Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಲ್ಲಿಗಳ ಸಾಯಿಸದೆ ಮನೆಯಿಂದ ಹೊರಹಾಕಿ: ಇಲ್ಲಿದೆ ಸಿಂಪಲ್ ಟಿಪ್ಸ್!!
ಮನೆಯಲ್ಲಿ ಗೃಹಿಣಿಯರು ಯಾವಾಗಲು ಒಂದಲ್ಲಾ ಒಂದು ಕೆಲಸ ಮಾಡುತ್ತಿರುತ್ತಾರೆ. ಅದರಲ್ಲೂ ಫ್ರೀ ಇದ್ದಾಗ ಮನೆಯನ್ನು ಆದಷ್ಟು ಕ್ಲೀನ್ ಮಾಡಿ ಇಡಲು ಮುಂದಾಗುತ್ತಾರೆ. ಹಾಗೆ ಮನೆಯಲ್ಲಿರುವ ಕಸ ತೆಗೆಯುವುದು, ಹುಳುಗಳು, ಕೀಟಗಳನ್ನು ಮನೆಯಿಂದ ಆಚೆ ಹಾಕುವುದು ನೋಡಬಹುದು. ಮನೆಯಲ್ಲಿ ಕೀಟಗಳಿದ್ದರೆ ಅದನ್ನು ಹೊರಹಾಕುವುದೇ ದೊಡ್ಡ ಸಾಹಸದ ಕೆಲವ ಎನ್ನಬಹುದು.
ಅದ್ರಲ್ಲೂ ಮನೆಯಲ್ಲಿ ಜಿರಳೆ, ಹಲ್ಲಿಗಳೆಂದರೆ ಎಲ್ಲರಿಗೂ ಭಯವಾಗುತ್ತೆ. ಅಡುಗೆ ಮನೆಯಲ್ಲಿ ಈ ಜಿರಳೆ ಹಾಗು ಹಲ್ಲಿಗಳಿದ್ದರೆ ಆತಂಕ ಅಷ್ಟಿಷ್ಟಲ್ಲ. ಹಲ್ಲಿಗಳನ್ನು ಓಡಿಸುವುದು ಬಹಳ ಕಷ್ಟದ ಕೆಲಸ. ಆದರೆ ಜಿರಳೆಗಳನ್ನು ಓಡಿಸಲು ಹಲವು ರೀತಿಯ ಕೆಮಿಕಲ್ ಸ್ಪ್ರೇಗಳು ಸಿಗುತ್ತವೆ. ಆದರೆ ಹಲ್ಲಿಗಳ ಓಡಿಸುವುದು ಬಹಳ ಕಷ್ಟ.

ಹಲವರು ಹಲ್ಲಿಗಳನ್ನು ಹೊಡೆಯುವುದು ಅವುಗಳನ್ನು ಸಾಯಿಸುವುದು ಪಾದದ ಕೆಲಸ ಎಂದು ನಂಬಿರುತ್ತಾರೆ. ಹಾಗೆ ಓಡಿಸದೆ ಹಾಗೆಯೇ ಬಿಟ್ಟರೆ ಜೀವಕ್ಕೆ ಅಪಾಯ ತರಬಹುದು. ಹೀಗಾಗಿ ಅವುಗಳನ್ನು ಮನೆಯಿಂದ ಹೊರಹಾಕಲು ಬಹಳ ಕಷ್ಟಪಡುತ್ತಾರೆ. ಆದ್ರೆ ನಾವಿಂದು ಹಲ್ಲಿಗಳನ್ನು ಸಾಯಿಸದೆ ಅವುಗಳನ್ನು ಮನೆಯಿಂದ ಹೊರಹಾಕುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಹಲ್ಲಿಗಳ ಓಡಿಸಲು ಮನೆಯಲ್ಲೇ ಮಾಡಿ ಪ್ಲಾನ್
ಮೊದಲು ಒಂದು ಸೂಜಿ ದಾರ ತೆಗೆದುಕೊಂಡು ಎರಡು ಎಳೆಯ ದಾರ ಪೋಣಿಸಿಕೊಂಡು ಇಟ್ಟುಕೊಳ್ಳಿ. ತುದಿಯಲ್ಲಿ ದೊಡ್ಡದಾಗಿ ದೊಡ್ಡ ಗಂಟು ಹಾಕಿಟ್ಟುಕೊಳ್ಳಿ. ಈಗ ಒಂದು ಈರುಳ್ಳಿ ಸಿಪ್ಪೆ ತೆಗೆದುಕೊಂಡು ನಂತರ ಅದರ ಒಳ ಸಿಪ್ಪೆಯನ್ನು ಕೂಡ ಚಿಪ್ಸ್ ರೀತಿಯಲ್ಲಿ ಬಿಡಿಸಿಕೊಳ್ಳಿ. ನಂತರ ಈ ಸಿಪ್ಪೆಯನ್ನು ಸೂಜಿಯಿಂದ ಪೋಣಿಸಿಕೊಳ್ಳಿ. ಎಲ್ಲಾ ಈರುಳ್ಳಿಯ ಸಿಪ್ಪೆಯನ್ನು ಒಂದಾದ ಮೇಲೆ ಒಂದನ್ನು ಸೂಜಿಯಲ್ಲಿ ಪೋಣಿಸಿಕೊಳ್ಳಿ. ನಂತರ ಹಲ್ಲಿಗಳು ಹೆಚ್ಚಾಗಿ ಕಾಣಿಸುವ ಜಾಗದಲ್ಲಿ ಈ ದಾರವನ್ನು ಕಟ್ಟಿ.
