Latest Updates
-
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ
ಮನೆಯಲ್ಲಿ ಕುಳಿತು 5 ನಿಮಿಷದಲ್ಲಿ ಆಲೋವೆರಾ ಸೋಪ್ ಮಾಡಿ! ಎಷ್ಟು ಸುಲಭ ಗೊತ್ತಾ?
ನೀವು ಸ್ನಾನಕ್ಕಾಗಿ ಹಲವು ರೀತಿಯ ಸಾಬಾನು ಬಳಸುತ್ತೀರಿ. ಅದ್ರಲ್ಲೂ ಹಲವು ಕಂಪನಿಯ ಸಾಬೂನು ಬಳಸುವುದು ನೋಡಬಹುದು. ನಿಮ್ಮ ಹಲವು ಸ್ಕಿನ್ ಟೋನ್‌ಗಳಿಗೆ ಸರಿಹೊಂದುವಂತಹ ಸಾಬೂನು ಬಳಸುವುದು ಕಾಮನ್. ಈಗಂತು ಮಾರುಕಟ್ಟೆಯಲ್ಲಿ ನೂರಾರು ಕಂಪನಿಗಳ ಸಾಬೂನು ಸಿಗಲಿವೆ. ಒಂದಕ್ಕಿಂತ ಒಂದು ವಿಶೇಷ ಎನಿಸುತ್ತದೆ.
ಇನ್ನು ಮಕ್ಕಳಿಗೆ ಬೇರೆ, ಮಹಿಳೆಯರು ಹಾಗೆ ಪುರುಷರಿಗೆ ಬೇರೆಯಾದ ಸಾಬೂನು ಸಿಗಲಿವೆ. ಸೌಂದರ್ಯ ವರ್ಧಕ ಸಾಬೂನುಗಳಿಂದ ಹಿಡಿದು ಸ್ಕಿನ್ ಕೇರ್‌ಗಳು, ಅಲರ್ಜಿಗಾಗಿ, ತ್ವಚೆಯ ಆರೋಗ್ಯಕ್ಕಾಗಿ ಮತ್ತೊಂದು ಬಗೆಯ ಸಾಬೂನು ಬಳಸುವುದು ನೋಡಬಹುದು. ಅದ್ರಲ್ಲೂ ಮಕ್ಕಳ ತ್ವಚೆಗಾಗಿ ಈಗಂತು ನೂರಾರು ರೂಪಾಯಿಯ ಸಾಬೂನುಗಳು ಹಾಗೆ ತ್ವಚೆಯ ಆರೋಗ್ಯಕ್ಕಾಗಿಯೂ ದುಬಾರಿ ಸಾಬೂನುಗಳಿವೆ.

ಇದಿಷ್ಟೇ ಅಲ್ಲ ನೀವು ಕಡಿಮೆ ದರದ ಸಾಬೂನುಗಳಿಂದ ದುಬಾರಿ ಬೆಲೆಯ ಸಾಬೂನುಗಳ ನೋಡಬಹುದು. ಅದ್ರಲ್ಲೂ ಕೆಲವೊಂದು ಸಾಬೂನುಗಳನ್ನು ವೈದ್ಯರ ಶಿಫಾರಸಿನ ಬಳಿಕವೂ ಬಳಸಬೇಕಾಗುತ್ತದೆ. ಇನ್ನು ಹಲವು ಸಾಬೂನುಗಳಲ್ಲಿ ನೀವು ಅಲೋವೆರಾದಿಂದ ಮಾಡುವ ಸಾಬೂನು ಬಳಸಿರಬಹುದು. ಹಲವು ರೀತಿಯ ಸ್ಕಿನ್ ಟೋನ್‌ಗಳಿಗೆ ಅಲೋವೆರಾ ಸಾಬೂನು ಬಹಳ ಉತ್ತಮವಾಗಿರಲಿದೆ.
ನಿಮ್ಮ ತ್ವಚೆಗೆ ಕಾಂತಿ ನೀಡಲು ಈ ಅಲೋವೆರಾ ಸಾಬೂನು ಬಳಸುವುದು ಮುಖ್ಯವಾಗುತ್ತೆ. ಹಾಗೆ ಚರ್ಮದ ಸಮಸ್ಯೆಗಳು, ಕೂದಲು ಆರೈಕೆ, ಜೀರ್ಣಕ್ರಿಯೆ ಸುಧಾರಣೆ ಮತ್ತು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡಲಿದೆ. ಆದ್ರೆ ನೀವೆಂದಾದರು ಆಲೋವೆರಾ ಸಾಬೂನನ್ನು ಮನೆಯಲ್ಲೇ ಮಾಡಿದ್ದೀರಾ?
