Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೃಷ್ಣ ಜನ್ಮಾಷ್ಟಮಿ: ನೀವು ಎದುರಿಸುತ್ತಿರುವ ಸಮಸ್ಯೆಗೆ ಕೊಳಲಿನಲ್ಲಿದೆ ಪರಿಹಾರ, ಹೇಗೆ?
'ಓಂ ಕೃಷ್ಣಾಯ ನಮಃ' ಎಂದು ಭಕ್ತಿಯಿಂದ ಜಪಿಸಿದರೆ ಸಾಕು ನಮ್ಮ ಏನೇ ಸಮಸ್ಯೆ ಇರಲಿ ಆ ಭಗವಂತ ಪರಿಹರಿಸುತ್ತಾನೆ, ಶ್ರೀಕೃಷ್ಣನ ಕೃಪೆಯಿದ್ದರೆ ಬದುಕಿನಲ್ಲಿ ಏನೇ ಸಮಸ್ಯೆ ಬರಲಿ ಅದೆಲ್ಲವೂ ದೂರಾಗುವುದು ಎಂಬ ಬಲವಾದ ನಂಬಿಕೆಯಿಂದ ಶ್ರೀಕೃಷ್ಣ ಆರಾಧನೆ ಮಾಡಿದರೆ ಸಾಕು, ಬದುಕಿನಲ್ಲಿ ಧನಾತ್ಮಕ ಬಲಾವಣೆಗಳು ಕಂಡು ಬರುತ್ತದೆ.

ಶ್ರೀಕೃಷ್ಣ ತನ್ನ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಎಂಬ ಅಚಲ ನಂಬಿಕೆ ಅವನನ್ನು ನಂಬಿರುವ ಭಕ್ತರಲ್ಲಿದೆ. ಬದುಕು ಎಂದ ಮೇಲೆ ಒಂದಲ್ಲಾ ಒಂದು ಕಷ್ಟಗಳಿರುತ್ತದೆ, ಆದರೆ ಅದಕ್ಕೆಲ್ಲಾ ಪರಿಹಾರವೂ ಇರುತ್ತದೆ. ಶ್ರೀಕೃಷ್ಣನ ಕೊಳಲು ಅಥವಾ ಫೋಟೋಗಳಲ್ಲಿ ಇಡುವುದು ಕೂಡ ದೊಡ್ಡ ಪರಿಹಾರ ವಿಧಾನವಾಗಿದೆ. ಶ್ರೀ ಕೃಷ್ಣನ ಕೊಳಲು ಮನೆಯ ಯಾವ ಭಾಗದಲ್ಲಿಟ್ಟರೆ ಎನು ಪ್ರಯೋಜನ ಎಂದು ನೋಡೋಣ ಬನ್ನಿ:
ಮನಸ್ಸಿನ ನೆಮ್ಮದಿಗೆ
ಮನೆಯ ಹಾಲ್ ಅಥವಾ ಮಲಗುವ ಕೋಣೆಯಲ್ಲಿ ಕೊಳಲು ಇಡುವುದರಿಂದ ಮನಸ್ಸಿನ ನೆಮ್ಮದಿ ಮರಳಿ ಪಡೆಯಬಹುದು, ಕುಟುಂಬದಲ್ಲಿ ವಾತಾವರಣ ಚೆನ್ನಾಗಿರಲಿದೆ, ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಬಹುದು.
ಉದ್ಯೋಗದಲ್ಲಿ ಪ್ರಗತಿ ಸಾಧಿಸಲು
ಕೆಲಸದ ಟೇಬಲ್‌ನಲ್ಲಿ ಕೊಳಲು ಇಡುವುದರಿಂದ ಕೆಲಸದಲ್ಲಿ ಅಡೆತಡೆಗಳು ದೂರಾಗುವುದು, ಕೆಲಸ ಕಾರ್ಯಗಳನ್ನು ಉತ್ತಮವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತಾಗುವುದು.
