Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಈ ಟ್ರಿಕ್ಸ್ ಬಳಸಿದ್ರೆ ಇನ್ಮುಂದೆ ಒಂದು ಹನಿ ಹಾಲು ಉಕ್ಕುವುದಿಲ್ಲ..!
ಮನೆಯಲ್ಲಿ ಬೆಳಗ್ಗೆ ಸಂಜೆ ಹೀಗೆ ಸಮಯದಲ್ಲು ಹಾಲು ಬಿಸಿ ಮಾಡಲು ಮುಂದಾಗುತ್ತೇವೆ. ಒಂದು ದಿನ ಹಾಲು ಬಿಸಿ ಮಾಡುವುದು ಮರೆತರು ಹಾಳಾಗುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಿ ಹಾಲು ಬಹುಬೇಗ ಕಡುತ್ತದೆ. ಹೀಗಾಗಿ ಎರಡು ಸಮಯ ಹಾಲು ಬಿಸಿ ಮಾಡಿ ಇಡುವುದು ನೋಡಬಹುದು. ಆದ್ರೆ ಹಾಲು ಬಿಸಿ ಮಾಡುವಾಗಲೆಲ್ಲ ಹಾಲು ಉಕ್ಕುತ್ತಿರುವುದು ನಿಮಗೂ ಸಮಸ್ಯೆ ತಂದಿರಬಹುದು.
ಹಾಲು ಉಕ್ಕುವುದರಿಂದ ಹಾಲಿನ ನಷ್ಟ ಮಾತ್ರವಲ್ಲ ಕೆಲಸ ಮತ್ತಷ್ಟು ಹೆಚ್ಚಾಗುತ್ತೆ. ಒಲೆ ಮೇಲೆ ಬಿದ್ದಿರುವ ಹಾಲನ್ನು ಕ್ಲೀನ್ ಮಾಡುವುದು ಮತ್ತೊಂದು ಕೆಲಸವಾಗಿ ಕಾಡುತ್ತದೆ. ಅದರಲ್ಲೂ ಬರ್ನರ್ ಬಳಿ ಹಾಲು ಬಿದ್ದರೆ ಕಪ್ಪಾಗಿ ಗಟ್ಟಿಯಾಗುತ್ತದೆ. ಪುನಃ ನೀವು ಇಡೀ ಬರ್ನರ್ ಸೇರಿ ಒಲೆಯನ್ನೇ ಕ್ಲೀನ್ ಮಾಡಬೇಕಾಗುತ್ತದೆ. ಹೀಗಾಗಿ ಹಾಲು ಒಲೆ ಮೇಲೆ ಇಟ್ಟಾಗ ಗೃಹಿಣಿಯರು ಬಹಳ ಎಚ್ಚರಿಕೆಯಿಂದ ಇರುತ್ತಾರೆ.

ಆದ್ರೆ ಒಂದು ಹನಿ ಹಾಲು ಉಕ್ಕದಂತೆ ಮಾಡಲು ಕೆಲವೊಂದು ಟ್ರಿಕ್ಸ್ ಬಳಸಿ ನೋಡಿ. ಇದು ನಿಮ್ಮ ಸಮಯ ಉಳಿತಾಯ ಮಾಡುವ ಜೊತೆಗೆ ನಿಮ್ಮ ಕೆಲಸ ಕಡಿಮೆ ಮಾಡುತ್ತೆ. ಕೆಲವೊಂದು ಟ್ರಿಕ್ಸ್ ಬಳಸಿದರೆ ಮತ್ತೆ ಎಂದಿಗೂ ಮನೆಯಲ್ಲಿ ಹಾಲು ಉಕ್ಕುವ ಪ್ರಸಂಗವೇ ನಡೆಯುವುದಿಲ್ಲ. ಹಾಗಾದ್ರೆ ನಾವಿಂದು ಇಲ್ಲಿ ಹಾಲು ಉಕ್ಕಿ ಕೆಳಗೆ ಚೆಲ್ಲದಂತೆ ಮಾಡಲು ಯಾವ ಟ್ರಿಕ್ಸ್ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಹಾಲಿನ ಪಾತ್ರೆ ಮೇಲೆ ಮರದ ಸ್ಪೂನ್ ಇಡುವುದು
ಹಾಲು ಕುದಿಯುತ್ತಿರುವಾಗ ಪಾತ್ರೆಗೆ ಮುಚ್ಚಳ ಮುಚ್ಚಿದರೆ ಉಕ್ಕಿ ಬರುತ್ತದೆ. ಇಂತಹ ಸಮಯದಲ್ಲಿ ಹಾಲು ಉಕ್ಕಬಾರದು ಎಂದಾದರೆ ಈ ಹಾಲಿನ ಪಾತ್ರೆಯ ಮೇಲೆ ಮರದ ಸ್ಪೂನ್ ಅನ್ನು ಅಡ್ಡಲಾಗಿ ಇಡಿ. ಹೀಗೆ ಮಾಡೋದ್ರಿಂದ ಹಾಲು ಉಕ್ಕುವುದಿಲ್ಲ, ಬದಲಿಗೆ ಪಾತ್ರೆಯ ಮೇಲೆ ಬಂದು ಅಲ್ಲಿಯೇ ಕುದಿಯಲಿದೆ. ಹೀಗಾಗಿ ಈ ಟ್ರಿಕ್ಸ್ ನೀವು ಕೂಡ ಟ್ರೈ ಮಾಡಬಹುದು.
