Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾತ್ರೂಮ್ ಕಮೋಡ್‌ನ ಹಳದಿ ಬಣ್ಣ ಹೋಗುತ್ತಿಲ್ವಾ? ಈ ಟಿಪ್ಸ್ ಯಾರು ಹೇಳಿರಲ್ಲ..!!
ಮನೆಯಲ್ಲಿ ಪ್ರತಿಯೊಂದು ಮೂಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ. ಮನೆ ಸ್ವಚ್ಛವಾಗಿದಷ್ಟು ಐಶ್ವರ್ಯ, ಸಂಪತ್ತು ವೃದ್ಧಿಯಾಗುತ್ತೆ ಅನ್ನೋ ನಂಬಿಕೆ ಕೂಡ ಇದೆ. ಹೀಗಾಗಿಯೇ ಮನೆಯನ್ನು ಯಾವಾಗಲು ಕ್ಲೀನ್ ಮಾಡಿ ಗುಡಿಸಿ, ಒರೆಸಿ ಇಡಲಾಗುತ್ತೆ. ಹಾಗೆ ಮೂಲೆ ಮೂಲೆಯನ್ನು ಸ್ವಚ್ಛ ಮಾಡಲಾಗುತ್ತೆ. ಜೇಡರ ಬಲೆಯನ್ನು ಕ್ಲೀನ್ ಮಾಡಲಾಗುತ್ತೆ.
ಇನ್ನು ಮನೆಗೆ ಯಾರಾದರು ಅತಿಥಿಗಳು, ಸ್ನೇಹಿತರು ಬರುತ್ತಾರೆ ಎಂದರೆ ಇಡೀ ಮನೆ ಕ್ಲೀನ್ ಮಾಡಲಾಗುತ್ತೆ. ಹಾಗೆ ಮನೆಯಲ್ಲಿ ಅತೀ ಹೆಚ್ಚಾಗಿ ಕೆಲೆ ಹಿಡಿಯುವ ಸ್ಥಳ ಅಂದರೆ ಅಡುಗೆ ಮನೆ ಹಾಗೂ ಬಾತ್‌ರೂಮ್. ಅಡುಗೆ ಮನೆಯನ್ನ ಹಾಗೂ ಬಾತ್ ರೂಮ್ ನಿತ್ಯ ಸ್ವಚ್ಛ ಮಾಡಿದರೂ ಕೂಡ ಅಲ್ಲಿ ಮತ್ತೆ ಮತ್ತೆ ಕಲೆಗಳ ನೋಡಬಹುದು.

ಬಾತ್‌ರೂಮ್ ವಿಚಾರಕ್ಕೆ ಬಂದರೆ ಈಗ ಮಾರುಕಟ್ಟೆಯಲ್ಲಿ ಹತ್ತಾರು ಉತ್ಪನ್ನಗಳು ಬಂದಿವೆ. ಎಲ್ಲವು ಕಠಿಣ ಕಲೆಗಳ ನಿವಾರಣೆ ಮಾಡುತ್ತವೆ ಎಂದು ಹೇಳಿಕೊಂಡರೂ ಎಷ್ಟೇ ತೊಳೆದರು ಬಾತ್‌ರೂಮ್ ಸ್ವಚ್ಛ ಆಗೋದಿಲ್ಲ. ಹಾಗೆ ಕಮೋಡ್ ಸ್ವಚ್ಛ ಮಾಡೋದು ಅಂದ್ರೆ ಇಡೀ ದಿನದ ಕೆಲಸ ಇದ್ದಂತೆ. ಕಮೋಡ್ ಸ್ವಚ್ಛ ಮಾಡಿದಿದ್ದರೆ ಹಳದಿ ಬಣ್ಣಕ್ಕೆ ತಿರುಗಿಬಿಡುತ್ತವೆ.
