟರ್‌ನಿಂದ ಈರುಳ್ಳಿ, ಟೊಮೆಟೋ ಅನ್ನು ನಿಮಿಷದಲ್ಲಿ ಸ್ಲೈಸ್ ಮಾಡಬಹುದು.
ಮೊದಲು ಒಂದು ಈರುಳ್ಳಿಯ ಸಿಪ್ಪೆಯನ್ನು ತೆಗೆದು ಅದರ ಕೆಳಗೆ ಗ್ರಿಪ್‌ಗಾಗಿ ಒಂದು ಸ್ಪೂನ್ ಚುಚ್ಚಿಕೊಳ್ಳಿ. ಅನಂತರ ಈ ಕಟರ್‌ನಿಂದ ಈರುಳ್ಳಿಯನ್ನು ಸುಲಭವಾಗಿ ಕತ್ತರಿಸಿಕೊಳ್ಳಿ. ಚಮಚದ ಮೂಲಕ ಹಿಡಿದುಕೊಂಡು ನಿಮಿಷದಲ್ಲಿ ಸ್ಲೈಸ್ ಮಾಡಬಹುದು. ಹಾಗೆ ಟೊಮೆಟೋವನ್ನು ಕೂಡ ಇದೇ ರೀತಿ ಕಟರ್ ಮೂಲಕ ಸ್ಲೈಸ್ ಮಾಡಬಹುದು.
ಈ ಟ್ರಿಕ್ಸ್ ಒಂದು ವಿಡಿಯೋದಲ್ಲಿ ಹೇಳಲಾಗಿದ್ದು ಈ ವಿಡಿಯೋ ನೋಡಿದ ಮಂದಿ ಅಚ್ಚರಿ ಹೊರಹಾಕಿದ್ದಾರೆ, ಇಷ್ಟು ದಿನ ಈರುಳ್ಳಿಯನ್ನು ಕಷ್ಟಪಟ್ಟು ಕಣ್ಣಲ್ಲಿ ನೀರು ಸುರಿಸಿ ಕತ್ತರಿಸುತ್ತಿದ್ದವರು ಈ ಟ್ರಿಕ್ಸ್‌ಗೆ ಫಿದಾ ಆಗಿದ್ದಾರೆ. ಇಷ್ಟೊಂದು ಸುಲಭವಾಗಿ ಈರುಳ್ಳಿ ಸ್ಲೈಸ್ ಮಾಡಬಹುದು ಎಂಬುದನ್ನು ತಿಳಿದು ಅಚ್ಚರಿ ಹೊರಹಾಕಿದ್ದಾರೆ. ನೀವು ಕೂಡ ಹಲವು ಈರುಳ್ಳಿ ಖಾದ್ಯ ಮಾಡುವಾಗ ಈ ರೀತಿ ಟ್ರಿಕ್ಸ್ ಬಳಸಿ ನಿಮಿಷದಲ್ಲಿ ಎಷ್ಟೇ ಈರುಳ್ಳಿ ಇದ್ದರೂ ಕತ್ತರಿಸಹುದು.



Click it and Unblock the Notifications