ತಣ್ಣೀರು ರೆಡಿಯಾಗಿಡುವುದು
ಹಾಲು ಪಾತ್ರೆಗೆ ಹಾಕಿ ಕುದಿಯಲು ಬಿಟ್ಟ ನಂತರ ಅದರ ಪಕ್ಕದಲ್ಲೇ ಒಂದು ಗ್ಲಾಸ್‌ನಲ್ಲಿ ತಣ್ಣೀರು ಹಾಕಿ ಇಟ್ಟುಕೊಳ್ಳಿ. ಹಾಲು ಉಕ್ಕಿ ಬರುತ್ತಿದೆ ಎನ್ನುವ ಸಮಯದಲ್ಲಿ ಗ್ಯಾಸ್ ಆಫ್ ಮಾಡುವ ಬದಲಾಗಿ ಈ ತಣ್ಣೀರನ್ನು ಸ್ವಲ್ಪ ಅದಕ್ಕೆ ಸುರಿಯಿರಿ. ಇದರಿಂದ ತಕ್ಷಣ ಹಾಲು ಉಕ್ಕಿ ಬರುವುದಿಲ್ಲ. ಅಥವಾ ಗಡಿಬಿಡಿಯಲ್ಲಿ ಗ್ಯಾಸ್ ಆಫ್ ಮಾಡುವಾಗ ಹಾಲು ಉಕ್ಕಿ ಚೆಲ್ಲುವುದಿಲ್ಲ.
ಹಾಲಿನ ಪಾತ್ರೆ ದೊಡ್ಡದಾಗಿರಲಿ
ಸಣ್ಣ ಹಾಲಿನ ಪಾತ್ರೆಯಲ್ಲಿ ಹಾಲು ಕಾಯಿಸಿದರೆ ಉಕ್ಕುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ ದೊಡ್ಡ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಕಾಯಿಸಿದರೆ ಹಾಲು ಉಕ್ಕುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಇದನ್ನು ಕೂಡ ನೀವು ಟ್ರೈ ಮಾಡಬಹುದು.
ಬಟ್ಟೆ ಒಣಗಿಸುವ ಕ್ಲಿಪ್‌ನ ಮುಚ್ಚಳ
ಹಾಲಿನ ಪಾತ್ರೆಯ ಮೇಲೆ ಅದರ ಮುಚ್ಚಳಕ್ಕೆ ನಾಲ್ಕು ಭಾಗದಲ್ಲಿ ಬಟ್ಟೆ ಒಣಗಿಸಲು ಬಳಸುವ ಕ್ಲಿಪ್ ಅನ್ನು ಹಾಕಿ ಅದನ್ನು ಹಾಲಿನ ಪಾತ್ರೆಯ ಮೇಲೆ ಮುಚ್ಚಿದರೆ ಹಾಲು ಉಕ್ಕುವುದಿಲ್ಲ. ಹಾಕು ಸಹ ಬೇಗ ಕಾಯಲು ಆರಂಭಿಸುತ್ತದೆ. ಹಾಲಿನ ಪಾತ್ರೆ ಹಾಗೂ ಮುಚ್ಚಳದ ನಡುವೆ ಸ್ವಲ್ಪ ಅಂತರವಿರುವ ಕಾರಣ ಹಾಲು ಉಕ್ಕುವ ಸಂದರ್ಭ ಬರುವುದಿಲ್ಲ. ಈ ಟ್ರಿಕ್ಸ್ ಸಹ ನೀವು ಬಳಸಬಹುದು.



Click it and Unblock the Notifications