ಈ ಹಳದಿ ಬಣ್ಣದ ಕಮೋಡ್ ಅನ್ನು ಸ್ವಚ್ಛ ಮಾಡುವುದು ದೊಡ್ಡ ಸವಾಲಿನ ಕೆಲಸವೇ ಸರಿ. ಆದ್ರೆ ನಾವಿಂದು ಹೇಳುವ ಒಂದು ಟ್ರಿಕ್ಸ್ ನಿಮಗೆ ಬಹಳ ಉಪಕಾರಿಯಾಗುತ್ತೆ. ಒಂದೇ ಒಂದು ಕೆಲಸ ಮಾಡಿದ್ರೆ ಹಳದಿ ಬಣ್ಣದ ಕಮೋಡ್ ಹೊಳೆಯುವ ಹಾಲಿನಂತೆ ಬಿಳಿಯಾಗುತ್ತೆ. ಹಾಗಾದ್ರೆ ಯಾವ ಟ್ರಿಕ್ಸ್ ಮಾಡಬೇಕು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಇನೋ, ಬೇಕಿಂಗ್ ಸೋಡಾ ಪುಡಿ ಮಾಡಿ
ಬಾತ್‌ರೂಮ್ ಕಮೋಡ್ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ಕ್ಲೀನ್ ಮಾಡೋಕೆ ಹಲವು ಬಗೆಯ ಪುಡಿಯನ್ನು ನೀವು ಬಳಸಿರಬಹುದು. ಆದ್ರೆ ನಾವಿಂದು ಸುಲಭವಾಗಿ ಈ ಹಳದಿ ಬಣ್ಣ ತೆಗೆಯುವ ವಿಧಾನಕ್ಕೆ ಈ ರೀತಿ ಪುಡಿ ಮಾಡಿ. ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಬಟ್ಟೆ ಒಗೆಯಲು ಬಳಸು ಪುಡಿ ಹಾಕಿಕೊಳ್ಳಿ ಹಾಗೆ ಇದಕ್ಕೆ ಬೇಕಿಂಗ್ ಸೋಡಾ ಸ್ವಲ್ಪ, 4 ಚಮಚದಷ್ಟು ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಇದು ನೊರೆ ನೊರೆಯಾಗಿ ಮಿಶ್ರಣವಾಗುತ್ತೆ ನಂತರ ಇದನ್ನು 5 ನಿಮಿಷಗಳ ಕಾಲ ರಾಸಾಯನಿಕ ಕ್ರಿಯೆಗೆ ಒಳಗಾಗಲು ಬಿಡಿ.
ಈ 5 ನಿಮಿಷದ ಸಮಯದಲ್ಲಿ ನೋವು ಒಂದು ಈನೋ (ENO) ಪ್ಯಾಕ್ ತೆಗೆದುಕೊಂಡು ಅದನ್ನು ಒಡೆದು ಅದರ ಪುಡಿಯನ್ನು ಕಮೋಡ್ ಮೇಲೆ ಹರಡಿಕೊಳ್ಳಿ. ಹಾಗೆಯೆ ಬಿಡಿ. ಅನಂತರ ಮಿಶ್ರಣ ಮಾಡಿಟ್ಟ ದ್ರಾವಣವನ್ನು ಈ ಕಮೋಡ್‌ಗೆ ಹಾಕಿಕೊಳ್ಳಿ. ಕಮೋಡ್‌ನ ಒಂದು ಇಂಚು ಜಾಗ ಬಿಡದಂತೆ ಹಚ್ಚಿಕೊಳ್ಳಿ ಚೆನ್ನಾಗಿ ಬ್ರಷ್‌ನಿಂದ ಉಜ್ಜಿಕೊಳ್ಳಿ, ಅನಂತರ ನೀರಿನಿಂದ ತೊಳೆಯಿರಿ. ಇದು ಬರೊ ಕಮೋಡ್ ಮಾತ್ರವಲ್ಲ ವಾಷ್ ಬೇಸಿನ್‌ಗಳು, ಡಬ್‌ಗಳಿಗೂ ಹಾಕಿ ಸ್ವಚ್ಛ ಮಾಡಬಹುದು. ಬಹಳ ಸುಲಭವಾಗಿ ಕಲೆಗಳು ಅದರಲ್ಲೂ ಹಳದಿ ಕಲೆ ಮಾಯವಾಗುತ್ತೆ.
ಈ ರೀತಿ ಟ್ರಿಕ್ಸ್ ನಿಮ್ಮ ಸಮಯ ಉಳಿತಾಯ ಮಾಡುತ್ತೆ. ಹಾಗೆ ಮಾರುಕಟ್ಟೆಯಿಂದ ದುಬಾರಿ ಬೆಲೆಗೆ ಲಿಕ್ವಿಡ್ ತಂದು ನಿತ್ಯ ಕಮೋಡ್ ಸ್ವಚ್ಛ ಮಾಡುವ ಕೆಲಸವೂ ತಪ್ಪಲಿದೆ. ಈ ರೀತಿ ಮಿಶ್ರಣ ನೀವೇ ತಯಾರಿಸಿ ವಾರದಲ್ಲಿ 2ರಿಂದ 3 ಬಾರಿ ಕಮೋಡ್ ಸ್ವಚ್ಛ ಮಾಡಿದ್ರೆ ಸಾಕು. ಹಳದಿ ಬಣ್ಣ ಮುಕ್ತ ಕಮೋಡ ನೀವು ಪಡೆಯಬಹುದು. ನೋವು ಕೂಡ ಈ ಟ್ರಿಕ್ಸ್ ಒಮ್ಮೆ ಫಾಲೋ ಮಾಡಿ ನೋಡಿ.



Click it and Unblock the Notifications