ಹೌದು ಮನೆಯಲ್ಲಿಯೇ ನೀವು ಆಲೋವೆರಾ ಸಾಬೂನು ಮಾಡಬಹುದು. ಬಹಳ ಸುಲಭವಾಗಿ ಕಡಿಮೆ ಸಮಯದಲ್ಲಿ ಈ ಸಾಬೂನು ತಯಾರಿಸಬಹುದು. ಹಾಗಾದ್ರೆ ನಾವಿಂದು ಮನೆಯಲ್ಲೇ ಆಲೋವೆರಾ ಸಾಬೂನು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೊದಲು ಆಲೋವೆರಾ ಎಲೆಗಳನ್ನು ತೆಗೆದಿಟ್ಟುಕೊಳ್ಳಿ 4ರಿಂದ 5 ಎಲೆಗಳನ್ನು ತೆಗೆದಿಟ್ಟುಕೊಳ್ಳಿ. ಇದನ್ನು ತೊಳೆದು ಬಳಿಕ ಎರಡರಿಂದ ಮೂರು ಭಾಗವಾಗಿ ಕತ್ತರಿಸಿಕೊಂಡು ಮೇಲಿನ ಸಿಪ್ಪೆಯನ್ನು ತೆಗೆದುಕೊಂಡು ಅದರ ಬಿಳಿ ಲೋಳೆಯನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ಮಿಕ್ಸಿಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಇದರ ನೀರನ್ನು ಜರಡಿ ಹಿಡಿದು ಸೋಸಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಅಂಗಡಿಯಲ್ಲಿ ಸಿಗುವ ಸಾಬೂನು ಗ್ಲಿಸರಿನ್ ಬಳಸಿಕೊಳ್ಳಿ. ಆನ್‌ಲೈನ್‌ನಲ್ಲಿ ಸಿಗುತ್ತದೆ. ಇಲ್ಲದಿದ್ದರೆ ಪೀಯರ್ಸ್ ಸಾಬೂನನ್ನು ಕತ್ತರಿಸಿಕೊಳ್ಳಿ. ಇದನ್ನು ಗ್ಲಿಸರಿನ್ ಅನ್ನು ಒಂದು ದೊಡ್ಡ ಆಲೂಗಡ್ಡ ಗಾತ್ರದಷ್ಟು ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ನೀರು ಹಾಕಿಕೊಂಡು ಬಳಿಕ ಅದರಲ್ಲಿ ಒಂದು ಖಾಲಿ ಪಾತ್ರೆ ಇಟ್ಟು ಗ್ಲಿಸರಿನ್ ಹಾಕಿಕೊಳ್ಳಿ. ಇದು ತುಪ್ಪದಂತೆ ಕರಗಬೇಕು.
ಗ್ಲಿಸರಿನ್ ಸೋಪ್ ಬೇಸ್ ಅನ್ನು ಮಿಕ್ಸ್ ಮಾಡುತ್ತಾ ಇರಿ. ಅದು ಕರಗುವವರೆಗೂ ಮಿಕ್ಸ್ ಮಾಡಿ. ಈಗ ಜರಡಿ ಹಿಡಿದು ಇಟ್ಟ ಆಲೋವೆರಾ ಜೆಲ್ ಅನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಎರಡು ವಿಟಮಿನ್ ಸಿ ಕ್ಯಾಪ್ಸುಲ್ ಅನ್ನು ಹಾಕಿಕೊಳ್ಳಬೇಕು. ನಂತರ ಮಿಕ್ಸ್ ಮಾಡುತ್ತಾ ಇರಬೇಕು. ನಂತರ ಇದಕ್ಕೆ ನೀವು ಸೋಪ್ ಬಣ್ಣ ಬರಲು ಬಳಸುವ ಕಲರ್ ಅನ್ನು ಹಾಕಿಕೊಳ್ಳಬಹುದು. ಅದು ಹಸಿರು, ಹಳದಿ, ಕೆಂಪು ಹೀಗೆ ಯಾವ ಬಣ್ಣಬೇಕಾದರು 2 ಡ್ರಾಪ್ ಹಾಕಿಕೊಳ್ಳಬಹುದು. ಹಾಕದೆ ಇದ್ದರೂ ನಡೆಯುತ್ತದೆ. ಸಾಬೂನು ಬಿಳಿ ಬಣ್ಣದಲ್ಲಿ ಇರಲಿದೆ.
ಹೀಗೆ ಹಾಕಿದ ಬಳಿಕ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಬಿಸಿಯಾದಾಗ ಸಾಬೂನು ಅಚ್ಚಿಗೆ ಹಾಕಬೇಕು. ಅಚ್ಚು ಇರದಿದ್ದರೆ ಯಾವುದಾದರು ಡಬ್ಬಿಗೆ ಎಣ್ಣೆ ಹಚ್ಚಿಕೊಂಡು ಹಾಕಬಹುದು. ಬೆಚ್ಚಗೆ ಇದ್ದಾಗಲೇ ಹಾಕಬೇಕು. ಇದನ್ನು ಅಚ್ಚಿಗೆ ಹಾಕಿ ಒಂದು ರಾತ್ರಿ ಹಾಗೆಯೇ ಇಡಬೇಕು. ಇಷ್ಟಾದರೆ ನಿಮ್ಮ ಮುಂದೆ ಆಲೋವೆರಾ ಸಾಬೂನು ಸಿದ್ದವಾಗುತ್ತೆ.



Click it and Unblock the Notifications