Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಗ್ಯಾಸ್ 2-3 ತಿಂಗಳು ಬರಬೇಕು ಅಂದ್ರೆ ಏನು ಮಾಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ನಾವು ಮನೆಯಲ್ಲಿ ಅಡುಗೆಗೆ ಎಲ್‌ಪಿಸಿ ಸಿಲಿಂಡರ್ ಬಳಸುತ್ತೇವೆ. ಒಮ್ಮೆ ಇದು ಖಾಲಿಯಾಗುವ ಮುನ್ನ ಹೊಸದೊಂದು ಸಿಲಿಂಡರ್‌ಗೆ ಆರ್ಡರ್ ಮಾಡುತ್ತೇವೆ, ಖಾಲಿ ಆಗುವ ಮುನ್ನವೇ ನಮ್ಮ ಅರಿವಿಗೂ ಇದು ಬರುತ್ತದೆ. ಕೆಲವರ ಮನೆಯಲ್ಲಿ ಎಲ್‌ಪಿಜಿ ಒಂದು ತಿಂಗಳು ಬರುತ್ತದೆ, ಮತ್ತೆ ಕೆಲವರ ಮನೆಯಲ್ಲಿ 2 ತಿಂಗಳು ಸಹ ಬರಬಹುದು. ಅವರು ಎಷ್ಟು? ಹೇಗೆ ಬಳಸುತ್ತಾರೆ ಎಂಬುದರ ಮೇಲೆ ದಿನಗಳು ಸಹ ಬದಲಾಗುತ್ತದೆ.
ಇತ್ತೀಚಿಗೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು ನಿಮಗೆ ಗೊತ್ತಿದೆ. ತರಕಾರಿಯಿಂದ ಹಿಡಿದು ಪ್ರತಿಯೊಂದು ವಸ್ತು ಈಗ ದುಬಾರಿಯಾಗಿವೆ. ಇನ್ನು ಎಲ್‌ಪಿಜಿ ದರವೂ ಸಹ ತಿಂಗಳಿನ ಮೊದಲ ದಿನ ಪರಿಷ್ಕೃತವಾಗುತ್ತದೆ. ಕೆಲ ವರ್ಷಗಳಿಗೆ ಹೋಲಿಸಿದರೆ ಈ ಎಲ್‌ಪಿಜಿ ಸಿಲಿಂಡರ್ ಬಳಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ದರ ಸಹ ಏರಿಕೆಯಾಗಿದೆ.

ಆದ್ರೆ ಸಿಲಿಂಡರ್ ಬಹಳ ದಿನಗಳ ವರೆಗೆ ಬಾಳಿಕೆ ಬರುವಂತೆ ಬಳಸುವುದು ಸಹ ಜಾಣತನ. ಕೆಲವು ಬಾರಿ ಗ್ಯಾಸ್ ಬೇಗನೆ ಮುಗಿದುಹೋಗುತ್ತದೆ. ಇನ್ನು ಕೆಲವು ಬಾರಿ ಹೆಚ್ಚು ದಿನ ಬಾಳಿಕೆ ಬರುತ್ತದೆ. ಹಾಗಾದ್ರೆ ಈ ಎಲ್‌ಪಿಜಿ ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಲು ಏನು ಮಾಡಬೇಕು?
ರೆಗ್ಯೂಲೇಟರ್ ಆಫ್ ಮಾಡುವುದು
ಹಲವರು ಅಡುಗೆಯ ಬಳಿಕ ರೆಗ್ಯೂಲೇಟರ್ ಬಂದ್ ಮಾಡುವುದಿಲ್ಲ. ಬದಲಿಗೆ ಕೇವಲ ಗ್ಯಾಸ್ ಸ್ಟೌನಲ್ಲಿ ಮಾತ್ರ ಗ್ಯಾಸ್ ಬಂದ್ ಮಾಡುತ್ತಾರೆ. ಹೀಗೆ ಮಾಡೋದ್ರಿಂದ ಗ್ಯಾಸ್ ಲೀಕ್ ಆಗಲಿದೆ. ಅಂದರೆ ನೀವು ಗ್ಯಾಸ್ ಆಫ್ ಮಾಡಿದ್ದರೂ ಕೂಡ ಸಣ್ಣದಾಗಿ ಗ್ಯಾಸ್ ಲೀಕ್ ಆಗುವ ಸಂಭವವಿರುತ್ತದೆ. ಇದರಿಂದ ಸಿಲಿಂಡರ್ ಬಹುಬೇಗ ಖಾಲಿಯಾಗುವ ಸಾಧ್ಯತೆ ಇರುತ್ತದೆ.