ಈರುಳ್ಳಿಯ ಸುವಾಸೆಗೆ ಹಲ್ಲಿಗಳು ಬರುವುದಿಲ್ಲ. ಒಂದು ವೇಳೆ ಯಾವಾಗಲು ಒಂದೇ ಜಾಗದಲ್ಲಿ ಹಲ್ಲಿ ಕಾಣಿಸುತ್ತಿದ್ದರೆ ಈ ಈರುಳ್ಳಿ ದಾರ ಕಟ್ಟಿ ಇಡಿ. ಹಲ್ಲಿ ಅಲ್ಲಿಂದ ಪಲಾಯನ ಮಾಡಲಿದೆ. ಹಾಗೆ ಆ ಜಾಗದಲ್ಲಿ ಮತ್ತೆಂದು ನಿಮಗೆ ಹಲ್ಲಿ ಕಾಣಿಸೋದಿಲ್ಲ.
ಈಗ ಇನ್ನೊಂದು ಕಡೆ ಒಂದು ಸ್ಟೀಲ್ ಗ್ಲಾಸ್ ತೆಗೆದುಕೊಂಡು ಅದಕ್ಕೆ ಕರಿಮೆಣಸು, ಲವಂಗ ಹಾಕಿ ಪುಡಿ ಮಾಡಿಕೊಂಡು ಹಾಕಿಕೊಳ್ಳಿ. ನಂತರ ಎರಡು ಈರುಳ್ಳಿ ಕತ್ತರಿಸಿಕೊಳ್ಳಿ, ಹಾಗೆ ಬೆಳ್ಳುಳ್ಳಿ ಕೂಡ ಬಿಡಿಸಿಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಎಲ್ಲಾ ಪದಾರ್ಥಗಳನ್ನ ನುಣ್ಣಗೆ ರುಬ್ಬಿಕೊಂಡು ಬಳಿಕ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಈ ಪದಾರ್ಥವನ್ನು ಜರಡಿ ಹಿಡಿದು ಅದರ ನೀರನ್ನು ಬೇರೆ ಮಾಡಿಕೊಳ್ಳಿ. ಬಳಿಕ ಈ ರಸಕ್ಕೆ ಜಜ್ಜಿ ಇಟ್ಟ ಲವಂಗ ಕರಿಮೆಣಸು ಸಹ ಇದಕ್ಕೆ ಹಾಕಿ, ಹಾಗೆ ಡೆಟಾಲ್ ಅಥವಾ ಯಾವುದಾದರು ಸೋಪಿನ ಪುಡಿಯನ್ನು ಸಹ ಸ್ವಲ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ, ನಂತರ ಇದನ್ನು ಯಾವುದಾದರು ಸ್ಪ್ರೇಯರ್ ಬಾಟಲಿಯಲ್ಲಿ ಹಾಕಿಕೊಂಡು ಹಲ್ಲಿಗಳು ಕಾಣಿಸಿಕೊಳ್ಳುವ ಜಾಗದಲ್ಲಿ ಸ್ಪ್ರೇ ಮಾಡಿಕೊಳ್ಳಿ.
ಈ ರೀತಿಯ ಲಿಕ್ವಿಡ್ ಅನ್ನು ನೀವು ಹಲ್ಲಿಗಳಿರುವ ಕಡೆಗಳಲ್ಲಿ ಸ್ಪ್ರೇ ಮಾಡಿಕೊಂಡರೆ ಹಲ್ಲಿಗಳು ಮತ್ತೆಂದು ಆ ಜಾಗದಲ್ಲಿ ಸುಳಿಯುವುದಿಲ್ಲ. ಗಾಢವಾದ ವಾಸನೆಯಿಂದಾಗಿ ಅವರು ಮನೆಯಿಂದ ಹೊರಹೋಗುತ್ತವೆ. ಹಾಗೆ ಈ ಲಿಕ್ವಿಡ್ ಸುವಾಸನೆಯಿಂದ ಬೇರೆ ಸಣ್ಣ ಪುಟ್ಟ ಕೀಟಗಳು ಸಹ ಮನೆಯ ಒಳಗೆ ಬರುವುದಿಲಚ್ಲ. ನೀವು ಸಹ ಮನೆಯಲ್ಲಿ ಈ ರೀತಿಯ ಲಿಕ್ವಿಡ್ ಬಳಸಲು ಟ್ರೈ ಮಾಡಿ ನೋಡಿ. ಬಹಳ ಸುಲಭವಾಗಿ ಮಾಡಿಕೊಳ್ಳಬಹುದು, ಹಾಗೆ ಪರಿಣಾಮಕಾರಿಯಾಗಿರಲಿದೆ. ಹಾಗೆ ಹಲ್ಲಿಗಳ ಸಾಯಿಸದ ನೋವು ಸಹ ನಿಮಗಿರುವುದಿಲ್ಲ.



Click it and Unblock the Notifications
