Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವರ್ಷಗಳ ಕಾಲ ಇಟ್ಟರೂ ಅಕ್ಕಿ ಹಾಳಾಗಬಾರದು ಅಂದ್ರೆ ಹೀಗೆ ಮಾಡಿ..!! ಇಲ್ಲಿದೆ ಟ್ರಿಕ್ಸ್
ಎಲ್ಲರ ಮನೆಯಲ್ಲೂ ಅಕ್ಕಿಯನ್ನ ಮೂಟೆಯಲ್ಲೋ ಅಥವಾ ದೊಡ್ಡ ಬಕೆಟ್ ಅಥವಾ ಡ್ರಮ್‌ನಲ್ಲಿ ಹಾಕಿಡುತ್ತಾರೆ, ಆದ್ರೆ ಮಳೆಗಾಲದಲ್ಲಿ ಅಕ್ಕಿಗೆ ಬಹುಬೇಗ ಹುಳುಗಳು ಬೀಳುತ್ತವೆ. ನೀವು 5 ಕೆ.ಜಿ 10 ಕೆ.ಜಿ ಅಷ್ಟು ಅಕ್ಕಿ ತಂದರು ಸಹ ಅದರಲ್ಲಿ ಹುಳುಗಳು ಕಂಡುಬರಲು ಆರಂಭವಾಗುತ್ತದೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಈ ವೇಳೆ ಅಕ್ಕಿ ಸೇರಿ ವಿವಿಧ ವಸ್ತುಗಳಲ್ಲಿ ಹುಳುಗಳು ಹುಟ್ಟಿಕೊಳ್ಳುತ್ತವೆ.
ಹಾಗಾದ್ರೆ ಅಕ್ಕಿ ಸೇರಿ ಯಾವುದೇ ಆಹಾರ ಪದಾರ್ಥಗಳಿಗೆ ಬಹುಬೆಗ ಹುಳುಗಳು ಹಿಡಿಯದಂತೆ ತಡೆಯುವುದು ಹೇಗೆ? ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕಹಿ ಬೇವಿನ ಸೊಪ್ಪು
ನೀವು ಯಾವ ಪಾತ್ರೆಗೆ ಅಥವಾ ಯಾವ ಡಬ್ಬದಲ್ಲಿ ಅಕ್ಕಿ ಹಾಕಿಡುತ್ತೀರೋ ಆ ಡಬ್ಬವನ್ನ ತೆಗೆದುಕೊಂಡು ಕೆಳಗೆ ತಳ ಮುಚ್ಚುವಷ್ಟು ಅಥವಾ ಅರ್ಧದಷ್ಟು ಅಕ್ಕಿಯನ್ನು ಹಾಕಿ. ಬಳಿಕ ಕಹಿ ಬೆವಿನ ಎಲೆ ಮಾತ್ರವಲ್ಲ ಅದರ ಕಡ್ಡಿ ಸಮೇತವಾಗಿ ಮುರಿದು ಅದರ ಒಳಗೆ ಹಾಕಿ ಮೇಲಿನಿಂದ ಮತ್ತೆ ಅಕ್ಕಿಯನ್ನ ಹಾಕಿಕೊಳ್ಳಿ. ಈ ರೀತಿ ಮೂರು ಸ್ಟೆಪ್ ಮಾಡಿದರೆ ಸಾಕಾಗುತ್ತದೆ. ಇದು ತಿಂಗಳಿಗೆ ಒಮ್ಮೆ ಬದಲಾಯಿದರೆ ಸಾಕಾಗುತ್ತದೆ. ಜೊತೆಗೆ ಇದೇ ರೀತಿ ಆಗಾಗ ಮಾಡುತ್ತಿದ್ದರೆ ಅಕ್ಕಿ ಅಥವಾ ಬತ್ತಕ್ಕೂ ಯಾವುದೇ ಹುಳುಗಳು ಹಿಡಿಯುವುದಿಲ್ಲ.
ಒಣ ಮೆಣಸು
ನೀವು ಮೇಲಿನಂತೆ ಅಕ್ಕಿ ಡಬ್ಬದಲ್ಲಿ ಕಹಿಬೇವು ಹಾಕಲು ಇಷ್ಟಪಡದಿದ್ದರೆ ಒಣ ಮೆಣಸು ಹಾಕಬಹುದು. ಈ ಡಬ್ಬದೊಳಗೆ ಐದರಿಂದ ಆರು ಒಣ ಮೆಣಸು ಹಾಕಿ ಮುಚ್ಚಿಡಬಹುದು. ಆದರೆ ಇದರಿಂದ ಅನ್ನ ಖಾರವಾಗಿತ್ತದೆ ಎಂಬ ಭಯವಿದ್ದರೆ ಅಕ್ಕಿಯನ್ನು ಅನ್ನ ಮಾಡವಾಗ ಚೆನ್ನಾಗಿ ತೊಳೆದರೆ ಸಾಕಾಗುತ್ತದೆ. ಆದರೆ ಅಕ್ಕಿಗೆ ಯಾವುದೇ ಕಾರಣಕ್ಕೂ ಹುಳುಗಳು ಹಿಡಿಯುವುದಿಲ್ಲ.