ಪ್ರೆಷರ್ ಕುಕ್ಕರ್ ಬಳಸಿ
ಅಡುಗೆ ಮಾಡುವಾಗ ಪ್ರೆಷರ್ ಕುಕ್ಕರ್ ಬಳಕೆ ಮಾಡುವುದು ಉತ್ತಮ. ಖಾದ್ಯ ರೆಡಿ ಮಾಡುವ ಹೆಚ್ಚಿನ ಸಮಯದಲ್ಲಿ ಯಾವಾಗೆಲ್ಲಾ ಸಾಧ್ಯವೋ ಆಗ ಪ್ರೆಷರ್ ಕುಕ್ಕರ್ ಬಳಸಿ. ಮತ್ತೆ ಅಡುಗೆ ಮಾಡುವ ವೇಳೆ ಪಾತ್ರೆಯನ್ನು ಮುಚ್ಚಿ ಅಡುಗೆ ಮಾಡಬೇಕು. ಇದರಿಂದ ಬಹುಬೇಗ ಅಡುಗೆ ಮಾಡಬಹುದು ಗ್ಯಾಸ್ ಸಹ ಉಳಿತಾಯವಾಗಲಿದೆ.
ಬರ್ನರ್ ಬದಲಿಸುತ್ತಿರಿ
ನೀವು ವರ್ಷಗಳಿಂದ ಒಂದೇ ಬರ್ನರ್ ಬಳಸುತ್ತಿದ್ದರೆ ಅದನ್ನು ಬದಲಿಸುವ ಸಮಯ ಬಂದಿದೆ ಎಂದರ್ಥ. ಹಳೆಯ ಬರ್ನರ್‌ಗಳಲ್ಲಿ ಗ್ಯಾಸ್ ಲೀಕೇಜ್ ಇರುವ ಸಾಧ್ಯತೆ ಇರುತ್ತದೆ. ಅದರಲ್ಲಿ ಕಸಗಳು ಸಿಕ್ಕಿಕೊಳ್ಳುವುದು, ಗ್ಯಾಸ್ ಲೀಕ್ ಆಗಲು ಕಾರಣವಾಗುತ್ತದೆ. ಹೀಗಾಗಿ ತುಕ್ಕು ಬಂದಿದ್ದರೆ ಬರ್ನರ್ ಬದಲಿಸಿ.
ಫ್ರಿಡ್ಜ್‌ನಲ್ಲಿಟ್ಟ ವಸ್ತು ದಿಢೀರ್ ಬಿಸಿ ಮಾಡಬೇಡಿ
ನೀವು ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳನ್ನು ಹೊರ ತೆಗೆದು ದಿಢೀರ್ ಎಂದು ಒಲೆ ಮೇಲೆ ಇಟ್ಟು ಬಿಸಿ ಮಾಡಬಾರದು. ಫ್ರಿಡ್ಜ್‌ನಲ್ಲಿಟ್ಟ ವಸ್ತುವನ್ನು ಹೊರತೆಗೆದು ಸ್ವಲ್ಪ ಹೊತ್ತು ಇಟ್ಟು ಬಳಿಕ ಒಲೆ ಮೇಲೆ ಇಟ್ಟು ಬಿಸಿ ಮಾಡಬೇಕು. ಏಕೆಂದರೆ ಫ್ರಿಡ್ಜ್‌ನಿಂದ ತೆಗೆದ ಬಸ್ತು ಬಿಸಿಯಾಗಲು ಬಹಳ ಗೊತ್ತು ಹಿಡಿಯಲಿದೆ. ಹೀಗಾಗಿ ಸ್ವಲ್ಪ ಕಾಲ ಹೊರಗಿಟ್ಟು ಆಮೇಲೆ ಗ್ಯಾಸ್ ಮೇಲೆ ಇಡಬೇಕು, ಇದರಿಂದ ಬೇಗ ಬಿಸಿಯಾಗಲಿದೆ.
ಅಕ್ಕಿ ಬೇಳೆ ನೆನೆಸಿಟ್ಟು ಅಡುಗೆ ಮಾಡಿ
ನೀವು ನಿತ್ಯ ಅಡುಗೆ ಮಾಡುವಾಗ ಸಾಂಬಾರ್ ಮಾಡಲು ಬೇಳೆ ಬಳಸುತ್ತೀರಿ. ಜೊತೆಗೆ ದಿನಾಲು ಅನ್ನ ಮಾಡುತ್ತೀರಿ, ಆದ್ರೆ ಅನ್ನ ಮಾಡುವ ಮುನ್ನ 15 ನಿಮಿಷ ಆದರೂ ಅಕ್ಕಿಯನ್ನು ನೆನೆಡಿಸಬೇಕು. ಹಾಗೆ ಬೇಳೆಯನ್ನ ಸಹ ನೆನೆಸಿಡಬೇಕು ಹೀಗೆ ಮಾಡೋದ್ರಿಂದ ಅಕ್ಕಿ ಬೇಗ ಬೇಯುತ್ತದೆ. ಬೇಳೆ ಸಹ ಬೇಗ ಬೇಯುತ್ತದೆ. ಹೀಗಾಗಿ ಗ್ಯಾಸ್ ಉಳಿಸಬಹುದು. ಹೀಗೆ ಒಂದು ತಿಂಗಳು ನಿರಂತರವಾಗಿ ಮಾಡಿ ನೋಡಿ ಗ್ಯಾಸ್ ಉಳಿತಾಯವಾಗುತ್ತಿರುವುದು ನಿಮ್ಮ ಗಮನಕ್ಕೆ ಬರಲಿದೆ.



Click it and Unblock the Notifications