ಆರೋಗ್ಯ ಸುಧಾರಿಸಲು
ದೀರ್ಘ ಸಮಯದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಅವರ ಸಮೀಪ ಕೊಳಲು ಇಡಿ ಇದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
ಮನೆಯಲ್ಲಿ ನಕರಾತ್ಮಕ ಶಕ್ತಿ ಪ್ರವೇಶಿಸದಿರಲು
ಮನೆಗೆ ವಾಸ್ತು ದೋಷವಿದ್ದರೆ ಕೊಳಲನ್ನು ಮನೆಯ ಮುಖ್ಯದ್ವಾರದ ಸಮೀಪ ಇಡಬೇಕು, ಇದರಿಂದ ಮನೆಯೊಳಗಡೆ ನಕರಾತ್ಮಕ ಶಕ್ತಿ ಪ್ರವೇಶಿಸಲ್ಲ, ಮನೆಯಯೊಳಗಿನ ನಕರಾತ್ಮಕ ಶಕ್ತಿ ಕೂಡ ತೊಡೆದು ಹಾಕುತ್ತದೆ, ಎರಡು ಕೊಳಲುಗಳನ್ನು ಕೆಂಪು ನೂಲಿನಿಂದ ಕಟ್ಟಿ ಇಟ್ಟರೆ ಒಳ್ಳೆಯದು ಎಂದು ಹೇಳಲಾಗುವುದು.
ಮಕ್ಕಳಲ್ಲಿ ಏಕಾಗ್ರತೆಗೆ
ಮಕ್ಕಳು ಓದುವ ಟೇಬಲ್‌ನಲ್ಲಿ ಕೊಳಲು ಇಡುವುದರಿಂದ ಅವರಲ್ಲಿ ಏಕಾಗ್ರತೆ ಹೆಚ್ಚಾಗುವುದು. ಓದಿನ ಕಡೆಗೆ ಗಮನ ಹೆಚ್ಚಾಗುವುದು.
ಆರ್ಥಿಕ ಸಮಸ್ಯೆಗೆ ಪರಿಹಾರ
ಏಕೋ ಇತ್ತೀಚೆಗೆ ಏನೋ ಆರ್ಥಿಕ ಸಮಸ್ಯೆ ತುಂಬಾನೇ ಕಾಡುತ್ತಿದೆ ಎಂದಾದರೆ ಈಶಾನ್ಯ ದಿಕ್ಕಿನಲ್ಲಿ ಕೊಳಲನ್ನು ಹಸಿರು ಬಟ್ಟೆಯಿಂದ ಇಡಿ, ನಂತರ ಪ್ರತಿದಿನ ಪೂಜೆ ಮಾಡಿ, ಅರ್ಥಿಕ ಸಮಸ್ಯೆಗಳು ಕಡಿಮೆಯಾಗುವುದು.
ಗಂಡ-ಹೆಂಡತಿ ನಡುವಿನ ಭಿನ್ನಾಭಿಪ್ರಾಯ ಹೋಗಲಾಡಿಸಲು
ಗಂಡ -ಹೆಂಡತಿ ನಡುವೆ ಹೊಂದಾಣಿಕೆಯ ಕೊರತೆಯಾಗುತ್ತಿದೆ, ಪ್ರತಿದಿನ ಜಗಳ, ಮನೆಯಲ್ಲಿ ನೆಮ್ಮಲಿ ಇಲ್ಲ ಎಂದಾದರೆ ಬೆಡ್‌ರೂಂನಲ್ಲಿ ಕೃಷ್ಣ-ರಾಧೆಯ ಫೋಟೋ ನೇತುಹಾಕಿ, ಕೊಳಲನ್ನು ಮಲಗುವ ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇಡಿ. ಇದು ವೈವಾಹಿಕ ಜೀವನದಲ್ಲಿ ಪ್ರೀತಿ, ಸಾಮರಸ್ಯ ಕಾಪಾಡಲು ಸಹಾಯ ಮಾಡುತ್ತದೆ.
ಕೊಳಲು ಇಟ್ಟರೆ ಇಷ್ಟೆಲ್ಲಾ ಪರಿಹಾರತ ಸಿಗುತ್ತದೆ ಎಂದು ಕೇಳುವುದಾದರೆ ಎಲ್ಲವೂ ಒಂದು ನಂಬಿಕೆ. ನಂಬಿಕೆಯಿದ್ದರೆ ಅನೇಕ ಚಮತ್ಕಾರಗಳು ಬದುಕಿನಲ್ಲಿ ನಡೆಯುತ್ತದೆ, ಅಲ್ಲದೆ ನಮ್ಮ ಬದುಕಿನಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ. ಶ್ರೀಕೃಷ್ಣ ಎಂಬ ದೈವ ಶಕ್ತಿಯನ್ನು ನಂಬಿದರೆ ಖಂಡಿತ ನ ಬದುಕಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು.
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೆ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ



Click it and Unblock the Notifications