ಬೆಳ್ಳುಳ್ಳಿ ಮತ್ತು ಏಲಕ್ಕಿ
ನೀವು ಅಕ್ಕಿ ಅಲ್ಲದೆ ಬೇರೆ ಯಾವುದೇ ವಸ್ತುವಿಗೆ ಹುಳುಗಳು ಹಿಡಿಯಬಾರದು ಎನ್ನುವುದಾದರೆ ಆ ಡಬ್ಬದಲ್ಲಿ ಸಿಪ್ಪೆತೆಗೆದಿರುವ 5ರಿಂದ 6 ಬೆಳ್ಳುಳ್ಳಿಯನ್ನು ಹಾಕಬೇಕು. ಇದರ ಜೊತೆಗೆ ಏಲಕ್ಕಿಯನ್ನು ಬಿಡಿಸದೆ ಹಾಗೆಯೇ ಹಾಕಿದರೆ ಉತ್ತಮ. ಈ ಎರಡೂ ಅಂಶಗಳಲ್ಲಿರುವ ಪ್ರಖರವಾದ ಸುವಾಸನೆ ಯಾವುದೇ ಹುಳುಗಳು ಹತ್ತಿರಕ್ಕೂ ಸುಳಿಯದಂತೆ ಮಾಡುತ್ತದೆ.
ಪಲಾವ್ ಎಲೆ ಮತ್ತು ಕರಿಬೇವು
ಅಕ್ಕಿ ಮೂಟೆ ಅಥವಾ ಡಬ್ಬಕ್ಕೆ ಪಲಾವ್ ಎಲೆಗಳನ್ನು ಹಾಕಿಡುವುದರಿಂದಲೂ ಅಕ್ಕಿ ಫ್ರೆಶ್ ಆಗಿರಲಿದೆ. ಹಾಗೆ ಕರಿಬೇವಿನ ಎಲೆಗಳನ್ನು ಸಹ ಹಾಕಿ ಇಡಬಹುದು. ಇದರಿಂದ ವರ್ಷ ಪೂರ್ತಿ ಅಕ್ಕಿಗೆ ಹುಳುಗಳ ಕಾಟ ಇಲ್ಲದಂತೆ ಇಡಬಹುದು.
ಯಾವ ವಸ್ತು ಬಳಸಬಾರದು.?
ಅಕ್ಕಿಗೆ ಲವಂಗ ಹಾಕಬಾರದು
ಅಕ್ಕಿ ಹಾಳಾಗದಂತೆ ತಡೆಯಲು ಎಂದಿಗೂ ಲವಂಗ ಬಳಸಬೇಡಿ. ಲವಂಗವನ್ನು ಅಕ್ಕಿಗಳ ಮಧ್ಯದಲ್ಲಿ ಹಾಕಿ ಮುಚ್ಚಳ ಮುಚ್ಚಿ ಇಡುವುದು, ಮೂಟೆಯಲ್ಲಿ ಹಾಕಿ ಇಡುವುದು ಮಾಡಿದರೆ ಅಕ್ಕಿಯ ಸವಾಸನೆ ಬದಲಾಗುತ್ತದೆ. ಇದು ತೊಳೆದರೂ ಕಡಿಮೆಯಾಗುವುದಿಲ್ಲ. ಕುಕ್ಕರ್‌ನಲ್ಲಿ ಅನ್ನ ಮಾಡಿದಾಗ ಈ ಲವಂಗ ತೀಕ್ಷ್ಣವಾದ ಸುವಾಸನೆ ಹಾಗೆಯೇ ಉಳಿದುಬಿಡುತ್ತದೆ.
ಇಂಗು ಮತ್ತು ಕಲ್ಲು ಉಪ್ಪು
ಕೆಲವರು ಅಕ್ಕಿ ಹಾಳಾಗಬಾರದು ಎಂದು ಚಿಟಿಕೆಯಷ್ಟು ಇಂಗನ್ನು ಅಕ್ಕಿಗೆ ಹಾಕಿಡುವ ಕೆಲಸ ಮಾಡುತ್ತಾರೆ. ಆದರೆ ಈ ರೀತಿ ಮಾಡಬಾರದು. ಇಂಗಿನಲ್ಲಿ ಪ್ರತಿರೋಧಕ ಅಂಶವಿದ್ದರು ಹಲವು ದಿನ ಇಂಗು ತೆರೆದು ಇಟ್ಟಾಗ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಹೀಗಾಗಿ ಇಂಗು ಅಕ್ಕಿಯ ಜೊತೆ ಹಾಕಬಾರದು. ಮತ್ತೆ ಕೆಲವರು ಉಪ್ಪಿಗೆ ಯಾವುದೇ ಹುಳು ಹಿಡಿಯುವುದಿಲ್ಲ ಎಂದು ಕಲ್ಲು ಉಪ್ಪನ್ನು ಅಕ್ಕಿಯ ಜೊತೆಗೆ ಮಿಕ್ಸ್ ಮಾಡುತ್ತಾರೆ. ಅಕ್ಕಿಯನ್ನು ತೊಳೆದಾಗ ಉಪ್ಪಿನ ಅಂಶ ಹೋಗುತ್ತದೆ ಎಂದು ಭಾವಿಸುತ್ತಾರೆ, ಆದರೆ ಇದರಿಂದ ಅಕ್ಕಿಯಲ್ಲಿ ಅಯೋಡಿನ್ ಅಂಶ ಹಾಗೂ ಕೆಲವು ರಾಸಾಯನಿಕ ಪ್ರಕ್ರಿಯೆಯಿಂದ ಅಕ್ಕಿಗೆ ಹಾನಿಯಾಗುತ್ತದೆ.



Click it and Unblock the Notifications
